ತುಳು ಭಾಷಿಕರಿಗೆ ಇಲ್ಲಿದೆ ಸಂತಸದ ಸುದ್ದಿ: ವಿಕಿಪೀಡಿಯಾ, ಗೂಗಲ್ ಮನ್ನಣೆ ಬಳಿಕ ಯುನಿಕೋಡ್‍ಗೆ ಸೇರ್ಪಡೆಗೊಂಡ ತುಳು ಲಿಪಿ-mangaluru news tulu script added to unicode after recognition by wikipedia and google ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ತುಳು ಭಾಷಿಕರಿಗೆ ಇಲ್ಲಿದೆ ಸಂತಸದ ಸುದ್ದಿ: ವಿಕಿಪೀಡಿಯಾ, ಗೂಗಲ್ ಮನ್ನಣೆ ಬಳಿಕ ಯುನಿಕೋಡ್‍ಗೆ ಸೇರ್ಪಡೆಗೊಂಡ ತುಳು ಲಿಪಿ

ತುಳು ಭಾಷಿಕರಿಗೆ ಇಲ್ಲಿದೆ ಸಂತಸದ ಸುದ್ದಿ: ವಿಕಿಪೀಡಿಯಾ, ಗೂಗಲ್ ಮನ್ನಣೆ ಬಳಿಕ ಯುನಿಕೋಡ್‍ಗೆ ಸೇರ್ಪಡೆಗೊಂಡ ತುಳು ಲಿಪಿ

ತುಳು ಲಿಪಿ ಯುನಿಕೋಡ್‍ಗೆ ಸೇರ್ಪಡೆಗೊಂಡಿರುವುದು ಮಹತ್ವದ ಹೆಜ್ಜೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ. ತುಳು ಲಿಪಿಗೆ ಯುನಿಕೋಡ್ ಮಾನ್ಯತೆ ನೀಡಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಹಾಗೂ ಎಲ್ಲಾ ತುಳುವರ ಹಲವು ವರ್ಷಗಳ ಕನಸು ಈಡೇರಿದೆ.(ವರದಿ: ಹರೀಶ ಮಾಂಬಾಡಿ,ಮಂಗಳೂರು)

ವಿಕಿಪೀಡಿಯಾ, ಗೂಗಲ್ ಮನ್ನಣೆ ಬಳಿಕ ಯುನಿಕೋಡ್‍ಗೆ ಸೇರ್ಪಡೆಯಾಗಿರುವುದು ತುಳುವಿಗೆ ದೊರಕಿರುವ ದೊಡ್ಡ ಗೌರವ.
ವಿಕಿಪೀಡಿಯಾ, ಗೂಗಲ್ ಮನ್ನಣೆ ಬಳಿಕ ಯುನಿಕೋಡ್‍ಗೆ ಸೇರ್ಪಡೆಯಾಗಿರುವುದು ತುಳುವಿಗೆ ದೊರಕಿರುವ ದೊಡ್ಡ ಗೌರವ. (Wikipedia)

ಮಂಗಳೂರು: ತುಳು ಲಿಪಿ ಈಗ ಯುನಿಕೋಡ್‍ಗೆ ಸೇರ್ಪಡೆಗೊಂಡಿದೆ. ವಿಕಿಪೀಡಿಯಾ, ಗೂಗಲ್ ಮನ್ನಣೆ ಬಳಿಕ ಯುನಿಕೋಡ್‍ಗೆ ಸೇರ್ಪಡೆಯಾಗಿರುವುದು ತುಳುವಿಗೆ ದೊರಕಿರುವ ದೊಡ್ಡ ಗೌರವ. ಆದರೆ, ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ, ಸಂವಿಧಾನದ 8ನೇ ಪರಿಚ್ಛೇದದಡಿ ಇನ್ನೂ ತುಳು ಭಾಷೆ ಸೇರ್ಪಡೆಗೊಂಡಿರದೇ ಇರುವುದು ಮಾತ್ರ ಬೇಸರದ ಸಂಗತಿ.

ತುಳು ಲಿಪಿ ಯುನಿಕೋಡ್‍ಗೆ ಸೇರ್ಪಡೆಗೊಂಡಿರುವುದು ಮಹತ್ವದ ಹೆಜ್ಜೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ. ತುಳು ಲಿಪಿಗೆ ಯುನಿಕೋಡ್ ಮಾನ್ಯತೆ ನೀಡಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಹಾಗೂ ಎಲ್ಲಾ ತುಳುವರ ಹಲವು ವರ್ಷಗಳ ಕನಸು ಈಡೇರಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಭಿಪ್ರಾಯಪಟ್ಟಿದ್ದಾರೆ.

ಈ ನಿಟ್ಟಿನಲ್ಲಿ ಹಲವು ತಜ್ಞರು ಪ್ರಯತ್ನ ನಡೆಸುತ್ತಿದ್ದ ಸಂದರ್ಭ 2017ರಲ್ಲಿ ಅಂದಿನ ಅಕಾಡಮೆ ಅಧ್ಯಕ್ಷ ಎ.ಸಿ. ಭಂಡಾರಿ ಅವರು, ವಿಷಯ ಸಮನ್ವಯತೆಗಾಗಿ ತಜ್ಞರ ಸಮಿತಿ ರಚಿಸಿ ಅಕಾಡೆಮಿ ವತಿಯಿಂದ ಸಹಕಾರ ನೀಡಲಾಗಿತ್ತು. ನಂತರದ ದಿನಗಳಲ್ಲಿ ತಜ್ಞರು ನಿರಂತರವಾಗಿ ಈ ವಿಷಯದ ಬಗ್ಗೆ ಸತತ ಮನವಿಯನ್ನು, ಪರಿಷ್ಕರಣೆಗಳನ್ನು ಕಳುಹಿಸಿ ತುಳು ಲಿಪಿಯನ್ನು ಯುನಿಕೋಡ್ ಅಂಗೀಕರಿಸುವಂತೆ ಮಾಡಿದ್ದಾರೆ.

ತುಳು ಲಿಪಿಯನ್ನು ಯೂನಿಕೋಡ್ ಅಂಗೀಕರಿಸುವ ನಿಟ್ಟಿನಲ್ಲಿ ತಜ್ಞರಾದ ಕೆ.ಪಿ.ರಾವ್, ಯು.ಬಿ.ಪವನಜ, ವೈಷ್ಣವಿ ಮೂರ್ತಿ, ಎಸ್.ಎ.ಕೃಷ್ಣಯ್ಯ, ರಾಧಕೃಷ್ಣ ಬೆಳ್ಳೂರು, ಭಾಸ್ಕರ್ ಶೇರಿಗಾರ್, ಎಸ್.ಆರ್.ವಿಘ್ನರಾಜ್, ಆಕಾಶ್ ರಾಜ್ ಸೇರಿದಂತೆ ಅನೇಕರು ಕೊಡುಗೆಗಳನ್ನು ನೀಡಿದ್ದಾರೆ ಎಂದು ತಾರಾನಾಥ ಗಟ್ಟಿ ಹೇಳಿದ್ದಾರೆ.

ತುಳು ಲಿಪಿಗಿರುವ ಇನ್ನೊಂದು ಹೆಸರಿನ ಜೊತೆಗೆ ತುಳು- ತಿಗಳಾರಿ ಎಂಬುದಾಗಿ ಯುನಿಕೋಡ್ ಅಂಗೀಕರಿಸಿದೆ. ಈ ಮೂಲಕ ಜಾಗತಿಕವಾಗಿ ತುಳು ಲಿಪಿಯಲ್ಲಿನ ಪಠ್ಯಗಳು ಓದಲು ತೆರೆದುಕೊಳ್ಳುವ ಅವಕಾಶ ಲಭಿಸಿದೆ. ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಗಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಕ್ಕೆ ಈಗ ಇನ್ನಷ್ಟು ಹೆಚ್ಚಿನ ಮಹತ್ವ ಬಂದಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಥ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ.

ತುಳು ವಿಕಿಪೀಡಿಯಾ 2016ರ ಆಗಸ್ಟ್ 6ರಂದು ಆರಂಭಗೊಂಡಿತ್ತು. ಮುಂದುವರಿದ ಭಾಗವಾಗಿ ಯುನಿಕೋಡ್ ಅಗತ್ಯದ ಹಿನ್ನೆಲೆ ತುಳು ಸಾಹಿತ್ಯ ಅಕಾಡೆಮಿ 2017ರಲ್ಲಿ ತುಳು ಅಕ್ಷರಗಳನ್ನು ಅಂತಿಮಗೊಳಿಸಲು ಸಮಿತಿ ರಚಿಸಿತ್ತು. ಈ ಸಂದರ್ಭ ಮಾಹಿತಿ ತಂತ್ರಜ್ಞಾನ ತಜ್ಞ ಯು.ಬಿ.ಪವನಜ ತಾಂತ್ರಿಕ ಸಲಹೆ ನೀಡಿದ್ದರು. ಅದರಂತೆ ತುಳು ಅಕ್ಷರಗಳ ಪಟ್ಟಿ ಮಾಡಲಾಗಿತ್ತು. 80 ಪುಟಗಳ ಪಟ್ಟಿಯನ್ನು ಯುನಿಕೋಡ್ ಗೆ ಕಳುಹಿಸಲಾಗಿತ್ತು. ಇದೇ ಸಂದರ್ಭ, ತಿಗಳಾರಿ ಲಿಪಿ ಎಂಬ ಪ್ರತ್ಯೇಕ ಪ್ರಸ್ತಾವನೆಯೂ ಸಲ್ಲಿಕೆ ಆಗಿತ್ತು. ಬಳಿಕ ಎರಡೂ ಕಡೆ ಹಲವು ಪತ್ರ ವ್ಯವಹಾರಗಳ ಬಳಿಕ ಅಂತಿಮವಾಗಿ ತುಳು ತಿಗಳಾರಿ ಹೆಸರಲ್ಲಿ ಯುನಿಕೋಡ್‍ಗೆ ಸೇರ್ಪಡೆ ಮಾಡಲಾಗಿದೆ. ತುಳು ಭಾಷಿಕರು ಇನ್ನು ಯುನಿಕೋಡ್‍ನಲ್ಲಿ ತುಳು ಲಿಪಿಯನ್ನು ಟೈಪ್ ಮಾಡಬಹುದು.

ಯುನಿಕೋಡ್ ಆವೃತ್ತಿ 16ರಲ್ಲಿ ತುಳು ಸೇರ್ಪಡೆಗೊಂಡಿದೆ. ಯುನಿಕೋಡ್‍ನಲ್ಲಿ ಬಂದ ತುಳು ಅಕ್ಷರಗಳನ್ನು ಒಳಗೊಂಡ, ಯುನಿಕೋಡ್ ಸಂಕೇತೀಕರಣಗೊಳಿಸಿದ ಓಪನ್ ಟೈಪ್ ಫಾಂಟ್ ತಯಾರಿ, ತುಳು ಯುನಿಕೋಡ್ ಪ್ರಕಾರ, ಮಾಹಿತಿಯೊದಗಿಸಲು ಕೀಬೋರ್ಡ್ ತಂತ್ರಾಂಶ ಹಾಗೂ ಈಗಾಗಲೇ ಕನ್ನಡ ಲಿಪಿಯಲ್ಲಿ ದಾಖಲಿಸಿದ ಮಾಹಿತಿಗಳನ್ನು ಈ ಹೊಸ ಸಂಕೇತಕ್ಕೆ ಪರಿವರ್ತಿಸಲು ಒಂದು ಪರಿವರ್ತಕ ತಂತ್ರಾಂಶ ಇನ್ನು ಬೇಕಾಗುತ್ತದೆ.

ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು ವಿವಿಯ ತುಳು ಅಧ್ಯಯನ ಪೀಠ ಇದನ್ನು ಆದ್ಯತೆಯ ನೆಲೆಯಲ್ಲಿ ಪರಿಗಣಿಸಿ ಮಾಡಬೇಕಾಗುತ್ತದೆ ಯುನಿಕೋಡ್‍ನಲ್ಲಿ ತುಳು ಲಭ್ಯವಾಗಿರುವ ಕಾರಣ, ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್, ಟೆಕ್ಸ್ಟ್ ಟು ಸ್ಪೀಚ್, ಸ್ಪೀಚ್ ಟು ಟೆಕ್ಸ್ಟ್, ಆರ್ಟಿಫಿಶೀಯಲ್ ಇಂಟೆಲಿಜೆನ್ಸ್ ಇವನ್ನೆಲ್ಲಾ ಮಾಡಲು ಸಾಧ್ಯ. ಗೂಗಲ್‍ನಲ್ಲಿ ಈಗಾಗಲೇ ಇಂಗ್ಲೀಷ್ ಟು ತುಳು ಟ್ರಾನ್ಸ್ ಲೇಶನ್ ಇರುವ ಕಾರಣ, ಯುನಿಕೋಡ್ನಲ್ಲಿ ಹಲವು ಸಾಧ್ಯತೆಗಳು ತೆರೆದುಕೊಳ್ಳಬಹುದು.

mysore-dasara_Entry_Point