OTS Online: ಒಂದು ಬಾರಿ ತೀರುವಳಿ ಮೂಲಕ ಆಸ್ತಿ ತೆರಿಗೆ ಪಾವತಿಗೆ ನ 30 ಕೊನೆದಿನ, ಆನ್‌ಲೈನ್‌ ಒಟಿಎಸ್‌ ಪಾವತಿ ಹೇಗೆ? ಇಲ್ಲಿದೆ ಮಾರ್ಗದರ್ಶಿ
ಕನ್ನಡ ಸುದ್ದಿ  /  ಕರ್ನಾಟಕ  /  Ots Online: ಒಂದು ಬಾರಿ ತೀರುವಳಿ ಮೂಲಕ ಆಸ್ತಿ ತೆರಿಗೆ ಪಾವತಿಗೆ ನ 30 ಕೊನೆದಿನ, ಆನ್‌ಲೈನ್‌ ಒಟಿಎಸ್‌ ಪಾವತಿ ಹೇಗೆ? ಇಲ್ಲಿದೆ ಮಾರ್ಗದರ್ಶಿ

OTS Online: ಒಂದು ಬಾರಿ ತೀರುವಳಿ ಮೂಲಕ ಆಸ್ತಿ ತೆರಿಗೆ ಪಾವತಿಗೆ ನ 30 ಕೊನೆದಿನ, ಆನ್‌ಲೈನ್‌ ಒಟಿಎಸ್‌ ಪಾವತಿ ಹೇಗೆ? ಇಲ್ಲಿದೆ ಮಾರ್ಗದರ್ಶಿ

BBMP OTS Online: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಒಂದು ಬಾರಿ ತೀರುವಳಿ (ಒಟಿಎಸ್‌) ಮೂಲಕ ಆಸ್ತಿ ತೆರಿಗೆ ಬಾಕಿ ಪಾವತಿಸಲು ಪ್ರಾಪರ್ಟಿ ಮಾಲೀಕರಿಗೆ ನವೆಂಬರ್‌ 30ರ ತನಕ ಸಮಯ ನೀಡಿದೆ. ಆನ್‌ಲೈನ್‌ ಒಟಿಎಸ್‌ ಮೂಲಕ ತೆರಿಗೆ ಪಾವತಿ ಮಾಡುವುದು ಹೇಗೆಂದು ತಿಳಿಯೋಣ.

OTS Online: ಒಂದು ಬಾರಿ ತೀರುವಳಿ ಮೂಲಕ ಆಸ್ತಿ ತೆರಿಗೆ ಪಾವತಿಗೆ ನ 30 ಕೊನೆದಿನ
OTS Online: ಒಂದು ಬಾರಿ ತೀರುವಳಿ ಮೂಲಕ ಆಸ್ತಿ ತೆರಿಗೆ ಪಾವತಿಗೆ ನ 30 ಕೊನೆದಿನ

ಕರ್ನಾಟಕ ರಾಜ್ಯ ಸರ್ಕಾರವು ಒನ್-ಟೈಮ್ ಸೆಟ್ಲ್‌ಮೆಂಟ್ (OTS) ಯೋಜನೆಗೆ ಎರಡನೇ ವಿಸ್ತರಣೆಯನ್ನು ಘೋಷಿಸಿದೆ. ಒಂದು ಬಾರಿ ತೀರುವಳಿ ಗಡುವನ್ನು ನವೆಂಬರ್‌ 30ಕ್ಕೆ ತಳ್ಳಿದೆ. ಆಸ್ತಿ ತೆರಿಗೆ ಸುಸ್ತಿದಾರರು ಒಟಿಎಸ್‌ ಯೋಜನೆಯ ಪ್ರಯೋಜನವನ್ನು ಪಡೆಯಲು ಇರುವ ಅವಕಾಶ ಇದಾಗಿದ್ದು, ಆನ್‌ಲೈನ್‌ನಲ್ಲಿಯೇ ನವೆಂಬರ್‌ 30ರ ಮೊದಲು ಬಾಕಿ ತೆರಿಗೆಗಳನ್ನು ಪಾವತಿಸಬಹುದಾಗಿದೆ. ಈ ರೀತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ನವೆಂಬರ್‌ 30ರೊಳಗೆ ಪಾವತಿಸಿದರೆ ದಂಡ ಪಾವತಿಯಲ್ಲಿ ಉಳಿತಾಯ ಮಾಡಿಕೊಳ್ಳಬಹುದು. ಈ ಒಟಿಎಸ್‌ ಯೋಜನೆಯನ್ನು ಫೆಬ್ರವರಿ ತಿಂಗಳಲ್ಲಿ ಆರಂಭಿಸಲಾಗಿತ್ತು. ಒಟಿಎಸ್‌ ಯೋಜನೆಯ ಮೂಲಕ ಬಾಕಿಯ ಮೇಲಿನ ಚಕ್ರಬಡ್ಡಿಯನ್ನು ಮನ್ನ ಮಾಡಲಾಗಿತ್ತು. ದಂಡವನ್ನು ಶೇಕಡ 50ರಷ್ಟು ಕಡಿಮೆ ಮಾಡಲಾಗಿತ್ತು. ಇದರಿಂದ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಗಮನಾರ್ಹ ಪ್ರಯೋಜನವಾಗುತ್ತದೆ. ಆರಂಭದಲ್ಲಿ ಜುಲೈ ತಿಂಗಳವರೆಗೆ ಒಂದು ಬಾರಿ ತೀರುವಳಿಗೆ ಅವಕಾಶ ನೀಡಲಾಗಿತ್ತು. ಬಳಿಕ ಇದನ್ನು ಸೆಪ್ಟೆಂಬರ್‌ ತಿಂಗಳ ಅಂತ್ಯದವರೆಗೆ ವಿಸ್ತರಿಸಲಾಗಿತ್ತು. ಇದೀಗ ಆಸ್ತಿ ತೆರಿಗೆ ಬಾಕಿದಾರರಿಗೆ ನವೆಂಬರ್‌ ಕೊನೆಯವರೆಗೆ ಅವಕಾಶ ನೀಡಲಾಗಿದೆ.

ಏನಿದು ಒಟಿಎಸ್‌ ಯೋಜನೆ?

ಇದನ್ನು ಒನ್‌ ಟೈಮ್‌ ಸೆಟ್ಲ್‌ಮೆಂಟ್‌ ಎಂದು ಕರೆಯಲಾಗುತ್ತದೆ. ಕನ್ನಡದಲ್ಲಿ ಇದನ್ನು ಒಂದು ಬಾರಿ ತೀರುವಳಿ ಅಥವಾ ಒಂದು ಬಾರಿ ತೆರಿಗೆ ಪಾವತಿ ಎಂದು ಹೇಳಬಹುದು. ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿಯಲ್ಲಿ ತಪ್ಪಾಗಿ ಆಸ್ತಿ ಘೋಷಿಸಿಕೊಂಡವರು ವಸತಿ ಆಸ್ತಿಗಳಿಗೆ ವಂಚಿಸಿದ ತೆರಿಗೆ ಮೇಲೆ ದಂಡ ವಿಧಿಸಲಾಗಿತ್ತು. ಆಸ್ತಿ ತೆರಿಗೆ ವಂಚನೆ ಪ್ರಕರಣ ಅಥವಾ ಆಸ್ತಿ ತೆರಿಗೆ ಬಾಕಿ ಇರುವ ಸ್ವತ್ತುಗಳಿಗೆ ಪೂರ್ಣ ತೆರಿಗೆ ಪಾವತಿ ಮಾಡದ ಪ್ರಕರಣಗಳಿಗೂ ಇದು ಅನ್ವಯವಾಗುತ್ತದೆ. ಇಂತಹ ತೆರಿಗೆ ಬಾಕಿದಾರರು ಕೂಡ ನವೆಂಬರ್‌ 30ರ ಮೊದಲು ಒಟಿಎಸ್‌ ಮೂಲಕ ಬಾಕಿ ಪಾವತಿಸಿ ನಿರಾಳವಾಗಬಹುದು.

ಒಟಿಎಸ್‌ ಮೂಲಕ ಬಾಕಿ ಪಾವತಿಸದೆ ಇದ್ದರೆ ಏನಾಗುತ್ತದೆ?

ಈಗಾಗಲೇ ಬಿಬಿಎಂಪಿಯು ಸಾಕಷ್ಟು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅಕ್ಟೋಬರ್‌ 29ರಂದು ಬೆಂಗಳೂರಿನಾದ್ಯಂತ 115 ಪ್ರಾಪರ್ಟಿಗಳನ್ನು ಮುಟ್ಟುಗೋಲು ಹಾಕಲಾಗಿತ್ತು. ನವೆಂಬರ್‌ 30ರ ಡೆಡ್‌ಲೈನ್‌ನೊಳಗೆ ಬಾಕಿ ಪಾವತಿಸದೆ ಇರುವವರ ವಿರುದ್ಧ ಬಿಬಿಎಂಪಿಯು ಇದೇ ರೀತಿ ಕ್ರಮ ಕೈಗೊಳ್ಳಲಾಗಿದೆ.

ಒಟಿಎಸ್‌ ಮೂಲಕ ತೆರಿಗೆ ಪಾವತಿ ಹೇಗೆ?

  • ಮೊದಲಿಗೆ bbmptax.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಮೊದಲಿಗೆ ಈ ವೆಬ್‌ಸೈಟ್‌ನಲ್ಲಿರುವ ವಿವಿಧ ಸುತ್ತೊಲೆಗಳನ್ನು ಪರಿಶೀಲಿಸಿ. ವ
  • ವಿನಾಯಿತಿ ಕ್ಲೇಮ್‌ ಮಾಡಲು ಫಾರ್ಮ್‌ 6 ಡೌನ್‌ಲೋಡ್‌ ಮಾಡಿಕೊಳ್ಳಬಹುದು.
  • ಎಸ್‌ಎಎಸ್‌ ಪ್ರಾಪರ್ಟಿ ಟ್ಯಾಕ್ಸ್‌ ಪೇಮೆಂಟ್‌ಗೆ ಲಾಗಿನ್‌ ಆಗಬೇಕು.
  • ಲಾಗಿನ್‌ ಆಗಿಲು ಹತ್ತು ಅಂಕಯ ಅರ್ಜಿ ಸಂಖ್ಯೆ ಅಥವಾ ಪಿಐಡಿ ಸಂಖ್ಯೆ ನೀಡಿ.
  • ಮಾಲೀಕರ ಹೆಸರನ್ನು ನಮೂದಿಸಿ. ಹೆಸರಿನ ಮೊದಲ ಮೂರು ಅಕ್ಷರಗಳನ್ನು ನಮೂದಿಸಿ ರಿಟ್ರೈವ್‌ ಒತ್ತಿ.
  • ನಿಮ್ಮ ಆಸ್ತಿ ತೆರಿಗೆ ಮಾಹಿತಿ ಬರುತ್ತದೆ. ಆನ್‌ಲೈನ್‌ ಪಾವತಿ ವಿಧಾನದ ಮೂಲಕ ಪಾವತಿಸಿ.

ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೈಲಾ ಉಲ್ಲಘಿಸಿರುವ ನಿರ್ಮಾಣ ಹಂತದ 200 ಕಟ್ಟಡಗಳು ಪತ್ತೆ; ಶೀಘ್ರ ತೆರವು, ಪಾಲಿಕೆ ಭರವಸೆ

ತೆರಿಗೆ ಪಾವತಿಸುವ ಸಂದರ್ಭದಲ್ಲಿ ಸಂದೇಹಗಳು ಉಂಟಾದರೆ ಈ ವೆಬ್‌ಸೈಟ್‌ನಲ್ಲಿ ಒಟಿಎಸ್‌ ಹೆಲ್ತ್‌ ಡೆಸ್ಕ್‌ ಕ್ಲಿಕ್‌ ಮಾಡಿ. ಅಲ್ಲಿ ವಿವಿಧ ವಿಭಾಗಗಳ ಸಂಪರ್ಕ ಸಂಖ್ಯೆಗಳು ಇರುತ್ತವೆ. ಆ ಸಂಖ್ಯೆಗಳಿಗೆ ಕರೆ ಮಾಡಿ.

ಎರಡು ಬಾರಿ/ಹೆಚ್ಚುವರಿ ಪಾವತಿ, ಆನ್‌ಲೈನ್‌ ಪಾವತಿ ವೈಫಲ್ಯಗಳಿಗೆ ಬಿಬಿಎಂಪಿ ಜವಾಬ್ದಾರರಾಗಿರುವುದಿಲ್ಲ. ಹೀಗಾಗಿ, ಪಾವತಿ ವೈಫಲ್ಯ, ಆಟೋ ರಿಫಂಡ್‌ ವಿಷಯಗಳಿಗೆ ನೀವು ಪಾವತಿಸಿದ ಬ್ಯಾಂಕ್‌ ಅನ್ನು ಸಂಪರ್ಕಿಸಬೇಕು.

ಎಷ್ಟು ತೆರಿಗೆ ಬಾಕಿ ಇದೆ ಎನ್ನುವ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ. ಇದಕ್ಕಾಗಿ ಬಿಬಿಎಂಪಿ ಕಚೇರಿಗಳಿಗೆ ಆಗಮಿಸುವ ಅಗತ್ಯವಿಲ್ಲ.

Whats_app_banner