ಕನ್ನಡ ಸುದ್ದಿ  /  ಕರ್ನಾಟಕ  /  Fact Check: ಲ್ಯಾಬ್‌ಗಳ ಕೃತಕ ಗರ್ಭಾಶಯಗಳಲ್ಲಿ ಭ್ರೂಣಗಳನ್ನು ಬೆಳೆಸುವ ತಂತ್ರಜ್ಞಾನ ಬಂದಿದೆಯೇ, ವೈರಲ್ ವೀಡಿಯೊ ಸತ್ಯವೇ? -ಇಲ್ಲಿದೆ ವಿವರ

Fact Check: ಲ್ಯಾಬ್‌ಗಳ ಕೃತಕ ಗರ್ಭಾಶಯಗಳಲ್ಲಿ ಭ್ರೂಣಗಳನ್ನು ಬೆಳೆಸುವ ತಂತ್ರಜ್ಞಾನ ಬಂದಿದೆಯೇ, ವೈರಲ್ ವೀಡಿಯೊ ಸತ್ಯವೇ? -ಇಲ್ಲಿದೆ ವಿವರ

ಫ್ಯಾಕ್ಟ್‌ಚೆಕ್: ಮಕ್ಕಳನ್ನು ಪ್ರಯೋಗಾಲಯದಲ್ಲಿ ತಯಾರಿಸುವ ತಂತ್ರಜ್ಞಾನ ಬಂದಿದೆ ಎಂಬಂತೆ ವೀಡಿಯೊ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್‌ ಆಗಿರುವ ವೀಡಿಯೊ ಬಗ್ಗೆ ನ್ಯೂಸ್ ಚೆಕರ್ ಪರಿಶೀಲನೆ ನಡೆಸಿದೆ. ಇದರಲ್ಲಿ ಪ್ರಸ್ತಾಪವಾಗಿರುವ ವಿಷಯಗಳಲ್ಲಿ ಸತ್ಯಾಂಶವಿಲ್ಲ ಎನ್ನುವುದು ತಿಳಿದುಬಂದಿದೆ.

Fact Check: ಮಕ್ಕಳನ್ನು ಲ್ಯಾಬ್‌ ನಲ್ಲಿ ತಯಾರಿಸುವ ಟೆಕ್ನಾಲಜಿ ಬಂದಿದೆಯೇ, ವೈರಲ್ ವೀಡಿಯೊ ನಿಜವೇ?
Fact Check: ಮಕ್ಕಳನ್ನು ಲ್ಯಾಬ್‌ ನಲ್ಲಿ ತಯಾರಿಸುವ ಟೆಕ್ನಾಲಜಿ ಬಂದಿದೆಯೇ, ವೈರಲ್ ವೀಡಿಯೊ ನಿಜವೇ?

Viral Video: ಫೇಸ್‌ಬುಕ್‌ನಲ್ಲಿ ಕಂಡುಬಂದಿರುವ ವೈರಲ್‌ ಪೋಸ್ಟ್‌ಗಳಲ್ಲಿ 'ಮಕ್ಕಳನ್ನು ಲ್ಯಾಬ್‌ನಲ್ಲಿ ತಯಾರಿಸುವ ತಂತ್ರಜ್ಞಾನ ಬಂದಿದೆ. ನಿಮಗೆ ಬೇಕಾದ ರೀತಿಯಲ್ಲಿ ಮಕ್ಕಳನ್ನು ಸೃಷ್ಟಿಸಬಹುದು' ಎಂದು ಹೇಳಲಾಗಿದೆ. ವೈರಲ್‌ ಆಗಿರುವ ಈ ವೀಡಿಯೊ ಬಗ್ಗೆ 'ನ್ಯೂಸ್ ಚೆಕರ್' ಫ್ಯಾಕ್ಟ್‌ಚೆಕ್ ತಂತ್ರಗಳನ್ನು ಬಳಸಿ ಪರಿಶೀಲಿಸಿತು. ಈ ವೇಳೆ ಇದು ಒಂದು ಪರಿಕಲ್ಪನಾತ್ಮಕ ವೀಡಿಯೊ ಮಾತ್ರವೇ ಆಗಿದೆ. ಇದು ನಿಜವಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ಟ್ರೆಂಡಿಂಗ್​ ಸುದ್ದಿ

ವೈರಲ್ ಆಗಿರುವ ವಿಡಿಯೊ ಇಲ್ಲಿದೆ

ಫ್ಯಾಕ್ಟ್‌ಚೆಕ್ ಮತ್ತು ಪರಿಶೀಲನೆ

ಸತ್ಯಶೋಧನೆಗಾಗಿ 'ನ್ಯೂಸ್ ಚೆಕರ್‌' ಗೂಗಲ್‌ನಲ್ಲಿ “artificial incubator for human babies” ಎಂದು ಕೀವರ್ಡ್ ಸರ್ಚ್ ನಡೆಸಿತು. ಈ ವೇಳೆ ಡಿಸೆಂಬರ್ 9, 2022 ರಂದು ಹಾಶಿಮ್ ಅಲ್-ಘೈಲಿಯ ಯೂಟ್ಯೂಬ್ ಪುಟದಲ್ಲಿ ಪೋಸ್ಟ್ ಮಾಡಿದ ವೀಡಿಯೊ ಕಂಡುಬಂತು. ವೈರಲ್ ಆದ ವಿಡಿಯೊಗೆ ಈ ವಿಡಿಯೊ ಹೋಲುತ್ತಿತ್ತು ಎನ್ನುವುದು ಸತ್ಯಶೋಧಕರಿಗೆ ಅರಿವಾಯಿತು.

ಸರಿಸುಮಾರು 8:25 ನಿಮಿಷಗಳ ಈ ವೀಡಿಯೋದಲ್ಲಿ, ಎಕ್ಟೋಲೈಫ್ ಸೌಲಭ್ಯದ ವೀಡಿಯೊ ಮುಗಿಯುವ ಸ್ವಲ್ಪ ಮೊದಲು, ಈ ಸೌಲಭ್ಯ ಮತ್ತು ತಂತ್ರಜ್ಞಾನವು ಒಂದು ಪರಿಕಲ್ಪನೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಸತ್ಯಶೋಧನೆ ಸಮಯದಲ್ಲಿ ಹಾಶಿಮ್ ಅಲ್-ಘೈಲಿ ವೆಬ್‌ಸೈಟ್ ಸಹ ಕಂಡುಬಂದಿದೆ. ಅವರ ವೆಬ್‌ಸೈಟ್‌ ಪ್ರಕಾರ, ಹಾಶಿಮ್ ಅಲ್-ಘೈಲಿ ಜರ್ಮನಿಯ ಬರ್ಲಿನ್ ಮೂಲದ ಚಲನಚಿತ್ರ ನಿರ್ಮಾಪಕರಾಗಿದ್ದಾರೆ.

ಇನ್ನು “ಎಕ್ಟೋಲೈಫ್: ವಿಶ್ವದ ಮೊದಲ ಕೃತಕ ಗರ್ಭಾಶಯ ಸೌಲಭ್ಯ” ಎಂಬ ಶೀರ್ಷಿಕೆಯ ಯೂಟ್ಯೂಬ್ ವೀಡಿಯೋದ ಜೊತೆಗೆ, “ಕೃತಕ ಗರ್ಭಾಶಯ ಸೌಲಭ್ಯವು ವರ್ಷಕ್ಕೆ 30,000 ಶಿಶುಗಳಿಗೆ ಪೋಷಣೆ ನೀಡಬಲ್ಲದು” ಎಂಬ ಶೀರ್ಷಿಕೆಯ ಇನ್ನೊಂದು ವೀಡಿಯೊವನ್ನು ಡಿಸೆಂಬರ್ 9, 2022 ರಂದು ಅಲ್ ಘೈಲಿಯ ವೆರಿಫೈಡ್ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಈ ಪೋಸ್ಟ್‌ನ ಮೊದಲ ಕಾಮೆಂಟ್‌ನಲ್ಲಿ ಅವರು “ಇನ್ನಷ್ಟು ತಿಳಿಯಿರಿ:” ಎಂಬ ಶೀರ್ಷಿಕೆಯ ಮೂರು ಲಿಂಕ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಡಿಸೆಂಬರ್ 9, 2022ರ scienceandstuff.com / EcoLife-artificial-wombs ಕಾಮೆಂಟ್‌ನ ಮೊದಲ ಲಿಂಕ್‌ನಲ್ಲಿ “ಎಕ್ಸ್‌ಕ್ಲೂಸಿವ್: ವಿಶ್ವದ ಮೊದಲ ಕೃತಕ ಗರ್ಭಾಶಯ ಸೌಲಭ್ಯಕ್ಕಾಗಿ ಅನಾವರಣಗೊಂಡ ಕಲ್ಪನೆ” ಎಂಬ ಶೀರ್ಷಿಕೆಯ ಲೇಖನವಿದೆ. scienceandstuff.com ಎನ್ನುವುದೂ ಅಲ್ ಘೈಲಿ ಸಹ-ಸ್ಥಾಪಿಸಿದ ವೆಬ್‌ಸೈಟ್‌ ಆಗಿದೆ.

ಎರಡನೇ ಲಿಂಕ್‌ನಲ್ಲಿ ಎಕ್ಟೋಲೈಫ್ ಸೌಲಭ್ಯದ ಲೋಗೋ, ಚಿತ್ರಗಳು, ವೀಡಿಯೊಗಳು ಮತ್ತು ಮೂರು ಪುಟಗಳ ಪತ್ರಿಕಾ ಪ್ರಕಟಣೆ ಸೇರಿದಂತೆ ಹಲವಾರು ಫೈಲ್‌ಳನ್ನು ಹಂಚಿಕೊಳ್ಳಲಾಗಿದೆ. ಪತ್ರಿಕಾ ಪ್ರಕಟಣೆಯಲ್ಲಿ ಅಲ್ ಘೈಲಿಯ ಕಿರು ಜೀವನಚರಿತ್ರೆಯೂ ಸೇರಿದೆ.

ಎಕ್ಟೋಲೈಫ್‌ನ ಯುಟ್ಯೂಬ್ ವಿಡಿಯೊ ಹೀಗಿದೆ

“ಎಕ್ಟೋಲೈಫ್ ಕೃತಕ ಗರ್ಭಾಶಯದ ಪರಿಕಲ್ಪನೆಯ ಸೃಷ್ಟಿಕರ್ತ” ಎಂಬ ಶೀರ್ಷಿಕೆಯ ಪತ್ರಿಕಾ ಪ್ರಕಟಣೆಯೊಂದರಲ್ಲಿ ಹೀಗೆ ಹೇಳಲಾಗಿದೆ: “ಹಾಶಿಮ್ ಅಲ್-ಘೈಲಿ ಜರ್ಮನಿಯ ಬರ್ಲಿನ್ ಮೂಲದ ಚಲನಚಿತ್ರ ನಿರ್ಮಾಪಕ ಮತ್ತು ವಿಜ್ಞಾನ ಸಂವಹನಕಾರ. ಆಣ್ವಿಕ ಜೀವಶಾಸ್ತ್ರಜ್ಞರಾದ ಹಾಶಿಮ್ ಅವರು ವಿಜ್ಞಾನದ ಬಗ್ಗೆ ತಮ್ಮ ಜ್ಞಾನ ಮತ್ತು ಉತ್ಸಾಹವನ್ನು ತಮ್ಮ ಸಾಮಾಜಿಕ ಮಾಧ್ಯಮ ಮತ್ತು ವೀಡಿಯೊ ವಿಷಯದ ಮೂಲಕ ಸಾರ್ವಜನಿಕರಿಗೆ ಶಿಕ್ಷಣ ನೀಡಲು ಬಳಸುತ್ತಾರೆ. ಮೂರನೇ ಲಿಂಕ್, muse.io/hashemalghaili, ಎಕ್ಟೋಲೈಫ್‌ ಯೂಟ್ಯೂಬ್ ವೀಡಿಯೊ ಹೊಂದಿದೆ.

ಅನಂತರದ ಹುಡುಕಾಟದಲ್ಲಿ, ನಾವು ಹಾಶಿಮ್ ಅಲ್ ಘೈಲಿಯ ಇನ್ಸ್ಟಾಗ್ರಾಮ್ ಪುಟವನ್ನು ಕಂಡುಕೊಂಡಿದ್ದೇವೆ. ಡಿಸೆಂಬರ್ 13, 2022 ರಂದು, ಹಫಿಂಗ್ಟನ್ ಪೋಸ್ಟ್‌ನ ಬ್ರಿಟನ್‌ ಆವೃತ್ತಿಯಲ್ಲಿ ಪ್ರಕಟವಾದ ಲೇಖನದ ಉಲ್ಲೇಖವನ್ನು ಒಳಗೊಂಡ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. “ಕೃತಕ ಗರ್ಭಾಶಯದ ವೀಡಿಯೊ ನಿಜವಲ್ಲ. ಆದರೆ ವಿಜ್ಞಾನಿಗಳು ಭವಿಷ್ಯದಲ್ಲಿ ಇದು ವಾಸ್ತವವಾಗಬಹುದು ಎಂದು ಹೇಳುತ್ತಿದ್ದಾರೆ” ಎಂದು ಲೇಖನದ ಶೀರ್ಷಿಕೆ ನೀಡಲಾಗಿದೆ.

ಲಂಡನ್‌ನ ಕಿಂಗ್ಸ್ ಕಾಲೇಜಿನಲ್ಲಿ ಪ್ರಸೂತಿಶಾಸ್ತ್ರದ ಪ್ರಾಧ್ಯಾಪಕರಾದ ಆಂಡ್ರ್ಯೂ ಶೆನ್ನಾನ್ ಎಕ್ಟೋಲೈಫ್ ಸೌಲಭ್ಯ ಎಂದು ಕರೆಯಲ್ಪಡುವ ಕೃತಕ ಗರ್ಭಾಶಯದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವುದು ಈ ಪೋಸ್ಟ್‌ನಲ್ಲಿದೆ. ಪ್ರೊ ಆಂಡ್ರ್ಯೂ ಶೆನ್ನಾನ್ “ಸೈದ್ಧಾಂತಿಕ ದೃಷ್ಟಿಕೋನದಿಂದ, ಕೃತಕ ಗರ್ಭಾಶಯವು ಸಾಧ್ಯವಿದೆ. ನೀವು ಮಾಡಬೇಕಾಗಿರುವುದು ಅದಕ್ಕೆ ಅಗತ್ಯವಾದ ಇಂಧನ (ಬಂಡವಾಳ) ಮತ್ತು ಆಮ್ಲಜನಕದೊಂದಿಗೆ (ಪ್ರೋತ್ಸಾಹ) ಸರಿಯಾದ ವಾತಾವರಣವನ್ನು ಒದಗಿಸುವುದು. ಅದನ್ನು ಸಾಧಿಸಲು ತಂತ್ರಜ್ಞಾನಗಳಿವೆ ಎಂದು ನಾನು ಭಾವಿಸುತ್ತೇನೆ. ಶಿಶುಗಳು ಬೇಗನೆ ಹೊರಬರುತ್ತವೆ ಮತ್ತು ಇನ್‌ಕ್ಯುಬರೇಟರ್‌ಗಳಲ್ಲಿ ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ” ಎಂದು ಹೇಳಿದ್ದಾರೆ.

ಸತ್ಯಾಂಶವೇನು?

ಮಕ್ಕಳನ್ನು ಲ್ಯಾಬ್‌ನಲ್ಲಿ ತಯಾರಿಸುವ ತಂತ್ರಜ್ಞಾನ ಬಂದಿದೆ ಎಂದು ಹಂಚಿಕೊಳ್ಳುತ್ತಿರುವ ವೀಡಿಯೊ ಒಂದು ಕಾಲ್ಪನಿಕ ವೀಡಿಯೊ ಆಗಿದೆ.

ಪ್ರಯೋಗಾಲಯಗಳಲ್ಲಿ ಮಕ್ಕಳು: ಫ್ಯಾಕ್ಟ್‌ಚೆಕ್ ಸಾರಾಂಶ

ವೈರಲ್ ವಿಡಿಯೊ ಹೇಳುವುದೇನು: ಮಕ್ಕಳನ್ನು ಲ್ಯಾಬ್‌ ನಲ್ಲಿ ತಯಾರಿಸುವ ತಂತ್ರಜ್ಞಾನ ಬಂದಿದೆ. ಫ್ಯಾಕ್ಟ್‌ಚೆಕ್ ನಂತರ ತಿಳಿದಿದ್ದೇನು: ಮಕ್ಕಳನ್ನು ಲ್ಯಾಬ್‌ ನಲ್ಲಿ ತಯಾರಿಸುವ ಟೆಕ್ನಾಲಜಿ ಬಂದಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ವೀಡಿಯೋ ಕಾಲ್ಪನಿಕ ಸಂಗತಿಗಳನ್ನು ಒಳಗೊಂಡಿದೆ. ಇದು ನಿಜವಲ್ಲ. ಫ್ಯಾಕ್ಟ್‌ಚೆಕ್ ಹೇಗೆ ನಡೆಯಿತು ಎನ್ನುವ ಬಗ್ಗೆ ಮುಂದೆ ವಿವರವಿದೆ. ‘ನ್ಯೂಸ್‌ಚೆಕರ್’ ಜಾಲತಾಣದಲ್ಲಿ ಈ ವಿಡಿಯೊದ ಸತ್ಯಾಸತ್ಯತೆ ಪರಿಶೀಲನೆಯ ವಿಸ್ತೃತ ಫ್ಯಾಕ್ಟ್‌ಚೆಕ್ ಪ್ರಕಟವಾಗಿದೆ.

ಓದುಗರ ಗಮನಕ್ಕೆ

ಈ ಬರಹವನ್ನು ‘ಶಕ್ತಿ ಕಲೆಕ್ಟಿವ್‌’ನ ಭಾಗವಾದ ನ್ಯೂಸ್‌ಚೆಕರ್ ಪ್ರಕಟಿಸಿದ್ದಾರೆ. ಶೀರ್ಷಿಕೆ / ಉಲ್ಲೇಖ / ಪರಿಚಯದ ಭಾಗ, ಕರ್ನಾಟಕದಲ್ಲಿ ವೈರಲ್ ಆಗಿದ್ದ ವಿಡಿಯೊ ಸೇರ್ಪಡೆ ಹೊರತುಪಡಿಸಿದರೆ ಇಡೀ ಬರಹವನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಸಿಬ್ಬಂದಿ ಯಥಾವತ್ತಾಗಿ ಮರುಪ್ರಕಟಿಸಿದ್ದಾರೆ. ಮೂಲ ಬರಹಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

IPL_Entry_Point