ದಸರಾ ಜಂಬೂಸವಾರಿ ನೋಡಲು ಹೆಚ್ಚುವರಿ ರಜೆ ಬೇಕಿಲ್ಲ; ಅಕ್ಟೋಬರ್‌ ತಿಂಗಳ ಸರ್ಕಾರಿ ರಜೆಗಳೇ ಸಾಕು, ಹೀಗೆ ಪ್ಲಾನ್ ಮಾಡಿ-full list of public holidays in october 2024 in karnataka make plan to travel mysore to enjoy dasara jamboo savari jra ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ದಸರಾ ಜಂಬೂಸವಾರಿ ನೋಡಲು ಹೆಚ್ಚುವರಿ ರಜೆ ಬೇಕಿಲ್ಲ; ಅಕ್ಟೋಬರ್‌ ತಿಂಗಳ ಸರ್ಕಾರಿ ರಜೆಗಳೇ ಸಾಕು, ಹೀಗೆ ಪ್ಲಾನ್ ಮಾಡಿ

ದಸರಾ ಜಂಬೂಸವಾರಿ ನೋಡಲು ಹೆಚ್ಚುವರಿ ರಜೆ ಬೇಕಿಲ್ಲ; ಅಕ್ಟೋಬರ್‌ ತಿಂಗಳ ಸರ್ಕಾರಿ ರಜೆಗಳೇ ಸಾಕು, ಹೀಗೆ ಪ್ಲಾನ್ ಮಾಡಿ

ನವರಾತ್ರಿ, ಮೈಸೂರು ದಸರಾ ಇರುವ ಅಕ್ಟೋಬರ್‌ ತಿಂಗಳಲ್ಲಿ ಸಾಲು ಸಾಲು ರಜೆಗಳಿವೆ. ಸರ್ಕಾರಿ ರಜಾ ದಿನಗಳಂದೇ ಮೈಸೂರು ದಸರಾ ಜಂಬೂಸವಾರಿ ನೋಡಬಹುದು. ವಿಜಯದಶಮಿಯ ಜೊತೆಗೆ ಮೂರು ದಿನಗಳ ರಜೆಯಲ್ಲಿ ಮೈಸೂರು ಟ್ರಿಪ್‌ ಪ್ಲಾನ್‌ ಮಾಡಬಹುದು.

 ಅಕ್ಟೋಬರ್‌ ತಿಂಗಳ ಸರ್ಕಾರಿ ರಜೆಯಲ್ಲಿ ಮೈಸೂರು ದಸರಾ ಜಂಬೂಸವಾರಿ ಪ್ಲಾನ್
ಅಕ್ಟೋಬರ್‌ ತಿಂಗಳ ಸರ್ಕಾರಿ ರಜೆಯಲ್ಲಿ ಮೈಸೂರು ದಸರಾ ಜಂಬೂಸವಾರಿ ಪ್ಲಾನ್ (PTI)

ಅಕ್ಟೋಬರ್ ತಿಂಗಳಲ್ಲಿ ದಸರಾ ಸಂಭ್ರಮ. ನಾಡಹಬ್ಬ ದಸರಾ, ನವರಾತ್ರಿ ಹಿನ್ನೆಲೆಯಲ್ಲಿ ತಿಂಗಳ ಉದ್ದಕ್ಕೂ ಹಬ್ಬದ ವಾತಾವರಣ ಇರಲಿದೆ. ಶಾಲಾ ಮಕ್ಕಳಿಗೆ ಶೈಕ್ಷಣಿಕ ವರ್ಷದ ಮಧ್ಯಮ ಅವಧಿಗೆ ಸುದೀರ್ಘ 17 ದಿನಗಳ ಕಾಲ ರಜೆ ಸಿಗಲಿದೆ. ಉಳಿದಂತೆ ಸರ್ಕಾರಿ ಉದ್ಯೋಗಿಗಳು ಹಾಗೂ ಖಾಸಗಿ ವಲಯದ ಉದ್ಯೋಗಿಗಳು ಸರ್ಕಾರಿ ರಜಾ ದಿನಗಳಲ್ಲಿ ರಜೆ ಪಡೆಯಲಿದ್ದಾರೆ. ಹಾಗಿದ್ದರೆ 2024ರ ಅಕ್ಟೋಬರ್‌ ತಿಂಗಳಲ್ಲಿ ಯಾವೆಲಾ ದಿನಗಳಲ್ಲಿ ಸರ್ಕಾರಿ ರಜೆಗಳಿವೆ. ರಜೆಯ ಯೋಜನೆಗಳನ್ನು ಹೇಗೆ ಮಾಡಬಹುದು? ಎಂಬ ಮಾಹಿತಿ ಈ ಸುದ್ದಿಯಲ್ಲಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು 2024-25ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಿಸಿದೆ. ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಅಕ್ಟೋಬರ್​ 3ರಿಂದ 20ರವರೆಗೆ 17 ದಿನಗಳ ದಸರಾ ರಜೆ ಇರಲಿದೆ. ಆದರೆ ಅಕ್ಟೋಬರ್‌ ತಿಂಗಳಲ್ಲಿ 5 ದಿನಗಳ ಕಾಲ ಸರ್ಕಾರಿ ರಜೆ ಇರಲಿದೆ. ಮೈಸೂರು, ಮಂಗಳೂರು ಸೇರಿದಂತೆ ದಸಾರಾ ವೈಭವ ಕಣ್ತುಂಬಿಕೊಳ್ಳಲು ಈ ರಜಾ ದಿನಗಳಲ್ಲಿ ಅಚ್ಚುಕಟ್ಟಾಗಿ ಪ್ಲಾನ್‌ ಮಾಡಿಕೊಳ್ಳಬಹುದು.

ಅಕ್ಟೋಬರ್‌ ತಿಂಗಳ ಸರ್ಕಾರಿ ರಜೆಗಳು

  • ಮಹಾಲಯ ಅಮಾವಾಸ್ಯೆ - ಅಕ್ಟೋಬರ್ 2, ಬುಧವಾರ
  • ಮಹಾತ್ಮ ಗಾಂಧಿ ಜಯಂತಿ - ಅಕ್ಟೋಬರ್ 2 ಬುಧವಾರ
  • ಮಹಾ ನವಮಿ - ಅಕ್ಟೋಬರ್ 11, ಶುಕ್ರವಾರ
  • ವಿಜಯ ದಶಮಿ - ಅಕ್ಟೋಬರ್ 12, ಶನಿವಾರ
  • ಮಹರ್ಷಿ ವಾಲ್ಮೀಕಿ ಜಯಂತಿ - ಅಕ್ಟೋಬರ್ 17, ಗುರುವಾರ
  • ದೀಪಾವಳಿ - ಅಕ್ಟೋಬರ್ 31, ಗುರುವಾರ

ಮಹಾತ್ಮ ಗಾಂಧಿ ಜಯಂತಿ ಹಾಗೂ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಅಕ್ಟೋಬರ್ 2ರಂದು ರಜೆ ಇದೆ. ಅಕ್ಟೋಬರ್ 11ರ ಶುಕ್ರವಾರ ಹಾಗೂ ಅಕ್ಟೋಬರ್ 12ರ ಶನಿವಾರ ಮಹಾ ನವಮಿ ಹಾಗೂ ವಿಜಯ ದಶಮಿ ಜಂಬೂಸವಾರಿ ಪ್ರಯುಕ್ತ ಸತತ ಎರಡು ದಿನಗಳ ರಜೆ ಇರಲಿದೆ. ಮರುದಿನ (ಅಕ್ಟೋಬರ್‌ 13) ಭಾನುವಾರವಾದ್ದರಿಂದ ಸತತ ಮೂರು ದಿನಗಳ ರಜೆಯನ್ನು ಎಂಜಾಯ್‌ ಮಾಡಬಹುದು. ಮೈಸೂರು ಪ್ರವಾಸ ಮಾಡುವವರಿಗೂ ಮೂರು ದಿನಗಳ ಅವಕಾಶವಿದೆ.ಮಹಾನವಮಿಯ ರಜೆಯಂದು ಮೈಸೂರಿಗೆ ತೆರಳಿದರೆ, ವಿಜಯದಶಮಿ ಜಂಬೂಸವಾರಿ ನೋಡಿಕೊಂಡು ಭಾನುವಾರ ಮತ್ತೆ ಮರಳಬಹುದು.

ಅಕ್ಟೋಬರ್ 17ರ ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ರಜೆ ಇದ್ದರೆ, ಅಕ್ಟೋಬರ್ 31ರ ಗುರುವಾರ ದೀಪಾವಳಿ ಆರಂಭವಾಗಲಿದೆ. ನರಕ ಚತುರ್ದಶೀ ಪ್ರಯುಕ್ತ ರಜೆ ಇರಲಿದೆ. ಈ ತಿಂಗಳಲ್ಲ ಒಟ್ಟು 5 ದಿನಗಳ ಭರ್ಜರಿ ರಜೆ ಇದೆ. ಉಳಿದಂತೆ 6, 13, 20 ಹಾಗೂ 27ರಂದು ಭಾನವಾರವಾದ್ದರಿಂದ ಅಂದು ಕೂಡಾ ರಜೆ ಇರಲಿದೆ. ಹೀಗಾಗಿ ತಿಂಗಳಲ್ಲಿ ಒಟ್ಟು 9 ದಿನಗಳ ಕಾಲ ಸರ್ಕಾರಿ ರಜೆ ಇದ್ದಂತಾಗಲಿದೆ.

ಶಾಲೆಗಳಿಗೆ ಸುದೀರ್ಘ ರಜೆ

ರಾಜ್ಯದಲ್ಲಿ ಈ ಬಾರಿ ಶಾಲಾ ಮಕ್ಕಳಿಗೆ ಸುದೀರ್ಘ 17 ದಿನಗಳ ಕಾಲ ರಜೆ ಘೋಷಣೆಯಾಗಿದೆ. ಸೆಪ್ಟೆಂಬರ್​ 23ರಿಂದ ಮಧ್ಯಂತರ ಪರೀಕ್ಷೆಗಳು ಶುರುವಾಗಿ ಸೆಪ್ಟೆಂಬರ್​ 30ರ ತನಕ ನಡೆಯಲಿದೆ. ಅಕ್ಟೋಬರ್​ 2ರಂದು ಗಾಂಧಿ ಜಯಂತಿ ಆಚರಿಸಿದ ಮರುದಿನದಿಂದ ಶಾಲಾ ಮಕ್ಕಳು ರಜೆಯನ್ನು ಎಂಜಾಯ್‌ ಮಾಡಲಿದ್ದಾರೆ. ಅಕ್ಟೋಬರ್​ 3 ರಿಂದ 20ರ ತನಕ ರಜೆ ಸಿಗಲಿದೆ. ಆ ಬಳಿಕ ಅಕ್ಟೋಬರ್​​ 21ರಿಂದ ಮತ್ತೆ ತರಗತಿಗಳು ಆರಂಭವಾಗಲಿವೆ.

mysore-dasara_Entry_Point