Dharwad News: ಟೋಲ್ ಡಿವೈಡರ್‌ಗೆ ಕಾರು ಡಿಕ್ಕಿ: ಮೂರು ತಿಂಗಳ ಹಸುಗೂಸು ಸಾವು
ಕನ್ನಡ ಸುದ್ದಿ  /  ಕರ್ನಾಟಕ  /  Dharwad News: ಟೋಲ್ ಡಿವೈಡರ್‌ಗೆ ಕಾರು ಡಿಕ್ಕಿ: ಮೂರು ತಿಂಗಳ ಹಸುಗೂಸು ಸಾವು

Dharwad News: ಟೋಲ್ ಡಿವೈಡರ್‌ಗೆ ಕಾರು ಡಿಕ್ಕಿ: ಮೂರು ತಿಂಗಳ ಹಸುಗೂಸು ಸಾವು

Road Accident: ಟೋಲ್ ಬಳಿಯಿದ್ದ ಡಿವೈಡರ್​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂರು ತಿಂಗಳ ಹಸುಗೂಸು ಸಾವನ್ನಪ್ಪಿದೆ. ಈ ಘಟನೆ ಧಾರವಾಡದ ಅಣ್ಣಿಗೇರಿ ತಾಲೂಕಿನ ನಲವಡಿ ಟೋಲ್ ಬಳಿ ಸಂಭವಿಸಿದೆ.

ಟೋಲ್ ಡಿವೈಡರ್‌ಗೆ ಕಾರು ಡಿಕ್ಕಿ: ಮೂರು ತಿಂಗಳ ಹಸುಗೂಸು ಸಾವು
ಟೋಲ್ ಡಿವೈಡರ್‌ಗೆ ಕಾರು ಡಿಕ್ಕಿ: ಮೂರು ತಿಂಗಳ ಹಸುಗೂಸು ಸಾವು

ಅಣ್ಣಿಗೇರಿ (ಧಾರವಾಡ): ಟೋಲ್ ಡಿವೈಡರ್​​ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೂರು ತಿಂಗಳ ಮಗು ಸಾವನ್ನಪ್ಪಿದ ಘಟನೆ ತಾಲೂಕಿನ ನಲವಡಿ ಟೋಲ್ ಬಳಿ ಇಂದು ಸಂಭವಿಸಿದೆ. ನಡೆದಿದೆ. ಮೂರು ತಿಂಗಳ ಮಗು ಸಾನ್ವಿ ಮೃತಪಟ್ಟಿದ್ದು, ಹುಬ್ಬಳ್ಳಿ-ಗದಗ ರಸ್ತೆಯಲ್ಲಿರುವ ಟೋಲ್ ಬಳಿ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಟೋಲ್​ನ ಡಿವೈಡರ್​ಗೆ ಡಿಕ್ಕಿಯಾಗಿದೆ.

ಪರಿಣಾಮವಾಗಿ ಮೂರು ತಿಂಗಳ ಮಗು ತೀವ್ರ ಗಾಯಗೊಂಡು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಇತರ ಮೂವರಿಗೂ ಗಾಯಗಳಾಗಿದೆ. ಕಾರು ಹುಬ್ಬಳ್ಳಿಯಿಂದ ಮುಂಡರಗಿ ಕಡೆಗೆ ಹೊರಟಿತ್ತು ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದ ವಿರೇಶ ಸಜ್ಜನ ಶೆಟ್ಟರ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತಂತೆ ಅಣ್ಣಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Whats_app_banner