ಬಹುನಿರೀಕ್ಷಿತ ಟಾಟಾ ನೆಕ್ಸಾನ್ ಸಿಎನ್‍ಜಿ ಬಿಡುಗಡೆ: ಮೈಲೇಜ್ ಎಷ್ಟು ಕೊಡುತ್ತೆ, ಬೆಲೆ ಎಷ್ಟು- ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬಹುನಿರೀಕ್ಷಿತ ಟಾಟಾ ನೆಕ್ಸಾನ್ ಸಿಎನ್‍ಜಿ ಬಿಡುಗಡೆ: ಮೈಲೇಜ್ ಎಷ್ಟು ಕೊಡುತ್ತೆ, ಬೆಲೆ ಎಷ್ಟು- ಇಲ್ಲಿದೆ ಮಾಹಿತಿ

ಬಹುನಿರೀಕ್ಷಿತ ಟಾಟಾ ನೆಕ್ಸಾನ್ ಸಿಎನ್‍ಜಿ ಬಿಡುಗಡೆ: ಮೈಲೇಜ್ ಎಷ್ಟು ಕೊಡುತ್ತೆ, ಬೆಲೆ ಎಷ್ಟು- ಇಲ್ಲಿದೆ ಮಾಹಿತಿ

ಟಾಟಾ ಮೋಟಾರ್ಸ್​ನ ಬಹುನಿರೀಕ್ಷಿತ ಕಾರು ಟಾಟಾ ನೆಕ್ಸಾನ್‌ನ ಸಿಎನ್​ಜಿ ರೂಪಾಂತರ ಬಿಡುಗಡೆ ಆಗಿದೆ. 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತಿರುವ ಈ SUV 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 100Hp ಪವರ್ ಮತ್ತು 170Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. (ಬರಹ:ವಿನಯ್ ಭಟ್)

ಟಾಟಾ ಮೋಟಾರ್ಸ್ನ ಬಹುನಿರೀಕ್ಷಿತ ಕಾರು ಟಾಟಾ ನೆಕ್ಸಾನ್‌ನ ಸಿಎನ್ಜಿ ರೂಪಾಂತರ ಬಿಡುಗಡೆ ಆಗಿದೆ.
ಟಾಟಾ ಮೋಟಾರ್ಸ್ನ ಬಹುನಿರೀಕ್ಷಿತ ಕಾರು ಟಾಟಾ ನೆಕ್ಸಾನ್‌ನ ಸಿಎನ್ಜಿ ರೂಪಾಂತರ ಬಿಡುಗಡೆ ಆಗಿದೆ.

ಟಾಟಾ ಮೋಟಾರ್ಸ್ ತನ್ನ ಎಲ್ಲಾ ಜನಪ್ರಿಯ ಮಾದರಿಗಳ ಪೆಟ್ರೋಲ್, ಡೀಸೆಲ್, ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ಮಾದರಿಗಳನ್ನು ಬಿಡುಗಡೆ ಗೈದ ಸಾಧನೆ ಮಾಡಿದೆ. ಇದೀಗ ಕಂಪನಿಯು ತನ್ನ ಸುರಕ್ಷಿತ ಎಸ್‌ಯುವಿ ಬಹುನಿರೀಕ್ಷಿತ ಟಾಟಾ ನೆಕ್ಸಾನ್‌ನ iCNG ರೂಪಾಂತರವನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವಣ ಮಾಡಿದೆ. ಟಾಟಾ ನೆಕ್ಸಾನ್ ಸಿಎನ್‌ಜಿಯ ಹೊರತಾಗಿ, ಕಂಪನಿಯು ನೆಕ್ಸಾನ್ ಇವಿಯನ್ನು ಸಹ ನವೀಕರಿಸಿದೆ. ಹೀಗಾಗಿ ಈಗ ಈ ಎಲೆಕ್ಟ್ರಿಕ್ ಕಾರ್ ಗ್ರಾಹಕರಿಗೆ ಮೊದಲಿಗಿಂತ ಹೆಚ್ಚಿನ ಚಾರ್ಜಿಂಗ್ ಶ್ರೇಣಿಯಲ್ಲಿ ಬರುತ್ತದೆ.

6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತಿರುವ ಈ SUV 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 100Hp ಪವರ್ ಮತ್ತು 170Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಭಾರತದ ಮೊದಲ ಟರ್ಬೋಚಾರ್ಜ್ಡ್ ಸಿಎನ್​ಜಿ ಎಸ್​ಯುವಿ ಆಗಿದೆ. 2024ರ ಟಾಟಾ ನೆಕ್ಸಾನ್ iCNG ಮೈಲೇಜ್ ಬಗ್ಗೆ ಮಾತನಾಡುತ್ತಾ, ಈ ಎಸ್​ಯುವಿ ಒಂದು ಕಿಲೋಗ್ರಾಂ CNG ನಲ್ಲಿ 24 ಕಿಲೋಮೀಟರ್ ವರೆಗೆ ಮೈಲೇಜ್ ನೀಡುತ್ತದೆ.

ಟಾಟಾ ನೆಕ್ಸಾನ್ CNG ವೈಶಿಷ್ಟ್ಯಗಳು

ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಡ್ಯುಯಲ್ ಸಿಲಿಂಡರ್ ತಂತ್ರಜ್ಞಾನವನ್ನು ಬಳಸಲಾಗಿದೆ. ಸಿಎನ್‍ಜಿ ಸಿಲಿಂಡರ್ ಹೊಂದಿದ್ದರೂ, ಈ ಕಾರಿನಲ್ಲಿ 321 ಲೀಟರ್ ಬೂಟ್ ಸ್ಪೇಸ್ ಒದಗಿಸಲಾಗಿದೆ. 6 ಏರ್‌ಬ್ಯಾಗ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂನಂತಹ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಸಿಎನ್‌ಜಿ ರೂಪಾಂತರದ ಜೊತೆಗೆ, ಗ್ರಾಹಕರು ಈಗ ಈ ವಾಹನದಲ್ಲಿ ನ್ಯಾವಿಗೇಷನ್ ಡಿಸ್‍ಪ್ಲೇಯೊಂದಿಗೆ ಉದ್ದವಾದ ಪನೋರಮಿಕ್ ಸನ್‌ರೂಫ್, 10.25 ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ವಿಶೇಷ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ.

ಭಾರತದಲ್ಲಿ ಟಾಟಾ ನೆಕ್ಸಾನ್ iCNG ಬೆಲೆ

ಟಾಟಾ ಮೋಟಾರ್ಸ್‌ನ ಈ ಎಸ್‌ಯುವಿಯ ಸಿಎನ್‌ಜಿ ರೂಪಾಂತರದ ಬೆಲೆ ರೂ 8 ಲಕ್ಷ 99 ಸಾವಿರದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಸಿಎನ್‌ಜಿಯ ಟಾಪ್ ವೆರಿಯಂಟ್‌ಗಾಗಿ ನೀವು 14 ಲಕ್ಷದ 59 ಸಾವಿರ (ಎಕ್ಸ್ ಶೋ ರೂಂ) ಖರ್ಚು ಮಾಡಬೇಕಾಗುತ್ತದೆ. ಇಸರ ಸ್ಮಾರ್ಟ್​+ ರೂಪಾಂತರದ ಬೆಲೆ ರೂ. 9.69 ಲಕ್ಷ, ಸ್ಮಾರ್ಟ್​+ S ಬೆಲೆ 9.99 ಲಕ್ಷ, ಪ್ಯೂರ್ ಬೆಲೆ ರೂ. 10.69 ಲಕ್ಷ, ಪ್ಯೂರ್ ಎಸ್ ಬೆಲೆ ರೂ. 10.99 ಲಕ್ಷ, ಕ್ರಿಯೇಟಿವ್ ಬೆಲೆ ರೂ. 11.69 ಲಕ್ಷ, ಕ್ರಿಯೇಟಿವ್ + ಬೆಲೆ ರೂ. 12.19 ಲಕ್ಷ ಮತ್ತು ಫಿಯರ್‌ಲೆಸ್ + ಬೆಲೆ 14.59 ಲಕ್ಷ ರೂ. ಆಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ ಬೆಲೆಗಳಾಗಿವೆ.

ಈ ಎಸ್‌ಯುವಿಯ ವಿನ್ಯಾಸದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದು ಹೊಸ ಫೇಸ್‌ಲಿಫ್ಟ್ ಮಾದರಿಯಂತಿದೆ. ಆದರೆ ಕ್ಯಾಬಿನ್ ಅನ್ನು ಹೊಸ ಟಚ್‌ಸ್ಕ್ರೀನ್ ಸೆಟ್-ಅಪ್ ಮತ್ತು ಎರಡು-ಸ್ಪೋಕ್ ಸ್ಟೀರಿಂಗ್ ವೀಲ್‌ನೊಂದಿಗೆ ಮರುವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಎಸಿ ವೆಂಟ್​ಗಳನ್ನು ಸ್ವಲ್ಪ ತೆಳುವಾಗಿ ಮಾಡಲಾಗಿದೆ. ಡ್ಯಾಶ್‌ಬೋರ್ಡ್ ಕಾರ್ಬನ್-ಫೈಬರ್‌ನಂತಹ ಫಿನಿಶ್‌ನೊಂದಿಗೆ ಲೆದರ್ ಇನ್ಸರ್ಟ್ ಅನ್ನು ಪಡೆಯುತ್ತದೆ.

2024 ಟಾಟಾ ನೆಕ್ಸಾನ್ ಇವಿ: ಅಪ್‌ಡೇಟ್ ಏನು?

ಈಗ ನೀವು ಟಾಟಾ ನೆಕ್ಸಾನ್ EV ಯಲ್ಲಿ 45kWh ನ ದೊಡ್ಡ ಬ್ಯಾಟರಿಯನ್ನು ಪಡೆಯುತ್ತೀರಿ, ಒಂದು ಪೂರ್ಣ ಚಾರ್ಜ್‌ನಲ್ಲಿ ಈ ವಾಹನವು 489 ಕಿಲೋಮೀಟರ್‌ಗಳವರೆಗೆ ದೂರವನ್ನು ಕ್ರಮಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಎಲೆಕ್ಟ್ರಿಕ್ ಎಸ್​ಯುವಿ ಹೊಸ ರೂಪಾಂತರದ ಬೆಲೆ 13.99 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.

Whats_app_banner