ಯಕ್ಷಗಾನದ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ 2024; ಅಕ್ಟೋಬರ್ 13ಕ್ಕೆ ಕಾರ್ಯಕ್ರಮ-mangaluru news shri harileela yakshana award 2024 himmela guru mambadi subrahmanya bhatt to be awarded on october 13 hsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಯಕ್ಷಗಾನದ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ 2024; ಅಕ್ಟೋಬರ್ 13ಕ್ಕೆ ಕಾರ್ಯಕ್ರಮ

ಯಕ್ಷಗಾನದ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ 2024; ಅಕ್ಟೋಬರ್ 13ಕ್ಕೆ ಕಾರ್ಯಕ್ರಮ

ಯಕ್ಷಗಾನದ ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 13ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ, 4ನೇ ವರ್ಷದ ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿಯನ್ನು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪ್ರದಾನ ಮಾಡಲಾಗುತ್ತದೆ ಎಂದು ಡಿಜಿ ಯಕ್ಷ ಫೌಂಡೇಶನ್ ನಿರ್ದೇಶಕ ಅವಿನಾಶ್ ಬೈಪಾಡಿತ್ತಾಯ ತಿಳಿಸಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಯಕ್ಷಗಾನದ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ-2024 ಘೋ‍ಷಣೆಯಾಗಿದ್ದು ಅಕ್ಟೋಬರ್ 13 ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಯಕ್ಷಗಾನದ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ-2024 ಘೋ‍ಷಣೆಯಾಗಿದ್ದು ಅಕ್ಟೋಬರ್ 13 ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಮಂಗಳೂರು: ಯಕ್ಷಗಾನದ ಗುರು ದಂಪತಿ - ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಹಾಗೂ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಹೆಸರಿನಲ್ಲಿ ನೀಡಲಾಗುವ, 2024ನೇ ಸಾಲಿನ ಪ್ರತಿಷ್ಠಿತ ಶ್ರೀ ಹರಿಲೀಲಾ ಯಕ್ಷನಾದ ಪುರಸ್ಕಾರವನ್ನು ಹಿರಿಯ ಯಕ್ಷಗಾನ ಗುರು, ಮದ್ಲೆಗಾರರಾಗಿರುವ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ನೀಡಿ ಗೌರವಿಸಲಾಗುತ್ತಿದೆ.

ಬೈಪಾಡಿತ್ತಾಯರು ಸ್ಥಾಪಿಸಿರುವ ಡಿಜಿ ಯಕ್ಷ ಫೌಂಡೇಶನ್ (ರಿ) ಸಹಯೋಗದಲ್ಲಿ ಶಿಷ್ಯವೃಂದದವರು ಏರ್ಪಡಿಸಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಪೊಳಲಿ ಕ್ಷೇತ್ರದ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರದೊಂದಿಗೆ 2024ರ ಅಕ್ಟೋಬರ್ 13 ಭಾನುವಾರದಂದು ಮಧ್ಯಾಹ್ನ 2 ಗಂಟೆಯಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಡಿಜಿ ಯಕ್ಷ ಫೌಂಡೇಶನ್ ನಿರ್ದೇಶಕ ಅವಿನಾಶ್ ಬೈಪಾಡಿತ್ತಾಯ ವಿವರಿಸಿದರು. ಪ್ರಶಸ್ತಿಯು 10,078 ರೂಪಾಯಿ ನಗದು, ಬಿನ್ನವತ್ತಳೆ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.

2021, 2022 ಹಾಗೂ 2023ರಲ್ಲಿ ಅನುಕ್ರಮವಾಗಿ ಯಕ್ಷಗಾನ ರಂಗದ ದಿಗ್ಗಜ ಹಿಮ್ಮೇಳವಾದಕರಾದ ಲಕ್ಷ್ಮೀಶ ಅಮ್ಮಣ್ಣಾಯ, ಶ್ರೀ ಪೆರುವಾಯಿ ನಾರಾಯಣ ಭಟ್ ಉಪಸ್ಥಿತರಿದ್ದರು.

ಮೋಹನ ಶೆಟ್ಟಿಗಾರ್ ಅವರಿಗೆ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ ಸಂದಿದೆ. 4ನೇ ವರ್ಷದ ಕಾರ್ಯಕ್ರಮವು ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶೇಷವಾದುದು. ಇಬ್ಬರು ಶ್ರೇಷ್ಠ ಗುರುಗಳ ಸಂಗಮದ ಕಾರ್ಯಕ್ರಮವಿದು.

ಬೈಪಾಡಿತ್ತಾಯರು ಮತ್ತು ಮಾಂಬಾಡಿ ಅವರ ಶಿಷ್ಯಂದಿರು ಇಂದು ಯಕ್ಷಗಾನ ರಂಗದಲ್ಲಿ ವಿಜೃಂಭಿಸುತ್ತಿದ್ದಾರೆ. ಬೈಪಾಡಿತ್ತಾಯರು ತಮ್ಮದೇ ಕಾಯಕದಲ್ಲಿ ನಿರತರಾಗಿರುವ ಮತ್ತೊಬ್ಬ ಗುರು ಮಾಂಬಾಡಿಯವರನ್ನು ಗೌರವಿಸುವುದು ಈ ಬಾರಿಯ ವಿಶೇಷ. ಈ ಮೂಲಕ ಪ್ರಶಸ್ತಿಯ ಪ್ರತಿಷ್ಠೆ ಹೆಚ್ಚಾಗಿದೆ ಎಂದರು.

ಯಕ್ಷ-ಗಾನ-ನಾದ ವೈಖರಿ

ಅ.13ರ ಭಾನುವಾರ ಮಧ್ಯಾಹ್ನ 2ರಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಆರಂಭದಲ್ಲಿ ಬೈಪಾಡಿತ್ತಾಯರ ಶಿಷ್ಯರಿಂದ ಯಕ್ಷ-ಗಾನ-ನಾದ ವೈಖರಿ ಎಂಬ ಯಕ್ಷಗಾನೀಯ ಪದ್ಯಗಳ ಹಾಡುಗಾರಿಕೆ ಪ್ರಸ್ತುತಿಗೊಳ್ಳಲಿದೆ. ಇದರಲ್ಲಿ ಪ್ರಮುಖವಾಗಿ ಈಗಾಗಲೇ ರಂಗದಲ್ಲಿ ಹೆಸರು ಮಾಡಿರುವ ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ, ಶ್ರೀನಿವಾಸ ಬಳ್ಳಮಂಜ, ಗಿರೀಶ್ ರೈ ಕಕ್ಕೆಪದವು, ಅಡೂರು ಜಯರಾಮ, ಶಾಲಿನಿ ಹೆಬ್ಬಾರ್, ದಿವ್ಯಶ್ರೀ ಪುತ್ತಿಗೆ ಮತ್ತು ಇತರರು ಯಕ್ಷಗಾನದ ಹಾಡುಗಳನ್ನು ಪ್ರಸ್ತುತಪಡಿಸುವರು. ಚೆಂಡೆ-ಮದ್ದಳೆಯಲ್ಲಿ ಅಡೂರು ಲಕ್ಷ್ಮೀನಾರಾಯಣ ರಾವ್, ಶಂಕರ ಭಟ್ ಕಲ್ಮಡ್ಕ, ಸೋಮಶೇಖರ್ ಭಟ್ ಕಾಶಿಪಟ್ಣ, ಗಣೇಶ್ ಭಟ್ ಬೆಳ್ಳಾರೆ, ಗುರುಪ್ರಸಾದ್ ಬೊಳಿಂಜಡ್ಕ, ವಿಕಾಸ ರಾವ್ ಕೆರೆಕಾಡು, ಆನಂದ ಗುಡಿಗಾರ್, ಚಂದ್ರಶೇಖರ ಭಟ್ ಕೊಂಕಣಾಜೆ, ಹರೀಶ್ ರಾವ್ ಅಡೂರು, ಅವಿನಾಶ್ ಬೈಪಾಡಿತ್ತಾಯ, ಸಮರ್ಥ ಉಡುಪ ಹಾಗೂ ಇತರರು ಭಾಗವಹಿಸುವರು.

ವಿಶಿಷ್ಟ ಅಬ್ಬರತಾಳ: ಬಳಿಕ 15 ಚೆಂಡೆಗಳಲ್ಲಿ ಹರಿನಾರಾಯಣ ಬೈಪಾಡಿತ್ತಾಯರ ಪರಿಕಲ್ಪನೆ, ಸಂಯೋಜನೆಯಲ್ಲಿ ಶಿಷ್ಯವೃಂದದವರು ವಿಶಿಷ್ಟ 'ಅಬ್ಬರತಾಳ' ನಡೆಸಿಕೊಡಲಿದ್ದಾರೆ.

ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಳೆ – ಸುಧನ್ವ ಮೋಕ್ಷ

ನಂತರ ಯಕ್ಷಗಾನದ ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ, 4ನೇ ವರ್ಷದ ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿಯನ್ನು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪ್ರದಾನ ಮಾಡಲಾಗುತ್ತದೆ. ಮುಖ್ಯ ಅತಿಥಿಗಳಾಗಿ ಪ್ರವೀಣ್, ಆಡಳಿತಾಧಿಕಾರಿ, ಶ್ರೀ ಕ್ಷೇತ್ರ ಪೊಳಲಿ; ಡಾ.ಎ.ಮಂಜಯ್ಯ ಶೆಟ್ಟಿ, ಅಮ್ಮುಂಜೆಗುತ್ತು, ಆಡಳಿತ ಮೊಕ್ತೇಸರರು, ಶ್ರೀ ಕ್ಷೇತ್ರ ಪೊಳಲಿ; ವೆಂಕಟೇಶ ನಾವಡ, ಸಂಚಾಲಕರು "ಯಕ್ಷಕಲಾ ಪೊಳಲಿ" ಅವರಿರುತ್ತಾರೆ. ಮಾಂಬಾಡಿಯವರ ಶಿಷ್ಯ, ಮಂಗಳೂರಿನಲ್ಲಿ ಸರಕಾರಿ ಕಾಲೇಜಿನಲ್ಲಿ ಸಹ-ಪ್ರಾಧ್ಯಾಪಕರಾಗಿರುವ ಪುರುಷೋತ್ತಮ್ ಭಟ್ ನಿಡುವಜೆ ಅವರು ಅಭಿನಂದನ ನುಡಿಗಳನ್ನಾಡುವರು.

ತಾಳಮದ್ದಳೆ – ಸುಧನ್ವ ಮೋಕ್ಷ: ಸಭಾ ಕಾರ್ಯಕ್ರಮದ ಬಳಿಕ, ಶ್ರೀನಿವಾಸ ಬಳ್ಳಮಂಜ, ಆನಂದ ಗುಡಿಗಾರ್, ಕಿನಿಲಕೋಡಿ ಗಿರೀಶ್ ಭಟ್, ಚಂದ್ರಶೇಖರ ಭಟ್ ಕೊಂಕಣಾಜೆ, ಹರೀಶ್ ರಾವ್ ಅಡೂರು ಹಿಮ್ಮೇಳದಲ್ಲಿ ಹಾಗೂ ಡಾ.ಎಂ.ಪ್ರಭಾಕರ ಜೋಶಿ, ಹರೀಶ್ ಬಳಂತಿಮೊಗರು ಹಾಗೂ ದಿನೇಶ್ ಶೆಟ್ಟಿ ಕನ್ನಡಿಕಟ್ಟೆ ಅವರ ಮುಮ್ಮೇಳದಲ್ಲಿ ಯಕ್ಷಗಾನ ತಾಳಮದ್ದಳೆ 'ಸುಧನ್ವ ಮೋಕ್ಷ' ನೆರವೇರಲಿದೆ.

ಕಾರ್ಯಕ್ರಮ ಎಲ್ಲರಿಗೂ ಮುಕ್ತವಾಗಿದ್ದು, ಕಲಾಭಿಮಾನಿಗಳು ಕಲೆ, ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಲೀಲಾವತಿ ಬೈಪಾಡಿತ್ತಾಯ ದಂಪತಿ ವಿನಂತಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪ್ರದಾನ ಸಮಿತಿಯ ಚಂದ್ರಶೇಖರ ಭಟ್ ಕೊಂಕಣಾಜೆ, ಗಿರೀಶ್ ಭಟ್ ಕಿನಿಲಕೋಡಿ, ಆನಂದ ಗುಡಿಗಾರ್, ಪದ್ಮರಾಜ ತಂತ್ರಿ, ಯೋಗಾಕ್ಷಿ ಕೆ.ತಲಕಳ ಮುಂತಾದವರು ಉಪಸ್ಥಿತರಿದ್ದರು.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

mysore-dasara_Entry_Point