ಕನ್ನಡ ಸುದ್ದಿ  /  ಕರ್ನಾಟಕ  /  Tulu News: ಗೂಗಲ್ ಟ್ರಾನ್ಸ್ ಲೇಟರ್ ನಲ್ಲಿ ತುಳು ಭಾಷೆ ಸೇರ್ಪಡೆ, ಹೌ ಆರ್‌ ಯು ಎಂದರೆ ಯೀರ್ ಎಂಚ ಉಲ್ಲರ್ ಎನ್ನುತ್ತೆ

Tulu News: ಗೂಗಲ್ ಟ್ರಾನ್ಸ್ ಲೇಟರ್ ನಲ್ಲಿ ತುಳು ಭಾಷೆ ಸೇರ್ಪಡೆ, ಹೌ ಆರ್‌ ಯು ಎಂದರೆ ಯೀರ್ ಎಂಚ ಉಲ್ಲರ್ ಎನ್ನುತ್ತೆ

Mangalore News ತುಳು ಭಾಷೆಯನ್ನು ಪರಿಚ್ಛೇದದಡಿ ಸೇರಿಸಬೇಕು ಎನ್ನುವ ಬೇಡಿಕೆಯಿದೆ. ಇದರ ನಡುವೆ ತುಳುವನ್ನು( Tulu Language) ಗೂಗಲ್‌ ತನ್ನ ಟ್ರಾನ್ಸಲೇಟರ್‌(Google Translator) ಪಟ್ಟಿಗೆ ಸೇರಿಸಿದೆ.

ಗೂಗಲ್‌ ಟ್ರಾನ್ಸಲೇಟರ್‌ನಲ್ಲಿ ತುಳು ಭಾಷೆ.
ಗೂಗಲ್‌ ಟ್ರಾನ್ಸಲೇಟರ್‌ನಲ್ಲಿ ತುಳು ಭಾಷೆ.

ಮಂಗಳೂರು: How are you? ನೀವು ಹೇಗಿದ್ದೀರಿ ಎಂದರೆ ಯೀರ್ ಎಂಚ ಉಲ್ಲರ್ ಎಂದು ತುಳುವಲ್ಲಿ ಅರ್ಥ. ತುಳು ಭಾಷೆಗೆ ಸ್ಥಾನಮಾನ ಬೇಕು ಎಂಬ ಕುರಿತು ಬೇಡಿಕೆ ಚರ್ಚೆಯಲ್ಲಿರುವಾಗಲೇ ವಿಶ್ವಮಾನ್ಯ ಗೂಗಲ್ ತನ್ನ ಅನುವಾದಕದಲ್ಲಿ ತುಳುವನ್ನು ಸೇರಿಸಿದೆ. ಗೂಗಲ್ ಟ್ರಾನ್ಸ್ ಲೇಟರ್ ನಲ್ಲಿ ಹಲವು ಭಾಷೆಗಳು ಹೊಸದಾಗಿ ಸೇರ್ಪಡೆಗೊಂಡಿವೆ. ಜಗತ್ತಿನಾದ್ಯಂತ ಹಲವಯ ಬಾಷೆಗಳ ಸೇರ್ಪಡೆಯ ಮಧ್ಯೆ ಕರಾವಳಿ ಕರ್ನಾಟಕದ ತುಳು ಭಾಷೆಗೂ ಮಾನ್ಯತೆ ದೊರಕಿದೆ. ಈ ಭಾಗಕ್ಕೆ ತುಳುನಾಡು ಎಂದೂ ಹೇಳುತ್ತಾರೆ ಹಾಗೂ ಅತ್ಯಧಿಕ ಮಂದಿ ತುಳುವಿನಲ್ಲೇ ಮಾತನಾಡುತ್ತಾರೆ.ಗೂಗಲ್ ಟ್ರಾನ್ಸ್ ಲೆಟರ್ ಆ್ಯಪ್ ನಲ್ಲಿ ಅಪ್ಡೇಟ್ ಮಾಡಿದರೆ, ಅಥವಾ ವೆಬ್ ಸೈಟ್ ನಲ್ಲಿ ಸರ್ಚ್ ಮಾಡಿದರೆ ತುಳು ಭಾಷೆ ಸೇರ್ಪಡೆಯಾಗಿರುವುದು ಗೊತ್ತಾಗುತ್ತದೆ.

ತುಳು ಭಾಷೆಗೆ ಪ್ರತ್ಯೇಕ ಲಿಪಿ ಇದ್ದರೂ , ಈ ಲಿಪಿ ಬಗ್ಗೆ ಹೆಚ್ಚಿನ ತುಳುವರಿಗೆ ಜ್ಞಾನವಿಲ್ಲ. ಆದರೆ ಗೂಗಲ್ ಟ್ರಾನ್ಸ್ ಲೇಟರ್ ನಲ್ಲಿ ತುಳು ಲಿಪಿಯ ಬದಲು ಕನ್ನಡ ಲಿಪಿಯಲ್ಲಿ ತುಳು ಭಾಷೆಗೆ ಭಾಷಾಂತರವಾಗುತ್ತಿದೆ. ಇದರಿಂದ ಜಗತ್ತಿನ ಯಾವುದೇ ಭಾಷೆಯಿಂದ ತುಳು ಭಾಷೆಗೆ ನೇರ ಭಾಷಾಂತರ ಮಾಡಲು ಸಾಧ್ಯವಾಗಲಿದೆ.

ಟ್ರೆಂಡಿಂಗ್​ ಸುದ್ದಿ

ಈ ಬಗ್ಗೆ ಪ್ರತಿಕ್ರಿಯಿಸಿರುವ , ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಗೂಗಲ್ ಟ್ರಾನ್ಸೇಲಟರ್ ನಲ್ಲಿ ತುಳು ಭಾಷೆ ಸೇರ್ಪಡೆಗೊಂಡಿರುವುದು ತುಳು ಭಾಷೆಗೆ ಜಾಗತಿಕವಾಗಿ ಸಂದ ಗೌರವವಾಗಿದೆ, ತುಳುವರು ಸಂಭ್ರಮಪಡುವಂತವ ವಿಚಾರವಾಗಿದೆ .

ಗೂಗಲ್ ಟ್ರಾನ್ಸೇಲಟರ್ ನಲ್ಲಿ ಕೆಲವು ಸಂದರ್ಭದಲ್ಲಿ ಶಬ್ದಗಳು ತಪ್ಪಾಗಿ ಉಲ್ಲೇಖವಾಗುವುದು ಸಾಮಾನ್ಯ ವಿಚಾರ. ಇಂತಹ ಸಂದರ್ಭಗಳಲ್ಲಿ ಅಲ್ಲೇ ಇರುವ ಫೀಡ್ ಬ್ಯಾಕ್ ಕಾಲಮ್ ನಲ್ಲಿ ಸರಿಯಾದ ಶಬ್ದವನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದರೆ ಗೂಗಲ್ ಅದನ್ನು ಮುಂದಕ್ಕೆ ಸರಿ ಮಾಡಿಕೊಳ್ಳುವುದು. ಈ ಅಂಶವನ್ನು ತುಳುವರು ಸಮರ್ಪಕವಾಗಿ ಬಳಸಿಕೊಂಡರೆ ತುಳುವರಿಗೆ ಹಾಗೂ ತುಳುವೇತರರಿಗೂ ಪ್ರಯೋಜನವಾಗಲಿದೆ ಎಂದು ತಿಳಿಸಿದ್ದಾರೆ.

ಭಾಷೆಯ ಉಳಿವಿಗೆ ಕಾರಣವಾದ ಅರ್ಟಿಫಿಶೀಯಲ್ ಇಂಟೆಲಿಜೆನ್ಸಿ (ಎಐ) ಈ ಹೊಸ ಭಾಷೆಯ ಅನುವಾದಕ್ಕೆ ನೆರವಾಗಿದೆ. ಎಐಯಿಂದ ಈ ಭಾಷೆಗಳನ್ನು ಸುಲಭದಲ್ಲಿ ಅನುವಾದಗಳನ್ನು ಮಾಡಿಕೊಳ್ಳಬಹುದು. ಈ ಮೂಲಕ ಕೃತಕ ಬುದ್ದಿಮತ್ತೆ ಭಾಷೆಯ ಉಳಿವಿಗೆ ಸಹಕಾರ ನೀಡಿದೆ ಎನ್ನುವುದು ಗೂಗಲ್ ಸಂಸ್ಥೆಯ ಮಾಹಿತಿ ನೀಡಿದೆ.

ಗೂಗಲ್ 110 ಹೊಸ ಭಾಷೆಗಳಿಗೆ ಅವಕಾಶ ಮಾಡಿಕೊಟ್ಟಿದ್ದು, ಅದರಲ್ಲಿ ತುಳು ಭಾಷೆಗೂ ಮನ್ನಣೆ ಸಿಕ್ಕಿದೆ. ಇದು ತುಳು ಭಾಷಿಕರಿಗೆ ಹೆಮ್ಮೆಯ ವಿಚಾರವಾದರೆ, ತುಳುಯೇತರರಿಗೆ ಕಲಿಯಲು, ಅರ್ಥ ಮಾಡಿಕೊಳ್ಳಲು ಅನುಕೂಲವಾಗಲಿದೆ. ಇದರಿಂದ ವಿಶ್ವದ ಯಾವುದೇ ಭಾಗದಲ್ಲಿದ್ದರೂ ತುಳು ಕಲಿಯಬೇಕು. ಭಾಷೆಯ ಕುರಿತು ಮಾಹಿತಿ ಬೇಕು ಎಂದಾಗ ಗೂಗಲ್‌ ಟ್ರಾನ್ಸಲೇಟರ್‌ ಅನ್ನು ಬಳಕೆ ಮಾಡಿದರೆ ಉಪಯೋಗ ಖಂಡಿತ ಸಿಗಲಿದೆ ಎನ್ನುವುದು ತಜ್ಞರ ನುಡಿ. 

(ವರದಿ: ಹರೀಶ ಮಾಂಬಾಡಿ, ಮಂಗಳೂರು)