ಶಿರೂರು ಗುಡ್ಡ ಕುಸಿತ ಪ್ರಕರಣ: 71 ದಿನಗಳ ನಂತರ ಪತ್ತೆಯಾಯ್ತು ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಮೃತದೇಹ, ವಿಡಿಯೋ
Shiruru Hill Collapse Case: ಜುಲೈ 16 ರಂದು ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿದು 11 ಮಂದಿ ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದರು. ಈ ಪೈಕಿ 8 ಮಂದಿಯನ್ನು ಈಗಾಗಲೇ ಪತ್ತೆ ಮಾಡಿದ್ದು, ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿತ್ತು. ಇದೀಗ ಅರ್ಜುನನ ಮೃತದೇಹ ಪತ್ತೆಯಾಗಿದೆ.
ಕಾರವಾರ: ಶಿರೂರು ಗುಡ್ಡ ಕುಸಿತ ದುರಂತ (Shiruru Hill Collapse Case) ಸಂಭವಿಸಿ ಎರಡು ತಿಂಗಳು ಕಳೆದಿದ್ದು, ಕೊನೆಗೂ ನಾಪತ್ತೆಯಾಗಿದ್ದ ಕೇರಳದ ಲಾರಿ ಹಾಗೂ ಚಾಲಕ ಅರ್ಜುನ್ ಅವರ ಮೃತದೇಹ ಬುಧವಾರ (ಸೆಪ್ಟೆಂಬರ್ 25) ಪತ್ತೆಯಾಗಿದೆ ಎಂದು ವರದಿಯಾಗಿದೆ. ಕಳೆದ 6 ದಿನಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆಯ ಮೂಲಕ ಗಂಗಾವಳಿ ನದಿಯಲ್ಲಿ ಮುಳುಗಿದ್ದ ಅರ್ಜುನ್ ಅವರ ಲಾರಿ ಪತ್ತೆಯಾಗಿದ್ದು, ಲಾರಿಯೊಳಗೆ ಅರ್ಜುನ್ ಮೃತದೇಹ ಪತ್ತೆಯಾಗಿದೆ ಎಂದು ಕಾರ್ಯಾಚರಣೆಯ ತಂಡದ ಮೂಲಗಳು ತಿಳಿಸಿವೆ.
ಲಾರಿಯ ಮಾಲೀಕ ಮುನಾಫ್ ಅವರು ಇದು ತಮ್ಮದೇ ಲಾರಿ ಎಂದು ಗುರುತಿಸಿದ್ದು, ಲಾರಿಯೊಳಗೆ ಪತ್ತೆಯಾದ ಮೃತದೇಹವನ್ನು ಅರ್ಜುನ್ ಎಂದು ಸ್ಪಷ್ಟಪಡಿಸಿರುವುದಾಗಿ ವರದಿ ವಿವರಿಸಿದೆ. ಇದೀಗ 71 ದಿನಗಳ ನಂತರ ಮೃತದೇಹ ಪತ್ತೆಯಾಉತ್ಗಿತರದೆ. ಶಿರೂರು ಗುಡ್ಡ ಕುಸಿತ ದುರಂತದ ಬಳಿಕ ಗಂಗಾವಳಿ ನದಿಯಲ್ಲಿ ಗ್ಯಾಸ್ ಟ್ಯಾಂಕರ್ ಸಹಿತ ಕೆಲ ವಾಹನಗಳು ಮುಳುಗಿದ್ದವು. ಇದರಲ್ಲಿ ಕೆಲ ವಾಹನಗಳ ಅವಶೇಷಗಳು ಪತ್ತೆಯಾಗಿದ್ದವು. ಆದರೆ ಅರ್ಜುನ್ ಹಾಗೂ ಲಾರಿಯ ಸುಳಿವು ಸಿಕ್ಕಿರಲಿಲ್ಲ. ಈ ಕಾರ್ಯಾಚರಣೆಗೆ ಈಶ್ವರ್ ಮಲ್ಪೆ ಸೇರಿದಂತೆ ಹಲವು ತಂಡ ಕಾರ್ಯಾಚರಣೆ ನಡೆಸಿದ್ದವು.
ಏನಿದು ಪ್ರಕರಣ?
ಜುಲೈ 16ರಂದು ಸುರಿ ಭಾರೀ ಮಳೆಗೆ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತಗೊಂಡಿತ್ತು. ಇಲ್ಲಿ ಒಟ್ಟು 11 ಜನರು ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದರು. ಈ ಪೈಕಿ 8 ಜನರನ್ನು ಪತ್ತೆ ಮಾಡಲಾಗಿತ್ತು. ಉಳಿದ ಮೂವರು ಮೃತದೇಹ ಪತ್ತೆಯಾಗಿರಲಿಲ್ಲ. ಇದೀಗ ಕೇರಳದ ಕೋಝಿಕ್ಕೋಡ್ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಲೋಕೇಶ್ ನಾಯ್ಕ ಮತ್ತು ಜಗನ್ನಾಥ ನಾಯ್ಕ ಎಂಬವರಿಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೀಗ ಲಾರಿಯೊಳಗೆ ಅರ್ಜುನನ ಮೃತದೇಹ ಎರಡು ತುಂಡಾಗಿ ಪತ್ತೆ ಪತ್ತೆಯಾಗಿದೆ. ಉಳಿದಿಬ್ಬರ ಶೋಧ ಕಾರ್ಯ ಮುಂದುವರೆದಿದೆ.