ಭಾರತೀಯ ರೈಲ್ವೆ ಮಾಹಿತಿ; ನೈಋತ್ಯ ರೈಲ್ವೆಯಿಂದ ಪ್ರಯಾಣಿಕ ದಟ್ಟಣೆ ನಿವಾರಣೆಗೆ 4 ಬೇಸಿಗೆ ವಿಶೇಷ ರೈಲುಗಳು, 26 ರೈಲುಗಳ ಅವಧಿ ವಿಸ್ತರಣೆ
ಕನ್ನಡ ಸುದ್ದಿ  /  ಕರ್ನಾಟಕ  /  ಭಾರತೀಯ ರೈಲ್ವೆ ಮಾಹಿತಿ; ನೈಋತ್ಯ ರೈಲ್ವೆಯಿಂದ ಪ್ರಯಾಣಿಕ ದಟ್ಟಣೆ ನಿವಾರಣೆಗೆ 4 ಬೇಸಿಗೆ ವಿಶೇಷ ರೈಲುಗಳು, 26 ರೈಲುಗಳ ಅವಧಿ ವಿಸ್ತರಣೆ

ಭಾರತೀಯ ರೈಲ್ವೆ ಮಾಹಿತಿ; ನೈಋತ್ಯ ರೈಲ್ವೆಯಿಂದ ಪ್ರಯಾಣಿಕ ದಟ್ಟಣೆ ನಿವಾರಣೆಗೆ 4 ಬೇಸಿಗೆ ವಿಶೇಷ ರೈಲುಗಳು, 26 ರೈಲುಗಳ ಅವಧಿ ವಿಸ್ತರಣೆ

ಭಾರತೀಯ ರೈಲ್ವೆ ಮಾಹಿತಿ; ನೈಋತ್ಯ ರೈಲ್ವೆಯಿಂದ ಬೇಸಿಗೆ ಪ್ರಯಾಣಿಕ ದಟ್ಟಣೆ ನಿವಾರಣೆಗೆ 4 ವಿಶೇಷ ರೈಲುಗಳು ಪರಿಚಯಿಸಿದ್ದು, 26 ರೈಲುಗಳ ಅವಧಿ ವಿಸ್ತರಣೆ ಮಾಡಿದೆ. ಇವುಗಳ ಪೂರ್ಣ ವಿವರ ಇಲ್ಲಿದೆ.

ಭಾರತೀಯ ರೈಲ್ವೆ ಮಾಹಿತಿ ಪ್ರಕಾರ, ನೈಋತ್ಯ ರೈಲ್ವೆಯಿಂದ ಬೇಸಿಗೆ ಪ್ರಯಾಣಿಕ ದಟ್ಟಣೆ ನಿವಾರಣೆಗೆ 4 ವಿಶೇಷ ರೈಲುಗಳು, 26 ರೈಲುಗಳ ಅವಧಿ ವಿಸ್ತರಣೆಯಾಗಿದೆ. (ಸಾಂಕೇತಿಕ ಚಿತ್ರ)
ಭಾರತೀಯ ರೈಲ್ವೆ ಮಾಹಿತಿ ಪ್ರಕಾರ, ನೈಋತ್ಯ ರೈಲ್ವೆಯಿಂದ ಬೇಸಿಗೆ ಪ್ರಯಾಣಿಕ ದಟ್ಟಣೆ ನಿವಾರಣೆಗೆ 4 ವಿಶೇಷ ರೈಲುಗಳು, 26 ರೈಲುಗಳ ಅವಧಿ ವಿಸ್ತರಣೆಯಾಗಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಬೇಸಿಗೆ ರಜೆಯ ಪ್ರಯಾಣಿಕ ದಟ್ಟಣೆ ನಿರ್ವಹಿಸುವುದಕ್ಕಾಗಿ ಭಾರತೀಯ ರೈಲ್ವೆ ಈಗಾಗಲೆ ಬೇಸಿಗೆ ವಿಶೇಷ ರೈಲು ಸಂಚಾರವನ್ನು ನಾನಾ ಮಾರ್ಗಗಳಲ್ಲಿ ಪರಿಚಯಿಸಿದೆ. ಮಂಗಳವಾರ (ಮೇ14) ಮತ್ತೆ 4 ವಿಶೇಷ ರೈಲಗಳನ್ನು ಬೆಂಗಳೂರು- ರೂರ್ಕೆಲಾ- ಬೆಂಗಳೂರು, ಬೆಂಗಳೂರು- ಖುರ್ದಾ ರೋಡ್ - ಬೆಂಗಳೂರು, ಬೆಂಗಳೂರು- ಖಗರಪುರ-ಬೆಂಗಳೂರು ನಡುವೆ ಪರಿಚಯಿಸಿದೆ. ಇದಲ್ಲದೆ 26 ಬೇಸಿಗೆ ವಿಶೇಷ ರೈಲುಗಳ ಅವಧಿಯನ್ನು ಜೂನ್ ಮಧ್ಯಭಾಗದ ತನಕವೂ ವಿಸ್ತರಣೆ ಮಾಡಿದೆ.

ಬೆಂಗಳೂರು- ರೂರ್ಕೆಲಾ- ಬೆಂಗಳೂರು ಸಮ್ಮರ್‌ ಎಕ್ಸ್‌ಪ್ರೆಸ್‌

ಕೆಎಸ್‌ಆರ್ ಬೆಂಗಳೂರು - ರೂರ್ಕೆಲಾ - ಎಸ್‌ಎಂವಿಟಿ ಬೆಂಗಳೂರು ಸಮ್ಮರ್‌ ಎಕ್ಸ್‌ಪ್ರೆಸ್‌ ಸ್ಪೆಷಲ್‌ (ರೈಲು ಸಂಖ್ಯೆ 06249/ 06250)

ಕೆಎಸ್‌ಆರ್ ಬೆಂಗಳೂರು - ರೂರ್ಕೆಲಾ ಸಮ್ಮರ್‌ ಎಕ್ಸ್‌ಪ್ರೆಸ್‌ ಸ್ಪೆಷಲ್‌ ರೈಲು (ರೈಲು ಸಂಖ್ಯೆ 06249) ಮೇ 17 ರಂದು ರಾತ್ರಿ 9.15ಕ್ಕೆ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣ ಬಿಟ್ಟು, ಮೇ 19ಕ್ಕೆ ಮುಂಜಾನೆ 5 ಗಂಟೆಗೆ ರೂರ್ಕೆಲಾ ತಲುಪಲಿದೆ. ಇದೇ ರೀತಿ, ರೂರ್ಕೆಲಾ - ಎಸ್‌ಎಂವಿಟಿ ಬೆಂಗಳೂರು ಸಮ್ಮರ್‌ ಎಕ್ಸ್‌ಪ್ರೆಸ್‌ ಸ್ಪೆಷಲ್‌ (ರೈಲು ಸಂಖ್ಯೆ 06250) ಮೇ 19ರಂದು ಬೆಳಗ್ಗೆ 7 ಗಂಟೆಗೆ ರೂರ್ಕೆಲಾದಿಂದ ಹೊರಟು ಮೇ 20ರಂದು ಮಧ್ಯಾಹ್ನ ನಂತರ 2 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ. ಈ ರೈಲುಗಳು ಜೋಲಾರ್‌ಪೇಟೈ, ವಿಜಯವಾಡ, ವಿಜಯನಗರಂ, ರಾಯಗಡ, ತಿತ್ಲಗಡ, ಸಂಬಾಲ್‌ಪುರ ರೈಲು ನಿಲ್ಧಾಣಗಳ ಮೂಲಕ ಹಾದುಹೋಗಲಿವೆ.

ಬೆಂಗಳೂರು- ಖುರ್ದಾ ರೋಡ್ - ಬೆಂಗಳೂರು ಸಮ್ಮರ್ ಎಕ್ಸ್‌ಪ್ರೆಸ್

ಎಸ್‌ಎಂವಿಟಿ ಬೆಂಗಳೂರು- ಖುರ್ದಾ ರೋಡ್ - ಎಸ್‌ಎಂವಿಟಿ ಬೆಂಗಳೂರು ಸಮ್ಮರ್ ಎಕ್ಸ್‌ಪ್ರೆಸ್ ಸ್ಷೆಷಲ್ ರೈಲು (ರೈಲು ಸಂಖ್ಯೆ 06251/ 06252)

ಎಸ್‌ಎಂವಿಟಿ ಬೆಂಗಳೂರು- ಖುರ್ದಾ ರೋಡ್ ಸಮ್ಮರ್ ಎಕ್ಸ್‌ಪ್ರೆಸ್ ಸ್ಷೆಷಲ್ ರೈಲು (ರೈಲು ಸಂಖ್ಯೆ 06251) ಬೆಂಗಳೂರಿನಿಂದ ಮೇ 18ರಂದು ಬೆಳಗ್ಗೆ 10.15ಕ್ಕೆ ಗಂಟೆಗೆ ಹೊರಟು ಮೇ 19 ರಂದು ರಾತ್ರಿ 9 ಗಂಟೆಗೆ ಖುರ್ದಾ ರೋಡ್‌ ತಲುಪಲಿದೆ. ಇದೇ ರೀತಿ, ಖುರ್ದಾ ರೋಡ್ - ಎಸ್‌ಎಂವಿಟಿ ಬೆಂಗಳೂರು ಸಮ್ಮರ್ ಎಕ್ಸ್‌ಪ್ರೆಸ್ ಸ್ಷೆಷಲ್ ರೈಲು (ರೈಲು ಸಂಖ್ಯೆ 06254) ಖುರ್ದಾ ರೋಡ್‌ನಿಂದ ಮೇ 19 ರಂದು ರಾತ್ರಿ 10.30ಕ್ಕೆ ಹೊರಟು ಎಸ್‌ಎಂವಿಟಿ ಬೆಂಗಳೂರಿಗೆ ಮೇ 21 ರಂದು ಬೆಳಗ್ಗೆ 10. 55 ಕ್ಕೆ ತಲುಪಲಿದೆ. ಈ ರೈಲುಗಳು ಜೋಲಾರ್‌ಪೇಟೈ, ವಿಜಯವಾಡ, ವಿಜಯನಗರಂ, ಸಂಬಾಲ್‌ಪುರ, ಕಟಕ್‌ ಮತ್ತು ಭುವನೇಶ್ವರ ಮೂಲಕ ಹಾದುಹೋಗಲಿವೆ.

ಬೆಂಗಳೂರು- ಖುರ್ದಾ ರೋಡ್ - ಬೆಂಗಳೂರು ಸಮ್ಮರ್ ಎಕ್ಸ್‌ಪ್ರೆಸ್

ಎಸ್‌ಎಂವಿಟಿ ಬೆಂಗಳೂರು- ಖುರ್ದಾ ರೋಡ್ - ಎಸ್‌ಎಂವಿಟಿ ಬೆಂಗಳೂರು ಸಮ್ಮರ್ ಎಕ್ಸ್‌ಪ್ರೆಸ್ ಸ್ಷೆಷಲ್ ರೈಲು (ರೈಲು ಸಂಖ್ಯೆ 06253/ 06254)

ಎಸ್‌ಎಂವಿಟಿ ಬೆಂಗಳೂರು- ಖುರ್ದಾ ರೋಡ್ ಸಮ್ಮರ್ ಎಕ್ಸ್‌ಪ್ರೆಸ್ ಸ್ಷೆಷಲ್ ರೈಲು (ರೈಲು ಸಂಖ್ಯೆ 06253) ಬೆಂಗಳೂರಿನಿಂದ ಮೇ 21ರಂದು ರಾತ್ರಿ 11 ಗಂಟೆಗೆ ಹೊರಟು ಮೇ 23ರಂದು ಬೆಳಗ್ಗೆ 11 ಗಂಟೆಗೆ ಖುರ್ದಾ ರೋಡ್‌ ತಲುಪಲಿದೆ. ಇದೇ ರೀತಿ, ಖುರ್ದಾ ರೋಡ್ - ಎಸ್‌ಎಂವಿಟಿ ಬೆಂಗಳೂರು ಸಮ್ಮರ್ ಎಕ್ಸ್‌ಪ್ರೆಸ್ ಸ್ಷೆಷಲ್ ರೈಲು (ರೈಲು ಸಂಖ್ಯೆ 06254) ಖುರ್ದಾ ರೋಡ್‌ನಿಂದ ಮೇ 23 ರಂದು ಮಧ್ಯಾಹ್ನ 1 ಗಂಟೆಗೆ ಹೊರಟು ಎಸ್‌ಎಂವಿಟಿ ಬೆಂಗಳೂರಿಗೆ ಮೇ 24ರಂದು ರಾತ್ರಿ 10.40ಕ್ಕೆ ತಲುಪಲಿದೆ. ಈ ರೈಲುಗಳು ಜೋಲಾರ್‌ಪೇಟೈ, ವಿಜಯವಾಡ, ವಿಜಯನಗರಂ, ಸಂಬಾಲ್‌ಪುರ, ಕಟಕ್‌ ಮತ್ತು ಭುವನೇಶ್ವರ ಮೂಲಕ ಹಾದುಹೋಗಲಿವೆ.

ಬೆಂಗಳೂರು- ಖಗರಪುರ-ಬೆಂಗಳೂರು ಸಮ್ಮರ್ ಎಕ್ಸ್‌ಪ್ರೆಸ್‌

ಎಸ್‌ಎಂವಿಟಿ ಬೆಂಗಳೂರು- ಖರಗ್‌ಪುರ-ಎಸ್‌ಎಂವಿಟಿ ಬೆಂಗಳೂರು ಸಮ್ಮರ್‌ ಎಕ್ಸ್‌ಪ್ರೆಸ್‌ ಸ್ಪೆಷಲ್ (ರೈಲು ಸಂಖ್ಯೆ 06259/ 06260)

ಎಸ್‌ಎಂವಿಟಿ ಬೆಂಗಳೂರು- ಖರಗ್‌ಪುರ ಸಮ್ಮರ್‌ ಎಕ್ಸ್‌ಪ್ರೆಸ್‌ ಸ್ಪೆಷಲ್ (ರೈಲು ಸಂಖ್ಯೆ 06259) ರೈಲು ಮೇ 25 ರಂದು ಬೆಳಗ್ಗೆ 10.15ಕ್ಕೆ ಬೆಂಗಳೂರಿನಿಂದ ಹೊರಟು, ಮೇ 26 ರಂದು ರಾತ್ರಿ 7.30ಕ್ಕೆ ಖರಗ್‌ಪುರ ತಲುಪಲಿದೆ. ಇದೇ ರೀತಿ, ಖರಗ್‌ಪುರ-ಎಸ್‌ಎಂವಿಟಿ ಬೆಂಗಳೂರು ಸಮ್ಮರ್‌ ಎಕ್ಸ್‌ಪ್ರೆಸ್‌ ಸ್ಪೆಷಲ್ (ರೈಲು ಸಂಖ್ಯೆ 06260) ಮೇ 26 ರಂದು ರಾತ್ರಿ 10.15ಕ್ಕೆ ಖರಗಪುರದಿಂದ ಹೊರಟು ಮೇ 28ರಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರು ತಲುಪಲಿದೆ. ಈ ರೈಲು ಭುವನೇಶ್ವರ, ಕಟಕ್‌, ಭದ್ರಕ್ ಮತ್ತು ಬಾಲೇಶ್ವರ ರೈಲು ನಿಲ್ದಾಣಗಳ ಮೂಲಕ ಹಾದುಹೋಗಲಿದೆ.

ಬೇಸಿಗೆ ರಜೆಯ ಪ್ರಯಾಣಿಕ ದಟ್ಟಣೆ ನಿರ್ವಹಣೆಗೆ ರೈಲು ಸೇವೆ ಅವಧಿ ವಿಸ್ತರಣೆ

1) ವಾಸ್ಕೋ ಡ ಗಾಮಾ - ಮುಜಾಫರ್‌ಪುರ (ರೈಲು ಸಂಖ್ಯೆ 07309) ಪ್ರತಿ ಬುಧವಾರ (ಮೇ 8) ಜೂನ್ 12 ರ ತನಕ ವಿಸ್ತರಣೆ

2) ಮುಜಫರಪುರ- ವಾಸ್ಕೋ ಡ ಗಾಮಾ (ರೈಲು ಸಂಖ್ಯೆ 07310) ಪ್ರತಿ ಶನಿವಾರ. (ಮೇ 11) ಜೂನ್ 15 ರ ತನಕ ವಿಸ್ತರಣೆ

3) ಹುಬ್ಬಳ್ಳಿ- ಗೋಮತಿ ನಗರ (ರೈಲು ಸಂಖ್ಯೆ 07305) ಪ್ರತಿ ಶನಿವಾರ (ಮೇ 18) ಜೂನ್ 15 ರ ತನಕ ವಿಸ್ತರಣೆ

4) ಗೋಮತಿ ನಗರ - ಹುಬ್ಬಳ್ಳಿ (ರೈಲು ಸಂಖ್ಯೆ 07306) ಪ್ರತಿ ಮಂಗಳವಾರ (ಮೇ 21) ಜೂನ್ 18 ರ ತನಕ ವಿಸ್ತರಣೆ

5) ಹುಬ್ಬಳ್ಳಿ - ಅಹಮದಾಬಾದ್ (ರೈಲು ಸಂಖ್ಯೆ 07311) ಪ್ರತಿ ಭಾನುವಾರ (ಮೇ 26) ಜೂನ್ 16 ರ ತನಕ ವಿಸ್ತರಣೆ

6) ಅಹಮದಾಬಾದ್ - ಹುಬ್ಬಳ್ಳಿ (ರೈಲು ಸಂಖ್ಯೆ 07312) ಪ್ರತಿ ಸೋಮವಾರ (ಮೇ 27) ಜೂನ್ 17 ರ ತನಕ ವಿಸ್ತರಣೆ

7) ಹುಬ್ಬಳ್ಳಿ - ಮುಜಫರಪುರ (ರೈಲು ಸಂಖ್ಯೆ 07315) ಪ್ರತಿ ಮಂಗಳವಾರ (ಮೇ 28) ಜೂನ್ 11 ರ ತನಕ ವಿಸ್ತರಣೆ

8) ಮುಜಫರಪುರ - ಹುಬ್ಬಳ್ಳಿ (ರೈಲು ಸಂಖ್ಯೆ 07316) ಪ್ರತಿ ಶುಕ್ರವಾರ (ಮೇ 31) ಜೂನ್ 14 ರ ತನಕ ವಿಸ್ತರಣೆ

9) ಹುಬ್ಬಳ್ಳಿ - ಯೋಗನಗರಿ ಋಷಿಕೇಶ (ರೈಲು ಸಂಖ್ಯೆ 06225) ಪ್ರತಿ ಸೋಮವಾರ (ಮೇ27) ಜೂನ್ 10 ರ ತನಕ

10) ಯೋಗ ನಗರಿ ಋಷಿಕೇಶ (ರೈಲು ಸಂಖ್ಯೆ 06226) ಪ್ರತಿ ಗುರುವಾರ(ಮೇ 30) ಜೂನ್‌ 13 ರ ತನಕ ವಿಸ್ತರಣೆ

11) ಮೈಸೂರು - ಅಜ್ಮೇರ್ (ರೈಲು ಸಂಖ್ಯೆ 06281) ಪ್ರತಿ ಶನಿವಾರ (ಮೇ 18) ಜೂನ್ 15ರ ತನಕ ವಿಸ್ತರಣೆ

12) ಅಜ್ಮೇರ್ - ಮೈಸೂರು (ರೈಲು ಸಂಖ್ಯೆ 06282) ಪ್ರತಿ ಮಂಗಳವಾರ (ಮೇ21) ಜೂನ್ 18 ರ ತನಕ ವಿಸ್ತರಣೆ

13) ಮೈಸೂರು - ಮುಜಫರಪುರ (ರೈಲು ಸಂಖ್ಯೆ 06221) ಪ್ರತಿ ಸೋಮವಾರ (ಜೂನ್ 3) ಜೂನ್ 10 ರ ತನಕ ವಿಸ್ತರಣೆ

14) ಮುಜಫರಪುರ- ಮೈಸೂರು (ರೈಲು ಸಂಖ್ಯೆ 06222) ಪ್ರತಿ ಗುರುವಾರ (ಜೂನ್ 6) ಜೂನ್ 13ರ ತನಕ ವಿಸ್ತರಣೆ

15) ಎಸ್‌ಎಂವಿಟಿ ಬೆಂಗಳೂರು- ಖರಗಪುರ (ರೈಲು ಸಂಖ್ಯೆ 06507) ಪ್ರತಿ ಶುಕ್ರವಾರ (ಮೇ 17) ಜೂನ್ 14 ರ ತನಕ ವಿಸ್ತರಣೆ

16) ಖರಗಪುರ - ಎಸ್‌ಎಂವಿಟಿ ಬೆಂಗಳೂರು (ರೈಲು ಸಂಖ್ಯೆ -06508) ಪ್ರತಿ ಸೋಮವಾರ (ಮೇ 20) ಜೂನ್ 17ರ ತನಕ ವಿಸ್ತರಣೆ

17) ಎಸ್‌ಎಂವಿಟಿ ಬೆಂಗಳೂರು - ಹೌರಾ (ರೈಲು ಸಂಖ್ಯೆ 06585) ಪ್ರತಿ ಶುಕ್ರವಾರ (ಮೇ 24) ಜೂನ್ 14 ರ ತನಕ ವಿಸ್ತರಣೆ

18) ಹೌರಾ - ಎಸ್‌ಎಂವಿಟಿ ಬೆಂಗಳೂರು (ರೈಲು ಸಂಖ್ಯೆ 06586) ಪ್ರತಿ ಶನಿವಾರ (ಮೇ 25) ಜೂನ್ 15 ರ ತನಕ ವಿಸ್ತರಣೆ

19) ಎಸ್‌ಎಂವಿಟಿ ಬೆಂಗಳೂರು- ಗುವಾಹಟಿ (ರೈಲು ಸಂಖ್ಯೆ 06569) ಪ್ರತಿ ಭಾನುವಾರ (ಮೇ 19) ಜೂನ್ 9 ರ ತನಕ ವಿಸ್ತರಣೆ

20) ಗುವಾಹಟಿ - ಎಸ್‌ಎಂವಿಟಿ ಬೆಂಗಳೂರು (ರೈಲು ಸಂಖ್ಯೆ 06570) ಪ್ರತಿ ಬುಧವಾರ (ಮೇ 22) ಜೂನ್ 12 ರ ತನಕ ವಿಸ್ತರಣೆ

21) ಯಶವಂತಪುರ - ಗಯಾ (ರೈಲು ಸಂಖ್ಯೆ 06217) ಪ್ರತಿ ಶನಿವಾರ (ಮೇ 25) ಜೂನ್ 15 ರ ತನಕ ವಿಸ್ತರಣೆ

22) ಗಯಾ - ಯಶವಂತಪುರ (ರೈಲು ಸಂಖ್ಯೆ 06218) ಪ್ರತಿ ಸೋಮವಾರ (ಮೇ 27) ಜೂನ್ 17 ರ ತನಕ ವಿಸ್ತರಣೆ

23) ಎಸ್‌ಎಂವಿಟಿ ಬೆಂಗಳೂರು- ಮಾಲ್ಡಾ ಟೌನ್‌ (ರೈಲು ಸಂಖ್ಯೆ 06563) ಪ್ರತಿ ಭಾನುವಾರ (ಜೂನ್ 2) ಜೂನ್ 9 ರ ತನಕ ವಿಸ್ತರಣೆ

24) ಮಾಲ್ಡಾ ಟೌನ್ - ಎಸ್‌ಎಂವಿಟಿ ಬೆಂಗಳೂರು (ರೈಲು ಸಂಖ್ಯೆ 06564) ಪ್ರತಿ ಬುಧವಾರ (ಜೂನ 5) ಜೂನ್‌ 12 ರ ತನಕ ವಿಸ್ತರಣೆ

25) ಎಸ್‌ಎಂವಿಟಿ ಬೆಂಗಳೂರು - ಬೀದರ್ (ರೈಲು ಸಂಖ್ಯೆ 06589) ಪ್ರತಿ ಭಾನುವಾರ ಮತ್ತು ಮಂಗಳವಾರ (ಮೇ 12) ಜೂನ್ 16 ರ ತನಕ ವಿಸ್ತರಣೆ

26) ಬೀದರ್ - ಎಸ್‌ಎಂವಿಟಿ ಬೆಂಗಳೂರು (ರೈಲು ಸಂಖ್ಯೆ 06590) ಪ್ರತಿ ಸೋಮವಾರ ಮತ್ತು ಬುಧವಾರ (ಮೇ 13) ಜೂನ್ 17 ರ ತನಕ ವಿಸ್ತರಣೆ

Whats_app_banner