ಮಂಗಳೂರು: 1 ಗಂಟೆ 17 ಸೆಕೆಂಡ್​ಗಳ ಸುದೀರ್ಘ ಕೂರ್ಮಾಸನ ಯೋಗ, ಇಂಡಿಯಾ ಬುಕ್ ಆಫ್ ರೆಕಾರ್ಡ್‌ ಸೇರಿದ 13 ವರ್ಷದ ಬಾಲಕಿ
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು: 1 ಗಂಟೆ 17 ಸೆಕೆಂಡ್​ಗಳ ಸುದೀರ್ಘ ಕೂರ್ಮಾಸನ ಯೋಗ, ಇಂಡಿಯಾ ಬುಕ್ ಆಫ್ ರೆಕಾರ್ಡ್‌ ಸೇರಿದ 13 ವರ್ಷದ ಬಾಲಕಿ

ಮಂಗಳೂರು: 1 ಗಂಟೆ 17 ಸೆಕೆಂಡ್​ಗಳ ಸುದೀರ್ಘ ಕೂರ್ಮಾಸನ ಯೋಗ, ಇಂಡಿಯಾ ಬುಕ್ ಆಫ್ ರೆಕಾರ್ಡ್‌ ಸೇರಿದ 13 ವರ್ಷದ ಬಾಲಕಿ

ಮೇಘನಾ ಎಚ್‌ ಶೆಟ್ಟಿಗಾರ್ ಎಂಬ ಬಾಲಕಿ 1 ಗಂಟೆ 17 ಸೆಕೆಂಡುಗಳ ಕಾಲ ಸುದೀರ್ಘ ಕೂರ್ಮಾಸನ ಯೋಗ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾಳೆ.

ಮೇಘನಾ ಎಚ್‌ ಶೆಟ್ಟಿಗಾರ್
ಮೇಘನಾ ಎಚ್‌ ಶೆಟ್ಟಿಗಾರ್

ಮಂಗಳೂರು: 1 ಗಂಟೆ 17 ಸೆಕೆಂಡುಗಳ ಕಾಲ ಸುದೀರ್ಘ ಕೂರ್ಮಾಸನ ಯೋಗ ಮಾಡಿ ಮಂಗಳೂರಿನ 13 ವರ್ಷದ ಬಾಲಕಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾಳೆ. ಮೇಘನಾ ಎಚ್‌ ಶೆಟ್ಟಿಗಾರ್ ಎಂಬ ಬಾಲಕಿಯೇ ಈ ಸಾಧನೆ ಮಾಡಿದವಳು. ಕೂರ್ಮಾಸನ ಯೋಗವೆಂದರೆ ಎರಡೂ ಕಾಲನ್ನು ಅಗಲಕ್ಕೆ ಚಾಚಿ ಕೈಯನ್ನು ಕಾಲಿನ ಅಡಿಗೆ ಇಟ್ಟು ಬೆನನ್ನು ಬಗ್ಗಿಸಿ ತಲೆಯನ್ನು ನೆಲದಮೇಲೆ ಇಟ್ಟು ಆಮೆಯ ಭಂಗಿಯಲ್ಲಿ ಕಾಣುವಂತೆ ಯೋಗ ಮಾಡುವುದು.

ಮೇಘನಾ ಎಚ್ ಶೆಟ್ಟಿಗಾರ್ ಸೆಪ್ಟೆಂಬರ್ 27ರಂದು ಕೂರ್ಮಾಸನ ಯೋಗ ಮಾಡಿ ಇದರ ವಿಡಿಯೋವನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್‌‌ಗೆ ಕಳುಹಿಸಲಾಗಿತ್ತು. ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌‌ ಇದನ್ನು ಪರಿಗಣಿಸಿದೆ. ಮೇಘನಾ ಕಳೆದ 8 ವರ್ಷಗಳಿಂದ ಯೋಗ ಶಿಕ್ಷಕಿ ಕವಿತಾ ಅಶೋಕ್‌ ಅವರಿಂದ ಯೋಗ ತರಬೇತಿ ಪಡೆಯುತ್ತಿದ್ದಾಳೆ. ಈ ಹಿಂದೆ ಇದೇ ಆಸನದಲ್ಲಿ ಮಧ್ಯಪ್ರದೇಶದ ಶೇತಾ ನೆಮ್ ಎಂಬ ಬಾಲಕಿ ಸೃಷ್ಟಿಸಿದ್ದ 46 ನಿಮಿಷ 26 ಸೆಕೆಂಡ್ 50 ಮಿಲಿ ಸೆಕೆಂಡ್ ದಾಖಲೆಯನ್ನು ಮುರಿದ ಮೇಘನಾ 1 ಗಂಟೆ 17 ಸೆಕೆಂಡುಗಳ ಕಾಲ ಅಲ್ಲಾಡದೆ ಕೂರ್ಮಾಸನ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌‌ ದಾಖಲಿಸಿದ್ದಾಳೆ.

ಮೇಘನಾ ಎಚ್ ಶೆಟ್ಟಿಗಾರ್ ದೇರಬೈಲ್ ನೆಕ್ಕಿಲಗುಡ್ಡೆಯ ಹರೀಶ್ ಶೆಟ್ಟಿಗಾರ್ ಹಾಗೂ ಕವಿತಾ ಶೆಟ್ಟಿಗಾರ್ ದಂಪತಿಯ ಪುತ್ರಿ. ಲೇಡಿಹಿಲ್ ವಿಕ್ಟೋರಿಯಾ ಹೈಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿನಿ. ಈಕೆಯ ಯೋಗ ಶಿಕ್ಷಕಿ ಕವಿತಾ ಅಶೋಕ್‌ ಅವರೂ ಪದ್ಮ ಶೀರ್ಷಾಸನ ಯೋಗದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲಿಸಿದ್ದು, ತನ್ನ 10 ಮಂದಿ ವಿದ್ಯಾರ್ಥಿಗಳನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲಿಸಲು ಪಣ ತೊಟ್ಟಿದ್ದಾರೆ. ಮೇಘನಾ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲಿಸಿದ ಇವರ 2ನೇ ವಿದ್ಯಾರ್ಥಿನಿ.

Whats_app_banner