ಕಿಯಾ ಸೊನೆಟ್-ಮಹೀಂದ್ರಾ ಎಕ್ಸ್‌ಯುವಿ300 ಎರಡರಲ್ಲಿ ಯಾವುದು ನಿಮ್ಮ ಆಯ್ಕೆ -Kia Sonet vs Mahindra XUV300
ಕನ್ನಡ ಸುದ್ದಿ  /  ಜೀವನಶೈಲಿ  /  ಕಿಯಾ ಸೊನೆಟ್-ಮಹೀಂದ್ರಾ ಎಕ್ಸ್‌ಯುವಿ300 ಎರಡರಲ್ಲಿ ಯಾವುದು ನಿಮ್ಮ ಆಯ್ಕೆ -Kia Sonet Vs Mahindra Xuv300

ಕಿಯಾ ಸೊನೆಟ್-ಮಹೀಂದ್ರಾ ಎಕ್ಸ್‌ಯುವಿ300 ಎರಡರಲ್ಲಿ ಯಾವುದು ನಿಮ್ಮ ಆಯ್ಕೆ -Kia Sonet vs Mahindra XUV300

Kia Sonet vs Mahindra XUV300: ಕಿಯಾ ಸೊನೆಟ್ vs ಮಹೀಂದ್ರಾ ಎಕ್ಸ್‌ಯುವಿ300 ಎರಡುಲ್ಲಿ ನಿಮ್ಮ ಆಯ್ಕೆ ಯಾವುದಾಗಿರಲಿದೆ. ಈ ಕಾರುಗಳ ಬೆಲೆ, ವೈಶಿಷ್ಟ್ಯಗಳನ್ನು ತಿಳಿಯಿರಿ.

ಕಿಯಾ ಸೊನೆಟ್ vs ಮಹೀಂದ್ರಾ ಎಕ್ಸ್‌ಯುವಿ300 ಎರಡುಲ್ಲಿ ನಿಮ್ಮ ಆಯ್ಕೆ ಯಾವುದಾಗಿರಲಿದೆ. ಈ ಕಾರುಗಳ ಬೆಲೆ, ವೈಶಿಷ್ಟ್ಯಗಳನ್ನು ತಿಳಿಯಿರಿ.
ಕಿಯಾ ಸೊನೆಟ್ vs ಮಹೀಂದ್ರಾ ಎಕ್ಸ್‌ಯುವಿ300 ಎರಡುಲ್ಲಿ ನಿಮ್ಮ ಆಯ್ಕೆ ಯಾವುದಾಗಿರಲಿದೆ. ಈ ಕಾರುಗಳ ಬೆಲೆ, ವೈಶಿಷ್ಟ್ಯಗಳನ್ನು ತಿಳಿಯಿರಿ.

ಬೆಂಗಳೂರು: ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕಾಂಪ್ಯಾಕ್ಟ್‌ ಎಸ್‌ಯುವಿಗಳಲ್ಲಿ ಕಿಯಾ ಸೊನೆಟ್ ಕೂಡ ಒಂದಾಗಿದೆ. ಸೆಲ್ಟೋಸ್ ಸಕ್ಸಸ್ ನಂತರ ದಿಗ್ಗಜ ಆಟೊಮೊಬೈಲ್ ಕಂಪನಿ ಕಿಯಾ ಈ ಮಾಡೆಲ್ ಕಾರನ್ನು ಭಾರತದಲ್ಲಿ ಪರಿಚಯಿಸಿದೆ. ಈ ವರ್ಷದ ಜನವರಿಯಲ್ಲಿ ಕಿಯಾ ಸೊನೆಟ್ ಫೇಸ್‌ಲಿಫ್ಟ್ ಎಡಿಷನ್ ಅನ್ನು ಬಿಡುಗಡೆ ಮಾಡಿತ್ತು. ಇದರಿಂದಾಗಿ ಸಬ್ ಕಾಂಪ್ಯಾಕ್ಟ್‌ ಎಸ್‌ಯುವಿ ವಿಭಾಗದಲ್ಲಿ ಪೈಪೋಟಿ ಹೆಚ್ಚಿದೆ. ಇದಕ್ಕಿಂತ ಮುಖ್ಯವಾಗಿ ಮಹೀಂದ್ರಾ ಎಕ್ಸ್‌ಯುವಿ300 ಹಾಗೂ ಕಿಯಾ ಸೊನೆಟ್ (Kia Sonet vs Mahindra XUV300) ನಡುವೆ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಈ ಎರಡಲ್ಲಿ ಯಾವುದನ್ನು ಖರೀದಿಸಬೇಕು ಎಂದು ಗ್ರಾಯಕರು ಯೋಚಿಸುವಂತಾಗಿದೆ.

ಇವರೆಡು ಕಾರುಗಳಲ್ಲಿ ಯಾವುದು ಬೆಸ್ಟ್? ಯಾವುದನ್ನ ಖರೀದಿಸಿದರೆ ಹೆಚ್ಚು ಅನುಕೂಲ, ಉಳಿತಾಯವಾಗಲಿದೆ ಅನ್ನೋದರ ವಿವರಗಳನ್ನು ಇಲ್ಲಿ ತಿಳಿಯೋಣ. ಬೆಲೆ, ವಿಶೇಷ ಹಾಗೂ ವೈಶಿಷ್ಟ್ಯಗಳ ಆಧಾರದ ಮೇಲೆ ಕಿಯಾ ಸೊನೆಟ್ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ನಡುವಿನ ವ್ಯತ್ಯಾಸವನ್ನು ನೋಡೋಣ.

ಕಿಯಾ ಸೊನೆಟ್ ಎಸ್‌ಯುವಿ ಕಾರಿನ ವೈಶಿಷ್ಟ್ಯಗಳು

ಕಿಯಾ ಸೊನೆಟ್ ಎಸ್‌ಯುವಿ ಪೆಟ್ರೋಲ್ ಇಂಜಿನ್ ಮತ್ತು ಒಂದು ಡೀಸೆಲ್ ಇಂಜಿನ್ ಆಯ್ಕೆಯನ್ನು ಹೊಂದಿದೆ. ಪೆಟ್ರೋಲ್ ಶ್ರೇಣಿಯ 1.2 ಲೀಟರ್ ಯೂನಿಟ್ ಮತ್ತು 1.0 ಲೀಟರ್ ಟರ್ಬೋಚಾರ್ಜ್ಡ್ ಇಂಜಿನ್ ಅನ್ನು ಒಳಗೊಂಡಿದೆ. 1.2 ಲೀಟರ್ ಪೆಟ್ರೋಲ್ ಇಂಜಿನ್ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಇದು 82 ಬಿಎಚ್‌ಪಿ ಪವರ್ ಮತ್ತು 115 ಎನ್‌ಎಂ ಟಾರ್ಕ್‌ ಅನ್ನು ಉತ್ಪಾದಿಸುತ್ತದೆ.

ಮತ್ತೊಂದೆಡೆ 1.0 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಇಂಜಿನ್ ಅನ್ನು 6-ಸ್ಪೀಡ್ ಐಎಂಟಿ ಅಥವಾ 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ಗೆ ಕನೆಕ್ಟ್ ಆಗಿರುತ್ತದೆ. ಈ ಇಂಜಿನ್ ಗರಿಷ್ಠ 118 ಬಿಎಚ್‌ಪಿ ಪವರ್ ಮತ್ತು 172 ಎನ್‌ಎಂ ಟಾರ್ಕ್‌ ಅನ್ನು ಉತ್ಪಾದಿಸುತ್ತದೆ. ಸೊನೆಟ್ ಡೀಸೆಲ್ ವೇರಿಯಂಟ್ 114 ಪವರ್ ಮತ್ತು 250 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್, 60ಸ್ಪೀಡ್ ಐಎಂಟಿ ಅಥವಾ 6-ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬಂದಿದೆ.

ಮಹೀಂದ್ರಾ ಎಕ್ಸ್‌ಯುವಿ300 ಕಾರಿನ ವೈಶಿಷ್ಟ್ಯಗಳು

ಮಹೀಂದ್ರಾ ಎಕ್ಸ್‌ಯುವಿ300 ಎರಡು ಪೆಟ್ರೋಲ್ ಇಂಜಿನನ್ ಮತ್ತು ಒಂದು ಡೀಸೆಲ್ ಇಂಜಿನ್ ಆಯ್ಕೆಗಳಿವೆ. ಇದರಲ್ಲಿ 1.2 ಲೀಟರ್ ಟರ್ಬೊ ಪೆಟ್ರೋಲ್ ಇಂಜಿನ್ ಗರಿಷ್ಠ 108 ಪಿಎಚ್‌ಪಿ ಮತ್ತು 200 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಇಂಜಿನ್ 128 ಬಿಎಚ್‌ಪಿ ಪವರ್ ಮತ್ತು 250 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೀಸೆಲ್ ವೇರಿಯಂಟ್ 1.5 ಲೀಟರ್ ಟರ್ಬೋಚಾರ್ಜ್ಡ್ ಯುನಿಟ್‌ನಿಂದ ಚಾಲಿತವಾಗಿದ್ದು, ಅದು 115 ಬಿಎಚ್‌ಪಿ ಪವರ್ ಮತ್ತು 300 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಕ್ಸ್‌ಯುವಿ300 6-ಸ್ಪೀಟ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಎಟಿಎಂ ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿದೆ.

ಮಹೀಂದ್ರಾ ಎಕ್ಸ್‌ಯುವಿ300 ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ರೈನ್ ಸೆನ್ಸಿಂಗ್ ವೈಪರ್‌ಗಳು, ಆಟೊಮ್ಯಾಟಿಕ್ ಹೆಡ್‌ ಲ್ಯಾಂಪ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್ ಹಾಗೂ ಇತರೆ ವೈಶಿಷ್ಯಗಳನ್ನುು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಇದು ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳು, ಇಬಿಡಿದೊಂದಿಗೆ ಎಬಿಎಸ್, ಹಿಲ್-ಹೋಲ್ಡ್ ಅಸಿಸ್ಟ್‌ನೊಂದಿಗೆ ಇಎಸ್‌ಪಿ ಮತ್ತು ಎಲ್ಲಾ ವೇರಿಯಂಟ್‌ಗಳಲ್ಲಿ ಪ್ರಮಾಣಿತ ತ್ರಿ-ಪಾಯಿಂಟ್ ಸೀಟ್‌ ಬೆಲ್ಟ್‌ಗಳನ್ನು ಹೊಂದಿದೆ.

ಎಕ್ಸ್‌ಯುವಿ 300 ಅತಿ ಶೀಘ್ರದಲ್ಲೇ ಫೇಸ್‌ಲಿಫ್ಟ್ ಎಡಿಷನ್ ಪಡೆಯಲಿದೆ ಎಂದು ವರದಿಯಾಗಿದೆ. ಅಪ್ಡೇಟ್‌ ಮಾದರಿಗಳು ಎಡಿಎಎಸ್ ವೈಸಿಷ್ಟ್ಯಗಳು, ಹೊಸದಾದ ಬೃಹತ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆಂಬಿಯೆಂಟ್ ಲೈಟಿಂಗ್, ವೆಂಟಿಲೇಟೆಡ್ ಸೀಟ್‌ಗಳು, 360 ಡಿಗ್ರಿ ಕ್ಯಾಮೆರಾ ಹಾಗೂ ಇನ್ನೂ ಹಲವು ವೈಶಿಷ್ಟ್ಯಗಳು ಇರಲಿವೆ ಎಂದು ಹೇಳಲಾಗುತ್ತಿದೆ.

ಕಿಯಾ ಸೊನೆಟ್‌ ಲೆವೆಲ್ 1 ಎಡಿಎಎಸ್ ಹೊಸ ಫೀಚರ್‌ಗಳನ್ನು ಪರಿಚಯಿಸಿದೆ. ಕಿಯಾ ಫಾರ್ವರ್ಡ್ ಕೊಲಿಶನ್ ವಾರ್ನಿಂಗ್, ಲೇನ್‌ ಕೀಪ್ ಅಸಿಸ್ಟ್, ಲೇನ್ ಡಿಪಾರ್ಚರ್ ಅಸಿಸ್ಟ್, ಡ್ರೈವರ್ ಅಟೆನ್ಷನ್ ವಾರ್ನಿಂಗ್, ಆಟೊ ಹೈ ಬೀಮ್, ಲೀಡಿಂಗ್ ವೆಹಿಕಲ್ ಡಿಪಾರ್ಚರ್ ಅಲರ್ಟ್ ಹಾಗೂ ಫಾರ್ವರ್ಡ್ ಡಿಕ್ಕಿಶನ್ ಅವಾಯ್ಡೆನ್ಸ್ ಅಸಿಸ್ಟ್ ಅನ್ನು ಸೇರಿಸಿದೆ. ಇದರ ಜೊತೆಗೆ ಕಿಯಾ ಸೊನೆಟ್ ಅನ್ನು ಹಿಂಭಾಗದಲ್ಲಿ ಲೈಟ್ ಬಾರ್, ಸೆಲ್ಟೋಸ್‌ನಲ್ಲಿ ಕಂಡಬರುವ ಸುಧಾರಿತ ಆಲ್‌-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಅಪ್ಡೇಟ್ ಮಾಡಿದೆ.

ಕಿಯಾ ಸೊನೆಟ್ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳ ಬೆಲೆ

ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‌ಯುವಿಯ ಎಕ್ಸ್‌ ಶೋ ರೂಂ ಬೆಲೆ 7.99 ಲಕ್ಷ ರೂಪಾಯಿಯಿಂದ 14.69 ಲಕ್ಷ ರೂಪಾಯಿ ರೂಪಾಯಿವರೆಗೆ ಇದೆ. ಮಹೀಂದ್ರಾ ಎಕ್ಸ್‌ಯುವಿ300 ಕಾರಿನ ಎಕ್ಸ್‌ ಶೋರೂಂ ಬೆಲೆ 7.99 ಲಕ್ಷ ರೂಪಾಯಿಯಿಂದ 13 ಲಕ್ಷ ರೂಪಾಯಿವೆಗೆ ಇದೆ. ಈ ಎರಡೂ ಎಸ್‌ಯುವಿಗಳ ಆರಂಭಿಕ ಬೆಲೆ ಒಂದೇ ಆಗಿದ್ದರೂ ಸೊನೆಟ್‌ನ ಟಾಪ್‌ ಎಂಡ್ ವೇರಿಯಂಟ್‌ನ ಬೆಲೆ ಮಹೀಂದ್ರಾ ಎಕ್ಸ್‌ಯುವಿ300 ಟಾಪ್‌ ಎಂಡ್ ವೇರಿಯಂಟ್‌ಗಿಂತ ಸ್ವಲ್ಪ ಜಾಸ್ತಿ ಇದೆ. ಎರಡೂ ಕಾರುಗಳ ಈ ವೈಶಿಷ್ಟ್ಯಗಳೊಂದಿಗೆ ಆಸಕ್ತ ಗ್ರಾಹಕರು ತಮಗೆ ಯಾವುದು ಬೇಕು ಎಂಬುದನ್ನು ನೀವೇ ನಿರ್ಧಾರಿಸಿಕೊಳ್ಳಿ.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner