ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ರಸ್ತೆ ವಿಸ್ತರಣೆಗೆ 343 ಕೋಟಿ ರೂಪಾಯಿ; ಶೀಘ್ರದಲ್ಲೇ ಕಾಮಗಾರಿ ಆರಂಭ
ಕನ್ನಡ ಸುದ್ದಿ  /  ಕರ್ನಾಟಕ  /  ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ರಸ್ತೆ ವಿಸ್ತರಣೆಗೆ 343 ಕೋಟಿ ರೂಪಾಯಿ; ಶೀಘ್ರದಲ್ಲೇ ಕಾಮಗಾರಿ ಆರಂಭ

ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ರಸ್ತೆ ವಿಸ್ತರಣೆಗೆ 343 ಕೋಟಿ ರೂಪಾಯಿ; ಶೀಘ್ರದಲ್ಲೇ ಕಾಮಗಾರಿ ಆರಂಭ

Charmadi Ghat: ಬರೋಬ್ಬರಿ 343 ಕೋಟಿ ರೂಪಾಯಿಗಳ ಅನುದಾನದೊಂದಿಗೆ ಚಾರ್ಮಾಡಿ ಘಾಟ್ 11 ಕಿಲೋಮೀಟರ್ ದ್ವಿಪಥ ರಸ್ತೆ ವಿಸ್ತರಣೆ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ.

ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ರಸ್ತೆ ವಿಸ್ತರಣೆಗೆ 343 ಕೋಟಿ ರೂಪಾಯಿ; ಶೀಘ್ರದಲ್ಲೇ ಕಾಮಗಾರಿ ಆರಂಭ
ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ರಸ್ತೆ ವಿಸ್ತರಣೆಗೆ 343 ಕೋಟಿ ರೂಪಾಯಿ; ಶೀಘ್ರದಲ್ಲೇ ಕಾಮಗಾರಿ ಆರಂಭ

ಬೆಂಗಳೂರು: ಕರ್ನಾಟಕದ ಪಶ್ಚಿಮ ಘಟ್ಟಗಳ ಮೂಲಕ ಹಾದುಹೋಗುವ ಪ್ರಮುಖ ಮಾರ್ಗವಾದ ರಾಷ್ಟ್ರೀಯ ಹೆದ್ದಾರಿ -73 ರ ಚಾರ್ಮಾಡಿ ಘಾಟ್ ವಿಭಾಗ ವಿಸ್ತರಿಸುವ ಯೋಜನೆಯನ್ನು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಶನಿವಾರ ಪ್ರಕಟಿಸಿದ್ದಾರೆ. 343.74 ಕೋಟಿ ರೂಪಾಯಿಗಳ ಈ ಯೋಜನೆಯು 11 ಕಿಲೋಮೀಟರ್ ವ್ಯಾಪ್ತಿಯನ್ನು 2 ಪಥದ ರಸ್ತೆಯಾಗಿ ವಿಸ್ತರಿಸುವ ಗುರಿ ಇದೆ ಎಂದಿದ್ದಾರೆ.

ಮಂಗಳೂರು, ಮೂಡಿಗೆರೆ ಮತ್ತು ತುಮಕೂರನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ವಿಸ್ತರಣೆಯು ಪ್ರಯಾಣಿಕರ ಮತ್ತು ಸರಕು ಸಾಗಣೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ವಿಶೇಷವಾಗಿ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಹೆಚ್ಚು ಪ್ರಯೋಜನ ನೀಡುತ್ತದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಕ್ಯಾಪ್ಟನ್ ಚೌಟಾ ದೃಢಪಡಿಸಿದ್ದಾರೆ. ಇದು ಪ್ರಯಾಣಿಕರಿಗೆ ಮತ್ತು ಸ್ಥಳೀಯ ವಾಣಿಜ್ಯಕ್ಕೆ ಹೆಚ್ಚು ಅಗತ್ಯವಾದ ಸುಧಾರಣೆ ನೀಡಲಿದೆ.

ಸಂಚಾರ ದಟ್ಟಣೆ ನಿವಾರಣೆ

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಯೋಜನೆ ಫಲಪ್ರದಗೊಳಿಸಲು ಸಹಾಯ ಮಾಡಿದ ಅಧಿಕಾರಿಗಳಿಗೆ ಕ್ಯಾಪ್ಟನ್ ಚೌಟಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಈ ಯೋಜನೆಯ ಮಹತ್ವ ಒತ್ತಿಹೇಳಿದ ಅವರು, ಕಿರಿದಾದ ಮತ್ತು ದೀರ್ಘಕಾಲದ ಸಂಚಾರ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ ಎಂದು ಹೇಳಿದ್ದಾರೆ. ಈ ವಿಸ್ತರಣೆಯು ಸಂಚಾರ ದಟ್ಟಣೆಯನ್ನು ಪರಿಹರಿಸುವುದಲ್ಲದೆ, ಈ ಮಾರ್ಗವನ್ನು ಹೆಚ್ಚು ವಿಶ್ವಾಸಾರ್ಹ ಪ್ರಯಾಣ ಕಾರಿಡಾರ್ ಆಗಿ ಮಾಡುತ್ತದೆ ಎಂದು ಹೇಳಿದ್ದಾರೆ.

ವಿಸ್ತೃತ ವಿಭಾಗವು ಕರಾವಳಿ ಪ್ರದೇಶಗಳು, ಚಿಕ್ಕಮಗಳೂರು ಮತ್ತು ಹಾಸನದಂತಹ ಒಳನಾಡಿನ ಪ್ರದೇಶಗಳ ನಡುವಿನ ಪ್ರಯಾಣವನ್ನು ಸರಾಗಗೊಳಿಸುವ ನಿರೀಕ್ಷೆಯಿದೆ. ಜತೆಗೆ ಬೆಂಗಳೂರು ಕಡೆಗೆ ಪ್ರಯಾಣಿಸುವವರಿಗೆ ಇದು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಿದೆ. ಆದಾಗ್ಯೂ, ಈ ಯೋಜನೆಯು ಸ್ಥಳೀಯ ಸಾರಿಗೆ ಮೂಲ ಸೌಕರ್ಯ ಹೆಚ್ಚಿಸುವ ನಿರೀಕ್ಷೆಯಿದ್ದರೂ, ನವ ಮಂಗಳೂರು ಬಂದರಿನಿಂದ ಕಾಫಿ ಮತ್ತು ಮಸಾಲೆಗಳು ಸೇರಿದಂತೆ ಕಂಟೇನರ್ ಸರಕುಗಳ ಸಾಗಣೆಗೆ ಅವಕಾಶ ನೀಡಲಾಗುತ್ತದೆ ಎಂಬುದರ ಸ್ಪಷ್ಟನೆ ಇಲ್ಲ ಎಂದಿದ್ದಾರೆ.

Whats_app_banner