ಸೆಪ್ಟೆಂಬರ್​ 21ರ ಶನಿವಾರ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ; ನೀವಿರುವ ಏರಿಯಾನೂ ಇರಬಹುದು, ಪರಿಶೀಲಿಸಿ
ಕನ್ನಡ ಸುದ್ದಿ  /  ಕರ್ನಾಟಕ  /  ಸೆಪ್ಟೆಂಬರ್​ 21ರ ಶನಿವಾರ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ; ನೀವಿರುವ ಏರಿಯಾನೂ ಇರಬಹುದು, ಪರಿಶೀಲಿಸಿ

ಸೆಪ್ಟೆಂಬರ್​ 21ರ ಶನಿವಾರ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ; ನೀವಿರುವ ಏರಿಯಾನೂ ಇರಬಹುದು, ಪರಿಶೀಲಿಸಿ

Power Cut In Bengaluru: ಕೆವಿಎ ಸಹಕಾರ ನಗರ ಕೇಂದ್ರದಲ್ಲಿ ನಿರ್ವಹಣಾ ಕೆಲಸದ ಕಾರಣ ಸೆಪ್ಟೆಂಬರ್​ 27ರ ಶನಿವಾರ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಿಸಿದೆ. ಯಾವುದೇ ಸಮಸ್ಯೆ ಮತ್ತು ಗೊಂದಲಕ್ಕಾಗಿ ಬೆಸ್ಕಾಂ ಸಹಾಯವಾಣಿ 1912 ಗೆ ಕರೆ ಮಾಡಬಹುದು.

ಸೆಪ್ಟೆಂಬರ್​ 21ರ ಶನಿವಾರ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಸೆಪ್ಟೆಂಬರ್​ 21ರ ಶನಿವಾರ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಬೆಂಗಳೂರು: ಅಕ್ಟೋಬರ್ 1 ತನಕ ಬೆಂಗಳೂರಿನ ದಿನಕ್ಕೊಂದು ಪ್ರದೇಶದಲ್ಲಿ ವಿದ್ತುತ್ ವ್ಯತ್ಯಯ (Power Cut In Bengaluru) ಉಂಟಾಗಲಿದೆ. ರಾಜಧಾನಿಯಲ್ಲಿ ಇದು ಸಾರ್ವಜನಿಕರಿಗೆ ಕಿರಿ ಕಿರಿ ಉಂಟು ಮಾಡುತ್ತಿದೆ. ಆದರೂ ಮುನ್ನೆಚ್ಚರಿಕೆಯ ಕ್ರಮವಾಗಿ ಯಾವ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆಯೇ, ಆ ಪ್ರದೇಶದ ಕುರಿತು ಬೆಸ್ಕಾಂ ಮಾಹಿತಿ ನೀಡುತ್ತದೆ. ಅದರಂತೆ ಅಕ್ಟೋಬರ್​ 21ರ ಶನಿವಾರ ಯಾವ ಪ್ರದೇಶದಲ್ಲಿ ಪವರ್​​ ಕಡಿತವಾಗಲಿದೆ ಎಂಬುದರ ಮಾಹಿತಿ ನೀಡಿದೆ. ಈ ವಾರಾಂತ್ಯದಲ್ಲಿ ಕೆವಿಎ ಸಹಕಾರ ನಗರ ಕೇಂದ್ರದಲ್ಲಿ ನಿರ್ವಹಣೆಯ ಕಾರಣ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ವಿದ್ಯುತ್ ವ್ಯತ್ಯಕ್ಕೆ ಕಾರಣವೇನು?

ವಿದ್ಯುತ್ ಉಪಕೇಂದ್ರ 66/11 ಕೆವಿಎ ಸಹಕಾರನಗರ ಕೇಂದ್ರದಲ್ಲಿ ಟ್ರಾನ್ಸ್ಫಾರ್ಮರ್ ಮತ್ತು ಬೇಸ್ ಮತ್ತು 66 ಕೆವಿ ಬಸ್ ನಿರ್ವಹಣೆ ಕಾರ್ಯಗಳು ನಡೆಯಲಿರುವ ಕಾರಣ ಪವರ್ ಕಟ್ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ?

ಬಳ್ಳಾರಿ ಮುಖ್ಯ ರಸ್ತೆ, ಎ ಬ್ಲಾಕ್, ಇ ಬ್ಲಾಕ್, ಜಿ ಬ್ಲಾಕ್, ಎಫ್ ಬ್ಲಾಕ್, ತಲಕಾವೇರಿ ಲೇಔಟ್, ಬಿಜಿಎಸ್ ಲೇಔಟ್, ಅಮೃತಹಳ್ಳಿ, ನವ್ಯ ನಗರ ಬ್ಲಾಕ್, ಶಬರಿ ನಗರ, ಜಿಕೆವಿಕೆ ಲೇಔಟ್, ಬೈತರಾಯನಪುರ ಜಕ್ಕೂರು ಬಡಾವಣೆ, ಜಕ್ಕೂರು ಪ್ಲಾಂಟೇಶನ್, ಡಿ, ಅಮೃತಹಳ್ಳಿ ಬಿ ಬ್ಲಾಕ್, ಸಿ ಬ್ಲಾಕ್, ಸಿಕ್ಯುಎಎಲ್ ಲೇಯೋಟ್, ಡಿ ಬ್ಲಾಕ್, ಇ ಬ್ಲಾಕ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ಯೋಷಾದ ನಗರಾಮೃತಹಳ್ಳಿ, ಜಯಸರ‍್ಯ ಲೇಔಟ್, ವಿಧಾನಸೌಧ ಲೇಔಟ್ ಸಾಯಿಬಾಬಾ ಲೇಔಟ್, ಎಂಸಿಇಸಿಎಚ್ಎಸ್ ಲೇಔಟ್, ಎಂಸಿಇಸಿಎಚ್ಎಸ್ ಲೇಔಟ್, ಎಂಸಿ ಪಿಎಚ್‌ಎಸ್ ಲೇಔಟ್, ಸೂರ‍್ಯೋದಯ ನಗರ, ಟೆಲಿಕಾಂ ಲೇಔಟ್, ಅಗ್ರಹಾರ ಲೇಔಟ್, ಕೋಗಿಲು ಲೇಔಟ್, ವಿಆರ್​ಎಲ್​ ರಸ್ತೆ (ಸಂತೆ ರಸ್ತೆ), ಐಎಎಸ್ ರಸ್ತೆ, ಶ್ರೀನಿವಾಸಪುರ ಜಕ್ಕೂರು, ಅರ್ಕಾವತಿ ಲೇಔಟ್, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ.

ಜಿಲ್ಲಾವಾರು ವಾಟ್ಸಾಪ್ ಸಹಾಯವಾಣಿ

ಬೆಸ್ಕಾಂ ವ್ಯಾಪ್ತಿಯ ಪ್ರತಿ ಜಿಲ್ಲೆಗಳಿಗೂ ವಿಶೇಷ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳಿದ್ದು, ನಿಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಫೋಟೋ, ವಿಡಿಯೋಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ವಾಟ್ಸಾಪ್​ ಸಹಾಯವಾಣಿ ಸಂಖ್ಯೆಗೆ ಕಳುಹಿಸಿ, ತ್ವರಿತ ಪರಿಹಾರ ಪಡೆಯಿರಿ.

ಜಿಲ್ಲಾವಾರು ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳು

ಬೆಂಗಳೂರು ನಗರ

ದಕ್ಷಿಣ ವೃತ್ತ - 8277884011

ಪಶ್ಚಿಮ ವೃತ್ತ - 8277884012

ಪೂರ್ವ ವೃತ್ತ - 8277884013

ಉತ್ತರ ವೃತ್ತ - 8277884014

ಕೋಲಾರ - 8277884015

ಚಿಕ್ಕಬಳ್ಳಾಪುರ - 8277884016

ಬಿಆರ್​​ಸಿ - 8277884017

ರಾಮನಗರ - 8277884018

ತುಮಕೂರು - 8277884019

ಚಿತ್ರದುರ್ಗ - 8277884020

ದಾವಣಗೆರೆ - 8277884021

ವಿಡಿಯೋ ಜಾಗೃತಿ ನಡೆಸಿದ ಬೆಸ್ಕಾಂ

ವಿದ್ಯುತ್ ಅವಘಡ ಮತ್ತು ವಿದ್ಯುತ್ ಅಪಾಯಗಳು ಎದುರಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಅದಕ್ಕಾಗಿ ಬೆಸ್ಕಾಂ ವಿಡಿಯೋ ಜಾಗೃತಿ ಅಭಿಯಾನ ಕೈಗೊಂಡಿದೆ. ವಿದ್ಯುತ್​ನಿಂದ ಉಂಟಾಗಬಲ್ಲ ಅಪಾಯದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ವಿದ್ಯುತ್ ತಂತಿ, ಕಂಬಳಿಗೆ ಬ್ಯಾನರ್​, ಜಾನುವಾರುಗಳನ್ನು ಕಟ್ಟಬಾರದು, ತಂತಿಗಳ ಮೇಲೆ ಬಿದ್ದಿರುವ ಬಟ್ಟೆ ತೆಗೆಯಬಾರದು, ವಿದ್ಯುತ್ ಕಂಬಗಳ ಅಡಿ ನಿಲ್ಲಬಾರದು ಸೇರಿದಂತೆ ಹಲವು ಜಾಗೃತಿ ಮೂಡಿಸುವ ವಿಡಿಯೋ ಹಂಚಿಕೊಂಡಿದೆ.

Whats_app_banner