Karnataka Election 2023: ಕಾಂಗ್ರೆಸ್‌ ಪಕ್ಷದವರು ಜನರಿಗೆ ಚೆಕ್‌ ಹಂಚಿಕೆ ಮಾಡುತ್ತಿದ್ದಾರೆ; ಮಂಡ್ಯದಲ್ಲಿ ಆರ್‌ ಅಶೋಕ್‌ ಆರೋಪ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Election 2023: ಕಾಂಗ್ರೆಸ್‌ ಪಕ್ಷದವರು ಜನರಿಗೆ ಚೆಕ್‌ ಹಂಚಿಕೆ ಮಾಡುತ್ತಿದ್ದಾರೆ; ಮಂಡ್ಯದಲ್ಲಿ ಆರ್‌ ಅಶೋಕ್‌ ಆರೋಪ

Karnataka Election 2023: ಕಾಂಗ್ರೆಸ್‌ ಪಕ್ಷದವರು ಜನರಿಗೆ ಚೆಕ್‌ ಹಂಚಿಕೆ ಮಾಡುತ್ತಿದ್ದಾರೆ; ಮಂಡ್ಯದಲ್ಲಿ ಆರ್‌ ಅಶೋಕ್‌ ಆರೋಪ

Minister R Ashok: ಕಾಂಗ್ರೆಸ್‌ ಪಕ್ಷದವರು ಜನರಿಗೆ ಚೆಕ್‌ ವಿತರಣೆ ಮಾಡುತ್ತಿದ್ದಾರೆ ಎಂದು ಸಚಿವ ಆರ್‌. ಅಶೋಕ್‌ ಆರೋಪಿಸಿದ್ದಾರೆ. ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಷಯವಾಗಿ ಮಾತನಾಡಿದ್ದಾರೆ ಅಶೋಕ್‌.

ಆರ್‌ ಅಶೋಕ್‌
ಆರ್‌ ಅಶೋಕ್‌

ಮಂಡ್ಯ: ಚುನಾವಣಾ ಸಂದರ್ಭದಲ್ಲಿ ಒಂದು ಪಕ್ಷವನ್ನು ಇನ್ನೊಂದು ಪಕ್ಷ ದೂರುವುದು, ವಿರೋಧ ಪಕ್ಷದ ಮೇಲೆ ವಾಗ್ದಾಳಿ ನಡೆಸುವುದು ಸಾಮಾನ್ಯ. ಇದೀಗ ಸಚಿವ ಆರ್‌. ಅಶೋಕ್‌ ಕಾಂಗ್ರೆಸ್‌ ಪಕ್ಷದವರು ಜನರಿಗೆ ಚೆಕ್‌ ಹಂಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ʼಕಾಂಗ್ರೆಸ್ ಪಕ್ಷದವರು ಈ ಚುನಾವಣೆ ಗೆಲ್ಲುವ ಉದ್ದೇಶದಿಂದ ಹಲವು ಗ್ಯಾರೆಂಟಿಗಳನ್ನು ಘೋಷಿಸಿದ್ದಾರೆ. ಮಹಿಳೆಯರಿಗೆ ಮಾಸಿಕ 2,000 ರೂ. ಕೊಡುತ್ತೇವೆ ಅಂತಲೂ ಹೇಳಿದ್ದಾರೆ. ಆದರೆ ಈಗಾಗಲೇ ಎಲ್ಲಾ ಕಡೆ ಚೆಕ್​ಗಳನ್ನು ನೀಡಲು ಆರಂಭಿಸಿದ್ದಾರೆʼ ಎಂದು ಸಚಿವ ಆರ್. ಅಶೋಕ್​ ಆರೋಪಿಸಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಕನಕಪುರದಲ್ಲಿ ಮಹಿಳೆಯೊಬ್ಬರು ಕಾಗದ ತೆಗೆದುಕೊಂಡು ಬಂದಿದ್ದರು. ನನ್ನ ಬಳಿ ʼʼಅಣ್ಣಾ ಈ ಚೆಕ್‌ ಇಟ್ಟುಕೊಂಡು 2 ಸಾವಿರ ರೂಪಾಯಿ ಕೊಡುʼʼ ಅಂತ ಹೇಳಿದ್ರು. ನಾನು ಅದಕ್ಕೆ ʼʼಅಮ್ಮಾ ನೀನು ಬ್ಯಾಂಕ್​ಗೆ ಹೋಗು. ಇಲ್ಲ ಅಂದ್ರೆ ಮಾರ್ವಾಡಿ ಬಳಿ ಹೋಗುʼʼ ಎಂದು ಹೇಳಿದ್ದೆ ಎಂದು ಅಶೋಕ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ʼಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಉಚಿತ ವಿದ್ಯುತ್​ ನೀಡುತ್ತೇವೆ, ಅದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದಾರೆ. ರಕ್ತಬೇಡ, ಹಿಂದೆ ಸಚಿವರಾಗಿದ್ದಾಗ 500 ಯೂನಿಟ್‌ ವಿದ್ಯುತ್‌ ನೀಡುತ್ತೇವೆ ಎಂದು ಪೆನ್ನಿನಿಂದ ಬರೆದಿದ್ದರೆ ಸಾಕಿತ್ತು. ಈ ಚುನಾವಣೆಯ ನಂತರ ಕಾಂಗ್ರೆಸ್‌, ಜೆಡಿಎಸ್‌ ಪಕ್ಷದ ಅಸ್ತಿತ್ವ ಇರುವುದಿಲ್ಲʼ ಎಂದು ಕಿಡಿಕಾರಿದ್ದಾರೆ.

ನನಗೂ ಜನರ ಕಷ್ಟ ಅರ್ಥ ಆಗುತ್ತದೆ; ಸುಮಲತಾ ಅಂಬರೀಶ್‌

ಈ ವೇಳೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್‌ ʼಮತದಾರರು ಪ್ರಬುದ್ಧರು. ಪ್ರತಿಯೊಂದನ್ನೂ ಪ್ರಶ್ನಿಸುವ ಹಕ್ಕು ನಿಮಗೆ ಪ್ರಜಾಪ್ರಭುತ್ವ ಕೊಟ್ಟಿದೆ. ಮನೆಯನ್ನು ನಡೆಸುವವರು ಮಹಿಳೆಯರು. ಸಂಸದೆ, ನಟಿ ಆಗಿದ್ರೂ ನಾನೂ ನಿಮ್ಮ ಥರಾನೇ ಮಹಿಳೆ. ನಾನೂ ಒಬ್ಬರ ಪತ್ನಿ ಆಗಿದ್ದೆ, ಒಬ್ಬ ಮಗನ ತಾಯಿ. ರೈತರ ಸಮಸ್ಯೆ,‌ ಮಹಿಳೆಯರ ಸಮಸ್ಯೆ ಏನು, ತಾಯಿ ಬಿಟ್ಟು ಮಗಳು ಹೇಗೆ ಜೀವನ‌ ಮಾಡುತ್ತಾರೆ ಅನ್ನೋದು ನನಗೆ ಗೊತ್ತಿದೆ. ಇವರೇನು, ಇವರಿಗೇನು ಗೊತ್ತಾಗುತ್ತೆ ಅನ್ನುವುದೆಲ್ಲಾ ಸುಳ್ಳು. ಅಂಬರೀಷ್ ನನಗೆ ಎಲ್ಲಾ ಕಲಿಸಿ ಕೊಟ್ಟು ಹೋಗಿದ್ದಾರೆ. ಕಷ್ಟ ಅಂತ ಬಂದವರಿಗೆ ಸಹಾಯ ಹೇಗೆ ಮಾಡಬೇಕು ಅನ್ನುವುದನ್ನು ಅವರಿಂದ ಕಲಿತಿದ್ದೇನೆ. ರಾಜಕಾರಣ ಮುಖ್ಯ ಅಲ್ಲ, ಜನರೊಂದಿಗಿನ ಸಂಬಂಧ ಹೇಗೆ ಉಳಿಸಿ, ಬೆಳೆಸಿಕೊಂಡು ಹೋಗಬೇಕು ಅನ್ನುವುದು ಮುಖ್ಯವಾಗುತ್ತದೆ. ಮತ ಯಾರಿಗೆ ಹಾಕಬೇಕು, ಅನ್ನುವುದಕ್ಕಿಂತ ಯಾರು ಸ್ಪಂದಿಸುತ್ತಾರೆ ಎನ್ನುವುದು ಮುಖ್ಯʼ ಎಂದು ಹೇಳಿದರು.

ʼಎಚ್.ಡಿ ಕುಮಾರಸ್ವಾಮಿ ನನ್ನ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದರು. ಈಗ ಸುಮಲತಾ ಬಗ್ಗೆ ನಾನು ಮಾತನಾಡುವುದಿಲ್ಲ ಅನ್ನುವುದು ತಂತ್ರವಷ್ಟೇ. ಚುನಾವಣೆಗೋಸ್ಕರ ಈ ತಂತ್ರ ಅನುಸರಿಸುತ್ತಿದ್ದಾರೆ. ಮೇ‌ 10‌ ಮುಗಿದ ನಂತರ ಅವರ ನಿಜರೂಪ ಬಯಲಾಗುತ್ತದೆ. ಬರೆದಿಟ್ಟುಕೊಳ್ಳಿʼ ಎಂದು ಎಚ್‌ಡಿಕೆ ವಿರುದ್ಧ ಕಿಡಿಕಾರಿದ್ದಾರೆ.

ವರದಿ: ಧಾತ್ರಿ ಭಾರದ್ವಾಜ್

ಇದನ್ನೂ ಓದಿ

PM Modi: ಕಾಂಗ್ರೆಸ್‌ನದ್ದು 85 ಪರ್ಸೆಂಟ್ ಕಮಿಷನ್ ಖ್ಯಾತಿ, ರೈತರಿಗಾಗಿ ಏನೂ ಮಾಡಿಲ್ಲ; ಕೋಲಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ

ಕೋಲಾರ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಇಂದು (ಏ.30, ಭಾನುವಾರ) ಕೂಡ ಕಾಂಗ್ರೆಸ್ (Congress) ವಿರುದ್ಧದ ವಾಗ್ದಾಳಿಯನ್ನು ಮುಂದುವರಿಸಿದ್ದು, ಕಾಂಗ್ರೆಸ್‌ನದ್ದು 85 ಪರ್ಸೆಂಟ್ ಕಮಿಷನ್ (85 Percent Commission) ಖ್ಯಾತಿಯಾಗಿದೆ ಎಂದು ಆರೋಪಿದ್ದಾರೆ.

ಕಾಂಗ್ರೆಸ್ 85 ಪರ್ಸೆಂಟ್ ಕಮಿಷನ್ ಖ್ಯಾತಿ ಹೊಂದಿರುವ ಕಾರಣ ಜನರಿಗೆ ಇವರ ಸರ್ಕಾರದ ಮೇಲೆ ನಂಬಿಕೆಯೇ ಇಲ್ಲ. 1 ರೂಪಾಯಿ ಕಳುಹಿಸಿದರೆ ಜನರಿಗೆ ತಲುಪುವಷ್ಟರಲ್ಲಿ ಅದು 15 ಪೈಸೆಗೆ ಇಳಿಯುತ್ತದೆ ಎಂದು ಅವರ ಪ್ರಧಾನಿಯೊಬ್ಬರು ಹೇಳಿದ್ದಾರೆ. ಕಾಂಗ್ರೆಸ್ ಯಾವಾಗಲೂ ತುಷ್ಟೀಕರಣ ರಾಜಕಾರಣ ಮಾಡುತ್ತದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

Whats_app_banner