ಐಎಎಸ್​ vs ಐಪಿಎಸ್​; ಯಾರು ಹೆಚ್ಚು ಶಕ್ತಿಶಾಲಿ; ಪಾತ್ರ, ಜವಾಬ್ದಾರಿ, ವೇತನ, ತರಬೇತಿಯಲ್ಲಿ ವ್ಯತ್ಯಾಸವೇನು?-employment news difference between ias and ips officers who more powerful salary roles responsibilities training prs ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಐಎಎಸ್​ Vs ಐಪಿಎಸ್​; ಯಾರು ಹೆಚ್ಚು ಶಕ್ತಿಶಾಲಿ; ಪಾತ್ರ, ಜವಾಬ್ದಾರಿ, ವೇತನ, ತರಬೇತಿಯಲ್ಲಿ ವ್ಯತ್ಯಾಸವೇನು?

ಐಎಎಸ್​ vs ಐಪಿಎಸ್​; ಯಾರು ಹೆಚ್ಚು ಶಕ್ತಿಶಾಲಿ; ಪಾತ್ರ, ಜವಾಬ್ದಾರಿ, ವೇತನ, ತರಬೇತಿಯಲ್ಲಿ ವ್ಯತ್ಯಾಸವೇನು?

Difference between IAS and IPS: ಭಾರತದ ಅತ್ಯಂತ ಪ್ರತಿಷ್ಠಿತ ನಾಗರಿಕ ಸೇವೆಳಾದ ಐಪಿಎಸ್​ ಮತ್ತು ಐಎಎಸ್​ ಅಧಿಕಾರಿಗಳ ನಡುವಿನ ವ್ಯತ್ಯಾಸವೇನು? ಯಾರಿಗೆ ಅಧಿಕಾರ ಹೆಚ್ಚಿರುತ್ತದೆ, ವೇತನ, ಅವರ ಜವಾಬ್ದಾರಿ, ಪಾತ್ರವೇನು? ಯಾವೆಲ್ಲಾ ಹುದ್ದೆ ಅಲಂಕರಿಸಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಐಎಎಸ್​ vs ಐಪಿಎಸ್​; ಈ ಇಬ್ಬರ ಅಧಿಕಾರದಲ್ಲಿ ಯಾರು ಹೆಚ್ಚು ಶಕ್ತಿಶಾಲಿ; ಪಾತ್ರ, ಜವಾಬ್ದಾರಿ, ವೇತನದಲ್ಲಿ ವ್ಯತ್ಯಾಸವೇನು?
ಐಎಎಸ್​ vs ಐಪಿಎಸ್​; ಈ ಇಬ್ಬರ ಅಧಿಕಾರದಲ್ಲಿ ಯಾರು ಹೆಚ್ಚು ಶಕ್ತಿಶಾಲಿ; ಪಾತ್ರ, ಜವಾಬ್ದಾರಿ, ವೇತನದಲ್ಲಿ ವ್ಯತ್ಯಾಸವೇನು? (INDIA'S TOP FACTS)

ಪ್ರತಿಯೊಬ್ಬರಿಗೂ ಭಾರತೀಯ ಆಡಳಿತ ಸೇವೆ (IAS) ಮತ್ತು ಭಾರತೀಯ ಪೊಲೀಸ್ ಸೇವೆ (IPS) ಭಾರತದ ಎರಡು ಅತ್ಯಂತ ಪ್ರತಿಷ್ಠಿತ ನಾಗರಿಕ ಸೇವೆಗಳೆಂಬುದು ಗೊತ್ತಿದೆ. ಆದರೆ, ಸಾಕಷ್ಟು ಮಂದಿಗೆ ಇವೆರಡರ ನಡುವಿನ ವ್ಯತ್ಯಾಸ (Difference between IAS and IPS) ಏನೆಂಬುದು ಗೊತ್ತಿಲ್ಲ. ಪ್ರತಿಯೊಂದೂ ತನ್ನದೇ ಆದ ಪಾತ್ರಗಳು, ಜವಾಬ್ದಾರಿ ಮತ್ತು ಕ್ಷೇತ್ರಗಳನ್ನು ಹೊಂದಿದೆ. ಐಎಎಸ್ ಅಧಿಕಾರಿಗಳು ದೇಶದ ಆಡಳಿತದ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅವರು ನೀತಿ ನಿರೂಪಣೆ, ಅನುಷ್ಠಾನ ಮತ್ತು ಸರ್ಕಾರಿ ಕಾರ್ಯಕ್ರಮಗಳ ಮೇಲ್ವಿಚಾರಣೆಯ ವ್ಯವಹಾಸ ನಡೆಸುತ್ತಾರೆ.

ಆದರೆ, ಐಪಿಎಸ್​ ಅಧಿಕಾರಿಗಳು ಪ್ರಾಥಮಿಕವಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಅಪರಾಧ ತಡೆಗಟ್ಟುವುದು ಮತ್ತು ತನಿಖೆ ನಡೆಸುವುದು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವ ಜವಾಬ್ದಾರಿ ಹೊಂದಿರುತ್ತಾರೆ. ಸ್ಥಳೀಯ ಪೊಲೀಸ್ ಠಾಣೆಗಳಿಂದ ರಾಜ್ಯ ಮತ್ತು ಕೇಂದ್ರ ಕಾನೂನು ಜಾರಿ ಸಂಸ್ಥೆಗಳವರೆಗೆ ವಿವಿಧ ಹಂತಗಳಲ್ಲಿ ಪೊಲೀಸ್ ಪಡೆಗಳನ್ನು ಮುನ್ನಡೆಸುತ್ತಾರೆ ಮತ್ತು ನಿರ್ವಹಿಸುವ ಅಧಿಕಾರ ಅವರಲ್ಲಿದೆ. ಆದರೆ, ಪಾತ್ರ, ಅಧಿಕಾರ ಮತ್ತು ಸಂಬಳಕ್ಕೆ ಬಂದಾಗ ಅವರು ಎಲ್ಲವೂ ತುಂಬಾ ಭಿನ್ನವಾಗಿರುತ್ತದೆ.

IAS vs IPS: ಯಾರು ಹೆಚ್ಚು ಶಕ್ತಿಶಾಲಿ?

ಐಎಎಸ್ ಮತ್ತು ಐಪಿಎಸ್ ನಡುವೆ ಯಾರು ಹೆಚ್ಚು ಶಕ್ತಿ ಶಾಲಿ ಎಂಬುದು ಪ್ರಶ್ನೆಯಾಗಿದೆ. ಎರಡೂ ಸೇವೆಗಳು ಗಣನೀಯ ಪ್ರಭಾವ ಹೊಂದಿವೆ. ಆದರೆ, ಅವುಗಳ ಶಕ್ತಿಯ ಪ್ರಮಾಣ ಮತ್ತು ಸ್ವರೂಪವು ಭಿನ್ನ. ಐಎಎಸ್​ ಅಧಿಕಾರಿಗಳು ಸಾಮಾನ್ಯವಾಗಿ ನೀತಿ-ನಿರ್ಮಾಣದಲ್ಲಿ ಪ್ರಮುಖ ಸ್ಥಾನ ಹೊಂದಿರುತ್ತಾರೆ. ಐಪಿಎಸ್​ ಅಧಿಕಾರಿಗಳು, ಕಾನೂನು ಜಾರಿಯ ಮೇಲೆ ಅಧಿಕಾರ ಹೊಂದಿರುತ್ತಾರೆ. ಅಂದರೆ ಐಎಎಸ್​ ಅಧಿಕಾರಿಗಳು ಐಪಿಎಸ್​ಗಿಂತ ಹೆಚ್ಚು ಶಕ್ತಿಶಾಲಿ ಎನ್ನಬಹುದಾಗಿದೆ.

ಏಕೆಂದರೆ, ಐಎಎಸ್​ ಅಧಿಕಾರಿಗಳು ತಮ್ಮ ಜಿಲ್ಲೆಯ ಎಲ್ಲಾ ಇಲಾಖೆಗಳ ನೀತಿ ನಿರೂಪಣೆಯಲ್ಲಿ ಕೆಲಸ ಮಾಡಬಹುದು. ಆದರೆ ಐಪಿಎಸ್​ ಅಧಿಕಾರಿಗಳ ಅಧಿಕಾರ ಪೊಲೀಸ್ ಇಲಾಖೆಗೆ ಸೀಮಿತ. ಐಪಿಎಸ್ ಅಧಿಕಾರಿಗಳು ಪೊಲೀಸ್ ಪಡೆಯೊಳಗೆ ಪ್ರಭಾವಿಗಳಾಗಿದ್ದರೂ, ಅವರು ಮುಖ್ಯವಾಗಿ ಪೊಲೀಸ್ ಚೌಕಟ್ಟಿನೊಳಗೆ ಕೆಲಸ ಮಾಡುತ್ತಾರೆ. ಇದು ಯಾವಾಗಲೂ ಆಡಳಿತದಲ್ಲಿ ಯಾವ ಸೇವೆಯು ಹೆಚ್ಚು ಶಕ್ತಿಯುತ ಅಥವಾ ಹೆಚ್ಚು ಪ್ರಬಲವಾಗಿದೆ ಎಂಬ ಚರ್ಚೆಗಳಿಗೆ ಕಾರಣವಾಗುತ್ತದೆ.

IAS vs IPS: ಯಾರಿಗೆಷ್ಟು ಸಂಬಳ?

ಐಎಎಸ್​ ಮತ್ತು ಐಪಿಎಸ್​ ಅಧಿಕಾರಿಗಳ ಆರಂಭಿಕ ವೇತನ ಒಂದೇ ಆಗಿರುತ್ತದೆ. ಆರಂಭಿಕ ವೇತನ ಶ್ರೇಣಿ 7ನೇ ವೇತನ ಆಯೋಗದ ಪ್ರಕಾರ ತಿಂಗಳಿಗೆ ಸುಮಾರು 56,100 ರೂಪಾಯಿಗೆ ನಿಗದಿಪಡಿಸಲಾಗಿದೆ. ಐಎಎಸ್​ ಅಧಿಕಾರಿಗಳು ಹಿರಿತನ ಮತ್ತು ಶ್ರೇಣಿಯ ಮಟ್ಟವನ್ನು ಆಧರಿಸಿ ಗರಿಷ್ಠ ವೇತನ ತಿಂಗಳಿಗೆ 2.50 ಲಕ್ಷದ ತನಕ ಇರಲಿದೆ. ಐಪಿಎಸ್​ ಅಧಿಕಾರಿಗಳಿಗೆ ಹೋಲಿಸಿದರೆ, ಇದು ಹೆಚ್ಚು. ಐಪಿಎಸ್​​ ಅಧಿಕಾರಿಗಳು ಹಿರಿತನ ಮತ್ತು ಶ್ರೇಣಿಯ ಮಟ್ಟವನ್ನು ಆಧರಿಸಿ 2.25 ಲಕ್ಷ ರೂಪಾಯಿ ತನಕ ಇರಲಿದೆ. ಐಎಎಸ್ ಅಧಿಕಾರಿ ವೇತನದೊಂದಿಗೆ ಹೆಚ್ಚುವರಿ ಭತ್ಯೆ ಐಪಿಎಸ್ ಸಂಬಳಕ್ಕಿಂತ ಹೆಚ್ಚಾಗಿರುತ್ತದೆ.

ಐಎಎಸ್​ ಅಧಿಕಾರಿ ಪಾತ್ರ ಮತ್ತು ಜವಾಬ್ದಾರಿ

ನೀತಿ ರಚನೆ ಮತ್ತು ಅನುಷ್ಠಾನ: ಐಎಎಸ್​ ಅಧಿಕಾರಿಗಳು ಸರ್ಕಾರದ ನೀತಿಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳ ರಚನೆ ಮತ್ತು ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಸಾಮಾಜಿಕ, ಆರ್ಥಿಕ, ಅಭಿವೃದ್ಧಿ ಸವಾಲುಗಳನ್ನು ಪರಿಹರಿಸುವ ನೀತಿಗಳನ್ನು ರಚಿಸುವಲ್ಲಿ ಕೆಲಸ ಮಾಡುತ್ತಾರೆ.

ಆಡಳಿತಾತ್ಮಕ ನಾಯಕತ್ವ: ಐಎಎಸ್​ ಅಧಿಕಾರಿಗಳು ಸರ್ಕಾರದ ವಿವಿಧ ಹಂತಗಳಲ್ಲಿ ವಿವಿಧ ಆಡಳಿತಾತ್ಮಕ ಸ್ಥಾನಗಳನ್ನು ಹೊಂದಿದ್ದಾರೆ. ಸರ್ಕಾರಿ ಇಲಾಖೆಗಳನ್ನು ನಿರ್ವಹಿಸುತ್ತಾರೆ. ನೀತಿಗಳ ಕಾರ್ಯಗತಗೊಳಿಸುವಿಕೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ.

ಅಭಿವೃದ್ಧಿಯ ಉಪಕ್ರಮಗಳು: ಐಎಎಸ್ ಅಧಿಕಾರಿಗಳು ಅಭಿವೃದ್ಧಿ ಯೋಜನೆಗಳು, ಮೂಲಸೌಕರ್ಯ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳ ಯೋಜನೆ ಪ್ರಾರಂಭಿಸಲು ಮತ್ತು ಮೇಲ್ವಿಚಾರಣೆ ಮಾಡಲು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ.

ಬಿಕ್ಕಟ್ಟು ನಿರ್ವಹಣೆ: ತುರ್ತು ಸಂದರ್ಭಗಳಲ್ಲಿ ಅಥವಾ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಐಎಎಸ್​ ಅಧಿಕಾರಿಗಳು ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ.

ಸಾರ್ವಜನಿಕ ಕುಂದುಕೊರತೆ ಪರಿಹಾರ: ಸಾರ್ವಜನಿಕ ಕುಂದು-ಕೊರತೆಗಳನ್ನು ಪರಿಹರಿಸಲು ಮತ್ತು ನಾಗರಿಕರ ಸಮಸ್ಯೆಗಳನ್ನು ಆಲಿಸಲು ಮತ್ತು ಪರಿಹರಿಸಲು ಅವರು ಜವಾಬ್ದಾರರು.

ಜಿಲ್ಲಾಡಳಿತ: ಜಿಲ್ಲಾ ಮಟ್ಟದಲ್ಲಿ ಐಎಎಸ್​ ಅಧಿಕಾರಿಗಳು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಕಲೆಕ್ಟರ್​​ಗಳಾಗಿ ಕಾರ್ಯನಿರ್ವಹಿಸುತ್ತಾರೆ. ಒಟ್ಟಾರೆ ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಅಭಿವೃದ್ಧಿಗೆ ಜವಾಬ್ದಾರರು.

ಐಪಿಎಸ್​ ಅಧಿಕಾರಿ ಪಾತ್ರ ಮತ್ತು ಜವಾಬ್ದಾರಿ

ಕಾನೂನು ಜಾರಿ: ಐಪಿಎಸ್ ಅಧಿಕಾರಿಗಳ ಪ್ರಾಥಮಿಕ ಕರ್ತವ್ಯ ಏನೆಂದರೆ ಕಾನೂನುಗಳನ್ನು ಜಾರಿಗೊಳಿಸುವುದು, ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವುದು, ಪೊಲೀಸ್ ಪಡೆಯನ್ನು ಮುನ್ನಡೆಸುವಲ್ಲಿ ಮತ್ತು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ನಾಗರಿಕರ ಸುರಕ್ಷತೆ ಮತ್ತು ಭದ್ರತೆ ನೋಡಿಕೊಳ್ಳುವವರು.

ಅಪರಾಧ ತಡೆಗಟ್ಟುವಿಕೆ ಮತ್ತು ತನಿಖೆ: ಐಪಿಎಸ್​ ಅಧಿಕಾರಿಗಳು ಅಪರಾಧಗಳನ್ನು ತಡೆಗಟ್ಟಲು, ತನಿಖೆ ನಡೆಸಲು, ಅಪರಾಧಿಗಳನ್ನು ಬಂಧಿಸಲು ಮತ್ತು ಸರಿಯಾದ ಕಾನೂನು ಕಾರ್ಯವಿಧಾನಗಳ ಮೂಲಕ ನ್ಯಾಯವನ್ನು ಒದಗಿಸುವ ಅಧಿಕಾರ ಮತ್ತು ಜವಾಬ್ದಾರರು.

ಸಾರ್ವಜನಿಕ ಸುರಕ್ಷತೆ: ಐಪಿಎಸ್​ ಅಧಿಕಾರಿಗಳು ಸಾರ್ವಜನಿಕ ಸುರಕ್ಷತೆ ಖಾತ್ರಿಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವ ಜವಾಬ್ದಾರಿ ಹೊಂದಿದ್ದಾರೆ. ತುರ್ತು ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸುತ್ತಾರೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಪಡಿಸುವ ಸಂದರ್ಭಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿದೆ.

ಭದ್ರತೆ ಮತ್ತು ಗುಪ್ತಚರ: ರಾಷ್ಟ್ರೀಯ ಭದ್ರತೆ-ಭಯೋತ್ಪಾದನಾ ನಿಗ್ರಹ ಪ್ರಯತ್ನಗಳನ್ನು ನಿರ್ವಹಿಸುವಲ್ಲಿ ಐಪಿಎಸ್ ಅಧಿಕಾರಿಗಳು ಪಾತ್ರವಹಿಸುತ್ತಾರೆ. ಮಾಹಿತಿಯನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ಗುಪ್ತಚರ ಸಂಸ್ಥೆಗಳೊಂದಿಗೆ ಸಹಕರಿಸಲು ಅರ್ಹರು.

ಸಂಚಾರ ನಿರ್ವಹಣೆ: ಐಪಿಎಸ್​ ಅಧಿಕಾರಿಗಳು ಸಂಚಾರ ನಿಯಂತ್ರಣ ಮತ್ತು ಸುರಕ್ಷತೆ ವಿಭಾಗ ನಿರ್ವಹಣೆ ಮಾಡುತ್ತಾರೆ. ಅಪಘಾತ ಮತ್ತು ದಟ್ಟಣೆ ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಅನುಷ್ಠಾನಕ್ಕೆ ತರುವ ಅಧಿಕಾರ ಹೊಂದಿದ್ದಾರೆ.

ವಿಶೇಷ ಘಟಕಗಳು: ಭ್ರಷ್ಟಾಚಾರ-ವಿರೋಧಿ ಘಟಕಗಳು, ಸೈಬರ್ ಕ್ರೈಮ್ ಘಟಕಗಳು, ಮಾದಕ ದ್ರವ್ಯ ನಿಯಂತ್ರಣ ಮತ್ತು ಪ್ರದೇಶದ ಅಗತ್ಯತೆಗಳ ಆಧಾರದ ಮೇಲೆ ಇತರ ವಿಭಾಗಗಳಂತಹ ವಿಶೇಷ ಪೊಲೀಸ್ ಘಟಕಗಳನ್ನು ಮೇಲ್ವಿಚಾರಣೆ ನಡೆಸುವ ಅಧಿಕಾರ ಐಪಿಎಸ್​​ಗಳಿಗಿದೆ.

ತರಬೇತಿ ಮತ್ತು ಸಾಮರ್ಥ್ಯ: ಐಪಿಎಸ್ ಅಧಿಕಾರಿಗಳು ಅಧೀನ ಪೊಲೀಸ್ ಅಧಿಕಾರಿಗಳಿಗೆ ತರಬೇತಿ-ಮಾರ್ಗದರ್ಶನ ನೀಡುವ ಜವಾಬ್ದಾರಿ ಹೊಂದಿದ್ದಾರೆ. ಪರಿಣಾಮಕಾರಿ ಕಾನೂನು ಜಾರಿಗಾಗಿ ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನದೊಂದಿಗೆ ಅವರನ್ನು ಸಜ್ಜುಗೊಳಿಸುತ್ತಾರೆ.

ಐಎಎಸ್ ಅಧಿಕಾರಿ ಶ್ರೇಣಿಗಳು (Ranks of IAS Officers)

ಸಹಾಯಕ ಕಲೆಕ್ಟರ್

ಹೆಚ್ಚುವರಿ ಜಿಲ್ಲಾಧಿಕಾರಿ

ಉಪ ಕಲೆಕ್ಟರ್

ಕಲೆಕ್ಟರ್ / ಜಿಲ್ಲಾ ಮ್ಯಾಜಿಸ್ಟ್ರೇಟ್

ಹೆಚ್ಚುವರಿ ಕಾರ್ಯದರ್ಶಿ

ಜಂಟಿ ಕಾರ್ಯದರ್ಶಿ

ವಿಶೇಷ ಕಾರ್ಯದರ್ಶಿ

ಕಾರ್ಯದರ್ಶಿ

ಪ್ರಧಾನ ಕಾರ್ಯದರ್ಶಿ

ಮುಖ್ಯ ಕಾರ್ಯದರ್ಶಿ

ಐಪಿಎಸ್​ ಅಧಿಕಾರಿ ಶ್ರೇಣಿಗಳು (Ranks of IPS Officers)

ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ASP)

ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ (Addl. SP)

ಉಪ ಪೊಲೀಸ್ ವರಿಷ್ಠಾಧಿಕಾರಿ (DSP)

ಪೊಲೀಸ್ ಸೂಪರಿಂಟೆಂಡೆಂಟ್ (SP)

ಹೆಚ್ಚುವರಿ ಉಪ ಪೊಲೀಸ್ ಆಯುಕ್ತರು

ಉಪ ಪೊಲೀಸ್ ಆಯುಕ್ತರು (ಡಿಸಿಪಿ)

ಹೆಚ್ಚುವರಿ ಪೊಲೀಸ್ ಕಮಿಷನರ್ (Addl. CP)

ಜಂಟಿ ಪೊಲೀಸ್ ಆಯುಕ್ತರು (ಜಂಟಿ ಸಿಪಿ)

ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (IGP)

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (Addl. DGP)

ಪೊಲೀಸ್ ಮಹಾನಿರ್ದೇಶಕ (ಡಿಜಿಪಿ)

IPS ಮತ್ತು IAS ತರಬೇತಿಯಲ್ಲಿ ವ್ಯತ್ಯಾಸ

ಐಎಎಸ್​ ಮತ್ತು ಐಪಿಎಸ್​ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮಗಳು ಆಯಾ ಪಾತ್ರಗಳಿಗೆ ಅನುಗುಣವಾಗಿರುತ್ತವೆ. ಐಎಎಸ್ ಅಧಿಕಾರಿಗಳು ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್​​ನಲ್ಲಿ ತರಬೇತಿ ಪಡೆಯುತ್ತಾರೆ. ಆಡಳಿತಾತ್ಮಕ, ವ್ಯವಸ್ಥಾಪಕ ಮತ್ತು ನೀತಿ-ಸಂಬಂಧಿತ ಅಂಶಗಳ ಮೇಲೆ ತರಬೇತಿ ನೀಡಲಾಗುತ್ತದೆ. ಐಪಿಎಸ್ ಅಧಿಕಾರಿಗಳು, ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಾರೆ. ಕಾನೂನು ಜಾರಿ, ತನಿಖೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ನಿರ್ವಹಣೆಯ ಕುರಿತು ತರಬೇತಿ ಪಡೆಯಲಿದ್ದಾರೆ.

mysore-dasara_Entry_Point