Amruthadhaare Serial: ಆನಂದ ಮಾತಾಡೋ ಎಂದು ಅಳುತ್ತಿದ್ದಾರೆ ಡುಮ್ಮಸರ್‌; ಸದಾಶಿವ ನಾಪತ್ತೆ, ಅಪೇಕ್ಷಾಳಿಗೆ ಭೂಮಿಕಾ ತಿರುಗೇಟು
ಕನ್ನಡ ಸುದ್ದಿ  /  ಮನರಂಜನೆ  /  Amruthadhaare Serial: ಆನಂದ ಮಾತಾಡೋ ಎಂದು ಅಳುತ್ತಿದ್ದಾರೆ ಡುಮ್ಮಸರ್‌; ಸದಾಶಿವ ನಾಪತ್ತೆ, ಅಪೇಕ್ಷಾಳಿಗೆ ಭೂಮಿಕಾ ತಿರುಗೇಟು

Amruthadhaare Serial: ಆನಂದ ಮಾತಾಡೋ ಎಂದು ಅಳುತ್ತಿದ್ದಾರೆ ಡುಮ್ಮಸರ್‌; ಸದಾಶಿವ ನಾಪತ್ತೆ, ಅಪೇಕ್ಷಾಳಿಗೆ ಭೂಮಿಕಾ ತಿರುಗೇಟು

Amruthadhare Kannada Serial Episode 372: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಸೋಮವಾರದ ಸಂಚಿಕೆಯು ಒಂದಿಷ್ಟು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಕೋಮದಲ್ಲಿರುವ ಆನಂದ್‌ನ ಮಾತನಾಡಿಸಲು ಗೌತಮ್‌ ಪ್ರಯತ್ನಿಸುತ್ತಿದ್ದಾರೆ. ಇನ್ನೊಂದೆಡೆ ಹೊರಕ್ಕೆ ಹೋದ ಸದಾಶಿವ ಮನೆಗೆ ವಾಪಸ್‌ ಬಂದಿಲ್ಲ.

ಅಮೃತಧಾರೆ ಸೀರಿಯಲ್‌ ನಿನ್ನೆಯ ಸಂಚಿಕೆ
ಅಮೃತಧಾರೆ ಸೀರಿಯಲ್‌ ನಿನ್ನೆಯ ಸಂಚಿಕೆ

Zee Kannada Amruthadhare Kannada Serial Episode 372: ಕೋಮದಲ್ಲಿರುವ ಆನಂದ್‌ನನ್ನು ಗೌತಮ್‌ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಅವನು ಮತ್ತೆ ಮೊದಲಿನಂತಾಗಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾನೆ. ಹಳೆಯ ನೆನಪುಗಳನ್ನು ಕೆದಕುತ್ತಿದ್ದಾನೆ. ಬಾಲ್ಯದ ಫೋಟೋಗಳನ್ನು ತೋರಿಸುತ್ತಿದ್ದಾನೆ. ಬಳಿಕ ಮೀಸೆ ಚಿಗುರುವ ಕಾಲದ ಫೋಟೋಗಳನ್ನು ತೋರಿಸುತ್ತಾನೆ. ಆನಂದ್‌ನ ಹಳೆ ಡೌಗಳ ಕುರಿತು ನೆನಪಿಸುತ್ತಾನೆ. ಗೆಳೆತನದ ಕುರಿತು ಸವಿನೆನಪುಗಳನ್ನು ಹೇಳುತ್ತಾನೆ. ಗೌತಮ್‌ ಒಬ್ಬರೇ ಮಾತನಾಡುತ್ತಾರೆ "ಎದ್ದೇಳೋ, ನಿನ್ನ ಪ್ರತಿಭೆಯನ್ನು ಪ್ರದರ್ಶನ ಮಾಡು" ಎಂದೆಲ್ಲ ಹೇಳಿ ದುಃಖವ್ಯಕ್ತಪಡಿಸುತ್ತಾರೆ. "ನನಗೆ ನಿನ್ನ ತರಹ ಯಾರೂ ಇಲ್ಲ ಕಣೋ" ಎಂದು ದುಃಖಿಸುತ್ತಾರೆ. "ಮಾತಾಡೋ ಆನಂದ, ಮಾತಾಡೋ..." ಎಂದು ಅಳುತ್ತಾರೆ ಡುಮ್ಮಸರ್‌.

ಇನ್ನೊಂದೆಡೆ ಅಪೇಕ್ಷಾ ಮತ್ತು ಪಾರ್ಥ ಮಾತನಾಡುತ್ತಿದ್ದಾರೆ. "ನಾವು ಮೊದಲು ಪ್ರೀತಿ ಮಾತನಾಡುತ್ತಿದ್ದಾಗ ಅದೆಷ್ಟೋ ಖುಷಿಯಲ್ಲಿದ್ದೇವು. ಆದರೆ, ಈಗ ನಾವು ಏಕೆ ಬದಲಾಗಿದ್ದೇವೆ" ಎಂದು ಅಪೇಕ್ಷಾ ಹೇಳುತ್ತಾಳೆ. "ಈಗ ನಿಮ್ಮ ಜತೆ ಮನಸ್ಸು ಬಿಚ್ಚಿ ಮಾತನಾಡಲು ಆಗುತ್ತಿಲ್ಲ. ಅಟ್‌ಲಿಸ್ಟ್‌ ಆಚೆ ಎಲ್ಲಾದರೂ ಹೋಗೋಣ್ವ. ನಾನು ಮೊದಲಿನಂತೆ ಟೈಂ ಸ್ಪೆಂಡ್‌ ಮಾಡೋಣ್ವ" ಎಂದು ಕೇಳುತ್ತಾಳೆ. "ನಾಳೆಯೇ ಹೋಗೋಣ" ಎಂದು ಪಾರ್ಥ ಹೇಳುತ್ತಾನೆ. "ಪಾರ್ಥ ನೀವು ತುಂಬಾ ಬಿಝಿ ಇದ್ದೀರಿ. ನೀವು ಎಲ್ಲಿಗೆ ಹೋಗ್ತಿರಿ, ಏನು ಮಾಡ್ತಿರಿ ಎಂದು ಗೊತ್ತಾಗ್ತಾ ಇಲ್ಲ. ಮನೆಯಲ್ಲೇ ಇರ್ತಾ ಇಲ್ಲ." ಅಪೇಕ್ಷಾ ಕೇಳುತ್ತಾಳೆ. "ನಾನು ಹೀಗೆ ಇರಲು ಕಾರಣವೇನು ಎಂದು ಹೇಳಿದ್ದೇನೆ. ನಿನ್ನ ತಂದೆಯದ್ದೇ ಯೋಚನೆ" ಎನ್ನುತ್ತಾನೆ. "ಮೊದಲಿನಂತೆ ಇರಲು ಟ್ರೈ ಮಾಡ್ತಿನಿ" ಎನ್ನುತ್ತಾನೆ ಪಾರ್ಥ.

ಅಪರ್ಣಾ ಮತ್ತು ಭೂಮಿಕಾ ಮಾತನಾಡುತ್ತಾರೆ. ಅಪರ್ಣಾಗೆ ಸಮಧಾನ ಹೇಳುತ್ತಾ ಇದ್ದಾಳೆ ಭೂಮಿ. "ಮಕ್ಕಳನ್ನು ಕರೆದುಕೊಂಡು ಬರ್ಲಾ" ಎನ್ನುತ್ತಾಳೆ. "ಬೇಡ, ಮಕ್ಕಳು ಈ ಸ್ಥಿತಿಯಲ್ಲಿ ಅಪ್ಪನ ನೋಡುವುದು ಬೇಡ" ಎಂದು ಭೂಮಿಕಾ ಹೇಳುತ್ತಾಳೆ.

ಸದಾಶಿವ ಮನೆಯಲ್ಲಿ ಇಲ್ಲ. ವಾಕಿಂಗ್‌ ಹೋಗಿ ಇಷ್ಟೊತ್ತಿಗೆ ವಾಪಸ್‌ ಬರಬೇಕಿತ್ತು ಮಂದಾಕಿನಿ ಹೇಳುತ್ತಾರೆ. ಫೋನ್‌ ಮಾಡಿದ್ರೆ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ. ಮಂದಾಕಿನಿ, ಜೀವನ್‌, ಮಹಿಮಾಗೆ ಟೆನ್ಷನ್‌ ಆಗುತ್ತದೆ. ಅಪ್ಪನ ಹುಡುಕುತ್ತಾ ಜೀವನ್‌ ಹೋಗುತ್ತಾನೆ.

ಶಕುಂತಲಾದೇವಿ ಟೆನ್ಷನ್‌ನಲ್ಲಿದ್ದಾರೆ. ಆನಂದ್‌ ಮನೆಗೆ ಬಂದಿರುವುದು ಇವರಿಗೆ ಇಷ್ಟವಿಲ್ಲ. "ಅವನು ಈ ಮನೆಗೆ ಬರೋದೇ ನನಗೆ ಇಷ್ಟವಿಲ್ಲ. ಪರ್ಮನೆಂಟ್‌ ಆಗಿ ಇಲ್ಲೇ ಇದ್ದಾನೆ ಅಂದ್ರೆ ನನಗೆ ತಡೆಯಲಾಗುತ್ತಿಲ್ಲ" ಎಂದು ಶಕುಂತಲಾದೇವಿ ಹೇಳುತ್ತಾರೆ. ಎಂದಿನಂತೆ ಮನೆಹಾಳ ಮಾವ ಒಂದಿಷ್ಟು ತಲೆಕೆಡಿಸುವ ಮಾತುಗಳನ್ನಾಡುತ್ತಾರೆ.

ಮಲ್ಲಿ ಬೇಸರದಲ್ಲಿ ಕುಳಿತಿದ್ದಾಳೆ. ಜೈದೇವ್‌ ಎಂದಿನಂತೆ ನಾಟಕೀಯ ಪ್ರೀತಿ ತೋರಿಸುತ್ತಿದ್ದಾನೆ. "ಆನಂದ್‌ ನಗುವೇ ಇಲ್ಲ. ಅವರನ್ನು ಈ ಸ್ಥಿತಿಯಲ್ಲಿ ನೋಡಲಾಗುತ್ತಿಲ್ಲ" ಎಂದು ಮಲ್ಲಿ ಹೇಳುತ್ತಾಳೆ. "ಏನು ಮಾಡಲಾಗುತ್ತದೆ ಮಲ್ಲಿ, ಎಲ್ಲರ ಹಣೆಬರಹ. ಅವರವರ ಕರ್ಮವನ್ನು ಅವರೇ ಅನುಭವಿಸಬೇಕು" ಎಂದೆಲ್ಲ ಜೈದೇವ್‌ ಹೇಳುತ್ತಾನೆ.

ಗೌತಮ್‌ ಆನಂದ್‌ ಬಳಿ ಮಾತನಾಡುತ್ತಾ ಇದ್ದಾನೆ. "ನನಗೆ ಕತ್ತಲೆ ಅಂದರೆ ಭಯ ಕಣೋ, ಅದಕ್ಕೆ ಕಾರಣ ಏನು ಅಂತ ನಿನಗೆ ಮಾತ್ರ ಗೊತ್ತು. ಪ್ರೀತಿಯನ್ನು ಉಂಡು ಬೆಳೆಯುವ ಮಕ್ಕಳಿಗೂ, ನೋವನ್ನು ಉಂಡು ಬೆಳೆಯುವ ಮಕ್ಕಳಿಗೂ ಸಾಕಷ್ಟು ವ್ಯತ್ಯಾಸವಿದೆ. ನೀನು ನನ್ನ ಬದುಕಿಗೆ ಜೀವಂತಿಕೆ ಸೇರಿಸಿದೆ.

ಅಪೇಕ್ಷಾಳಿಗೆ ಭೂಮಿಕಾ ತಿರುಗೇಟು

ಅಪೇಕ್ಷಾ ಮತ್ತು ಭೂಮಿಕಾ ಮಾತನಾಡುತ್ತಾ ಇದ್ದಾಳೆ. "ಆನಂದ್‌ಗೆ ಹೀಗೆ ಆಗಬಾರದಿತ್ತು" ಎನ್ನುತ್ತಾಳೆ ಅಪೇಕ್ಷಾ. "ಪ್ರಾಬ್ಲಂ ಏನೆಂದರೆ, ಎಲ್ಲರ ಗಮನ ಆನಂದ್‌ ಮೇಲೆಯೇ ಇದೆ" ಎಂದು ಅಪೇಕ್ಷಾ ಹೇಳುತ್ತಾಳೆ. "ಇದರಲ್ಲಿ ಪ್ರಾಬ್ಲಂ ಏನಿದೆ, ಅವರು ಬೇರೆ ಯಾರೂ ಅಲ್ಲ. ಗೌತಮ್‌ ಫ್ರೆಂಡ್‌. ಈ ಮನೆಯಲ್ಲಿ ಒಬ್ಬರಂತೆ ಇರುವವರು" ಎಂದು ಭೂಮಿ ಹೇಳುತ್ತಾಳೆ. "ಆದ್ರೂ ನನಗೆ ಇದೆಲ್ಲ ಸರಿ ಕಾಣಿಸ್ತಾ ಇಲ್ಲ ಅಕ್ಕಾ, ಡಾಕ್ಟರ್‌ ಆನಂದ್‌ನ ಮನೆಗೆ ಕರೆದುಕೊಂಡು ಹೋಗಿ ಎಂದ್ರು. ನಾವು ಅವರನ್ನು ಅವರ ಮನೆಗೆ ತಾನೇ ಕರೆದುಕೊಂಡು ಹೋಗಬೇಕು. ಯಾಕೋ ಸ್ವಲ್ಪ ಅತಿಯಾಗಿಲ್ವ" ಎಂದು ಅಪೇಕ್ಷಾ ಹೇಳಿದಾಗ ಭೂಮಿಕಾ ಎದ್ದುನಿಂತು "ಏನು ಮಾತನಾಡ್ತಾ ಇದ್ದೀಯ. ನಿನ್ನ ಭಾವನ ಬಗ್ಗೆ ಮಾತನಾಡುವಷ್ಟು ದೊಡ್ಡವಳಾಗಿಬಿಟ್ಟಿಯ ನೀನು" ಎಂದು ಭೂಮಿಕಾ ಕೇಳುತ್ತಾಳೆ. "ಅಲ್ಲ ನಿಮಗೆ ತೊಂದರೆ ಅಂತ" ಎಂದು ಅಪೇಕ್ಷಾ ಹೇಳಿದಾಗ "ನನಗೇನು ತೊಂದರೆ ಇಲ್ಲ ಅಪ್ಪಿ. ಆನಂದ್‌ ನನ್ನ ಮೈದುನ ಅಂದರೂ ತಪ್ಪಿಲ್ಲ" ಎಂದು ಅಪೇಕ್ಷಾಳಿಗೆ ಮಾತಿನ ತಿರುಗೇಟು ನೀಡುತ್ತಾರೆ ಭೂಮಿಕಾ. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner