ಯಾವುದೇ ಶಾಪ್‌ನಲ್ಲಿ ಓಲಾ ಸ್ಕೂಟರ್‌ ಖರೀದಿಸಬಹುದು, ಯಾವುದೇ ಗ್ಯಾರೇಜ್‌ನಲ್ಲಿ ರಿಪೇರಿ ಮಾಡಬಹುದು: ಭವಿಶ್‌ ಅಗರ್‌ವಾಲ್‌-automobile news any shop could sell an ola ev soon bhavish aggarwal announces ondc partnership pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಯಾವುದೇ ಶಾಪ್‌ನಲ್ಲಿ ಓಲಾ ಸ್ಕೂಟರ್‌ ಖರೀದಿಸಬಹುದು, ಯಾವುದೇ ಗ್ಯಾರೇಜ್‌ನಲ್ಲಿ ರಿಪೇರಿ ಮಾಡಬಹುದು: ಭವಿಶ್‌ ಅಗರ್‌ವಾಲ್‌

ಯಾವುದೇ ಶಾಪ್‌ನಲ್ಲಿ ಓಲಾ ಸ್ಕೂಟರ್‌ ಖರೀದಿಸಬಹುದು, ಯಾವುದೇ ಗ್ಯಾರೇಜ್‌ನಲ್ಲಿ ರಿಪೇರಿ ಮಾಡಬಹುದು: ಭವಿಶ್‌ ಅಗರ್‌ವಾಲ್‌

ಓಲಾ ಎಲೆಕ್ಟ್ರಿಕ್‌ ವಾಹನ ಮತ್ತು ಬಿಡಿಭಾಗಗಳನ್ನು ಶೀಘ್ರದಲ್ಲಿ ಈಗಿನ 800 ಎಕ್ಸ್‌ಪಿರಿಯನ್ಸ್‌ ಕೇಂದ್ರಗಳು ಮಾತ್ರವಲ್ಲದೆ ಇತರೆ ಶಾಪ್‌ಗಳಲ್ಲಿಯೂ ಖರೀದಿಸಲು ಸಾಧ್ಯವಾಗಲಿದೆ. ಒನ್‌ಡಿಸಿ ಪ್ಲಾಟ್‌ಫಾರ್ಮ್‌ನಲ್ಲಿ ಓಲಾ ಇವಿ ಪ್ರಾಡಕ್ಟ್‌ಗಳನ್ನು ಲಿಸ್ಟ್‌ ಮಾಡಲಾಗಿದೆ ಎಂದು ಓಲಾ ಸಹ ಸ್ಥಾಪಕ ಭವಿಶ್‌ ಅಗರ್‌ವಾಲ್‌ ಹೇಳಿದ್ದಾರೆ.

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌
ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌

ಬೆಂಗಳೂರು: ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಇನ್ನು ಮುಂದೆ ಯಾವುದೇ ಶಾಪ್‌ ಕೂಡ ಮಾರಾಟ ಮಾಡಬಹುದು. ಯಾವುದೇ ಶಾಪ್‌ ಅಂದ್ರೆ ನಮ್ಮ ಮನೆಯ ಪಕ್ಕದ ದಿನಸಿ ಶಾಪ್‌ಗಳಲ್ಲಿಯೂ ಮಾರಾಟ ಮಾಡಬಹುದು ಎಂದಲ್ಲ. ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒನ್‌ಡಿಸಿ) ಜೊತೆ ಓಲಾ ಕಂಪನಿಯು ಪಾಲುದಾರಿಕೆ ಮಾಡಿಕೊಂಡಿದ್ದು, ಒಎನ್‌ಡಿಸಿ ನೆಟ್‌ವರ್ಕ್‌ನ ಎಲ್ಲಾ ಶಾಪ್‌ಗಳಲ್ಲಿಯೂ ಮಾರಾಟ ಮಾಡಲು ಅವಕಾಶ ಇರುತ್ತದೆ. ಗ್ರಾಹಕರು ಓಪನ್‌ ಸೋರ್ಸ್‌ ಪ್ಲಾಟ್‌ಫಾರ್ಮ್‌ಗಳ ಮೂಲಕ ನೇರವಾಗಿ ಬಿಡಿಭಾಗಗಳನ್ನು ಖರೀದಿಸಬಹುದಾಗಿದೆ.

ಲೋಕಲ್‌ ಗ್ಯಾರೇಜ್‌ನಲ್ಲೂ ರಿಪೇರಿ ಮಾಡಬಹುದು

ಗ್ರಾಹಕರು ತಮ್ಮ ಎಲೆಕ್ಟ್ರಿಕ್‌ ವಾಹನವನ್ನು ಕಂಪನಿಯ ಸರ್ವೀಸ್‌ ಸ್ಟೇಷನ್‌ಗಳಲ್ಲಿ ಮಾತ್ರವಲ್ಲದೆ ಸ್ಥಳೀಯ ಗ್ಯಾರೇಜ್‌ಗಳಲ್ಲಿಯೂ ರಿಪೇರಿ ಮಾಡಬಹುದು ಎಂದು ಅಗರ್‌ವಾಲ್‌ ಅಭಿಪ್ರಾಯಪಟ್ಟಿದ್ದಾರೆ. ಓಲಾದ 800 ಎಕ್ಸ್‌ಪಿರಿಯನ್ಸ್‌ ಸೆಂಟರ್‌ಗಳು ಮಾತ್ರವಲ್ಲದೆ ಯಾವುದೇ ಶಾಪ್‌ಗಳಲ್ಲಿಯೂ ಓಲಾ ಎಲೆಕ್ಟ್ರಿಕ್‌ ವಾಹನಗಳನ್ನು ಮಾರಾಟ ಮಾಡಬಹುದು ಎಂದು ಹೇಳಿದ್ದಾರೆ. ಓಲಾ ಪ್ರಾಡಕ್ಟ್‌ಗಳು ಈಗ ಒಎನ್‌ಡಿಸಿ ಪ್ಲಾಟ್‌ಫಾರ್ಮ್‌ನಲ್ಲಿ ಲಿಸ್ಟ್‌ ಆಗಿರುವ ಕಾರಣ ಇದು ಸಾಧ್ಯವಾಗಲಿದೆ ಎಂದು ಭವಿಶ್‌ ಅಗರ್‌ವಾಲ್‌ ಹೇಳಿದ್ದಾರೆ.

ಈ ಕುರಿತು ಭವಿಶ್‌ ಅಗರ್ವಾಲ್‌ ಎಕ್ಸ್‌ನಲ್ಲಿ (ಹಳೆಯ ಟ್ವಿಟ್ಟರ್‌) ಪೋಸ್ಟ್‌ ಮಾಡಿದ್ದಾರೆ. "ಮುಂದಿನ ವಾರದ ಬಳಿಕ ಎಲ್ಲಾ ಓಲಾ ಎಲೆಕ್ಟ್ರಿಕ್‌ ಪ್ರಾಡಕ್ಟ್‌ಗಳು ಒಎನ್‌ಜಿಸಿಯಲ್ಲಿ ಲಭ್ಯವಿರಲಿದೆ" ಎಂದು ಪೋಸ್ಟ್‌ ಮಾಡಿದ್ದಾರೆ. "ಇದರ ಅರ್ಥ ಏನೆಂದರೆ, ಶಾಪ್‌ ಹೊಂದಿರುವ ಯಾರೇ ಬೇಕಾದರೂ ಇನ್ಮುಂದೆ ಓಲಾ ಎಲೆಕ್ಟ್ರಿಕ್‌ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಬಹುದು. ಇಲ್ಲಿಯವರೆಗೆ ನಾವು 800 ಒಡಿಡಿ ಕಂಪನಿಗಳು ಹೊಂದಿರುವ ಸ್ಟೋರ್‌ಗಳನ್ನು ಸೇರಿಸಿದ್ದೇವೆ. ಇನ್ಮುಂದೆ ಭಾರತದಲ್ಲಿರುವ ಯಾರು ಬೇಕಾದರೂ ಓಲಾ ಸ್ಕೂಟರ್‌ಗಳನ್ನು ಮಾರಾಟ ಮಾಡುವಂತೆ ಮಾಡುವ ಎಕ್ಸ್‌ಕ್ಲೂಸಿವ್‌ ಡೀಲರ್‌ಶಿಪ್‌ಗಳನ್ನು ಆರಂಭಿಸಲಿದ್ದೇವೆ" ಎಂದು ಅವರು ಹೇಳಿದ್ದಾರೆ.

ಮುಂದಿನ ವಾರದಿಂದ ಓಲಾ ಎಲೆಕ್ಟ್ರಿಕ್‌ ಕಂಪನಿಯ ಎಸ್‌1 ಎಕ್ಸ್‌, ಎಸ್‌1 ಏರ್‌, ಎಸ್‌1 ಪ್ರೊ ಸ್ಕೂಟರ್‌ಗಳು ಒಎನ್‌ಡಿಸಿಯಲ್ಲಿ ಲಭ್ಯವಿರಲಿದೆ. ಇದರಿಂದ ಸ್ಕೂಟರ್‌ ಮಾರಾಟ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಗ್ರಾಹಕರಿಗೂ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿ ಸುಲಭವಾಗಲಿದೆ.

ಕಂಪನಿಯು ತನ್ನ ವಾರ್ಷಿಕ ಕಾರ್ಯಕ್ರಮ "ಸಂಕಲ್ಪ್‌ 2024"ರಲ್ಲಿ ಹೊಸ ರೋಡ್‌ಸ್ಟೆರ್‌ ಸರಣಿಯ ಸ್ಕೂಟರ್‌ಗಳನ್ನು ಪರಿಚಯಿಸಿತ್ತು. ಕಂಪನಿಯು ರೋಡ್‌ಸ್ಟಾರ್‌ ಎಕ್ಸ್‌ ಪರಿಚಯಿಸಿದೆ. ಇದಾದ ಬಳಿಕ ರೋಡ್‌ಸ್ಟೆರ್‌ ಮತ್ತು ರೋಡ್‌ಸ್ಟೆರ್‌ ಪ್ರೊ ಪರಿಚಯಿಸಿದೆ. ಇವುಗಳ ಎಕ್ಸ್‌ ಶೋರೂಂ ದರ 74,999 ರೂನಿಂದ ಆರಂಭವಾಗುತ್ತದೆ.