ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ 10 ಪ್ರಸಿದ್ಧ ಎಂಜಿನಿಯರಿಂಗ್ ಕಾಲೇಜುಗಳು, ಎನ್‌ಐಆರ್‌ಎಫ್ ಪ್ರಕಾರ ಇವು ಬೆಸ್ಟ್
ಕನ್ನಡ ರಾಜ್ಯೋತ್ಸವ 2024 (Karnataka Rajyotsava) ಸಮಯದಲ್ಲಿ ಕರ್ನಾಟಕದ ಪ್ರಮುಖ ಹತ್ತು ಎಂಜಿನಿಯರಿಂಗ್ ಕಾಲೇಜುಗಳ (Top 10 engineering colleges in Karnataka) ವಿವರ ಪಡೆಯೋಣ.
Top 10 engineering colleges in Karnataka: ಕರ್ನಾಟಕದಲ್ಲಿ ನೂರಾರು ಎಂಜಿನಿಯರಿಂಗ್ ಕಾಲೇಜುಗಳಿವೆ. ಎಂಜಿನಿಯರಿಂಗ್ ಓದಬೇಕೆಂದುಕೊಳ್ಳುವ ವಿದ್ಯಾರ್ಥಿಗಳು ಇರೋದ್ರಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಲು ಬಯಸುತ್ತಾರೆ. ಕರ್ನಾಟಕದಲ್ಲಿ ಹಲವು ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜುಗಳಿವೆ. ಇವುಗಳನ್ನು ಟಾಪ್ 10 ಲೆಕ್ಕದಲ್ಲಿ ಪಟ್ಟಿ ಮಾಡುವುದು ಕಷ್ಟ. ಬೆಂಗಳೂರಿನಲ್ಲೇ ಹುಡುಕಿದರೆ ಟಾಪ್ 10 ಎಂಜಿನಿಯರಿಂಗ್ ಕಾಲೇಜುಗಳು ದೊರಕಬಹುದು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ರಾಂಕಿಂಗ್ ಫ್ರೇಮ್‌ವರ್ಕ್ (ಎನ್‌ಐಆರ್‌ಎಫ್) ಈ ವರ್ಷ ಬಿಡುಗಡೆ ಮಾಡಿರುವ ಅತ್ಯುತ್ತಮ ಕಾಲೇಜುಗಳ ಪಟ್ಟಿಯ ಆಧಾರದಲ್ಲಿ ಕೆಲವು ಎಂಜಿನಿಯರಿಂಗ್ ಕಾಲೇಜುಗಳು ಟಾಪ್ 10 ಲಿಸ್ಟ್‌ನಲ್ಲಿವೆ. ಈ ವರ್ಷ ಎನ್‌ಐಆರ್‌ಎಫ್ ಪಟ್ಟಿಯಲ್ಲಿ ಕರ್ನಾಟಕದ 9 ಕಾಲೇಜುಗಳು ಸ್ಥಾನ ಪಡೆದಿವೆ. ಕರ್ನಾಟಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಭಾರತದಲ್ಲೇ ಅಗ್ರ 17 ಸ್ಥಾನ ಪಡೆದಿವೆ.
ಕರ್ನಾಟಕದ ಟಾಪ್ 10 ಎಂಜಿನಿಯರಿಂಗ್ ಕಾಲೇಜುಗಳು
- ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕರ್ನಾಟಕ, ಸುರತ್ಕಲ್
- ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
- ವಿಶ್ವೇಶ್ವರಯ್ಯ ಟೆಕ್ನಾಲಾಜಿಕಲ್ ಯುನಿವರ್ಸಿಟಿ
- ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು
- ಎಂಎಸ್ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
- ಕ್ರೈಸ್ಟ್ ಯೂನಿವರ್ಸಿಟಿ
- ಜೈನ್ ಯೂನಿವರ್ಸಿಟಿ ಬೆಂಗಳೂರು
- ಆರ್‌ವಿ ಕಾಲೇಜು ಆಫ್ ಎಂಜಿನಿಯರಿಂಗ್
- ಸಿದ್ದಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
- ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಧಾರವಾಡ (ಎನ್‌ಐಆರ್‌ಎಫ್ ಹಿಂದಿನ ರಾಕಿಂಗ್ ಆಧರಿಸಿ)
ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಪಡೆಯುವುದು ಹೇಗೆ?
ಎಂಜಿನಿಯರಿಂಗ್ ಪದವಿ ಪಡೆಯಲು 10+2 ವಿದ್ಯಾರ್ಹತೆ ಬೇಕು. ಕನಿಷ್ಠ ಶೇಕಡ 50 ಅಂಕ ಪಡೆದಿರಬೇಕು. ಭಾರತದಲ್ಲಿ ಎಂಜಿನಿಯರಿಂಗ್ ಕಾಲೇಜು ಸೇರಲು ಜೆಇಇ ಪರೀಕ್ಷೆ ಬರೆಯಬೇಕು. ಬಿಟೆಕ್ ಪ್ರೋಗ್ರಾಂಗಳ ಮೂಲಕ ಲೇಟರಲ್ ಎಂಟ್ರಿ ಮೂಲಕ ಎಂಜಿನಿಯರಿಂಗ್ ಕಾಲೇಜಿಗೆ ಸೇರಬಹುದು. ಇದಕ್ಕಾಗಿ ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಪೂರ್ಣಗೊಳಿಸಬೇಕು.
ವಿದ್ಯಾರ್ಥಿಗಳು ಟಾಪ್ ಎಂಜಿನಿಯರಿಂಗ್ ಕಾಲೇಜುಗಳಿಗೆ ಏಕೆ ಸೇರಲು ಬಯಸುತ್ತಾರೆ?
ಪ್ರಮುಖ ಕಾಲೇಜುಗಳಲ್ಲಿ ಕಲಿಕಾ ಸೌಕರ್ಯ ಉತ್ತಮವಾಗಿರುತ್ತದೆ. ಕ್ಯಾಂಪಸ್ ಇಂಟರ್‌ವ್ಯೂಗೆ ಪ್ರಮುಖ ಕಂಪನಿಗಳು ಬರುತ್ತವೆ. ಉದ್ಯೋಗಾವಕಾಶ ಮತ್ತು ಉತ್ತಮ ಕಂಪನಿಗಳಲ್ಲಿ ಉದ್ಯೋಗ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುವ ನಂಬಿಕೆ ಇದೆ.