ಹುಬ್ಬಳ್ಳಿಯಲ್ಲಿ ರಘು ದೀಕ್ಷಿತ್ ಸಂಗೀತ, ಗಂಗಾವತಿ ಪ್ರಾಣೇಶ್ ಹಾಸ್ಯ: ಇಲ್ಲಿದೆ ಕಾರ್ಯಕ್ರಮದ ಸಮಗ್ರ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ಹುಬ್ಬಳ್ಳಿಯಲ್ಲಿ ರಘು ದೀಕ್ಷಿತ್ ಸಂಗೀತ, ಗಂಗಾವತಿ ಪ್ರಾಣೇಶ್ ಹಾಸ್ಯ: ಇಲ್ಲಿದೆ ಕಾರ್ಯಕ್ರಮದ ಸಮಗ್ರ ವಿವರ

ಹುಬ್ಬಳ್ಳಿಯಲ್ಲಿ ರಘು ದೀಕ್ಷಿತ್ ಸಂಗೀತ, ಗಂಗಾವತಿ ಪ್ರಾಣೇಶ್ ಹಾಸ್ಯ: ಇಲ್ಲಿದೆ ಕಾರ್ಯಕ್ರಮದ ಸಮಗ್ರ ವಿವರ

ಹುಬ್ಬಳ್ಳಿಯಲ್ಲಿ ಸೆಪ್ಟೆಂಬರ್‌ 28ರಂದು ಸಪ್ನೋ ಕಿ ಉಡಾನ್ ಸಂಗೀತ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್‌ ಹಾಗೂ ರಘು ದೀಕ್ಷಿತ್ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಹುಬ್ಬಳ್ಳಿಯಲ್ಲಿ ರಘು ದೀಕ್ಷಿತ್ ಸಂಗೀತ, ಗಂಗಾವತಿ ಪ್ರಾಣೇಶ್ ಹಾಸ್ಯ; ಕಾರ್ಯಕ್ರಮದ ವಿವರ
ಹುಬ್ಬಳ್ಳಿಯಲ್ಲಿ ರಘು ದೀಕ್ಷಿತ್ ಸಂಗೀತ, ಗಂಗಾವತಿ ಪ್ರಾಣೇಶ್ ಹಾಸ್ಯ; ಕಾರ್ಯಕ್ರಮದ ವಿವರ

ಧಾರವಾಡ: ಹುಬ್ಬಳ್ಳಿ ನಗರದ ಲಯನ್ಸ್ ಸ್ಕೂಲ್‌ನ ಹಳೆ ವಿದ್ಯಾರ್ಥಿಗಳ ಸಂಘವು ಸೆಪ್ಟೆಂಬರ್‌ 28ರಂದು ಸಂಜೆ 5 ಗಂಟೆಗೆ ಸಪ್ನೋ ಕಿ ಉಡಾನ್ ಎಂಬ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದೆ. ಉಣಕಲ್‌ನ ಹೋಟೆಲ್ ನವೀನ್‌ದಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅದ್ಧೂರಿ ಸಂಗೀತ ಹಾಗೂ ಹಾಸ್ಯ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಲಿದೆ. ಈ ಕುರಿತು ಎಂದು ಲಯನ್ಸ್ ಸ್ಕೂಲ್ ಅಲ್ಯುಮ್ನಿ ಅಸೋಸಿಯೇಶನ್ ಚೇರ್‌ಮನ್ ಗಿರೀಶ ಮಾನೆ ತಿಳಿಸಿದ್ದಾರೆ.

ವಿಆರ್‌ಎಲ್ ಪ್ರಸ್ತುತಪಡಿಸುವ ಸಂಗೀತ ಕಾರ್ಯಕ್ರಮದಲ್ಲಿ ರಘು ದೀಕ್ಷಿತ್ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಕರ್ನಾಟಕದ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್‌ ಅವರ ಹಾಸ್ಯ ಕಾರ್ಯಕ್ರಮವೂ ಜನರ ಗಮನ ಸೆಳೆಯಲಿದೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವಿದ್ಯಾರ್ಥಿವೇತನ ನೀಡುವುದಕ್ಕಾಗಿ ಹಣವನ್ನು ಸಂಗ್ರಹಿಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿರುವ ಇಬ್ಬರು ಕಲಾವಿದರು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದ್ದಾರೆ.

ಕಾರ್ಯಕ್ರಮವನ್ನು ವೀಕ್ಷಿಸಲು ಪಾಸ್‌ ಪಡೆಯಬೇಕಾಗುತ್ತದೆ. ಪ್ಲಾಟಿನಂ ಪಾಸ್ಗೆ 1500 ರೂ. ನಿಗದಿಪಡಿಸಲಾಗಿದೆ. ಇದೇ ವೇಳೆ ಗೋಲ್ಡ್ ಪಾಸ್ 1000 ರೂ. ಹಾಗೂ ಸಿಲ್ವರ್ ಪಾಸ್ 750 ರೂ. ನಿಗದಿಯಾಗಿದೆ. ಕುಟುಂಬಗಳು ಹಾಗೂ ಸ್ನೇಹಿತರ ಗುಂಪುಗಳಿಗೆ ವಿಶೇಷ ಪ್ಯಾಕೇಜ್ ವ್ಯವಸ್ಥೆಯೂ ಮಾಡಲಾಗುತ್ತಿದೆ.

ಕಾರ್ಯಕ್ರಮದಿಂದ ಒಟ್ಟಾದ ಹಣವನ್ನು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು, ಸಮವಸ್ತ್ರ, ಪಠ್ಯಪುಸ್ತಕ ಮತ್ತು ಲೇಖನ ಸಾಮಗ್ರಿ ವಿತರಣೆಗೆ ಬಳಸಿಕೊಳ್ಳಲಾಗುತ್ತದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಗಮನ ಹರಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸುವುದು. ಸ್ಮಾರ್ಟ್ ಕ್ಲಾಸ್ ರೂಮ್‌ಗಳನ್ನು ನಿರ್ಮಿಸುವುದು. ವಿದ್ಯಾರ್ಥಿಗಳನ್ನು ಸಬಲಿಕರಣಗೊಳಿಸಲು ತರಬೇತಿ ಹಾಗೂ ಕಾರ್ಯಾಗಾರ ಹಮ್ಮಿಕೊಳ್ಳುವುದಕ್ಕೆ ಬಳಸಲಾಗುವುದು ಎಂದು ಆಯೋಜಕರು ವಿವರಿಸಿದ್ದಾರೆ.

ಕಾರ್ಯಕ್ರಮ ಕುರಿತ ಹೆಚ್ಚಿನ ಮಾಹಿತಿಗಾಗಿ ಆಯೋಜಕರಾದ ನಿಕೇತ್ ಹೊನ್ನಳ್ಳಿ (7022900350), ದೀಪಕ್ ಗಿರಿಯಾಪುರ (9620687130) ಇವರನ್ನು ಸಂಪರ್ಕಿಸಬಹುದು.

Whats_app_banner