ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವಧನ 8,000 ರೂ ತನಕ ಹೆಚ್ಚಳ, ಮಾನದಂಡಗಳ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವಧನ 8,000 ರೂ ತನಕ ಹೆಚ್ಚಳ, ಮಾನದಂಡಗಳ ವಿವರ ಇಲ್ಲಿದೆ

ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವಧನ 8,000 ರೂ ತನಕ ಹೆಚ್ಚಳ, ಮಾನದಂಡಗಳ ವಿವರ ಇಲ್ಲಿದೆ

ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವ ಧನ ಪರಿಷ್ಕರಣೆ ಮಾಡಿ ಉನ್ನತ ಶಿಕ್ಷಣ ಇಲಾಖೆ ಆದೇಶ ನೀಡಿದೆ. ಇದರ ಜೊತೆಗೆ ಮಾನದಂಡಗಳನ್ನು ನಿಗದಿ ಮಾಡಿದ್ದು, ಸೇವಾವಧಿ ಆಧರಿಸಿ ಆರೋಗ್ಯ ವಿಮೆ ಮತ್ತು ಇಡಗಂಟು ಕೂಡ ಸಿಗಲಿದೆ. ಆ ವಿವರ ಇಲ್ಲಿದೆ.

ಪ್ರಥಮ ದರ್ಜೆ ಕಾಲೆಜುಗಳ ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ (ಸಾಂಕೇತಿಕ ಚಿತ್ರ)
ಪ್ರಥಮ ದರ್ಜೆ ಕಾಲೆಜುಗಳ ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವ ಧನ ಮತ್ತು ಇತರೆ ಸೌಲಭ್ಯಗಳನ್ನು ಪರಿಷ್ಕರಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ ಪ್ರಕಟಿಸಿದೆ. ಇದರೊಂದಿಗೆ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದಂತಾಗಿದ್ದು, ಗೌರವ ಧನ ಕನಿಷ್ಠ 5,000 ರೂಪಾಯಿಯಿಂದ ಗರಿಷ್ಠ 8,000 ರೂಪಾಯಿ ತನಕ ಏರಿಕೆಯಾಗಿದೆ.

ಇದರೊಂದಿಗೆ 5 ಲಕ್ಷ ರೂಪಾಯಿ ಆರೋಗ್ಯ ವಿಮೆ, 60 ವರ್ಷ ತುಂಬಿದ ಅತಿಥಿ ಉಪನ್ಯಾಸಕರಿಗೆ ವಾರ್ಷಿಕ 50,000 ರೂಪಾಯಿಯಂತೆ 5 ಲಕ್ಷ ರೂಪಾಯಿ ಇಡಗಂಟು ಕೂಡ ಸಿಗಲಿದೆ. ಕೆಲಸದ ಅವಧಿ ಗರಿಷ್ಠ 8 ರಿಂದ 10 ಗಂಟೆ ಬದಲು 15 ರಿಂದ 19 ಗಂಟೆ ಮಾಡಲಾಗಿದೆ. ಇನ್ನು ವೇತನಕ್ಕೆ ಸಂಬಂಧಿಸಿ ಕೆಲವೊಂದು ಮಾನದಂಡಗಳನ್ನೂ ಉನ್ನತ ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಇದರಂತೆ, ಸರ್ಕಾರಿ ಪಥಮ ದರ್ಜೆ ಕಾಲೇಜುಗಳಲ್ಲಿ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ 55 ರಷ್ಟು ಅಂಕಗಳನ್ನು ಪಡೆದು, ಎನ್ಇಟಿ, ಎಸ್‌ಎಲ್ಇಟಿ ಅಥವಾ ಪಿಹೆಚ್.ಡಿ. ಮಾಡಿಕೊಂಡಿರುವ ಅತಿಥಿ ಉಪನ್ಯಾಸಕರಿಗೆ ಮಾಸಿಕ ಗೌರವಧನವನ್ನು 11,500 ರೂಪಾಯಿಯಿಂದ 13,000 ರೂಪಾಯಿಗೆ, ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ 55 ರಷ್ಟು ಅಂಕಗಳನ್ನು ಪಡೆದ ಅತಿಥಿ ಉಪನ್ಯಾಸಕರಿಗೆ ಮಾಸಿಕ ಗೌರವಧನವನ್ನು9,500 ರೂಪಾಯಿಯಿಂದ 11,000 ರೂಪಾಯಿಗೆ ಹೆಚ್ಚಿಸಿ ಉನ್ನ ಶಿಕ್ಷಣ ಇಲಾಖೆ ಆದೇಶ ನೀಡಿದೆ.

ಯಾರಿಗೆ ಎಷ್ಟು ವೇತನ ಹೆಚ್ಚಳ

ಕರ್ನಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ವೇತನ ಪರಿಷ್ಕರಣೆ

ಕ್ರಮ ಸಂಖ್ಯೆಸೇವಾವಧಿಪರಿಷ್ಕೃತ ಗೌರವಧನ ಪ್ರಮಾಣ
015 ವರ್ಷಕ್ಕಿಂತ ಕಡಿಮೆ ಸೇವಾವಧಿ5,000 ರೂಪಾಯಿ
025 ರಿಂದ 10 ವರ್ಷ ಸೇವಾವಧಿ6,000 ರೂಪಾಯಿ
0310 ರಿಂದ 15 ವರ್ಷ ಸೇವಾವಧಿ7,000 ರೂಪಾಯಿ
0415 ವರ್ಷ ಮೇಲ್ಪಟ್ಟ ಸೇವಾವಧಿ8,000 ರೂಪಾಯಿ

ಈ ಪೈಕಿ 5ರಿಂದ 10 ವರ್ಷ ಸೇವಾವಧಿ ಹೊಂದಿರುವ ಅತಿಥಿ ಉಪನ್ಯಾಸಕರಿಗೆ ಈ ಹಿಂದೆ ಇದ್ದ ಗರಿಷ್ಠ ಉಪನ್ಯಾಸ ಅವಧಿಯನ್ನು 8/10 ಗಂಟೆ ಬದಲಾಗಿ 15/19 ಗಂಟೆಗೆ ಹೆಚ್ಚಿಸಿ ಈ ಗೌರವ ಧನ ಹೆಚ್ಚಳವನ್ನು ಉನ್ನತ ಶಿಕ್ಷಣ ಇಲಾಖೆ ಘೋಷಿಸಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಈಗ ಇರುವ ವೇತನ ಎಷ್ಟು- 4 ಅಂಶಗಳು

1) 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ 32,000 ರೂಪಾಯಿ

2) 5 ವರ್ಷಕ್ಕಿಂತ ಕಡಿಮೆ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿ ಮಾಡಿದ ವಿದ್ಯಾರ್ಹತೆ ಹೊಂದಿರುವವರಿಗೆ 30,000 ರೂಪಾಯಿ

3) 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿ ಮಾಡಿ ವಿದ್ಯಾರ್ಹತೆ ಹೊಂದಿಲ್ಲದವರಿಗೆ 28,000 ರೂಪಾಯಿ

4) 5 ವರ್ಷಕ್ಕಿಂತ ಕಡಿಮೆ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ 26,000 ರೂಪಾಯಿ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಪರಿಷ್ಕೃತ ವೇತನ

ಕ್ರಮ ಸಂಖ್ಯೆಸೇವಾವಧಿ ಮತ್ತು ವಿದ್ಯಾರ್ಹತೆಪ್ರಸ್ತುತ ಗೌರವಧನ (ರೂಪಾಯಿ)ಹೆಚ್ಚಳ (ರೂಪಾಯಿ)ಪರಿಷ್ಕೃತ ಗೌರವಧನ (ರೂಪಾಯಿ)
015 ವರ್ಷಕ್ಕಿಂತ ಕಡಿಮೆ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿ ಮಾಡಿದ ವಿದ್ಯಾರ್ಹತೆ ಹೊಂದಿದವರಿಗೆ30,0005,00035,000
025 ವರ್ಷಕ್ಕಿಂತ ಕಡಿಮೆ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿ ಮಾಡಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ26,0005,00031,000 
035 ರಿಂದ 10 ವರ್ಷ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದವರಿಗೆ 32,0006,00038,000
045 ರಿಂದ 10 ವರ್ಷ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ28,0006,00034,000
0510 ರಿಂದ 15 ವರ್ಷ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದವರಿಗೆ 32,0007,00039,000
0610 ರಿಂದ 15 ವರ್ಷ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ28,0007,00036,000
0715 ವರ್ಷ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದವರಿಗೆ 32,0008,00040,000
0815 ವರ್ಷ ಅವಧಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದವರಿಗೆ28,0008,00036,000

ಅತಿಥಿ ಉಪನ್ಯಾಸಕರ ಇಡಗಂಟು ಮತ್ತು ಆರೋಗ್ಯ ವಿಮೆಗೆ ಮಾನದಂಡ

ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ 60 ವರ್ಷ ಮೀರಿದ ಅತಿಥಿ ಉಪನ್ಯಾಸಕರಿಗೆ ಭದ್ರತಾ ರೂಪದಲ್ಲಿ ವಾರ್ಷಿಕ 50,000 ರೂಪಾಯಿ ಪ್ರಕಾರ ಗರಿಷ್ಠ 5.00 ಲಕ್ಷ ರೂಪಾಯಿ ಮೊತ್ತದ ಇಡಿಗಂಟಿನ ಸೌಲಭ್ಯ ನೀಡಲು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.

ಅತಿಥಿ ಉಪನ್ಯಾಸಕರ ಆರೋಗ್ಯ ದೃಷ್ಟಿಯಿಂದ ವಾರ್ಷಿಕ 5.00 ಲಕ್ಷ ರೂಪಾಯಿ ಮೌಲ್ಯದ ಆರೋಗ್ಯ ವಿಮಾ ಸೌಲಭ್ಯವನ್ನು ನೀಡುವ ನಿಟ್ಟಿನಲ್ಲಿ (ಅತಿಥಿ ಉಪನ್ಯಾಸಕರಿಂದ ವಂತಿಗೆ ರೂಪದಲ್ಲಿ ಮಾಸಿಕ 400 ರೂಪಾಯಿ + ಸರ್ಕಾರದಿಂದ 400 ರೂಪಾಯಿ ಒಟ್ಟು ರೂ.800/-) ಆರೋಗ್ಯ ವಿಮಾ ಸೌಲಭ್ಯವನ್ನು ಅನುಷ್ಠಾನಗೊಳಿಸುವುದಕ್ಕೂ ಉನ್ನತ ಶಿಕ್ಷಣ ಇಲಾಖೆ ಮಂಜೂರಾತಿ ನೀಡಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner