ಲಾಂಗ್ ಡ್ರೈವ್‌ ಹೋಗಲು ಬಜೆಟ್ ಕಾರು ಬೇಕೇ? ಇಲ್ಲಿವೆ ನೋಡಿ ಕಡಿಮೆ ಬೆಲೆಯ 7 ಸೂಪರ್ ಕಾರುಗಳು-automobile news best cars in india for long drives here are 7 cheap and best cars vbt ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಲಾಂಗ್ ಡ್ರೈವ್‌ ಹೋಗಲು ಬಜೆಟ್ ಕಾರು ಬೇಕೇ? ಇಲ್ಲಿವೆ ನೋಡಿ ಕಡಿಮೆ ಬೆಲೆಯ 7 ಸೂಪರ್ ಕಾರುಗಳು

ಲಾಂಗ್ ಡ್ರೈವ್‌ ಹೋಗಲು ಬಜೆಟ್ ಕಾರು ಬೇಕೇ? ಇಲ್ಲಿವೆ ನೋಡಿ ಕಡಿಮೆ ಬೆಲೆಯ 7 ಸೂಪರ್ ಕಾರುಗಳು

ನೀವು ಕೂಡ ವಾರಾಂತ್ಯ ಬಂದಾಗ ಕಾರು ತೆಗೆದುಕೊಂಡು ಲಾಂಗ್ ಡ್ರೈವ್‌ಗೆ ಹೋಗಲು ಬಯಸುವ ವ್ಯಕ್ತಿ ಆಗಿದ್ದರೆ ನಿಮಗೆ ಸೂಕ್ತವಾದ 7 ಕಾರು ಮಾದರಿಗಳನ್ನು ನಾವು ಹೇಳಲಿದ್ದೇವೆ. ಲಾಂಗ್ ಡ್ರೈವ್ ಪ್ರಿಯರಿಗೆ ಸೂಕ್ತವಾದ ಕಾರುಗಳ ಪಟ್ಟಿಯನ್ನು ನಾವು ಸಿದ್ಧಪಡಿಸಿದ್ದೇವೆ.(ಬರಹ: ವಿನಯ್ ಭಟ್)

ಲಾಂಗ್ ಡ್ರೈವ್ ಪ್ರಿಯರಿಗೆ ಸೂಕ್ತವಾದ ಏಳು ಕಾರುಗಳ ಪಟ್ಟಿ ಇಲ್ಲಿದೆ.
ಲಾಂಗ್ ಡ್ರೈವ್ ಪ್ರಿಯರಿಗೆ ಸೂಕ್ತವಾದ ಏಳು ಕಾರುಗಳ ಪಟ್ಟಿ ಇಲ್ಲಿದೆ.

ವಾರಾಂತ್ಯದಲ್ಲಿ ಲಾಂಗ್ ಡ್ರೈವ್ ಹೋಗಬೇಕೆನ್ನುವವರಿಗೆ ಯಾವ ಕಾರು ಖರೀದಿಸಬೇಕು ಎಂಬ ಗೊಂದಲ ಕಾಡುತ್ತದೆ. ಸೇಫ್ ಆಗಿರಬಹುದೇ ಎಂಬ ಹಲವು ಪ್ರಶ್ನೆಗಳು ಮೂಡುತ್ತದೆ. ದೂರ ಹೋದರೂ ಸುಸ್ತಾಗಬಾರದು ಅಂತಹ ಕಾರು ಹುಡುಕುತ್ತಿರುತ್ತಾರೆ. ನೀವು ಕೂಡ ವಾರಾಂತ್ಯ ಬಂದಾಗ ಕಾರು ತೆಗೆದುಕೊಂಡು ಲಾಂಗ್ ಡ್ರೈವ್‌ಗೆ ಹೋಗಲು ಬಯಸುವ ವ್ಯಕ್ತಿ ಆಗಿದ್ದರೆ ನಿಮಗೆ ಸೂಕ್ತವಾದ 7 ಕಾರು ಮಾದರಿಗಳನ್ನು ನಾವು ಹೇಳಲಿದ್ದೇವೆ. ಲಾಂಗ್ ಡ್ರೈವ್ ಪ್ರಿಯರಿಗೆ ಸೂಕ್ತವಾದ ಕಾರುಗಳ ಪಟ್ಟಿಯನ್ನು ನಾವು ಸಿದ್ಧಪಡಿಸಿದ್ದೇವೆ. ಅವು ಯಾವುವು ಎಂದು ನೋಡೋಣ.

ಲಾಂಗ್ ಡ್ರೈವ್ ಪ್ರಿಯರಿಗೆ ಸೂಕ್ತವಾದ ಕಾರುಗಳ ಪಟ್ಟಿ ಇಲ್ಲಿದೆ

ಟಾಟಾ ಅಲ್ಟ್ರಾಸ್: ಟಾಟಾ ಕಾರು ಎಂದರೆ ಅದರಲ್ಲಿನ ಸೇಫ್ಟಿ ಬಗ್ಗೆ ಮಾತನಾಡುವಂತಿಲ್ಲ. ಇದು ಉತ್ತಮ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾಡೆಲ್ ಕಾರಾಗಿದೆ. 1.2L ಪೆಟ್ರೋಲ್ ಮತ್ತು 1.5L ಡೀಸೆಲ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಅಲ್ಟ್ರಾಜ್ ಮಾದರಿಯಲ್ಲಿನ ಸಸ್ಪೆನ್ಷನ್ ಟ್ಯೂನಿಂಗ್ ತುಂಬಾ ಚೆನ್ನಾಗಿದೆ. ಸುರಕ್ಷತಾ ರೇಟಿಂಗ್​ನಲ್ಲಿ ವಯಸ್ಕರಿಗೆ 5 ಸ್ಟಾರ್ ಮತ್ತು ಮಕ್ಕಳಿಗೆ 4 ಸ್ಟಾರ್ ನೀಡಲಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸುರಕ್ಷತೆಯು ನಿಮ್ಮ ಮೊದಲ ಆಯ್ಕೆಯಾಗಿದ್ದರೆ ಕಣ್ಣು ಮುಚ್ಚಿ ಈ ಟಾಟಾ ಅಲ್ಟ್ರಾಸ್ ಅನ್ನು ಖರೀದಿಸಬಹುದು.

ಟಾಟಾ ನೆಕ್ಸಾನ್: ಇದು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಇದು 1.2l ಟರ್ಬೊ ಪೆಟ್ರೋಲ್ ಎಂಜಿನ್ ಅಥವಾ 1.5l ಡೀಸೆಲ್ ಎಂಜಿನ್‌ನೊಂದಿಗೆ ಬರುತ್ತದೆ. ಭಾರತದ ಯಾವುದೇ ರಸ್ತೆಗಳಿಗೆ ಹೊಂದಿಕೆಯಾಗುವಂತೆ ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಮತ್ತು, ಇದು ಲಾಂಗ್ ಡ್ರೈವ್‌ಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಹೊಂದಿದೆ. ಅದರಲ್ಲೂ ಟಾಟಾ ಕಾರು ಆಗಿರುವುದರಿಂದ ಸುರಕ್ಷತೆಯ ದೃಷ್ಟಿಯಿಂದಲೂ 5 ಸ್ಟಾರ್ ರೇಟಿಂಗ್ ಹೊಂದಿದೆ.

ಹೋಂಡಾ ಅಮೇಜ್: ಹೋಂಡಾ, ಕಾರು ಪ್ರಿಯರ ವಿಶ್ವಾಸಾರ್ಹ ಬ್ರಾಂಡ್ ಎಂದು ಹೇಳಬೇಕಾಗಿಲ್ಲ. ಈ ಹೋಂಡಾ ಅಮೇಜ್ ಕಂಪನಿಯು ಬಿಡುಗಡೆ ಮಾಡಿದ ಕಾಂಪ್ಯಾಕ್ಟ್ ಸೆಡಾನ್ ಮಾದರಿಯ ಕಾರು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. ಇದು 1.2L NA ಪೆಟ್ರೋಲ್ i-VTEC ಎಂಜಿನ್‌ನಿಂದ ಚಾಲಿತವಾಗಿದೆ. ಸ್ವಯಂಚಾಲಿತ CVT ಮಾದರಿಗಳಲ್ಲಿ ಲಭ್ಯವಿದೆ. ಅಥವಾ ನಾನು ಮ್ಯಾನ್ಯುವಲ್ ಗೇರ್ ಮಾಡೆಲ್ ಬಯಸಿದರೆ, ನಮ್ಮಲ್ಲಿ 5-ಸ್ಪೀಡ್ ಮ್ಯಾನ್ಯುವಲ್ ಆಯ್ಕೆಯೂ ಇದೆ. ಈ ಅಮೇಜ್ ಮಾದರಿಯು ಲಾಂಗ್ ಡ್ರೈವ್​ಗೆ ಸೂಕ್ತವಾಗಿದೆ. ಗಾತ್ರದಲ್ಲಿ ಚಿಕ್ಕದಾಗಿದ್ದರೂ ಇದರ ಶಕ್ತಿಯು ವಿಭಿನ್ನ ಮಟ್ಟದಲ್ಲಿದೆ.

ಮಾರುತಿ ಸುಜುಕಿ ಬಲೆನೋ: ಭಾರತದ ಹೆಚ್ಚು ಮಾರಾಟವಾಗುವ ಕಾರು ತಯಾರಕ ಮಾರುತಿ ಸುಜುಕಿಯ ಬಲೆನೊ ಕೂಡ ಎಲ್ಲ ಸೌಕರ್ಯಗಳಿಂದ ತುಂಬಿದೆ. ಈ ಕಾರು 1.NA ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು ಭಾರತೀಯ ಹೆದ್ದಾರಿಗಳಿಗೆ ಸರಿಹೊಂದುವಂತೆ ಕಾರಿನ ಸಸ್ಪೆನ್ಶನ್ ಅನ್ನು ನೀಡಲಾಗಿದೆ. ಹೀಗಾಗಿ ದೂರದ ಪ್ರಯಾಣ ಮಾಡಲು ಈ ಬಲೆನೊ ಅತ್ಯುತ್ತಮ ಕಾರು.

ಮಾರುತಿ ಸುಜುಕಿ ಸಿಯಾಜ್: ಇದು ಭಾರತದಲ್ಲಿ ಮಾರಾಟವಾಗುವ ಕಡಿಮೆ ದರದ ಸೆಡಾನ್ ಕಾರು ಎಂದು ಹೇಳಬಹುದು. ಈ ಕಾರಿನ ಮಾಡೆಲ್ ಬಗ್ಗೆ ಹಲವರಿಗೆ ಗೊತ್ತಿಲ್ಲ. ಆದರೆ, ಇದರ ಬಗ್ಗೆ ತಿಳಿದರೆ ಬೇರೆ ಕಾರುಗಳನ್ನು ಖರೀದಿಸಲು ಯೋಚಿಸಬಹುದು. ಯಾಕೆಂದರೆ ಇದರಲ್ಲಿ ತುಂಬಾ ಸೌಲಭ್ಯಗಳಿವೆ. ಇದು 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಸಿಸ್ಟಮ್‌ಗೆ 1.5L ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಅಲ್ಲದೆ, ಇದು 4-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಹೊಂದಿದೆ. ಹೀಗಾಗಿ ನೀವು ಭಾರತದ ಹೆದ್ದಾರಿಗಳಲ್ಲಿ ಈ ಕಾರಿನಲ್ಲಿ ಆತ್ಮವಿಶ್ವಾಸದಿಂದ ಪ್ರಯಾಣಿಸಬಹುದು.

ಹುಂಡೈ ಐ20: ಪ್ರೀಮಿಯಂ-ಹ್ಯಾಚ್ ವಿಭಾಗದಲ್ಲಿ ನೀಡಲಾಗಿರುವ ಈ ಮಾದರಿಯು ಹಲವು ಪ್ರಮುಖ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು 1.2L ಪೆಟ್ರೋಲ್ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ ಸ್ವಯಂಚಾಲಿತ ಗೇರ್ ಮಾಡೆಲ್‌ಗೆ ಜೋಡಿಸಲಾಗಿದೆ. ಹಳೆಯ ಹ್ಯುಂಡೈ ಮಾದರಿಗಳಲ್ಲಿ ಕೆಲವು ಸಮಸ್ಯೆಗಳು ಕಾಣಿಸಿಕೊಂಡಿತ್ತು. ಆದರೆ i20 ನಂತಹ ಹೊಸ ಹ್ಯುಂಡೈ ಮಾದರಿಗಳು ವಿಭಿನ್ನ ಮಟ್ಟದ ಸಸ್ಪೆನ್ಶನ್ ಅನ್ನು ಹೊಂದಿವೆ. ಹೆದ್ದಾರಿಗಳಲ್ಲಿ ದೂರದ ಚಾಲನೆಗೆ ಇದು ತುಂಬಾ ಸೂಕ್ತವಾಗಿದೆ.

ಮಹೀಂದ್ರ XUV 3XO: ಇದು ಈ ವಿಭಾಗದಲ್ಲಿ ಅತ್ಯುತ್ತಮವಾದ SUV ಕಾರುಗಳಲ್ಲಿ ಒಂದಾಗಿದೆ. ಇದು ಎರಡು ಆಯ್ಕೆಗಳಲ್ಲಿ ಲಭ್ಯವಿದೆ, 1.2L ಟರ್ಬೊ ಪೆಟ್ರೋಲ್ ಅಥವಾ 1.5L ಡೀಸೆಲ್ ಎಂಜಿನ್. ಇದರ ದೊಡ್ಡ ವೀಲ್‌ಬೇಸ್ ಹೆಚ್ಚಿನ ವೇಗದಲ್ಲಿಯೂ ಸ್ಥಿರಗೊಳಿಸುತ್ತದೆ. ಇದು ಸುರಕ್ಷತೆಯ ವಿಚಾರದಲ್ಲಿ 5 ಸ್ಟಾರ್ ರೇಟಿಂಗ್ ಅನ್ನು ಸಹ ಹೊಂದಿದೆ. ಅಲ್ಲದೆ, ಮಹೀಂದ್ರಾ XUV 3XO ಆಟೋಮೊಬೈಲ್ ಉದ್ಯಮದಲ್ಲಿ ವೃತ್ತಿಪರರ ಮೊದಲ ಆಯ್ಕೆಯಾಗಿದೆ.

mysore-dasara_Entry_Point