ಕನ್ನಡ ರಾಜ್ಯೋತ್ಸವ 2024:ಕರ್ನಾಟಕದ ಪ್ರಮುಖ ಘಾಟ್ ಸೆಕ್ಷನ್‌ಗಳು ಎಲ್ಲೆಲ್ಲಿವೆ, ಮಾರ್ಗ ಹೇಗಿದೆ ನೋಡಿ
ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್ ಟೈಮ್ಸ್ ಕನ್ನಡವು ಕರ್ನಾಟಕದಲ್ಲಿರುವ ಘಾಟ್ ಸೆಕ್ಷನ್‌ಗಳ ಮಾಹಿತಿ ನೀಡಿದೆ. ಪಶ್ಚಿಮ ಘಟ್ಟದಲ್ಲಿ ದಕ್ಷಿಣ ಕನ್ನಡ, ಕೊಡಗು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಬೆಳಗಾವಿಯಲ್ಲಿ ಹಾದು ಹೋಗಿರುವ ಘಾಟ್ ವಲಯದ ಮಾಹಿತಿ ಇಲ್ಲಿದೆ.
ಕರ್ನಾಟಕದ 400 ಕಿ.ಮಿ ಉದ್ದಕ್ಕೂ ಹಾದು ಹೋಗಿರುವ ಪಶ್ಚಿಮ ಘಟ್ಟ ಕರ್ನಾಟಕದೊದಿಂದಿಗೆ ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದರೊಳಗೆ ಬರುವ ಘಟ್ಟದ ಮಾರ್ಗಗಳ ಯಾವುದು ಎನ್ನುವ ವಿವರ ಹೀಗಿದೆ.
ಸಂಪಾಜೆ ಘಾಟ್( ಮಡಿಕೇರಿ- ಮಂಗಳೂರು)
ಮೈಸೂರಿನಿಂದ ಮಂಗಳೂರು, ಇಲ್ಲವೇ ಮಂಗಳೂರಿನಿಂದ ಮೈಸೂರಿಗೆ ಪುತ್ತೂರು-ಸುಳ್ಯ- ಮಡಿಕೇರಿ ಮಾರ್ಗವಾಗಿ ಬರುವ ಘಾಟ್. ಇದನ್ನು ಸಂಪಾಜೆ ಘಾಟ್ ಎಂತಲೆ ಕರೆಯಲಾಗುತ್ತದೆ. ಸುಮಾರು 30 ಕಿ.ಮೀ ದೂರ ಇದೆ.
ಶಿರಾಡಿ ಘಾಟ್( ಹಾಸನ ಮಂಗಳೂರು)
ಹಾಸನದಿಂದ ಸಕಲೇಶಪುರ ಗುಂಡ್ಯ ಮಾರ್ಗವಾಗಿ ಮಂಗಳೂರಿಗೆ ಹೋಗುವ ಮಾರ್ಗವಿದು. ಸಕಲೇಶಪುರ ದಾಟಿದ ನಂತರ ಶಿರಾಡ್ ಘಾಟ್ ಸಿಗುತ್ತದೆ. ದಕ್ಷಿಣ ಕನ್ನಡದ ಸುಬ್ರಹ್ಮಣ್ಯಕ್ಕೆ ಹೋಗುವ ತಿರುವಿನವರೆಗೂ ಇದೆ.
ಬಿಸಿಲೆ ಘಾಟ್( ಹಾಸನ ಸಕಲೇಶಪುರ ಕುಕ್ಕೆ ಸುಬ್ರಹ್ಮಣ್ಯ ಮಂಗಳೂರು)
ಹಾಸನದಿಂದ ಮಂಗಳೂರಿಗೆ ಹೋಗಲು ಇನ್ನೊಂದು ಘಾಟ್ ಇದೆ. ಇದು ಕೊಡಗಿನಿಂದಲೂ ಸಂಪರ್ಕ ಸಾಧಿಸಿ ಹೋಗುವ ಬಿಸಿಲೇ ಘಾಟ್. ಶನಿವಾರ ಸಂತೆಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ಅಲ್ಲಿಂದ ಮಂಗಳೂರಿಗೆ ತೆರಳಬಹುದು.
ಇದನ್ನೂ ಓದಿರಿ:
ಚಾರ್ಮಾಡಿ ಘಾಟ್ (ಚಿಕ್ಕಮಗಳೂರು- ಮಂಗಳೂರು)
ಚಿಕ್ಕಮಗಳೂರಿನಿಂದ ಮೂಡಿಗೆರೆ ಕೊಟ್ಟಿಗೆಹಾರದ ಮೂಲಕ ಬೆಳ್ತಂಗಡಿ ಅಲ್ಲಿಂದ ಮಂಗಳೂರಿಗೆ ಹೋಗುವ ಮಾರ್ಗ ಚಾರ್ಮಾಡಿ ಘಾಟ್.
ಶಿವಮೊಗ್ಗ- ಹುಲಿಕಲ್ ಘಾಟ್
ಶಿವಮೊಗ್ಗದಿಂದ ಹೊಸನಗರ ಬಾಳೆಬರೆ ಹುಲಿಕಲ್ ಹೊಸಂಗಡಿ ಮಾರ್ಗವಾಗಿ ಕುಂದಾಪುರಕ್ಕೆ ಅಲ್ಲಿಂದ ಮುಂದೆ ಉಡುಪಿ ಮಂಗಳೂರಿಗೆ ಹೋಗುವ ಮಾರ್ಗವಿದು. ಈ ಘಾಟ್ ಶಿವಮೊಗ್ಗ ಉಡುಪಿ ಜಿಲ್ಲೆಯಲ್ಲಿ ಹಂಚಿದೆ
ಶಿವಮೊಗ್ಗ- ಆಗುಂಬೆ ಘಾಟ್
ಶಿವಮೊಗ್ಗದಿಂದ ತೀರ್ಥಹಳ್ಳಿ ಆಗುಂಬೆ ಹೆಬ್ರಿ ಮೂಲಕ ಉಡುಪಿಗೆ ಹೋಗುವ ಮಾರ್ಗವಿದು. ಅಲ್ಲಿಂದ ಮಂಗಳೂರಿಗೆ ತೆರಳಲಾಗುತ್ತದೆ. ಈ ಘಾಟ್ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯಲ್ಲಿ ಹಂಚಿ ಹೋಗಿದೆ.
ಕೋಗಾರ್ ಘಾಟ್
ಶಿವಮೊಗ್ಗದ ಸಾಗರದಿಂದ ಕೋಗಾರ್ ನಾಗವಲ್ಲಿ ಮಾರ್ಗವಾಗಿ ಭಟ್ಕಳಕ್ಕೆ ಹೋಗುವ ಘಾಟ್ ಇದು
ಮಳೆಮನೆ ಘಾಟ್
ಸಾಗರ ತಾಲ್ಲೂಕಿನ ಜೋಗದಿಂದ ಮುಂದೆ ಮಾವಿನಗುಂಡಿ ಗೇರುಸೊಪ್ಪ ಮಾರ್ಗವಾಗಿ ಉತ್ತರ ಕನ್ನಡದ ಹೊನ್ನಾವರ- ಸಿದ್ದಾಪುರಕ್ಕೆ ಹೋಗುವ ಘಾಟ್ ಇದು.
ಶೃಂಗೇರಿ- ದೇವರಮನೆ ಘಾಟ್
ಶಿವಮೊಗ್ಗ, ತೀರ್ಥಹಳ್ಳಿ ಕೊಪ್ಪ ಶೃಂಗೇರಿಯಿಂದ ಕಾರ್ಕಳ ಕಡೆಗೆ ಹೋಗುವ ಘಾಟ್ ದೇವರಮನೆ ಘಾಟ್. ಅಲ್ಲಿಂದ ಉಡುಪಿ ಮಂಗಳೂರಿಗೆ ಹೋಗಬಹುದು.
ದೊಡ್ಮನೆ ಘಾಟ್
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಕುಮಟಾಕ್ಕೆ ಹೋಗುವ ಘಟ್ಟ ಸಾಲು ಮಾರ್ಗವಿದು.
ಉತ್ತರ ಕನ್ನಡ- ದೇವಿಮನೆ ಘಾಟ್
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಕುಮಟಾಕ್ಕೆ ಹೋಗುವ ಘಾಟ್ ಇದು. ಇದನ್ನು ದೇವಿಮನೆ ಘಾಟ್ ಎನ್ನಲಾಗುತ್ತದೆ. ಕುಮಟಾದಿಂದ ಮುಂದೆ ಭಟ್ಕಳ, ಉಡುಪಿ, ಮಂಗಳೂರಿಗೆ ಹೋಗಬಹುದು.
ಯಲ್ಲಾಪುರ- ಅರೆಬೈಲ್ ಘಾಟ್
ಹುಬ್ಬಳ್ಳಿಯಿಂದ ಯಲ್ಲಾಪುರ ಮಾರ್ಗವಾಗಿ ಅಂಕೋಲಾ, ಕಾರವಾರ ನಂತರ ಗೋವಾ, ಇಲ್ಲವೇ ಅಂಕೋಲಾದಿಂದ ಕುಮಟಾ, ಹೊನ್ನಾವರ, ಉಡುಪಿ ಮಂಗಳೂರಿಗೆ ಹೋಗುವ ಮಾರ್ಗವನ್ನು ಅರೆಬೈಲ್ ಘಾಟ್ ಎನ್ನಲಾಗುತ್ತದೆ.
ದಾಂಡೇಲಿ-ಅಣಶಿ ಘಾಟ್
ಬೆಳಗಾವಿಯಿಂದ ದಾಂಡೇಲಿ ಜೋಯಿಡಾ ಮಾರ್ಗವಾಗಿ ಕಾರವಾರಕ್ಕೆ ಹೋಗುವ ಮಾರ್ಗವನ್ನು ಅಣಶಿ ಘಾಟ್ ಎನ್ನಲಾಗುತ್ತದೆ. ಅಣಶಿ ಹುಲಿಧಾಮ ಮಾರ್ಗವಾಗಿ ದಟ್ಟಕಾಡಿನಲ್ಲಿದೆ ಈ ಘಾಟ್.
ಇತರೆ ಘಾಟ್‌ಗಳು
ಚಾಮರಾಜನಗರದಿಂದ ಗುಡಲೂರು ಮಾರ್ಗವಾಗಿ ಊಟಿ ಹಾಗೂ ಸತ್ಯಮಂಗಲದಿಂದ ಕೊಯಮತ್ತೂರು, ಮಲೈ ಮಹದೇಶ್ವರ ಬೆಟ್ಟದಿಂದಮೆಟ್ಟೂರಿ ಹೋಗುವ ಮಾರ್ಗದಲ್ಲೂ ಘಾಟ್ ಇದೆ. ಅದು ತಮಿಳುನಾಡಿಗೆ ಸೇರುತ್ತದೆ. ಬೆಳಗಾವಿಯಿಂದ ಗೋವಾಕ್ಕೆ ಹೋಗುವ ಮಾರ್ಗದಲ್ಲೂ ಬರುವ ಚೋರ್ಲಾ ಹಾಗೂ ಅನ್ಮೋಡ್ ಘಾಟ್ ಗೋವಾ ರಾಜ್ಯಕ್ಕೆ ಬರುತ್ತದೆ.