ಫ್ರೀಡಂ 125, ಪಲ್ಸರ್ ಬೈಕ್‌ಗಳಿದ್ದರೆ ಬಜಾಜ್ ಆಟೋಗೆ ಚಿಂತೆಯಿಲ್ಲ; ಸೆಪ್ಟೆಂಬರ್‌ನಲ್ಲಿ ಭರ್ಜರಿ ದ್ವಿಚಕ್ರವಾಹನ ಮಾರಾಟ
ಸೆಪ್ಟೆಂಬರ್ ತಿಂಗಳಲ್ಲಿ ಬಜಾಜ್ ಆಟೋ ಕಂಪನಿಯ ದ್ವಿಚಕ್ರ ವಾಹನ ಮಾರಾಟ ಶೇಕಡ 22ರಷ್ಟು ಏರಿಕೆ ಕಂಡಿದೆ. ದೇಶದ ವಾಹನ ಮಾರಾಟ ಶೇಕಡ 28ರಷ್ಟು ಏರಿಕೆ ಕಂಡಿದೆ. ರಫ್ತು ಶೇಕಡ 13ರಷ್ಟು ಏರಿಕೆ ಕMಡಿದೆ. ಈ ಸಮಯದಲ್ಲಿ ವಾಣಿಜ್ಯ ವಾಹನಗಳ ಮಾರಾಟ ಶೇಕಡ 55ರಷ್ಟು ಮತ್ತು ರಫ್ತು ಶೇಕಡ 15ರಷ್ಟು ಏರಿಕೆ ಕಂಡಿದೆ.
ಬೆಂಗಳೂರು: ಬಜಾಜ್ ಆಟೋ ತಮ್ಮ ದ್ವಿಚಕ್ರ ವಾಹನ ವಿಭಾಗವು ಮಾರಾಟದಲ್ಲಿ ಶೇಕಡಾ 22 ಏರಿಕೆ ದಾಖಲಿಸಿದೆ ಎಂದು ತಿಳಿಸಿದೆ. ಇದೇ ಸಮಯದಲ್ಲಿ ವಾಣಿಜ್ಯ ವಿಭಾಗದಲ್ಲಿ ಮಾರಾಟವು ಶೇ 6 ರಷ್ಟು ಬೆಳವಣಿಗೆಯನ್ನು ಕಂಡಿದೆ. ಒಟ್ಟಾರೆ ಕಂಪನಿಯ ವಾಹನ ಮಾರಾಟ ಸೆಪ್ಟೆಂಬರ್ ತಿಂಗಳಲ್ಲಿ ಶೇಕಡ 20 ಪ್ರಗತಿ ಕಂಡಿದೆ. ವರ್ಷದಿಂದ ವರ್ಷಕ್ಕೆ ಕಂಪನಿಯ ಪ್ರಗತಿ ಶೇಕಡ 12ರಷ್ಟಿದೆ.
ಬಜಾಜ್ ಆಟೋ ಕಂಪನಿಯ ಬೈಕ್‌ಗಳಿಗೆ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸೆಪ್ಟೆಂಬರ್‌ನ ಒಟ್ಟು ಮಾರಾಟ ಶೇಕಡಾ 20ರಷ್ಟು ಹೆಚ್ಚಾಗಿದೆ. ದ್ವಿಚಕ್ರ ವಾಹನಗಳ ದೇಶೀಯ ಮಾರಾಟವು ಶೇಕಡಾ 28 ರಷ್ಟು ಗಮನಾರ್ಹ ಬೆಳವಣಿಗೆ ದಾಖಲಿಸಿದೆ. ವಾಹನ ರಫ್ತು ಶೇಕಡ 13ರಷ್ಟು ಹೆಚ್ಚಾಗಿದೆ. ವಾಣಿಜ್ಯ ವಾಹನಗಳ ದೇಶೀಯ ಮತ್ತು ರಫ್ತು ಎರಡೂ ಉತ್ತಮವಾಗಿದೆ. ಅಂದರೆ, ದೇಶದಲ್ಲಿ ವಾಣಿಜ್ಯ ವಾಹನಗಳ ಮಾರಾಟ ಶೇಕಡ 4ರಷ್ಟು ಮತ್ತು ರಪ್ತು ಶೇಕಡ 16ರಷ್ಟು ಹೆಚ್ಚಾಗಿದೆ.
ಈ ಸಮಯದಲ್ಲಿ ಕಂಪನಿಯ ಫ್ರೀಡಂ 125, ಪಲ್ಸರ್ ಬೈಕ್‌ಗಳ ಮಾರಾಟ ಗಮನಾರ್ಹವಾಗಿ ಹೆಚ್ಚಾಗಿದೆ. ಇವೆರಡು ದ್ವಿಚಕ್ರವಾಹನಗಳ ಮಾರಾಟವು ಕಂಪನಿಗೆ ಬಲ ತುಂಬಿವೆ.
ಬಜಾಜ್ ಆಟೋ ಪಲ್ಸರ್ ಬೈಕ್‌ಗೆ ದಸರಾ ಆಫರ್ ಪ್ರಕಟಿಸಿದೆ. ಸುಮಾರು 10 ಸಾವಿರ ರೂಪಾಯಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. ಹಬ್ಬದ ಋತುವಿನಲ್ಲಿ ಗ್ರಾಹಕರ ಖರೀದಿಯನ್ನು ಉತ್ತೇಜಿಸಲು ಆಫರ್ ನೀಡಲಾಗಿದೆ ಎಂದು ಕಂಪನಿ ತಿಳಿಸಿದೆ.
ಪಲ್ಸರ್ 125 ಕಾರ್ಬನ್ ಫೈಬರ್, ಎನ್‌ಎಸ್ 125, ಎನ್ 150, ಪಲ್ಸರ್ 150, ಎನ್ 160, ಎನ್‌ಎಸ್ 160, ಎನ್‌ಎಸ್ 200, ಮತ್ತು ಎನ್ 250 ಬೈಕ್‌ಗಳ ಖರೀದಿಗೆ 5 ಸಾವಿರ ರೂಪಾಯಿಯಷ್ಟು ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ನೀಡಿದೆ. ಇದೇ ಸಮಯದಲ್ಲಿ ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಮೂಲಕ ಇಎಂಐ ಮಾಡಿಕೊಂಡವರಿಗೆ 5 ಸಾವಿರ ರೂಪಾಯಿ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಕೂಡ ದೊರಕುತ್ತದೆ.
ಇಷ್ಟು ಮಾತ್ರವಲ್ಲದೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸುವವರಿಗೆ ಇನ್ನಷ್ಟು ಆಫರ್‌ಗಳನ್ನು ಕಂಪನಿ ನೀಡುತ್ತಿದೆ.