ಅಕ್ಟೋಬರ್‌ ತಿಂಗಳಲ್ಲಿ 10 ದಿನ ಬ್ಯಾಂಕ್ ರಜೆ; ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳನ್ನು ಮುಂಚಿತವಾಗಿ ಪ್ಲಾನ್ ಮಾಡಿ-list of bank holidays in october 2024 in karnataka including second saturday and sunday gandhi jayanti diwali jra ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಅಕ್ಟೋಬರ್‌ ತಿಂಗಳಲ್ಲಿ 10 ದಿನ ಬ್ಯಾಂಕ್ ರಜೆ; ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳನ್ನು ಮುಂಚಿತವಾಗಿ ಪ್ಲಾನ್ ಮಾಡಿ

ಅಕ್ಟೋಬರ್‌ ತಿಂಗಳಲ್ಲಿ 10 ದಿನ ಬ್ಯಾಂಕ್ ರಜೆ; ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳನ್ನು ಮುಂಚಿತವಾಗಿ ಪ್ಲಾನ್ ಮಾಡಿ

Bank Holidays in October 2024: ಅಕ್ಟೋಬರ್‌ ತಿಂಗಳಲ್ಲಿ ಸರ್ಕಾರಿ ರಜೆಗಳನ್ನು ಸೇರಿಸಿ ಒಟ್ಟು 10 ದಿನಗಳ ರಜೆ ಇವೆ. ಒಂದು ಬಾರಿ ಸತತ 3 ದಿನಗಳ ರಜೆ ಇರಲಿದೆ. ನವರಾತ್ರಿ ಹಬ್ಬದ ಪ್ರಯುಕ್ತ ಬ್ಯಾಂಕ್‌ ಬಾಗಿಲು ಮುಚ್ಚಿರುತ್ತವೆ. ಹೀಗಾಗಿ ನಿಮ್ಮ ಬ್ಯಾಂಕಿಂಗ್‌ ವ್ಯವಹಾರಗಳನ್ನು ಮುಂಚಿತವಾಗಿ ಪ್ಲಾನ್‌ ಮಾಡಿಕೊಂಡಿರಿ. ರಜೆಗಳ ವಿವರ ಇಲ್ಲಿದೆ.

ಅಕ್ಟೋಬರ್‌ನಲ್ಲ 10 ದಿನ ಬ್ಯಾಂಕ್ ರಜೆ; ಬ್ಯಾಂಕಿಂಗ್ ವ್ಯವಹಾರ ಮೊದಲೇ ಪ್ಲಾನ್ ಮಾಡಿಕೊಳ್ಳಿ
ಅಕ್ಟೋಬರ್‌ನಲ್ಲ 10 ದಿನ ಬ್ಯಾಂಕ್ ರಜೆ; ಬ್ಯಾಂಕಿಂಗ್ ವ್ಯವಹಾರ ಮೊದಲೇ ಪ್ಲಾನ್ ಮಾಡಿಕೊಳ್ಳಿ

ದಸರಾ, ನವರಾತ್ರಿ ಹಬ್ಬಗಳಿರುವ ಅಕ್ಟೋಬರ್‌ ತಿಂಗಳಿನಲ್ಲಿ ಸಾಲು ಸಾಲು ರಜೆಗಳಿವೆ. ದೇಶದ ವಿವಿಧ ರಾಜ್ಯಗಳಲ್ಲಿ ನವರಾತ್ರಿಯನ್ನು ವಿವಿಧ ಹೆಸರು ಹಾಗೂ ವಿವಿಧ ರೀತಿಯ ಸಂಭ್ರಮದೊಂದಿಗೆ ಆಚರಿಸಲಾಗುತ್ತದೆ. ರಾಜ್ಯದಿಂದ ರಾಜ್ಯಕ್ಕೆ ರಜೆಗಳಲ್ಲಿ ವ್ಯತ್ಯಾಸವಿದೆ. ಬ್ಯಾಂಕ್‌ ಉದ್ಯೋಗಿಗಳ ನಿಯಮಿತ ವಾರದ ರಜೆಯನ್ನು ಹೊರತುಪಡಿಸಿ ಹೆಚ್ಚುವರಿ ರಜೆಗಳು ಇವೆ. ಹಬ್ಬದ ದಿನಗಳನ್ನು ಪ್ಲಾನ್‌ ಮಾಡಲು, ಮನೆಯಲ್ಲಿ ಸಂಭ್ರಮಾಚರಣೆ ಜೊತೆಗೆ ವಿವಿಧೆಡೆ ನಡೆಯುವ ಅದ್ಧೂರಿ ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಇದು ಸರಿಯಾದ ಸಮಯ.

ಅಕ್ಟೋಬರ್‌ ತಿಂಗಳ ರಜಾದಿನಗಳನ್ನು ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ವೆಬ್‌ಸೈಟ್ ಪ್ರಕಾರ ವರ್ಗೀಕರಿಸಿದೆ. ಈ ತಿಂಗಳಲ್ಲಿ ಮಹಾತ್ಮಾ ಗಾಂಧಿ ಜಯಂತಿ, ವಿಜಯದಶಮಿ, ದೀಪಾವಳಿಯ ನರಕ ಚತುರ್ದಶಿ ಸೇರಿ ರಾಷ್ಟ್ರೀಯ ಹಾಗೂ ಧಾರ್ಮಿಕ ಹಬ್ಬಗಳಿವೆ. ರಾಜ್ಯಗಳಿಂದ ರಾಜ್ಯಕ್ಕೆ ಬ್ಯಾಂಕ್‌ ರಜೆಗಳು ತುಸು ಭಿನ್ನವಾಗಿವೆ. ಕರ್ನಾಟಕದ ಬ್ಯಾಂಕ್‌ಗಳಲ್ಲಿ ರಜೆಗಳ ವಿವರ ಹೇಗಿದೆ ನೋಡೋಣ.

ಆರ್‌ಬಿಐ ವೆಬ್‌ಸೈಟ್‌ ಪ್ರಕಾರ, ಅಕ್ಟೋಬರ್ 2024ರಲ್ಲಿ ಬ್ಯಾಂಕ್ ರಜಾದಿನಗಳಲ್ಲಿ ಅಕ್ಟೋಬರ್ 2ರ ಮಹಾತ್ಮ ಗಾಂಧಿ ಜಯಂತಿ, ದಸರಾ ಹಬ್ಬದ ಮುಖ್ಯ ದಿನಗಳಾದ ಅಕ್ಟೋಬರ್ 10, 11 ಹಾಗೂ 12ರಂದು ವಿವಿಧ ರಾಜ್ಯ ಅಥವಾ ನಗರಗಳಲ್ಲಿ ಬೇರೆ ಬೇರೆ ದಿನ ರಜೆಗಳಿವೆ. ದೀಪಾವಳಿ ಆರಂಭವಾಗುವ ಅಕ್ಟೋಬರ್ 31ಕ್ಕೆ ಬಹುತೇಕ ಎಲ್ಲಾ ರಾಜ್ಯಗಳ ಬ್ಯಾಂಕ್‌ಗಳಿಗೂ ರಜೆ ಇದೆ. ಅಕ್ಟೋಬರ್‌ ತಿಂಗಳ ಉದ್ದಕ್ಕೂ ಸರ್ಕಾರಿ ರಜೆಗಳನ್ನು ಸೇರಿಸಿ ಒಟ್ಟು 10 ದಿನಗಳ ರಜೆ ಇವೆ. ನಿಮ್ಮ ಬ್ಯಾಂಕಿಂಗ್‌ ವ್ಯವಹಾರಗಳನ್ನು ಮುಂಚಿತವಾಗಿ ಪ್ಲಾನ್‌ ಮಾಡಿಕೊಳ್ಳುವುದು ಉತ್ತಮ.

ಕರ್ನಾಟಕದಲ್ಲಿ ಅಕ್ಟೋಬರ್‌ 2024ರ ಬ್ಯಾಂಕ್‌ ರಜಾ ದಿನಗಳು

  • ಅಕ್ಟೋಬರ್ 2 ಬುಧವಾರ -ಮಹಾತ್ಮ ಗಾಂಧಿ ಜಯಂತಿ
  • ಅಕ್ಟೋಬರ್ 11 ಶುಕ್ರವಾರ -ಮಹಾ ನವಮಿ
  • ಅಕ್ಟೋಬರ್ 17 ಗುರುವಾರ -ಮಹರ್ಷಿ ವಾಲ್ಮೀಕಿ ಜಯಂತಿ
  • ಅಕ್ಟೋಬರ್ 31 ಗುರುವಾರ -ದೀಪಾವಳಿ

ಇದನ್ನೂ ಓದಿ | Dasara Holidays 2024: ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆ; ಯಾವಾಗಿಂದ ರಜೆ ಆರಂಭ, ಎಷ್ಟು ದಿನ?

ಈ ನಾಲ್ಕು ದಿನಗಳ ಹೆಚ್ಚುವರಿ ರಜೆ ಹೊರತಾಗಿ ಎರಡು ದಿನ ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರದ ರಜೆಗಳಿವೆ. ಅಕ್ಟೋಬರ್ 12 ಶನಿವಾರವಾರದಂದು ವಿಜಯ ದಶಮಿಯ ಜಂಬೂಸವಾರಿ ದಿನ. ತಿಂಗಳ ಎರಡನೇ ಶನಿವಾರವಾದ ಈ ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಇದೇ ವೇಳೆ 26ರಂದು ನಾಲ್ಕನೇ ಶನಿವಾರವಾದ ಕಾರಣ ಅಂದೂ ಕೂಡಾ ರಜೆ ಇರಲಿದೆ.

ಎರಡನೇ ಶನಿವಾರ ಹಾಗೂ ಭಾನುವಾರದ ರಜೆಗಳು

  • ಅಕ್ಟೋಬರ್ 6 ಭಾನುವಾರ
  • ಅಕ್ಟೋಬರ್ 12 ಎರಡನೇ ಶನಿವಾರ
  • ಅಕ್ಟೋಬರ್ 13 ಭಾನುವಾರ
  • ಅಕ್ಟೋಬರ್ 20 ಭಾನುವಾರ
  • ಅಕ್ಟೋಬರ್ 26 ನಾಲ್ಕನೇ ಶನಿವಾರ
  • ಅಕ್ಟೋಬರ್ 27 ಭಾನುವಾರ

ಅಕ್ಟೋಬರ್‌ 11, 12 ಹಾಗೂ 13ರಂದು ಸತತ ಮೂರು ದಿನಗಳ ರಜೆ ಬರುತ್ತದೆ. ಈ ಸಮಯದಲ್ಲಿ ಸುದೀರ್ಘ ಪ್ರಯಾಣದ ಪ್ಲಾನ್‌ ಮಾಡಿಕೊಳ್ಳಬಹುದು. ಮೈಸೂರು ದಸರಾ ಜಂಬೂ ಸವಾರಿ ಮಾತ್ರವಲ್ಲದೆ, ಮಂಗಳೂರು ದಸರಾ ಅಥವಾ ಬೇರೆ ಬೇರೆ ರಾಜ್ಯಗಳ ನವರಾತ್ರಿ ವೈಭವವನ್ನು ಆಸ್ವಾದಿಸಬಹುದು.

mysore-dasara_Entry_Point