Video: ವೀರ ಮಕ್ಕಳ ಕುಣಿತಕ್ಕೆ ಹೆಜ್ಜೆ ಹಾಕಿದ ಸಿಎಂ; ಸಿದ್ದರಾಮಯ್ಯ ಬಾಲ್ಯದಲ್ಲಿ ಕಲಿತ ವಿದ್ಯೆಯಿದು
ಕನ್ನಡ ಸುದ್ದಿ  /  ಕರ್ನಾಟಕ  /  Video: ವೀರ ಮಕ್ಕಳ ಕುಣಿತಕ್ಕೆ ಹೆಜ್ಜೆ ಹಾಕಿದ ಸಿಎಂ; ಸಿದ್ದರಾಮಯ್ಯ ಬಾಲ್ಯದಲ್ಲಿ ಕಲಿತ ವಿದ್ಯೆಯಿದು

Video: ವೀರ ಮಕ್ಕಳ ಕುಣಿತಕ್ಕೆ ಹೆಜ್ಜೆ ಹಾಕಿದ ಸಿಎಂ; ಸಿದ್ದರಾಮಯ್ಯ ಬಾಲ್ಯದಲ್ಲಿ ಕಲಿತ ವಿದ್ಯೆಯಿದು

ಈ ವಿಡಿಯೋ ಹಂಚಿಕೊಂಡಿರುವ ಸಿದ್ದರಾಮಯ್ಯ, “ ಕರ್ನಾಟಕ ಸಂಭ್ರಮ-50 ರ ಉದ್ಘಾಟನಾ ಸಮಾರಂಭದಲ್ಲಿ ವೀರಮಕ್ಕಳ ಕುಣಿತಕ್ಕೆ ಹೆಜ್ಜೆ ಹಾಕಿದ್ದು ಮೈಮನ ಹಗುರಾಗಿಸಿತು. ಬಾಲ್ಯದಲ್ಲಿ ಕಲಿತ ವಿದ್ಯೆ ಬದುಕಿನುದ್ದಕ್ಕೂ ನೆನಪಿನಲ್ಲುಳಿಯುತ್ತಂತೆ. ಹೆಜ್ಜೆ ಹಾಕುತ್ತಾ ಹಾಕುತ್ತಾ ನನ್ನೂರ ಗೆಳೆಯರೊಡನೆ ಕುಣಿಯುತ್ತಿದ್ದ ಬಾಲ್ಯದ ದಿನಗಳು ನೆನಪಾದವು” ಎಂದು ಬರೆದುಕೊಂಡಿದ್ದಾರೆ.

ವೀರ ಮಕ್ಕಳ ಕುಣಿತಕ್ಕೆ ಹೆಜ್ಜೆ ಹಾಕಿದ ಸಿಎಂ ಸಿದ್ದರಾಮಯ್ಯ
ವೀರ ಮಕ್ಕಳ ಕುಣಿತಕ್ಕೆ ಹೆಜ್ಜೆ ಹಾಕಿದ ಸಿಎಂ ಸಿದ್ದರಾಮಯ್ಯ

ಹಂಪಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗುರುವಾರ (ನ.3) ಆಯೋಜಿಸಿದ್ದ 'ಕರ್ನಾಟಕ ಸಂಭ್ರಮ-50'ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರ ಮಕ್ಕಳ ಕುಣಿತಕ್ಕೆ ಖುಷಿ ಖುಷಿಯಿಂದ ಹೆಜ್ಜೆ ಹಾಕಿದ್ದಾರೆ.

ಈ ವಿಡಿಯೋವನ್ನು ತಮ್ಮ ಫೇಸ್​ಬುಕ್​​ನಲ್ಲಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, “ಹಂಪಿಯಲ್ಲಿ ಇಂದು ನಡೆದ ಕರ್ನಾಟಕ ಸಂಭ್ರಮ-50 ರ ಉದ್ಘಾಟನಾ ಸಮಾರಂಭದಲ್ಲಿ ವೀರಮಕ್ಕಳ ಕುಣಿತಕ್ಕೆ ಹೆಜ್ಜೆ ಹಾಕಿದ್ದು ಮೈಮನ ಹಗುರಾಗಿಸಿತು. ಬಾಲ್ಯದಲ್ಲಿ ಕಲಿತ ವಿದ್ಯೆ ಬದುಕಿನುದ್ದಕ್ಕೂ ನೆನಪಿನಲ್ಲುಳಿಯುತ್ತಂತೆ. ಹೆಜ್ಜೆ ಹಾಕುತ್ತಾ ಹಾಕುತ್ತಾ ನನ್ನೂರ ಗೆಳೆಯರೊಡನೆ ಕುಣಿಯುತ್ತಿದ್ದ ಬಾಲ್ಯದ ದಿನಗಳು ನೆನಪಾದವು” ಎಂದು ಬರೆದುಕೊಂಡಿದ್ದಾರೆ.

ವೀರ ಮಕ್ಕಳ ಕಣಿತ

ವೀರ ಮಕ್ಕಳ ಕಣಿತವು ಜಾನಪದ ಕುಣಿತಗಳಲ್ಲೆ ವಿಶಿಷ್ಟವಾದ ಕುಣಿತ. ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಕೆಲವು ಕಡೆ ಕೆಲವು ನಿರ್ದಿಷ್ಟ ಜಾತಿ-ಮತಕ್ಕೆ ಸೇರಿದ ಜನರು ಮಾರಿ ಹಬ್ಬ ಅಥವಾ ಯುಗಾದಿ ವೇಳೆ ಕೊಂಡದ ಹಬ್ಬದಂದು ಆಚರಿಸುತ್ತಾರೆ. ದೇವರನ್ನು ಶಾಂತಗೊಳಿಸಲು ಈ ಕುಣಿತ ಮಾಡುತ್ತೇವೆಂದು ಅಲ್ಲಿನ ಕಲಾವಿದರು ಹೇಳುತ್ತಾರೆ. ಈ ಕುಣಿತಕ್ಕೆ ಎಷ್ಟು ಜನ ಬೇಕಾದರೂ ಸೇರಿಕೊಳ್ಳಬಹುದು ಆದರೆ ಹಾಡಿಗೆ ತಕ್ಕಂತೆ ನಿಯಮಬದ್ಧವಾಗಿ ಹೆಜ್ಜೆ ಹಾಕಬೇಕು. ಸಿದ್ದರಾಮಯ್ಯ ಅವರು ಮೈಸೂರಿನವರಾದ ಕಾರಣ ಈ ಕುಣಿತವನ್ನು ಅವರು ಬಾಲ್ಯದಲ್ಲಿಯೇ ಕಲಿತಿದ್ದರು.

ಸಿದ್ದರಾಮಯ್ಯರ ವೀರ ಮಕ್ಕಳ ಕುಣಿತದ ವಿಡಿಯೋವನ್ನು ಅವರ ಅಭಿಮಾನಿಗಳು ತಮ್ಮ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಇವರ ಕುಣಿತ ನೋಡುವುದೇ ಸೊಗಸು ಎನ್ನುತ್ತಿದ್ದಾರೆ.

ಮೌಢ್ಯ ಗಳಲ್ಲಿ ನಂಬಿಕೆ ಇಲ್ಲ: ಸಿದ್ದರಾಮಯ್ಯ

ಕರ್ನಾಟಕ ಸಂಭ್ರಮ - 50ಕ್ಕೆ ಚಾಲನೆ ನೀಡಿ 50 ವರ್ಷ ಆಚರಣೆಯಾಗಲಿದೆ. ಆಗ ದೇವರಾಜ ಅರಸು ಅವರು 1973 ರಲ್ಲಿ ಮುಖ್ಯಮಂತ್ರಿಗಳಾಗಿದ್ದರು, ನಾನು 2023 ರಲ್ಲಿ ಮುಖ್ಯ ಮಂತ್ರಿಯಾಗಿರುವುದು ಕಾಕತಾಳೀಯ. ಅವರೂ ಇಲ್ಲಿಂದಲೇ ಚಾಲನೆ ನೀಡಿದ್ದರು, ನಾನೂ ಇಲ್ಲಿಂದಲೇ ಚಾಲನೆ ನೀಡಿದ್ದೇನೆ ಸಿಎಂ ಸಿದ್ದರಾಮಯ್ಯ ಹೇಳಿದರು. ನನಗೆ ಮೂಢನಂಬಿಕೆಗಳಲ್ಲಿ ಮೌಢ್ಯ ಗಳಲ್ಲಿ ನಂಬಿಕೆ ಇಲ್ಲ. ದೇವರನ್ನು ನಾನು ನಂಬುತ್ತೇನೆ. ಆದರೆ ಮೂಢನಂಬಿಕೆಗಳನ್ನಲ್ಲ ಎಂದು ತಿಳಿಸಿದರು.

Whats_app_banner