ಶ್ಯೂರಿಟಿಗೆ ಪರದಾಡಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳು ಕೊನೆಗೂ ರಿಲೀಸ್; ಹೊರ ಬಂದ್ಮೇಲೆ ಹೇಳಿದ್ದೇನು?
ಕನ್ನಡ ಸುದ್ದಿ  /  ಕರ್ನಾಟಕ  /  ಶ್ಯೂರಿಟಿಗೆ ಪರದಾಡಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳು ಕೊನೆಗೂ ರಿಲೀಸ್; ಹೊರ ಬಂದ್ಮೇಲೆ ಹೇಳಿದ್ದೇನು?

ಶ್ಯೂರಿಟಿಗೆ ಪರದಾಡಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳು ಕೊನೆಗೂ ರಿಲೀಸ್; ಹೊರ ಬಂದ್ಮೇಲೆ ಹೇಳಿದ್ದೇನು?

Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಎ15, ಎ16, ಎ17 ಆರೋಪಿಗಳು ತುಮಕೂರು ಜಿಲ್ಲಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಶ್ಯೂರಿಟಿಗೆ ಪರದಾಡಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳು ಕೊನೆಗೂ ರಿಲೀಸ್
ಶ್ಯೂರಿಟಿಗೆ ಪರದಾಡಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೂವರು ಆರೋಪಿಗಳು ಕೊನೆಗೂ ರಿಲೀಸ್

ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತುಮಕೂರು ಜಿಲ್ಲಾ ಕಾರಾಗೃಹದಲ್ಲಿರುವ ಮೂವರು ಆರೋಪಿಗಳು ಕೊನೆಗೂ ಬಿಡುಗಡೆಯಾಗಿದ್ದಾರೆ. ಕಳೆದ ತಿಂಗಳ ಸೆಪ್ಟೆಂಬರ್ 23 ರಂದು ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. ಆದರೆ, ಶ್ಯೂರಿಟಿ ಸಿಗದೆ ಪರದಾಡಿದ್ದರು. ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್, ನಿಖಿಲ್ ನಾಯಕ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಜಾಮೀನು ಸಿಕ್ಕ 10 ದಿನಗಳ ಬಳಿಕ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್​ನಿಂದ ಜಾಮೀನು ಸಿಕ್ಕಿತ್ತು. ಮತ್ತೊಬ್ಬ ನಿಖಿಲ್ ನಾಯಕ್ ಹಾಗೂ ಕಾರ್ತಿಕ್​ಗೆ 57ನೇ ಸಿಸಿಹೆಚ್ ಕೋರ್ಟ್​ನಿಂದ ಜಾಮೀನು ಸಿಕ್ಕಿತ್ತು. ಆದರೆ ಜಾಮೀನಿಗೆ ಶ್ಯೂರಿಟಿದಾರರು ಸಿಗದೇ ಆರೋಪಿಗಳ ಕುಟುಂಬಸ್ಥರು ಪರದಾಟ ನಡೆಸಿದ್ದರು. ಸತತ 9 ದಿನಗಳಿಂದ ಶ್ಯೂರಿಟಿದಾರರು ಸಿಗದೇ ತುಂಬಾ ಕಷ್ಟಪಟ್ಟಿದ್ದರು. ಇದೀಗ ಜಾಮೀನು ಪ್ರಕ್ರಿಯೆ ಪೂರ್ಣಗೊಡದ್ದು, ರಾತ್ರಿಯೇ ಜೈಲಿನ ಅಧಿಕಾರಿಗಳಿಗೆ ಜಾಮೀನು ಆದೇಶದ ಪ್ರತಿಯನ್ನು ಮೇಲ್ ಮಾಡಲಾಗಿದೆ.

ತುಮಕೂರು ಜೈಲಾಧಿಕಾರಿಗಳು ಇಂದು ಬಿಡುಗಡೆ ಪ್ರಕ್ರಿಯೆ ಮುಗಿಸಿ ಮೂವರು ಆರೋಪಿಗಳನ್ನ ಜೈಲಿನಿಂದ ರಿಲೀಸ್ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸೆಪ್ಟೆಂಬರ್ 23ರಂದು ಎ15 ಆರೋಪಿ ನಿಖಿಲ್‌ ನಾಯಕ್‌, ಎ16 ಆರೋಪಿ ಕೇಶವಮೂರ್ತಿ ಹಾಗೂ ಎ17 ಆರೋಪಿ ಕಾರ್ತಿಕ್‌ಗೆ ಜಾಮೀನು ಸಿಕ್ಕಿತ್ತು. ಗಾಂಧಿ ಜಯಂತಿ ದಿನದಂದು ಅಕ್ಟೋಬರ್​ 2ರ ಬುಧವಾರ ಬೆಳಗ್ಗೆ 10.30ಕ್ಕೆ ತುಮಕೂರು ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.

ಆದರೆ, ನಾಲ್ವರು ಜಾಮೀನಿಗೆ ಅರ್ಜಿ ಹಾಕಿದ್ದರು. ಜಾಮೀನು ಸಿಕ್ಕಿದ್ದು ಮಾತ್ರ ಮೂವರಿಗೆ ಮಾತ್ರ. ಮತ್ತೊಬ್ಬ ಆರೋಪಿ ರವಿ ಶಂಕರ್ ಅವರು ಜೈಲಿನಲ್ಲೇ ಇದ್ದಾರೆ. ಆರೋಪಿಗಳು ಕಾರ್ತಿಕ್‌, ನಿಖಿಲ್‌, ಕೇಶವಮೂರ್ತಿ, ರವಿಶಂಕರ್​​ನನ್ನು ಜೂನ್‌ 26 ರಂದು ತುಮಕೂರು ಜೈಲಿಗೆ ಶಿಫ್ಟ್‌ ಮಾಡಲಾಗಿತ್ತು. ಮತ್ತೊಂದೆಡೆ ಇದೇ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿ ದರ್ಶನ್ ಸೇರಿದಂತೆ ಹಲವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ.

ಬಿಡುಗಡೆಯಾದ್ಮೇಲೆ ಆರೋಪಿಗಳು ಏನಂದ್ರು?

ಜೈಲಿನಿಂದ ಬಿಡುಗಡೆಯಾದ ಆರೋಪಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಕಾನೂನು ಹೇಳಿದಂತೆ ನಡೆದುಕೊಳ್ಳುತ್ತೇವೆ. ತನಿಖೆಗೆ ಸಂಪೂರ್ಣ ಸಹಕಾರ ಕೊಟ್ಟಿದ್ದೇವೆ. ಎಲ್ಲವೂ ಹೇಳಿದ್ದೇವೆ. ತನಿಖೆಗೆ ಸಂಬಂಧಿಸಿ ವಿವರ ನೀಡಿದ್ದೇವೆ. ಕೇಸ್​ ನ್ಯಾಯಾಲಯದಲ್ಲಿದೆ. ಇದಕ್ಕಿಂತ ಹೆಚ್ಚಿನದ್ದೇನು ಹೇಳಲಾಗುವುದಿಲ್ಲ ಎಂದಿದ್ದಾರೆ. ನಮಗೇನು ಯಾವುದೇ ಸಮಸ್ಯೆ ಆಗಿಲ್ಲ. ಆದರೆ ನಮಗೆ ಶ್ಯೂರಿಟಿ ಸಿಕ್ಕಿರಲಿಲ್ಲ ಅಷ್ಟೆ. ಈ ಪ್ರಕರಣದ ಕುರಿತು ಬೇರೆ ಏನೂ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.

Whats_app_banner