Karnataka Rains: ಅಕ್ಟೋಬರ್‌ ತಿಂಗಳಲ್ಲಿ 17 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ: 3 ಜಿಲ್ಲೆಗಳಲ್ಲಿ ಮಾತ್ರ ಕೊರತೆ; ಎಲ್ಲೆಲ್ಲಿ ಎಷ್ಟು
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ಅಕ್ಟೋಬರ್‌ ತಿಂಗಳಲ್ಲಿ 17 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ: 3 ಜಿಲ್ಲೆಗಳಲ್ಲಿ ಮಾತ್ರ ಕೊರತೆ; ಎಲ್ಲೆಲ್ಲಿ ಎಷ್ಟು

Karnataka Rains: ಅಕ್ಟೋಬರ್‌ ತಿಂಗಳಲ್ಲಿ 17 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ: 3 ಜಿಲ್ಲೆಗಳಲ್ಲಿ ಮಾತ್ರ ಕೊರತೆ; ಎಲ್ಲೆಲ್ಲಿ ಎಷ್ಟು

ಕರ್ನಾಟಕದಲ್ಲಿ ಅಕ್ಟೋಬರ್‌ ಜತೆಗೆ ನವೆಂಬರ್‌ ಮೊದಲ ವಾರದವರೆಗೂ ಉತ್ತಮ ಮಳೆಯಾಗಿದೆ. ಮೂರು ಜಿಲ್ಲೆಗಳಲ್ಲಿ ಮಾತ್ರ ಕೊರತೆ ಎದುರಾಗಿದೆ.

ಕರ್ನಾಟಕದ ಹಲವಿ ಭಾಗಗಳಲ್ಲಿ ಅಕ್ಟೋಬರ್‌ ತಿಂಗಳಲ್ಲಿ  ಉತ್ತಮವಾಗಿ ಮಳೆಯಾಗಿದೆ.
ಕರ್ನಾಟಕದ ಹಲವಿ ಭಾಗಗಳಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಉತ್ತಮವಾಗಿ ಮಳೆಯಾಗಿದೆ.

ಬೆಂಗಳೂರು: ಕರ್ನಾಟಕದಲ್ಲಿ ಸೆಪ್ಟಂಬರ್‌ಗೆ ಮುಂಗಾರು ಅವಧಿ ಮುಗಿದರೂ ಈ ಬಾರಿ ಅಕ್ಟೋಬರ್‌ಗೂ ವಿಸ್ತರಣೆಯಾಯಿತು. ನವೆಂಬರ್ ಮೊದಲ ವಾರದಲ್ಲೂ ಕೆಲ ಭಾಗದಲ್ಲಿ ಮಳೆಯಾಯಿತು. ಹಿಂಗಾರು ಆರಂಭವಾಗುವ ಮುನ್ನ ಉತ್ತಮ ಮಳೆ ಕರ್ನಾಟಕದ ಬಹುತೇಕ ಭಾಗದಲ್ಲಿ ಆಗಿದೆ. ಉತ್ತರ ಕರ್ನಾಟಕ ಭಾಗದ ಮೂರು ಜಿಲ್ಲೆಗಳನ್ನು ಹೊರತುಪಡಿಸಿದರೆ ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ಮಾಹಿತಿ ನೀಡಿದೆ. ಅದರಲ್ಲೂ ಅಕ್ಟೋಬರ್‌ ತಿಂಗಳು ಹಾಗೂ ನವೆಂಬರ್‌ ಮೊದಲ ವಾರದಲ್ಲಿ 17 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದರೆ, 10 ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಿದ್ದು. ಕೊರತೆ ಕಂಡು ಬಂದಿರುವುದು ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಮಾತ್ರ ಎಂದು ಇಲಾಖೆ ತಿಳಿಸಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದಲ್ಲಿ ಈ ಅವಧಿಯಲ್ಲಿ ಅತಿ ಹೆಚ್ಚು ಮಳೆಯಾಗಿರುವುದು ಹಾವೇರಿ, ಚಿತ್ರದುರ್ಗ ಜಿಲ್ಲೆಯಲ್ಲಿ. ಅತಿ ಕಡಿಮೆ ಮಳೆಯಾಗಿರುವುದು ರಾಯಚೂರು ಜಿಲ್ಲೆಯಲ್ಲಿ.

ಅತಿ ಹೆಚ್ಚು ಯಾವ ಜಿಲ್ಲೆಯಲ್ಲಿ

ಹಾವೇರಿ ಜಿಲ್ಲೆಯಲ್ಲಿ ಶೇ.189 ರಷ್ಟು ಮಳೆ ಸುರಿದಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಶೇ. 169ರಷ್ಟು ಮಳೆಯಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಶೇ.113 ರಷ್ಟು ಮಳೆ ಸುರಿದಿದೆ

ಧಾರವಾಡ ಜಿಲ್ಲೆಯಲ್ಲಿ ಶೇ.91 ರಷ್ಟು ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಶೇ.82 ರಷ್ಟು ಮಳೆ ಸುರಿದಿದೆ

ಚಿಕ್ಕಮಗಳೂರು ಶೇ.63 ರಷ್ಟು ಮಳೆಯಾಗಿದೆ.

ತುಮಕೂರು ಜಿಲ್ಲೆಯಲ್ಲಿ ಶೇ.60 ರಷ್ಟು ಮಳೆ ಸುರಿದಿದೆ

ರಾಮನಗರ ಶೇ.93ರಷ್ಟು ಮಳೆಯಾಗಿದೆ.

ಹೆಚ್ಚು ಮಳೆ ಎಲ್ಲೆಲ್ಲಿ

ಬೆಳಗಾವಿ ಜಿಲ್ಲೆಯಲ್ಲಿ ಶೇ.39 ರಷ್ಟು ಮಳೆ ಸುರಿದಿದೆ

ಗದಗ ಶೇ. 41ರಷ್ಟು ಮಳೆಯಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಶೇ.28 ರಷ್ಟು ಮಳೆ ಸುರಿದಿದೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.55 ರಷ್ಟು ಮಳೆ ಸುರಿದಿದೆ

ಉಡುಪಿ ಜಿಲ್ಲೆಯಲ್ಲಿ ಶೇ 37 ರಷ್ಟು ಮಳೆ ಸುರಿದಿದೆ

ಮಂಡ್ಯ ಶೇ. 59ರಷ್ಟು ಮಳೆಯಾಗಿದೆ.

ಕೋಲಾರ ಜಿಲ್ಲೆಯಲ್ಲಿ ಶೇ. 39ರಷ್ಟು ಮಳೆ ಸುರಿದಿದೆ

ಬೆಂಗಳೂರು ನಗರ ಶೇ. 42ರಷ್ಟು ಮಳೆಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇ. 44ರಷ್ಟು ಮಳೆ ಸುರಿದಿದೆ

ಸಾಮಾನ್ಯ ಮಳೆ ಎಲ್ಲಿ ಆಗಿದೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ 5ರಷ್ಟು ಮಳೆ ಸುರಿದಿದೆ

ಚಾಮರಾಜನಗರ ಶೇ. 5ರಷ್ಟು ಮಳೆಯಾಗಿದೆ.

ಮೈಸೂರು ಜಿಲ್ಲೆಯಲ್ಲಿ ಶೇ. 2ರಷ್ಟು ಮಳೆ ಸುರಿದಿದೆ

ಕೊಡಗು ಶೇ. 15ರಷ್ಟು ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.16 ರಷ್ಟು ಮಳೆ ಸುರಿದಿದೆ

ಹಾಸನ ಜಿಲ್ಲೆಯಲ್ಲಿ ಶೇ. 13ರಷ್ಟು ಮಳೆಯಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಶೇ.1 ರಷ್ಟು ಮಳೆ ಸುರಿದಿದೆ

ಯಾದಗಿರಿ ಜಿಲ್ಲೆಯಲ್ಲಿ ಶೇ.5 ರಷ್ಟು ಮಳೆಯಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಶೇ. 14ರಷ್ಟು ಮಳೆಯಾಗಿದೆ.

ಬೀದರ್‌ ಜಿಲ್ಲೆಯಲ್ಲಿ ಶೇ. 13ರಷ್ಟು ಮಳೆಯಾಗಿದೆ

ಮಳೆ ಕೊರತೆ ಎಲ್ಲಿ

ಕಲಬುರಗಿ ಜಿಲ್ಲೆಯಲ್ಲಿ ಶೇ. 37ರಷ್ಟು ಮಳೆ ಕೊರತೆಯಿದೆ

ವಿಜಯಪುರ ಜಿಲ್ಲೆಯಲ್ಲಿ ಶೇ. 38 ರಷ್ಟು ಮಳೆ ಕೊರತೆಯಾಗಿದೆ.

ರಾಯಚೂರು ಜಿಲ್ಲೆಯಲ್ಲಿ ಶೇ. 44 ರಷ್ಟು ಮಳೆ ಕೊರತೆಯಿದೆ.

Whats_app_banner