ಕನ್ನಡ ಸುದ್ದಿ  /  ಕರ್ನಾಟಕ  /  ವಿಜಯಪುರದಿಂದ ಅಯೋಧ್ಯೆಗೆ ಬೈಕ್ ಸವಾರಿ; ಪ್ರಯಾಣಕ್ಕೆಷ್ಟು ದಿನ, ರೂಟ್ ಯಾವುದು ಶಿವಾನಂದ ಪರೀಟ ಅನುಭವ ಕಥನ

ವಿಜಯಪುರದಿಂದ ಅಯೋಧ್ಯೆಗೆ ಬೈಕ್ ಸವಾರಿ; ಪ್ರಯಾಣಕ್ಕೆಷ್ಟು ದಿನ, ರೂಟ್ ಯಾವುದು ಶಿವಾನಂದ ಪರೀಟ ಅನುಭವ ಕಥನ

ಅಯೋಧ್ಯೆಗೆ ಹೋಗಿ ಬಾಲರಾಮ ದರ್ಶನ ಪಡೆಯಬೇಕು ಎಂಬುದು ಬಹುತೇಕ ಹಿಂದೂಗಳ ಕನಸು. ಕಾಲಾನುಕ್ರಮದಲ್ಲಿ ತಮ್ಮಿಂದಾದಂತೆ ಇದನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ವಿಜಯಪುರದಿಂದ ಅಯೋಧ್ಯೆಗೆ ಬೈಕ್ ಸವಾರಿ ಕೈಗೊಂಡು ಪುನೀತರಾದ ಶಿವಾನಂದ ಪರೀಟ ಅವರು, ಪ್ರಯಾಣಕ್ಕೆಷ್ಟು ದಿನ ತಗೊಂಡ್ರು, ರೂಟ್ ಯಾವುದು, ಇಲ್ಲಿದೆ ಅವರ ಅನುಭವ ಕಥನ. (ವರದಿ- ಸಮೀವುಲ್ಲಾ, ವಿಜಯಪುರ)

ವಿಜಯಪುರದಿಂದ ಅಯೋಧ್ಯೆಗೆ ಬೈಕ್ ಸವಾರಿಯ ಅನುಭವ ಕಥನವನ್ನು ಶಿವಾನಂದ ಪರೀಟ (ಬಲ ಚಿತ್ರ) ಮುಂದಿಟ್ಟಿದ್ದು,  ಪ್ರಯಾಣಕ್ಕೆಷ್ಟು ದಿನ ಬೇಕಾಯಿತು, ರೂಟ್ ಯಾವುದು ಎಂಬುದನ್ನು ವಿವರಿಸಿದ್ದಾರೆ.
ವಿಜಯಪುರದಿಂದ ಅಯೋಧ್ಯೆಗೆ ಬೈಕ್ ಸವಾರಿಯ ಅನುಭವ ಕಥನವನ್ನು ಶಿವಾನಂದ ಪರೀಟ (ಬಲ ಚಿತ್ರ) ಮುಂದಿಟ್ಟಿದ್ದು, ಪ್ರಯಾಣಕ್ಕೆಷ್ಟು ದಿನ ಬೇಕಾಯಿತು, ರೂಟ್ ಯಾವುದು ಎಂಬುದನ್ನು ವಿವರಿಸಿದ್ದಾರೆ.

ವಿಜಯಪುರ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಂಡಿದೆ. ತೇಜಸ್ಸಿನಿಂದ ಕೂಡಿದ ಶ್ರೀರಾಮನ ಭವ್ಯ ಪ್ರತಿಮೆಯ ದರ್ಶನಾಶೀರ್ವಾದ ಪಡೆಯಲು ದೇಶ ವಿದೇಶಗಳಿಂದ ರಾಮ ಭಕ್ತರ ದಂಡೇ ಅಯೋಧ್ಯೆಗೆ ಪ್ರಯಾಣ ಬೆಳೆಸುತ್ತಿದೆ. ಆದರೆ ವಿಜಯಪುರ ನಗರದ ರಾಮ ಭಕ್ತನೋರ್ವ ವಿಶಿಷ್ಟ ರೀತಿಯಲ್ಲಿ ಅಂದರೆ ಬೈಕ್‌ನಲ್ಲೇ ಸಾವಿರಕ್ಕೂ ಹೆಚ್ಚು ಕಿ.ಮೀ. ಪ್ರಯಾಣಿಸಿ ರಾಮ ಜನ್ಮಭೂಮಿಗೆ ತಲುಪಿ ರಾಮನ ದರ್ಶನ ಪಡೆದು ವಾಪಾಸ್ಸಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿಜಯಪುರ ಕೀರ್ತಿ ನಗರದ ಬಡಾವಣೆಯಲ್ಲಿ ಇಸ್ತ್ರಿ ಅಂಗಡಿ ಇರಿಸಿಕೊಂಡು ಕಾಯಕ ನಿರ್ವಹಿಸುವ ಶಿವಾನಂದ ಪರೀಟ ಈ ಅಪ್ಪಟ ರಾಮ ಭಕ್ತ. ಭಕ್ತಿಯ ಪರಾಕಾಷ್ಠೆಯ ಪ್ರತೀಕವಾಗಿ ಬೈಕ್ ಮೂಲಕ 1036 ಕಿ.ಮೀ.ಗಳ ಪ್ರಯಾಣ ಪೂರ್ಣಗೊಳಿಸಿದ್ದಾನೆ.

ಒಂದು ರೀತಿ ಸಾವಿರಕ್ಕೂ ಕಿ.ಮೀ.ಗಳ ಪ್ರಯಾಣ ಸಾಹಸವೇ ಸರಿ, ಸಾಂಪ್ರದಾಯಿಕ ಬೈಕ್ ಸಾಹಸಿಗರಿಗೂ ಒಂದು ರೀತಿ ಸವಾಲಿನ ಕೆಲಸವೇ ಅಂತಹದರದಲ್ಲಿ ಯಾವ ಅನುಭವವವೂ ಇಲ್ಲದೇ ಕೇವಲ ರಾಮನ ಸ್ಮರಣೆ ಮಾಡುತ್ತಾ ಈ ಯಾತ್ರೆಯನ್ನು ಶಿವಾನಂದ ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದು ಇನ್ನೊಂದು ವಿಶೇಷ.

ಹೆಗಲ ಮೇಲೆ ಶ್ರೀರಾಮನ ಭಾವಚಿತ್ರ ಇರುವ ಶಲ್ಯ, ಬೈಕ್ ಮೇಲೆ ಶ್ರೀರಾಮನ ಧ್ವಜ, ಹೃದಯದಲ್ಲಿ ರಾಮನ ಸ್ಮರಣೆ ಈ ಮೂರು ವಸ್ತುಗಳೊಂದಿಗೆ ಪರೀಟ ಅವರು ಭಕ್ತಿಯಾತ್ರೆಯನ್ನು ಆರಂಭಿಸಿದರು. ವಿಜಯಪುರ ನಗರದಿಂದ ಅಯೋಧ್ಯೆಯವರೆಗೆ ಮೂರು ದಿನಗಳಲ್ಲಿ ಬೈಕ್ ಮೇಲೆ ತಲುಪಿ ರಾಮನ ಆಶೀರ್ವಾದ ಪಡೆದು ಪುನೀತರಾಗಿದ್ದಾರೆ.

ವಿಜಯಪುರದಿಂದ ಅಯೋಧ್ಯೆಗೆ ಬೈಕ್‌ ಸವಾರಿ

ಅಯೋಧ್ಯೆಗೆ ಸಾಗಲು ಕರ್ನಾಟಕ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ರಾಜ್ಯಗಳನ್ನು ದಾಟಿ ಮುಂದೆ ಸಾಗಬೇಕು. ಈಗಿರುವ ಡಿಸ್ಕವರ್ ಬೈಕನ್ನೇ ಸರ್ವಿಸಿಂಗ್ ಮಾಡಿ ಸಜ್ಜು ಮಾಡಿದ್ದ ಶಿವಾನಂದ ಪರೀಟ ಸೊಲ್ಲಾಪೂರ, ತುಳಜಾಪೂರ, ನಾಂದೆಡ, ನಾಗಪೂರ, ಜಬಲ್‌ಪೂರ, ಗೋಪಾಲಗಂಜ್, ಗೋರಖಪುರ್ ಮಾರ್ಗವಾಗಿ ಹತ್ತಾರು ಊರುಗಳನ್ನು ಕ್ರಮಿಸಿ ಕೊನೆಗೆ ಅಯೋಧ್ಯೆ ತಲುಪಿದರು.

ಪ್ರತಿದಿನ ಸರಿಸುಮಾರು 500 ಕಿ.ಮೀ. ಬೈಕ್ ಓಡಿಸುವ ಗುರಿಯೊಂದಿಗೆ ಸಾಗುತ್ತಿದ್ದ ಅವರು 300 ರಿಂದ 350 ಕಿ.ಮೀ.ಬೈಕ್ ಓಡಿಸುತ್ತಿದ್ದರು. ಮಧ್ಯಾಹ್ನ ಸೂರ್ಯ ನೆತ್ತಿಯ ಮೇಲೆ ಇರುವ ಹೊತ್ತಿಗೆ ವಿಶ್ರಾಂತಿ ಮಾಡಿ ಸಂಜೆಯಾದೊಡನೆ ಮತ್ತೆ ಬೈಕ್ ಓಡಾಟ ಶುರು, ಅಂದರೆ ರಾತ್ರಿ 10 ಗಂಟೆಯವರೆಗೂ ನಿರಂತರವಾಗಿ ಬೈಕ್ ಓಡಿಸಿ ರಾತ್ರಿ ವಿಶ್ರಾಂತಿ, ಹಾಗೂ ಪುನ: ನಸುಕಿನ 6 ಗಂಟೆಯಿಂದ ಮತ್ತೆ ನಾಲ್ಕೈದು ಗಂಟೆಗಳ ನಿರಂತರ ಬೈಕ್ ಸಂಚಾರ. ಹೀಗೆ ಈ ದಿನಚರಿ ಆಧರಿಸಿ ಅವರ ಬೈಕ್ ಯಾತ್ರೆ ಆರಂಭವಾಗಿತ್ತು.

ರಾಮದರ್ಶನದ ಪುನೀತ ಭಾವ

ಅಯೋಧ್ಯೆ ನೋಡಿದಾಗ ನನಗೆ ಅಪಾರ ಸಂತೋಷವಾಯಿತು, ಸಾಕ್ಷಾತ್ ರಾಮನ ದರ್ಶನವಾದ ಅನುಭವ. ಪಾವನ ಭೂಮಿಯಲ್ಲಿ ನಡೆದಾಡಿದ ಅನುಭವ, ರಾಮನು ಜನಿಸಿದ ನೆಲದಲ್ಲಿ ನಾನಿರುವೆ ಎಂಬ ಸಂತೋಷ ನನಗೆ ದೊರಕಿದ್ದು ನನ್ನ ಪೂರ್ವಜನ್ಮದ ಪುಣ್ಯ. ಯಾತ್ರೆಯುದ್ದಕ್ಕೂ ಅನೇಕರು ನನಗೆ ಅಭೂತಪೂರ್ವ ಸ್ವಾಗತಿಸಿದರು. ಅಯೋಧ್ಯೆಯಲ್ಲಿಯೂ ಸಹ ಅನೇಕರು ನನ್ನ ಯಾತ್ರೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲಿನ ಅನೇಕ ಜನರು ಸಂತೋಷಭರಿತವಾಗಿ ನನ್ನ ಯಾತ್ರೆಯ ಬಗ್ಗೆ ಕೊಂಡಾಡಿದರು. ಇನ್ನೊಮ್ಮೆ ಈ ರೀತಿಯ ಯಾತ್ರೆ ಮಾಡುವ ಆಸೆ ಇದೆ ಎಂದು ಶಿವು ಪರೀಟ ಅನುಭವ ಹಂಚಿಕೊಂಡರು.

(ವರದಿ- ಸಮೀವುಲ್ಲಾ, ವಿಜಯಪುರ)

IPL_Entry_Point