ಸೌತಡ್ಕ ದೇಗುಲದಲ್ಲಿ ಭೂ ಅವ್ಯವಹಾರ ಆರೋಪ; ಅನಿರ್ದಿಷ್ಟವಾಧಿ ಹೋರಾಟಕ್ಕೆ ಮುಂದಾದ ಹೋರಾಟ ಸಮಿತಿ
ಕನ್ನಡ ಸುದ್ದಿ  /  ಕರ್ನಾಟಕ  /  ಸೌತಡ್ಕ ದೇಗುಲದಲ್ಲಿ ಭೂ ಅವ್ಯವಹಾರ ಆರೋಪ; ಅನಿರ್ದಿಷ್ಟವಾಧಿ ಹೋರಾಟಕ್ಕೆ ಮುಂದಾದ ಹೋರಾಟ ಸಮಿತಿ

ಸೌತಡ್ಕ ದೇಗುಲದಲ್ಲಿ ಭೂ ಅವ್ಯವಹಾರ ಆರೋಪ; ಅನಿರ್ದಿಷ್ಟವಾಧಿ ಹೋರಾಟಕ್ಕೆ ಮುಂದಾದ ಹೋರಾಟ ಸಮಿತಿ

ಸೌತಡ್ಕ ಶ್ರೀಮಹಾಗಣಪತಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಭೂ ಅವ್ಯವಹಾರದ ಆರೋಪ ಕೇಳಿಬಂದಿದೆ. ಖಾಸಗಿ ಟ್ರಸ್ಟ್ ರಚಿಸಿ ಕೋಟ್ಯಾಂತರ ರೂಪಾಯಿ ಖಾಸಗಿ ವ್ಯಕ್ತಿಗಳ ಪಾಲಾಗಿದೆ ಎಂದು ಆರೋಪಿಸಲಾಗಿದೆ. ಇದರ ವಿರುದ್ಧ ಅನಿರ್ದಿಷ್ಟವಾಧಿ ಹೋರಾಟದ ಎಚ್ಚರಿಕೆ ನೀಡಲಾಗಿದೆ.

ಸೌತಡ್ಕ ದೇಗುಲದಲ್ಲಿ ಭೂ ಅವ್ಯವಹಾರ ಆರೋಪ; ಅನಿರ್ದಿಷ್ಟವಾಧಿ ಹೋರಾಟಕ್ಕೆ ಮುಂದಾದ ಹೋರಾಟ ಸಮಿತಿ
ಸೌತಡ್ಕ ದೇಗುಲದಲ್ಲಿ ಭೂ ಅವ್ಯವಹಾರ ಆರೋಪ; ಅನಿರ್ದಿಷ್ಟವಾಧಿ ಹೋರಾಟಕ್ಕೆ ಮುಂದಾದ ಹೋರಾಟ ಸಮಿತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಸೌತಡ್ಕ ಶ್ರೀಮಹಾಗಣಪತಿ ಕ್ಷೇತ್ರವೂ ಒಂದು. ಬಯಲು ಆಲಯ ಗಣಪನೆಂದೇ ಪ್ರಖ್ಯಾತವಾದ ಈ ಕ್ಷೇತ್ರದಲ್ಲಿ ಇದೀಗ ಭಾರಿ ಭೂ ಅವ್ಯವಹಾರದ ಆರೋಪ ಕೇಳಿಬಂದಿದೆ. ಖಾಸಗಿ ಟ್ರಸ್ಟ್ ರಚಿಸಿ ವರ್ಷಕ್ಕೆ ಕೋಟ್ಯಾಂತರ ರೂಪಾಯಿ ಗುಳುಂ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಭಕ್ತರು ಸಿಡಿದೆದಿದ್ದಾರೆ.

2004ರಲ್ಲಿ ಸೌತಡ್ಕ ಕ್ಷೇತ್ರದ ಆಡಳಿತ ಸಮಿತಿಗೆ ಸೇರಿದ ಮೂವರು ದೇವಸ್ಥಾನಕ್ಕೆಂದು 6 ಲಕ್ಷ ರೂಪಾಯಿಗೆ 3.46 ಎಕ್ರೆ ಭೂಮಿ ಖರೀದಿಸಿದ್ದರು. ಆದರೆ ದೇವಸ್ಥಾನದ ಹೆಸರಲ್ಲಿ ಜಾಗ ಖರೀದಿಸಲು ಕಾನೂನು ತೊಡಕು ಎದುರಾದ ಹಿನ್ನೆಲೆಯಲ್ಲಿ ವಾಸುದೇವ ಶಬರಾಯ 1.23 ಎಕ್ರೆ, ರಾಘವ 1.23 ಎಕ್ರೆ ಹಾಗೂ ವಿಶ್ವನಾಥ 1 ಎಕ್ರೆಯನ್ನು ತಮ್ಮ ಸ್ವಂತ ಹಣದಲ್ಲಿ ಖರೀದಿಸಿದ್ದರು. ವರ್ಷದ ಬಳಿಕ ಭಕ್ತರ ದೇಣಿಗೆಯಿಂದ ಆ ಹಣವನ್ನು ಅವರಿಗೆ ಹಿಂದುರುಗಿಸಲಾಗಿತ್ತು.

ಅದಾದ ಬಳಿಕ ಆ ಭೂಮಿಯನ್ನು ದೇವಸ್ಥಾನದ ಹೆಸರಿಗೆ ಮಾಡಲು ಹೋಗುವಾಗ ಅದು ಕೃಷಿ ಭೂಮಿ ಎಂದು ಮತ್ತೆ ಕಾನೂನು ತೊಡಕು ಎದುರಾಗಿದೆ. ಈ ಸಂದರ್ಭ ದೇವಸ್ಥಾನದ ಆಡಳಿತ ಸಮಿತಿಯು ಶ್ರೀಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ ಎಂಬ ಹೆಸರಲ್ಲಿ ಟ್ರಸ್ಟ್ ಮಾಡಿದೆ. ಆಗಿನ ಸಮಿತಿ ಅಧ್ಯಕ್ಷ ಕೃಷ್ಣ ಭಟ್ ಈ ಟ್ರಸ್ಟ್‌ಅನ್ನು ದೇವಳದಿಂದ ಬೇರ್ಪಡಿಸಿ ಪ್ರತ್ಯೇಕ ಸಂಸ್ಥೆಯನ್ನಾಗಿ ಮಾಡಿದ್ದಾರೆ. ಈ ಟ್ರಸ್ಟ್‌ಗೆ ವಾಸುದೇವ ಶಬರಾಯರ 1.23 ಎಕ್ರೆ ಭೂಮಿಯನ್ನು ವರ್ಗಾಯಿಸಿದ್ದಾರೆ. ರಾಘವ ಆರ್‌ಎಸ್ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವದ ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ಗಿಫ್ಟ್ ಡಿಡಿಯಾಗಿ 1.23 ಎಕ್ರೆ ಭೂಮಿಯನ್ನು ನೀಡಿದ್ದಾರೆ.‌ ವಿಶ್ವನಾಥರ ಹೆಸರಲ್ಲಿ ಇನ್ನೂ ಆ ಭೂಮಿಯಿದ್ದು, ದೇವಸ್ಥಾನದ ಹೆಸರಿಗೆ ಬರೆದುಕೊಡಲು ಯಾವಾಗಲೂ ಸಿದ್ಧನಿದ್ದೇನೆ‌ ಎಂದು ಹೇಳುತ್ತಾರೆ.

ದೇವಸ್ಥಾನದ ಜಾಗವನ್ನು ದೇವಸ್ಥಾನಕ್ಕೆ ಬಿಟ್ಟುಕೊಡಿ

ದೇವಸ್ಥಾನದ ಭೂಮಿ ಇನ್ನಾರಿಗೋ ಹಸ್ತಾಂತರವಾಗುತ್ತಿದ್ದಂತೆಯೇ ಭಕ್ತರು ಸಿಡಿದೆದ್ದಿದ್ದಾರೆ. 3.46 ಎಕ್ರೆ ಭೂಮಿಯಲ್ಲಿರುವ ವಾಣಿಜ್ಯ ಕಟ್ಟಡ ಬಾಡಿಗೆ, ವಸತಿ ಗೃಹದ ಬಾಡಿಗೆ ಸೇರಿದಂತೆ ವರ್ಷಕ್ಕೆ ಕೋಟಿಗಟ್ಟಲೆ ಹಣ ಖಾಸಗಿಯವರ ಪಾಲಾಗುತ್ತಿದೆ. ಆದ್ದರಿಂದ ದೇವಸ್ಥಾನದ ಜಾಗವನ್ನು ದೇವಸ್ಥಾನಕ್ಕೇ ಬಿಟ್ಟುಕೊಡಬೇಕೆಂದು ನವೆಂಬರ್ 11ರಿಂದ ಸೌತಡ್ಕ ಕ್ಷೇತ್ರದ ಮುಂದೆ ಅನಿರ್ದಿಷ್ಟವಾಧಿ ಹೋರಾಟ ಮಾಡೋದಾಗಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

Whats_app_banner