ಕನ್ನಡ ಸುದ್ದಿ  /  Lifestyle  /  Automobile News Hyundai Creta N Line Suv Launch On March 11 Book This Car By Following This Steps Rmy

ಹುಂಡೈ ಕ್ರೆಟಾ ಎನ್‌ ಲೈನ್ ಕಾರು ಬುಕ್ ಮಾಡೋ ಪ್ಲಾನ್‌ನಲ್ಲಿದ್ದೀರಾ; ಈ ಸರಳ ವಿಧಾನ ಅನುಸರಿಸಿ - Hyundai Creta N Line

Hyundai Creta N Line: ನೀವೇನಾದರೂ ಹುಂಡೈ ಎನ್ ಲೈನ್ ಕಾರು ಬುಕ್ ಮಾಡಲು ಆಸಕ್ತಿ ವಹಿಸಿದ್ದರೆ ಈ ಸರಳ ವಿಧಾನವನ್ನು ಅನುಸರಿಸಿ. ಬಿಡುಗಡೆಯಾದ ಬಳಿಕ 6 ರಿಂದ 8 ವಾರಗಳಲ್ಲಿ ಕಾರು ನಿಮ್ಮ ಕೈಸರಿಲಿದೆ.

ಹುಂಡೈ ಕ್ರೆಟಾ ಎನ್ ಲೈನ್ ಎಸ್‌ಯುವಿ ಕಾರು ಮಾರ್ಚ್ 11ಕ್ಕೆ  ಬಿಡುಗಡೆಯಾಗಲಿದೆ. ಈಗಾಗಲೇ ಬುಕಿಂಗ್ ಆರಂಭವಾಗಿದ್ದು, ಬುಕ್ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ.
ಹುಂಡೈ ಕ್ರೆಟಾ ಎನ್ ಲೈನ್ ಎಸ್‌ಯುವಿ ಕಾರು ಮಾರ್ಚ್ 11ಕ್ಕೆ ಬಿಡುಗಡೆಯಾಗಲಿದೆ. ಈಗಾಗಲೇ ಬುಕಿಂಗ್ ಆರಂಭವಾಗಿದ್ದು, ಬುಕ್ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ.

ಹುಂಡೈ ಕ್ರೆಟಾ ಎನ್ ಲೈನ್ ಹೊಸ ಕಾರನ್ನು ಭಾರತದಲ್ಲಿ ಮಾರ್ಚ್ 11 ರಂದು ಬಿಡಗಡೆ ಮಾಡಲು ಆ ಕಂಪನಿ ಸಿದ್ಧವಾಗಿದೆ. ಐ20 ಮತ್ತು ವೆನ್ಯೂ ಬಳಿಕ ಹುಂಡೈನಿಂದ ಕ್ರೆಟಾ ಎನ್‌ ಲೈನ್ ಮೂರನೇ ಮಾಡೆಲ್ ಆಗಿದೆ.

ಎನ್‌ ಲೈನ್ ಮಾದರಿಯ ಸ್ಪೋರ್ಟಿಯರ್ ಎಡಿಷನ್‌ಗಳಲ್ಲಿ ಸಣ್ಣ ತಾಂತ್ರಿಕ ಬದಲಾವಣೆಗಳೂಂದಿಗೆ ಬರುತ್ತಿದೆ. ಹುಂಡೈ ಕ್ರೆಟಾ ಎನ್ ಲೈನ್ ಅನ್ನು ಎನ್‌8 ಮತ್ತು ಎನ್‌10 ಎಂಬ ಎರಡು ಮಾದರಿಗಳಲ್ಲಿ ಬರುತ್ತಿದೆ.

ಹುಂಡೈ ಕ್ರೆಟಾ ಎನ್ ಲೈನ್ ಬುಕಿಂಗ್ ಮಾಡುವುದು ಹೇಗೆ

ಹುಂಡೈ ಕ್ರೆಟಾ ಎನ್ ಲೈನ್ ಬುಕಿಂಗ್ ಗುರುವಾರದಿಂದ (ಫೆ.29) ಆರಂಭವಾಗಿದೆ. ಈ ಹೊಸ ಕಾರಿನ್ನು ಬುಕ್ ಮಾಡಲು ಎರಡು ಮಾರ್ಗಗಳಿವೆ. ಮೊದಲನೆಯದು ದೇಶದ ಯಾವುದೇ ಮೂಲೆಯಿಂದ ಕಂಪನಿಯ ಅಧಿಕೃತ ಡೀಲರ್‌ಗಳ ಮೂಲಕ 25,000 ರೂಪಾಯಿ ಟೋಕನ್ ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದು. ಒಂದು ವೇಳೆ ಕಾರಿನ ಬುಕಿಂಗ್ ರದ್ದು ಮಾಡಿಕೊಂಡರೆ ನಿಮ್ಮ ಟೋಕನ್ ಹಣವನ್ನು ಪಾವಸ್ ನೀಡಲಾಗುತ್ತದೆ.

ಮತ್ತೊಂದು ಆನ್‌ಲೈನ್‌ನಲ್ಲಿ ಬುಕಿಂಗ್ ಆಯ್ಕೆಯಿದೆ. ಆಸಕ್ತ ಗ್ರಾಹಕರು ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಆನ್‌ಲೈನ್‌ನಲ್ಲಿ ಹುಂಡೈ ಕ್ರೆಟಾ ಎನ್ ಲೈನ್ ಬುಕ್ ಮಾಡಿಕೊಳ್ಳಬಹುದು.

  • ಹುಂಡೈ ಮೋಟಾರ್ ಇಂಡಿಯಾದ Click2Buy ಆನ್‌ಲೈನ್ ಪ್ಲಾಟ್‌ಫಾರ್ಮ್‌ಗೆ ಲಾಗ್ ಇನ್ ಆಗಬೇಕು
  • ನಿಮಗೆ ಯಾವ ಮಾದರಿಯ ಕಾರು ಬೇಕು ಎಂಬುದನ್ನ ಆಯ್ಕೆ ಮಾಡಿಕೊಳ್ಳಿ ಕ್ರೆಟಾ ಎನ್ ಲೈನ್ ಆಯ್ಕೆ ಮಾಡಿ
  • ಇಂಧನದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಇದರಲ್ಲಿ ಪೆಟ್ರೋಲ್ ಮಾದರಿ ಮಾತ್ರ ಲಭ್ಯವಿದೆ
  • ಹುಂಡೈ ಎನ್ ಲೈನ್‌ನಲ್ಲಿ ಇರುವ 8 ವೇರಿಯಂಟ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಿ
  • ಕಾರಿನ ಬಾಡಿ ಕಲರ್ ಆಯ್ಕೆಯನ್ನು ಮಾಡಿಕೊಳ್ಳಿ
  • ಪ್ರಮುಖವಾಗಿ ಡೀಲರ್‌ಶಿಪ್‌ ಅನ್ನು ಆಯ್ಕೆ ಮಾಡಬೇಕು. ಈ ಹಂತದಲ್ಲಿ ರಾಜ್ಯ, ನಗರ ಹಾಗೂ ಡೀಲರ್‌ಶಿಪ್ ಹೆಸರು ನಮೂದಿಸಿ
  • ಡೀಲರ್‌ ಹೆಸರು ಪಟ್ಟಿಯಲ್ಲಿ ತೋರಿಸಲಾಗುತ್ತದೆ. ನೀವು ಇರುವ ಸ್ಥಳಕ್ಕೆ ಹತ್ತಿರದ ಡೀಲರ್ ಅನ್ನು ಆಯ್ಕೆ ಮಾಡಿಕೊಳ್ಳಿ
  • ನಂತರ ಪ್ರೊಸೀಡ್ ಮೇಲೆ ಕ್ಲಿಕ್ ಮಾಡಿ. 25,000 ರೂಪಾಯಿ ಟೋಕನ್ ಮೊತ್ತ ಪಾವತಿಸಿ ಕಾರನ್ನ ಬುಕ್ ಮಾಡಿ

ಗಮನಿಸಿ ಹುಂಡೈ ಕ್ರೆಟಾ ಎನ್ ಲೈನ್ ಬಿಡುಗಡೆಯಾದ ಬಳಿಕ ಬುಕಿಂಗ್ ಮಾಡುವ ದಿನಾಂಕದಿಂದ ಈ ಕಾರು ನಿಮ್ಮ ಕೈಸೇರಲು 6 ರಿಂದ 8 ವಾರಗಳ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಹುಂಡೈ ಕ್ರೆಟಾ ಎನ್ ಲೈನ್ ಕ್ಯಾಬಿನ್ ಒಳಗೂ ವಿಶಿಷ್ಟ ವಿನ್ಯಾಸವನ್ನು ಮಾಡಲಾಗಿದೆ. ಸ್ಪೋರ್ಟಿ ಆಲ್‌-ಬ್ಲಾಕ್ ಥೀಮ್ ಅನ್ನು ಪಡೆದಿದ್ದು, ಡ್ಯುಯಲ್ ಡಿಸ್‌ಪ್ಲೇ ಸೆಟಪ್, ಡ್ಯುಯಲ್-ಝೋನ್ ಕ್ಲೈಮೇಟ್‌ ಕಂಟ್ರೋಲ್, ಪನೋರಮಿಕ್ ಸನ್‌ರೂಪ್, 360 ಡಿಗ್ರಿ ಸರೌಂಟ್ ಕ್ಯಾಮೆರಾ, ವೈರ್‌ಲೆಸ್ ಚಾರ್ಜರ್ ಹಾಗೂ ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಈ ಎಸ್‌ಯುವಿನಲ್ಲಿ ಕಾಣಬಹುದು. ಸುರಕ್ಷತೆಯ ದೃಷ್ಟಿಯಿಂದ ಆರು ಏರ್‌ಬ್ಯಾಗ್‌ಗಳು ಮತ್ತು ಎಡಿಎಎಸ್ ಸೂಟ್‌ ಅನ್ನು ನೀಡಲಾಗಿದೆ.

ಹುಂಡೈ ಕ್ರೆಟಾ ಎನ್‌ ಲೈನ್ 1.5 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನಿಂದ ನಿಯಂತ್ರಿಸಲ್ಪಡುತ್ತದೆ. ಇದು 158 ಬಿಎಚ್‌ಪಿ ಪವರ್ ಮತ್ತು 253 ಎನ್‌ಎಂ ಪೀಕ್ ಟಾರ್ಕ್‌ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಆರು ಸ್ಪೀಡ್ ಮ್ಯಾನುವಲ್ ಮತ್ತು ಏಳು ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್ ನೀಡಲಾಗಿದೆ. ಹುಂಡೈ ಕ್ರೆಟಾ ಎನ್‌ ಲೈನ್ ಕಾರಿನ ಬೆಲೆ ಎಕ್ಸ್‌ ಶೋರೂಂ ಬೆಲೆ 21 ರಿಂದ 23 ಲಕ್ಷ ರೂಪಾಯಿ ಆಸುಪಾಸಿನಲ್ಲಿ ಇರಲಿದೆ ಎಂದು ವರದಿಯಾಗಿದೆ.

ವಿಭಾಗ