World EV Day: ಭಾರತಕ್ಕೆ ಆಗಮಿಸಲಿರುವ 10 ಎಲೆಕ್ಟ್ರಿಕ್‌ ಕಾರುಗಳಿವು, ವಿದ್ಯುತ್‌ ಕಾರುಪ್ರಿಯರು ಕಾದರೆ ಲಾಭವುಂಟು-automobile news world ev day 10 upcoming electric cars in india worth the wait maruti suzuki to mercedes benz pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  World Ev Day: ಭಾರತಕ್ಕೆ ಆಗಮಿಸಲಿರುವ 10 ಎಲೆಕ್ಟ್ರಿಕ್‌ ಕಾರುಗಳಿವು, ವಿದ್ಯುತ್‌ ಕಾರುಪ್ರಿಯರು ಕಾದರೆ ಲಾಭವುಂಟು

World EV Day: ಭಾರತಕ್ಕೆ ಆಗಮಿಸಲಿರುವ 10 ಎಲೆಕ್ಟ್ರಿಕ್‌ ಕಾರುಗಳಿವು, ವಿದ್ಯುತ್‌ ಕಾರುಪ್ರಿಯರು ಕಾದರೆ ಲಾಭವುಂಟು

World EV Day: ವಿಶ್ವ ಎಲೆಕ್ಟ್ರಿಕ್‌ ವಾಹನ ದಿನದ ಸಮಯದಲ್ಲಿ ಸಾಕಷ್ಟು ಎಲೆಕ್ಟ್ರಿಕ್‌ ಕಾರಿಗೆ ಶಿಫ್ಟ್‌ ಆಗುವ ಕುರಿತು ನಿರ್ಧಾರ ತೆಗೆದುಕೊಳ್ಳಬಹುದು. ಮುಂದಿನ 12 ತಿಂಗಳಿನಲ್ಲಿ ಮಾರುತಿ ಸುಜುಕಿಯಿಂದ ಮರ್ಸಿಡಿಸ್‌ ಬೆಂಝ್‌ವರೆಗೆ ನಿಮ್ಮ ಬಜೆಟ್‌ಗೆ ತಕ್ಕಂತೆ ವಿವಿಧ ವಿದ್ಯುತ್‌ ಕಾರುಗಳು ಭಾರತದ ರಸ್ತೆಗೆ ಆಗಮಿಸಲಿದೆ.

World EV Day: ಭಾರತಕ್ಕೆ ಆಗಮಿಸಲಿರುವ 10 ಎಲೆಕ್ಟ್ರಿಕ್‌ ಕಾರುಗಳಿವು
World EV Day: ಭಾರತಕ್ಕೆ ಆಗಮಿಸಲಿರುವ 10 ಎಲೆಕ್ಟ್ರಿಕ್‌ ಕಾರುಗಳಿವು

World EV Day: ಕಾರು ಕಂಪನಿಗಳೆಲ್ಲ ವಿದ್ಯುತ್‌ ಕಾರುಗಳತ್ತ ಗಮನಹರಿಸುತ್ತಿವೆ. 2025ರಲ್ಲಿ ಭಾರತದ ಎಲ್ಲಾ ಪ್ರಮುಖ ಕಾರು ತಯಾರಿಕಾ ಕಂಪನಿಗಳು ಎಲೆಕ್ಟ್ರಿಕ್‌ ವೆಹಿಕಲ್‌ ಹೊಂದಿರಲಿವೆ. ಪೆಟ್ರೋಲ್‌, ಡೀಸೆಲ್‌ಗೆ ದುಡ್ಡು ಹಾಕುವ ಬದಲು ಎಲೆಕ್ಟ್ರಿಕ್‌ ವಾಹನಗಳ ಬ್ಯಾಟರಿಯನ್ನು ಫುಲ್‌ ಚಾರ್ಜ್‌ ಮಾಡಿಕೊಂಡು ಹಾಯಾಗಿ ಪ್ರಯಾಣಿಸಲು ಬಯಸುವವರು ಮುಂದಿನ ಒಂದು ವರ್ಷದೊಳಗೆ ಆಗಮಿಸಲಿರುವ ಎಲೆಕ್ಟ್ರಿಕ್‌ ವಾಹನಗಳಿಗೆ ಕಾಯಬಹುದು. ಅಥವಾ ಈಗಾಗಲೇ ಮಾರುಕಟ್ಟೆಯಲ್ಲಿರುವ ಇವಿಗಳನ್ನು ಖರೀದಿಸಲು ಗಮನನೀಡಬಹುದು. ಜಗತ್ತಿನಾದ್ಯಂತ ವಾಯುಮಾಲಿನ್ಯ ಹೆಚ್ಚುತ್ತಿದ್ದು, ಪರಿಸರಕ್ಕೆ ಪೆಟ್ರೋಲ್‌, ಡೀಸೆಲ್‌ ವಾಹನಗಳು ಮಾಡುವ ಹಾನಿ ಅಷ್ಟಿಷ್ಟಲ್ಲ. ಓಝೋನ್‌ ಪದರಕ್ಕೂ ವಾಹನಗಳ ಹೊಗೆ ಕಂಟಕವಾಗಿದೆ. ಇಂತಹ ಸಮಯದಲ್ಲಿ ಭವಿಷ್ಯದ ತಲೆಮಾರಿಗೂ ಈ ಭೂಮಿ ಉಳಿಯಬೇಕೆಂಬ ಕಳಕಳಿಯಿಂದ ಸಾಕಷ್ಟು ಜನರು ಇವಿ ವಾಹನಗಳತ್ತ ಗಮನ ಹರಿಸುತ್ತಿದ್ದಾರೆ. ಬೆಂಗಳೂರು, ಮಂಗಳೂರು, ಮೈಸೂರು, ಹಾಸನ ಸೇರಿದಂತೆ ಕರ್ನಾಟಕದ ಹಲವು ನಗರಗಳಲ್ಲಿ ರಸ್ತೆಗಳಲ್ಲಿ ಎಲೆಕ್ಟ್ರಿಕ್‌ ಕಾರುಗಳು, ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಹೆಚ್ಚುತ್ತಿವೆ. ಸರಕಾರದ ಉಚಿತ ಕರೆಂಟ್‌ನಲ್ಲೂ ಈ ಇವಿಗಳನ್ನು ಓಡಿಸಬಹುದು. ಸರಕಾರ ನಿಗದಿಪಡಿಸಿದ ಯೂನಿಟ್‌ಗಿಂತ ಜಾಸ್ತಿ ವಿದ್ಯುತ್‌ ಖರ್ಚಾದರೆ ಮಾತ್ರ ಕರೆಂಟ್‌ ಬಿಲ್‌ ಕಟ್ಟಬೇಕಾಗಬಹುದು. ಸದ್ಯ ವಿಶ್ವ ಎಲೆಕ್ಟ್ರಿಕ್‌ ವೆಹಿಕಲ್‌ ದಿನದ ಅಂಗವಾಗಿ ಮುಂದಿನ 12 ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್‌ ಕಾರುಗಳನ್ನು ನೋಡೋಣ.

ಎಂಜಿ ವಿಂಡ್ಸರ್‌ ಇವಿ (MG Windsor EV)

ಜೆಎಸ್‌ಡಬ್ಲ್ಯು ಎಂಜಿ ಮೋಟಾರ್‌ ಕಂಪನಿಯು ಎಲೆಕ್ಟ್ರಿಕ್‌ ವೆಹಿಕಲ್‌ ವಿಂಡ್ಸರ್‌ ಇವಿಯನ್ನು ರಸ್ತೆಗಿಳಿಸಲು ಸಜ್ಜಾಗಿದೆ. ಬ್ರಿಟನ್‌ ಮೂಲದ ಈ ಕಾರು ಕಂಪನಿಯು ಭಾರತದಲ್ಲಿ ಮುಂದಿನ ದಿನಗಳಲ್ಲಿ ತನ್ನ ಮೂರನೇ ಇವಿ ಪರಿಚಯಿಸಲಿದೆ. ಇದೇ ಸೆಪ್ಟೆಂಬರ್‌ 11ರಂದು ವುಲಿಂಗ್‌ ಕ್ಲೌಡ್‌ ಇವಿ ಪರಿಚಯಿಸಲಿದೆ. ಇದಾದ ಬಳಿಕ ಕಾಮೆಟ್‌ ಇವಿ ಮತ್ತು ಝಡ್‌ಎಸ್‌ ಇವಿಯನ್ನು ಎಂಜಿ ಮೋಟಾರ್ಸ್‌ ಭಾರತದಲ್ಲಿ ಬಿಡುಗಡೆ ಮಾಡಲಿದೆ. ಒಂದು ಫುಲ್‌ ಚಾರ್ಜ್ನಲ್ಲಿ 460 ಕಿ.ಮೀ. ಓಡುವ ಸಾಮರ್ಥ್ಯವನ್ನು ವಿಂಡ್ಸರ್‌ ಇವಿ ಹೊಂದಿರುವ ಸೂಚನೆಗಳಿವೆ.

ಕಿಯಾ ಇವಿ9

ಕೊರಿಯಾದ ವಾಹನ ಕಂಪನಿ ಕಿಯಾ ಕೂಡ ಅಕ್ಟೋಬರ್‌ 3ರಂದು ಇವಿ9 ಎಂಬ ಮೂರು ಸಾಲುಗಳ ದೊಡ್ಡ ಗಾತ್ರದ ಎಲೆಕ್ಟ್ರಿಕ್‌ ಎಸ್‌ಯುವಿಯನ್ನು ಭಾರತದ ರಸ್ತೆಗೆ ಪರಿಚಯಿಸುವ ನಿರೀಕ್ಷೆಯಿದೆ. ಇದೇ ಸಮಯದಲ್ಲಿ ಕಂಪನಿಯು ಕಾರ್ನಿವಲ್‌ ಎಂಪಿವಿಯನ್ನೂ ಬಿಡುಗಡೆ ಮಾಡಲಿದೆ. ಇವಿ9 (Kia EV9) ಕೂಡ ಒಂದು ಪೂರ್ತಿ ಚಾರ್ಜ್‌ಗೆ 434 ಕಿ.ಮೀ. ದೂರ ಸಾಗಲಿದೆ. ಈ ಕಾರಿನಲ್ಲಿ ಎಡಿಎಎಸ್‌ ಫೀಚರ್‌ಗಳು ಸೇರಿದಂತೆ ಹಲವು ಫೀಚರ್‌ಗಳು ಇರಲಿವೆ. ಇದು ಕಂಪನಿಯ ದುಬಾರಿ ಎಲೆಕ್ಟ್ರಿಕ್‌ ವೆಹಿಕಲ್‌ ಆಗಿರಲಿದೆ.

ಬಿವೈಡಿ ಇ6

ಟೆಲ್ಸಾ ಬೆಂಬಲದ ಬಿವೈಡಿ ಕಾರು ಕಂಪನಿಯು ಭಾರತಕ್ಕೆ BYD e6 ಎಂಬ ಎಲೆಕ್ಟ್ರಿಕ್‌ ವೆಹಿಕಲ್‌ ಪರಿಚಯಿಸಲು ಸಿದ್ಧವಾಗಿದೆ. ಮುಂದಿನ ತಿಂಗಳು ಈ ಇವಿ ಆಗಮಿಸುವ ಸೂಚನೆಗಳಿವೆ. ಇದರಲ್ಲಿ 12.8 ಇಂಚಿನ ಫ್ಲೋಟಿಂಗ್‌ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್, 360-ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾ ಇತ್ಯಾದಿಗಳು ಇರಲಿವೆ. ಒಂದು ಫುಲ್‌ ಚಾರ್ಜ್‌ಗೆ ಸುಮಾರು 530 ಕಿ.ಮೀ. ಓಡುವ ಸಾಮರ್ಥ್ಯ ಇರಲಿದೆ.

ಮರ್ಸಿಡಿಸ್‌ ಇಕ್ಯುಜಿ/ಎಲೆಕ್ಟ್ರಿಕ್‌ ಜಿ ವ್ಯಾಗನ್‌

ಮರ್ಸಿಡಿಸ್‌ ಬೆಂಝ್‌ ಜಿ ಗ್ಲಾಸ್‌ ಎಲೆಕ್ಟ್ರಿಕ್‌
ಮರ್ಸಿಡಿಸ್‌ ಬೆಂಝ್‌ ಜಿ ಗ್ಲಾಸ್‌ ಎಲೆಕ್ಟ್ರಿಕ್‌

ಈಗಾಗಲೇ ಕಂಪನಿಯು ಮೆಬ್ಯಾಕ್‌ ಇಕ್ಯುಎಸ್‌ 680 ಅನ್ನು ಪರಿಚಯಿಸಿದೆ. ಇದು ಭಾರತದ ಅತ್ಯಧಿಕ ದುಬಾರಿಯ ಎಲೆಕ್ಟ್ರಿಕ್‌ ವಾಹನವಾಗಿದೆ. ಇದೀಗ ಕಂಪನಿಯು ಮರ್ಸಿಡಿಸ್‌ ಇಕ್ಯುಜಿ/ಎಲೆಕ್ಟ್ರಿಕ್‌ ಜಿ ವ್ಯಾಗನ್‌ ಎಲೆಕ್ಟ್ರಿಕ್‌ ವಾಹನ ಪರಿಚಯಿಸಲಿದೆ. ಇದು ಜಿ ಕ್ಲಾಸ್‌ ಎಸ್‌ಯುವಿ ಆಗಿರಲಿದೆ. ಇದು ಸಿಂಗಲ್‌ ಚಾರ್ಜ್‌ಗೆ 470 ಕಿ.ಮೀ. ಪ್ರಯಾಣಿಸಲಿದೆ.

ಟಾಟಾ ಹ್ಯಾರಿಯರ್‌ ಇವಿ

ಟಾಟಾ ಮೋಟಾರ್ಸ್‌ ಕಂಪನಿಯು ಭಾರತದ ಎಲೆಕ್ಟ್ರಿಕ್‌ 4 ಚಕ್ರಗಳ ವಾಹನಗಳ ವಿಭಾಗದಲ್ಲಿ ಲೀಡರ್‌ ಎನ್ನಬಹುದು. ಕಂಪನಿಯು ಮುಂದಿನ ಹನ್ನೆರಡು ತಿಂಗಳೊಳಗೆ ಹ್ಯಾರಿಯರ್‌ ಇವಿ ಪರಿಚಯಿಸಲಿದೆ. ಕಳೆದ ವರ್ಷ ವಾಹನ ಪ್ರದರ್ಶನದಲ್ಲಿ ಹ್ಯಾರಿಯರ್‌ ಇವಿಯನ್ನು ಪ್ರದರ್ಶಿಸಿತ್ತು. ಇದು ಪೂರ್ತಿ ಚಾರ್ಜ್‌ಗೆ 500 ಕಿ.ಮೀ. ಸಂಚರಿಸಲಿದೆ.

ಹ್ಯುಂಡೈ ಕ್ರೇಟಾ ಇವಿ

ಹ್ಯುಂಡೈ ಮೋಟಾರ್‌ ಕಂಪನಿಯು ಈ ಇವಿ ಆಟದಲ್ಲಿ ಪಾಲ್ಗೊಳ್ಳಲು ಉದ್ದೇಶಿಸಿದೆ. ತನ್ನ ಜನಪ್ರಿಯ ಕ್ರೇಟಾದ ಎಲೆಕ್ಟ್ರಿಕ್‌ ಆವೃತ್ತಿಯನ್ನು ಪರಿಚಯಿಸಲು ಉದ್ದೇಶಿಸಿದೆ. ಇದು 2025ರ ಭಾರತ್‌ ಮೊಬಿಲಿಟಿ ಎಕ್ಸ್‌ಪೋನಲ್ಲಿ ಬಿಡುಗಡೆಯಾಗುವ ಸೂಚನೆಯಿದೆ.

ಮಾರುತಿ ಇವಿಎಕ್ಸ್‌

ಮಾರುತಿ ಸುಜುಕಿಯು ತನ್ನ ಮುಂದಿನ ಇವಿಎಕ್ಸ್‌ ಎಲೆಕ್ಟ್ರಿಕ್‌ ವಾಹನವನ್ನು ಬಿಡುಗಡೆ ಮಾಡಲು ಉದ್ದೇಶಿಸಿದೆ. ಕಂಪನಿಯು ಕಳೆದ ವರ್ಷದ ಆಟೋಶೋನಲ್ಲಿ ಈ ಇವಿಎಕ್ಸ್‌ ಅನ್ನು ಅನಾವರಣ ಮಾಡಿತ್ತು. ಮುಂದಿನ ವರ್ಷದ ಆರಂಭದಲ್ಲಿ ಇವಿಎಕ್ಸ್‌ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಪೂರ್ತಿ ಚಾರ್ಜ್‌ಗೆ 500 ಕಿ.ಮೀ. ಚಲಿಸುವ ನಿರೀಕ್ಷೆಯಿದೆ.

ಮಹೀಂದ್ರ ಬಿಇ05

ಮಹೀಂದ್ರ ಕಂಪನಿಯು ತನ್ನ ಎರಡನೇ ಎಲೆಕ್ಟ್ರಿಕ್‌ ಎಸ್‌ಯುವಿ BE05 ಅನ್ನು ಮುಂದಿನ ವರ್ಷ ಬಿಡುಗಡೆ ಮಾಡಲಿದೆ. ಸಿಂಗಲ್‌ ಚಾರ್ಜ್‌ನಲ್ಲಿ ಬಿಒಎಸ್‌05 ಸುಮಾರು 500 ಕಿ.ಮೀ. ರೇಂಜ್‌ ಚಲಿಸುವ ಸಾಧ್ಯತೆಯಿದೆ.

ಫೋಕ್ಸ್‌ವ್ಯಾಗನ್‌ ಐಡಿ 4

ಫೋಕ್ಸ್‌ವ್ಯಾಗನ್‌ ಕಂಪನಿಯು ಭಾರತಕ್ಕೆ ತನ್ನ ಮೊದಲ ಎಲೆಕ್ಟ್ರಿಕ್‌ ವಾಹನವನ್ನು ಪರಿಚಯಿಸುವ ಕುರಿತು ಈಗಾಗಲೇ ಖಚಿತಗಗೊಳಿಸಿದೆ. ಈ ವರ್ಷದ ಕೊನೆಗೆ Volkswagen ID.4 ರಸ್ತೆಗಿಳಿಯಲಿದೆ. ಈ ಕಾರು ಕೂಡ ಫುಲ್‌ ಚಾರ್ಜ್‌ಗೆ 500 ಕಿ.ಮೀ. ರೇಂಜ್‌ ನೀಡುವ ನಿರೀಕ್ಷೆಯಿದೆ.

ಸ್ಕೋಡಾ ಇನ್ಯಾಕ್‌

ಜೆಕ್‌ ಗಣರಾಜ್ಯದ ವಾಹನ ಕಂಪನಿ ಸ್ಕೋಡಾ ಆಟೋ ಕೂಡ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್‌ ವಾಹನ ಪರಿಚಯಿಸಲು ಸಜ್ಜಾಗಿದೆ. ಭಾರತ್‌ ಗ್ಲೋಬಲ್‌ ಮೊಬಿಲಿಟಿ ಎಕ್ಸ್‌ಪೋನಲ್ಲಿ Enyaq electric SUV ಪ್ರದರ್ಶಿಸಲಾಗಿತ್ತು. ಇದು ಔಡಿ ಕ್ಯೂ4 ಇಟ್ರೋನ್‌, ಫೋಕ್ಸ್‌ವ್ಯಾಗನ್‌ ಐಡಿ4ನಂತಹ ಎಲೆಕ್ಟ್ರಿಕ್‌ ವಾಹನಗಳ ಜತೆ ಭಾರತದ ವಿದ್ಯುತ್‌ ವಾಹನ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸಲಿದೆ.

mysore-dasara_Entry_Point