Mandya Toursim: ಗಗನಚುಕ್ಕಿ ಜಲಪಾತ ಉತ್ಸವಕ್ಕೆ ಅಣಿಯಾದ ಶಿವನಸಮುದ್ರ, 2 ದಿನ ಜಲಧಾರೆಗೆ ಲೇಸರ್‌ ಶೋ, ಸಂಗೀತದ ಮೆರಗು-mandya news mandya hosting gagana chukki falls festival in shivanasamudra for 2 days from 2024 september 14 kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mandya Toursim: ಗಗನಚುಕ್ಕಿ ಜಲಪಾತ ಉತ್ಸವಕ್ಕೆ ಅಣಿಯಾದ ಶಿವನಸಮುದ್ರ, 2 ದಿನ ಜಲಧಾರೆಗೆ ಲೇಸರ್‌ ಶೋ, ಸಂಗೀತದ ಮೆರಗು

Mandya Toursim: ಗಗನಚುಕ್ಕಿ ಜಲಪಾತ ಉತ್ಸವಕ್ಕೆ ಅಣಿಯಾದ ಶಿವನಸಮುದ್ರ, 2 ದಿನ ಜಲಧಾರೆಗೆ ಲೇಸರ್‌ ಶೋ, ಸಂಗೀತದ ಮೆರಗು

Mandya Tourism ಮಂಡ್ಯ ಜಿಲ್ಲೆಯ ಪ್ರಮುಖ ಆಕರ್ಷಣೆಯಾದ ಗಗನಚುಕ್ಕಿ ಜಲಪಾತ ಉತ್ಸವ ಶನಿವಾರ ಹಾಗೂ ಭಾನುವಾರ ನಡೆಯಲಿದೆ. ಎರಡು ದಿನ ನಾನಾ ಕಾರ್ಯಕ್ರಮಗಳು ಜಲಪಾತದ ಹಿನ್ನೆಲೆಯೊಂದಿಗೆ ಗಮನ ಸೆಳೆಯಲಿವೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿ ಜಲಪಾತೋತ್ಸವಕ್ಕೆ ತಯಾರಿಗಳು ಪೂರ್ಣಗೊಂಡಿವೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿ ಜಲಪಾತೋತ್ಸವಕ್ಕೆ ತಯಾರಿಗಳು ಪೂರ್ಣಗೊಂಡಿವೆ.

ಮಂಡ್ಯ: ಮಂಡ್ಯ ಜಿಲ್ಲೆಯ ಪ್ರಮುಖ ಕಾವೇರಿ ತೀರದ ತಾಣ ಗಗನಚುಕ್ಕಿ ಜಲಪಾತೋತ್ಸವಕ್ಕೆ ಬಹುತೇಕ ಸಿದ್ದತೆಗಳು ಪೂರ್ಣಗೊಂಡಿವೆ. ಪ್ರಕೃತ್ತಿ ದತ್ತವಾಗಿ ಚಲುವನ್ನು ಹೊಂದಿರುವ ಗಗನಚುಕ್ಕಿಗೆ ಜನರನ್ನು ಸೆಳೆಯಲು ವಿಜೃಂಭಣೆಯಿಂದ ಜಲಪಾತೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್ 14 ಹಾಗೂ 15 ರಂದು ಹಮ್ಮಿಕೊಳ್ಳಲಾಗಿದೆ. ಶಿವನಸಮುದ್ರದ ರೊಟ್ಟಿಕಟ್ಟೆಯಿಂದ ಎರಡು ರಸ್ತೆ ಬದಿಗಳು ಮದುವಣಗಿತ್ತಿಯ ರೂಪದಲ್ಲಿ ಅಲಂಕೃತವಾಗಿ ಜನರನ್ನು ಜಲಪಾತೋತ್ಸವಕ್ಕೆ ಆತ್ಮೀಯವಾಗಿ ಆಹ್ವಾನಿಸುತ್ತಿದೆ. ವಿಶೇಷ ಬಸ್‌ಗಳನ್ನೂ ಮಳವಳ್ಳಯಿಂದ ಗಗನಚುಕ್ಕಿವರೆಗೆ ಮಾಡಲಾಗಿದೆ. ರೊಟ್ಟಿಕಟ್ಟೆಯಿಂದ ಕಾರ್ಯಕ್ರಮ ನಡೆಯುವ ಸ್ಥಳಗಳವರೆಗೆ ಸಾರ್ವಜನಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.

ಸಿಎಂ ಚಾಲನೆ

ಸೆಪ್ಟೆಂಬರ್ 14 ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ .ಜಲಪಾತೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಹೆಚ್ಚು ಜನರು ಭಾಗವಹಿಸುವಂತೆ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ತಿಳಿಸಿದರು.

ವಿಶೇಷ ದೀಪ ಅಲಂಕಾರ ಸೆಪ್ಟೆಂಬರ್‌ 14 ಹಾಗೂ 15 ರಂದು ಜಲಪಾತಕ್ಕೆ ವಿಶೇಷ ದೀಪಾಲಂಕಾರ ಹಾಗೂ ಲೇಜರ್ ಶೋ ವ್ಯವಸ್ಥೆ. ಬರುವ ಸಾರ್ವಜನಿಕರಿಗೆ ಉಚಿತ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.

ಬಸ್‌ ವ್ಯವಸ್ಥೆ

ಸ್ಪೆಷಲ್ ರೂಟ್ ಗಳಲ್ಲಿ ಬಸ್ ಮಳವಳ್ಳಿ ತಾಲ್ಲೂಕಿನ ವಿವಿಧ ಭಾಗಗಳಿಂದ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮಕ್ಕೆ ಸಾರ್ವಜನಿಕರು ಬಂದು ಹೋಗಲು ಕೆ‌ಎಸ್.ಆರ್.ಟಿ.ಸಿ ವತಿಯಿಂದ ವಿಶೇಷ ಬಸ್ ರೂಟ್ ಗಳ ವ್ಯವಸ್ಥೆ ಮಾಡಲಾಗಿದೆ.

ಬೆಳದಿಂಗಳ ಕಾರ್ಯಕ್ರಮ ಪ್ರಕೃತಿ ತಾಣವಾದ ಗಗನಚುಕ್ಕಿ ಜಲಪಾತದ ಮುಂಭಾಗ ದೊಡ್ಡದಾದ ಮೆಟ್ಟಿಲು ಹಾಗೂ ಆವರಣ ನಿರ್ಮಾಣವಾಗುತ್ತಿದ್ದು, ಇಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಹಾಗೂ ಶಾಲಾ ಕಾಲೇಜಿನವರು ವಿಶೇಷ ಬೆಳದಿಂಗಳ ಕಾರ್ಯಕ್ರಮ ಹಮ್ಮಿಕೊಳ್ಳಲು ಅವಕಾಶ ನೀಡಲಾಗುವುದು ಎನ್ನುವುದು ನರೇಂದ್ರ ಸ್ವಾಮಿ ವಿವರಣೆ.

ಗಗನಚುಕ್ಕಿ ಅಭಿವೃದ್ದಿಗೆ ಪ್ರಸ್ತಾವನೆ

ಇದಲ್ಲದೇ ಸುತ್ತ ನೀರಿರುವ ಐಲ್ಯಾಂಡ್ ಪ್ರದೇಶ ಗಗನ ಚುಕ್ಕಿಯಲ್ಲಿದ್ದು, ಇಲ್ಲಿ ಸುತ್ತ ವಾಕಿಂಗ್ ಪಾಥ್ ನಿರ್ಮಿಸಲು ಟನಲ್ ಅಕ್ವೇರಿಯಂ, ಸೇರಿದಂತೆ ಜಲ ಕ್ರೀಡೆ ಸಹ ನಡೆಸಲು ಅವಕಾಶವಿದ್ದು, ಈ ಯೋಜನೆಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನುತ್ತಾರೆ ಶಾಸಕ ನರೇಂದ್ರಸ್ವಾಮಿ.

ಹಲವಾರು ಕಾರ್ಯಕ್ರಮ

ಸ್ಥಳೀಯ ಕಲಾವಿದರಿಗೂ ಅವಕಾಶ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೂ ಅವಕಾಶ ನೀಡಲಾಗಿದೆ. ಸೆ.14 ರಂದು ಬೆಳಿಗ್ಗೆ 11 ಗಂಟೆಗೆ ಸಂಕೇತಿಕವಾಗಿ ಕಲಾತಂಡಗಳ ಮೆರವಣಿಗೆಯೊಂದಿಗೆ ಚಾಲನೆ ನೀಡಲಾಗುವುದು. ಎರಡು ದಿನಗಳ ಕಾಲ ಬೆಳಿಗ್ಗೆ 11 ರಿಂದ 2 ರವರೆಗೆ ಸ್ಥಳೀಯ ಕಲಾವಿದರಿಗೆ ಕಾರ್ಯಕ್ರಮ ನೀಡಲಿದ್ದಾರೆ

ಸೆಪ್ಟೆಂಬರ್ 14 ರಂದು ಬೆಳಿಗ್ಗೆ 11 ರಿಂದ ಮದ್ಯಾಹ್ನ 2 ಗಂಟೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ

ಮಧ್ಯಾಹ್ನ 2 ಗಂಟೆಯಿಂದ ಸಂಜೆ 4.30 ಗಂಟೆವರೆಗೆ ನಾಗೇಶ್ ಕಂದೇಕಾಲ ಮತ್ತು (ಕಲಾವತಿ ದಯಾನಂದ್, ಅಜಯ್ ವಾರಿಯರ್, ಜೋಗಿ ಸುನಿತಾ, ಚಿಂತನ್ ವಿಕಾಸ್, ಸುಹನಾ ಸೈಯದ್) ಇವರಿಂದ ಭಾವಗೀತೆಗಳು.

ಸಂಜೆ 4.30 ರಿಂದ 6 ಗಂಟೆವರೆಗೆ ಪ್ರಖ್ಯಾತ ಕಾಮಿಡಿ ಕಿಲಾಡಿಗಳು ಕಲಾವಿದರಿಂದ ಹಾಸ್ಯ ಮನರಂಜನೆ.

ಸಂಜೆ 7 ಗಂಟೆಯಿಂದ ರಾತ್ರಿ 10.30 ರವರೆಗೆ ಮಣಿಕಾಂತ್ ಕದ್ರಿ, ಚಂದನ್ ಶೆಟ್ಟಿ, ಹಂಸಿಕಾ ಅಯ್ಯರ್ ತಂಡದವರಿಂದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ.

15 ರಂದು ಭಾನುವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು,

ಮಧ್ಯಾಹ್ನ 2 ರಿಂದ ಸಂಜೆ 4.30 ಗಂಟೆವರೆಗೆ ಪ್ರಖ್ಯಾತ ಜಿ-ಸರಿಗಮಪ ತಂಡದವರಿಂದ ಸಂಗೀತ ಕಾರ್ಯಕ್ರಮ.

ಸಂಜೆ 4.30 ರಿಂದ 6 ಗಂಟೆವರೆಗೆ ಪ್ರಖ್ಯಾತ ಕಲರ್ಸ್-ಗಿಚ್ಚಿ ಗಿಲಿಗಿಲಿ ತಂಡದವರಿಂದ ಹಾಸ್ಯ ಕಾರ್ಯಕ್ರಮ.

6 ರಿಂದ ರಾತ್ರಿ 10.30 ಗಂಟೆವರೆಗೆ ರವಿ ಬಸ್ರೂರ್ ಮತ್ತು ತಂಡದವರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮಗಳು ನಡೆಯಲಿದೆ.

mysore-dasara_Entry_Point