ಕೆಂಪೇಗೌಡ ವಿಮಾನ ನಿಲ್ದಾಣ ಮಹಿಳೆಯರಿಗೆ ಸುರಕ್ಷಿತ ಅಲ್ಲವೇ, ರಾತ್ರಿ ಕ್ಯಾಬ್‌ ಚಾಲಕನೊಬ್ಬ ವಂಚಿಸಲು ನಡೆಸಿದ ಪ್ರಯತ್ನ ಹೇಗಿತ್ತು?
ಕನ್ನಡ ಸುದ್ದಿ  /  ಕರ್ನಾಟಕ  /  ಕೆಂಪೇಗೌಡ ವಿಮಾನ ನಿಲ್ದಾಣ ಮಹಿಳೆಯರಿಗೆ ಸುರಕ್ಷಿತ ಅಲ್ಲವೇ, ರಾತ್ರಿ ಕ್ಯಾಬ್‌ ಚಾಲಕನೊಬ್ಬ ವಂಚಿಸಲು ನಡೆಸಿದ ಪ್ರಯತ್ನ ಹೇಗಿತ್ತು?

ಕೆಂಪೇಗೌಡ ವಿಮಾನ ನಿಲ್ದಾಣ ಮಹಿಳೆಯರಿಗೆ ಸುರಕ್ಷಿತ ಅಲ್ಲವೇ, ರಾತ್ರಿ ಕ್ಯಾಬ್‌ ಚಾಲಕನೊಬ್ಬ ವಂಚಿಸಲು ನಡೆಸಿದ ಪ್ರಯತ್ನ ಹೇಗಿತ್ತು?

ಕೆಂಪೇಗೌಡ ವಿಮಾನ ನಿಲ್ದಾಣ ಮಹಿಳೆಯರಿಗೆ ಸುರಕ್ಷಿತ ಅಲ್ಲವೇ? ರಾತ್ರಿ ಕ್ಯಾಬ್‌ ಚಾಲಕನೊಬ್ಬ ಮಹಿಳೆಯೊಬ್ಬರಿಗೆ ವಂಚಿಸಲು ನಡೆಸಿದ ಪ್ರಯತ್ನ ಹೇಗಿತ್ತು? ತುರ್ತು ಸಹಾಯವಾಣಿಗೆ ಕರೆ ಮಾಡದಿದ್ದರೆ ಆ ಮಹಿಳೆ ಸ್ಥಿತಿ ಏನಾಗಿರುತ್ತಿತ್ತು? (ವರದಿ-ಎಚ್.ಮಾರುತಿ)

ಕೆಂಪೇಗೌಡ ವಿಮಾನ ನಿಲ್ದಾಣ ಮಹಿಳೆಯರಿಗೆ ಸುರಕ್ಷಿತ ಅಲ್ಲವೇ, ರಾತ್ರಿ ಕ್ಯಾಬ್‌ ಚಾಲಕನೊಬ್ಬ ವಂಚಿಸಲು ನಡೆಸಿದ ಪ್ರಯತ್ನ ಹೇಗಿತ್ತು?
ಕೆಂಪೇಗೌಡ ವಿಮಾನ ನಿಲ್ದಾಣ ಮಹಿಳೆಯರಿಗೆ ಸುರಕ್ಷಿತ ಅಲ್ಲವೇ, ರಾತ್ರಿ ಕ್ಯಾಬ್‌ ಚಾಲಕನೊಬ್ಬ ವಂಚಿಸಲು ನಡೆಸಿದ ಪ್ರಯತ್ನ ಹೇಗಿತ್ತು?

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಹಿಳೆಯರಿಗೆ ಸುರಕ್ಷಿತ ಅಲ್ಲ ಎಂದು ಇತ್ತೀಚೆಗೆ ಅಲ್ಲಿ ನಡೆದ ಘಟನೆಯೊಂದು ಸಾಬೀತುಪಡಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಕಲಿ ಕ್ಯಾಬ್‌ ಚಾಲಕನೊಬ್ಬ ಮಹಿಳೆಯೊಬ್ಬರನ್ನು ಸುಲಿಗೆ ಮಾಡಲು ಪ್ರಯತ್ನಿಸಿರುವ ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ಬಿಐಎಎಲ್‌ ನಲ್ಲಿ ಕ್ಯಾಬ್‌ ಹತ್ತಿದ ಮಹಿಳೆಯೊಬ್ಬರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮಹಿಳೆಯೊಬ್ಬರಿಗೆ ತುರ್ತಾಗಿ ಕ್ಯಾಬ್‌ ಅವಶ್ಯಕತೆ ಇರುವುದನ್ನು ಮನಗಂಡ ಕ್ಯಾಬ್‌ ಚಾಲಕ ಮಹಿಳೆ ಕಾಯ್ದಿರಿಸಿದ್ದ ಓಲಾದ ಅಧಿಕೃತ ಕ್ಯಾಬ್‌ ಚಾಲಕ ತಾನೇ ಎಂದು ನಂಬಿಸಿ ಹಣವನ್ನು ಸುಲಿಗೆ ಮಾಡಲು ಪ್ರಯತ್ನ ನಡೆಸಿದ್ದಾನೆ.

ಈತ ಅಧಿಕೃತ ಕ್ಯಾಬ್‌ ಚಾಲಕ ಅಲ್ಲ ಎನ್ನವುದನ್ನು ಮನಗಂಡ ಮಹಿಳೆ ಕೂಡಲೇ 112 ಗೆ ಕರೆ ಮಾಡಿದ್ದು, ಪೊಲೀಸರು ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಮಾನ ನಿಲ್ದಾಣವೇ ಅನುಮತಿ ನೀಡಿರುವ ಕ್ಯಾಬ್‌ ನಿಲ್ದಾಣದಲ್ಲಿರುವ ಕ್ಯಾಬ್‌ ನಲ್ಲಿ ಪ್ರಯಾಣ ಮಾಡಿದರೆ ಸುರಕ್ಷಿತವಾಗಿ ತಲುಪುತ್ತೇನೆ ಎಂಬ ಭಾವನೆ ಮಹಿಳೆಯಾಗಿದ್ದಾಗಿತ್ತು. ಮಹಿಳೆಯು ತಾನು ಮಿನಿ ಕ್ಯಾಬ್‌ ಬುಕ್ಕಿಂಗ್‌ ಮಾಡಿದ್ದೇನೆ ಎಂದು ಹೇಳಿದ್ದರೂ ಈ ಚಾಲಕ ತಾನೇ ಕರೆದೊಯ್ಯುವುದಾಗಿ ಹೇಳಿದ್ದಾನೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ -1 ರಲ್ಲಿ ತನಗಾದ ಕೆಟ್ಟ ಅನುಭವನ್ನು ಮಹಿಳೆ ಎಕ್ಸ್‌ ನಲ್ಲಿ ಬರೆದುಕೊಂಡಿದ್ದಾರೆ. ಒಂದು ವೇಳೆ ತಾನು 112 ಗೆ ಕರೆ ಮಾಡದಿದ್ದರೆ ಬಹುಶಃ ತಾನು ಈ ಬರಹವನ್ನು ಬರೆಯಲು ಇರುತ್ತಿರಲಿಲ್ಲವೇನೋ ಎಂದು ಹೇಳಿಕೊಂಡಿದ್ದಾರೆ.

ಅಧಿಕೃತ ಒಟಿಪಿ ಕೇಳದ ಚಾಲಕ

ಚಾಲಕ ನೀವು ಬುಕ್‌ ಮಾಡಿರುವ ಕ್ಯಾಬ್‌ ಎಂದು ಹೇಳಿದ ನಂತರ ಮಹಿಳೆ ಕಾರು ಹತ್ತಿದ್ದಾರೆ. ಆದರೆ ಚಾಲಕ ಅಧಿಕೃತ ಒಟಿಪಿಯನ್ನು ಕೇಳಲೇ ಇಲ್ಲ. ಮೇಲಾಗಿ ಆತನ ಮೊಬೈಲ್‌ ನಲ್ಲಿ ಓಲಾ ಆಪ್‌ ಇರಲೇ ಇಲ್ಲ. ಅಧಿಕೃತ ಆಪ್‌ ಕೆಲಸ ಮಾಡುತ್ತಿಲ್ಲ. ಆದ್ದರಿಂದ ನೀವು ಹೋಗಬೇಕಾಗಿರುವ ಸ್ಥಳವನ್ನು ನನ್ನ ಮೊಬೈಲ್‌ ಕಳುಹಿಸಿ ಎಂದು ನಂಬಿಸಿದ್ದಾನೆ. ಪ್ರಯಾಣ ಮುಂದುವರೆದಂತೆ ಚಾಲಕ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇರಿಸಿದ್ದಾನೆ. ಓಲಾ ಆಪ್‌ ತೋರಿಸುವ ಹಣಕ್ಕೆ ನಾನು ಡ್ರಾಪ್‌ ಆಗುವುದಿಲ್ಲ. ಬದಲಾಗಿ ತನ್ನ ಸ್ನೇಹಿತ ಇಥಿಯೋಸ್‌ ಕ್ಯಾಬ್‌ ನಲ್ಲಿ ನಿಮ್ಮನ್ನು ತಲುಪಿಸುತ್ತಾನೆ ಎಂದು ಹೇಳಿದ್ದಾನೆ. ತಾನು ಸುರಕ್ಷಿತವಾಗಿ ಪ್ರಯಾಣ ಮಾಡುತ್ತಿಲ್ಲ ಎನ್ನವುದನ್ನು ಅರಿತ ಮಹಿಳೆ ಈ ರೀತಿಯ ವರ್ತನೆ ಸರಿಯಲ್ಲ. ಬದಲಾಗಿ ತನ್ನನ್ನು ಮರಳಿ ವಿಮಾನ ನಿಲ್ದಾಣದ ಕ್ಯಾಬ್‌ ನಿಲ್ದಾಣಕ್ಕೆ ಬಿಡುವಂತೆ ಹೇಳಿದ್ದಾರೆ. ಆದರೆ ಚಾಲಕ ಆಕೆಯ ಮಾತನ್ನು ಕೇಳಿಸಿಕೊಳ್ಳದೆ ಮುಂದುವರೆದಿದ್ದಾನೆ.

ನಾನು ಅದೃಷ್ಟವಂತೆ ಎಂದಿರುವ ಮಹಿಳೆ

ನಂತರ ಪೆಟ್ರೋಲ್‌ ಬಂಕ್‌ ವೊಂದಕ್ಕೆ ಹೋಗಿ ದೀಸೆಲ್ ಗೆ 500 ರೂ,. ನೀಡುವಂತೆ ಬೇಡಿಕೆ ಇರಿಸಿದ್ದಾನೆ. ನಾನು ಸುರಕ್ಷಿತವಾಗಿ ಇಲ್ಲ ಎಂದು ಭಾವಿಸಿದ ಮಹಿಳೆ ಪೊಲೀಸರ ತುರ್ತು ಸಹಾಯಕ್ಕಾಗಿ 112 ಗೆ ಕರೆ ಮಾಡಿದ್ದಾರೆ. ಜೊತೆಗೆ ತನ್ನ ಕುಟುಂಬದ ಸದಸ್ಯರಿಗೂ ಕರೆ ಮಾಡಿದ್ದಾರೆ. ಪೊಲೀಸರಿಗೆ ಥ್ಯಾಂಕ್ಸ್‌ ಹೇಳಲೇಬೇಕು. ಅವರು ಕರೆ ಸ್ವೀಕರಿಸಿದ 20 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿ ವಾಹನ ಚಾಲಕನನ್ನು ಬಂಧಿಸಿದ್ದಾರೆ. ಆತ ಹೆಚ್ಚಿನ ಹಣವನ್ನು ಸುಲಿಗೆ ಮಾಡಲು ಈ ಕೆಲಸ ಮಾಡಿರಬೇಕು. ಇಲ್ಲವೇ ಆತನ ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಮೂಡಿರಬೇಕು. ರಾತ್ರಿ 11 ಗಂಟೆಯ ವೇಳೆಗೆ ನಾನು ಪಾರಾಗಿದ್ದೇನೆ ಎಂದರೆ ನಾನು ಅದೃಷ್ಟವಂತೆ ಎಂದು ಭಾವಿಸಿಕೊಳ್ಳುತ್ತೇನೆ ಎಂದೂ ಆ ಮಹಿಳೆ ಬರೆದುಕೊಂಡಿದ್ದಾರೆ.

Whats_app_banner