ಚಳಿಗಾಲದಲ್ಲಿ ಕಾರು-ಬೈಕ್‌ ಬೇಗ ಸ್ಟಾರ್ಟ್‌ ಆಗಲ್ಲ ಯಾಕೆ? ಶೀತವಾಗಿರಬೇಕು ಅಂದುಕೊಳ್ಳಬೇಡಿ, ಚಳಿಗಾಲದಲ್ಲಿ ಗಾಡಿ ನಿರ್ವಹಣೆ ಹೀಗಿರಲಿ
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಕಾರು-ಬೈಕ್‌ ಬೇಗ ಸ್ಟಾರ್ಟ್‌ ಆಗಲ್ಲ ಯಾಕೆ? ಶೀತವಾಗಿರಬೇಕು ಅಂದುಕೊಳ್ಳಬೇಡಿ, ಚಳಿಗಾಲದಲ್ಲಿ ಗಾಡಿ ನಿರ್ವಹಣೆ ಹೀಗಿರಲಿ

ಚಳಿಗಾಲದಲ್ಲಿ ಕಾರು-ಬೈಕ್‌ ಬೇಗ ಸ್ಟಾರ್ಟ್‌ ಆಗಲ್ಲ ಯಾಕೆ? ಶೀತವಾಗಿರಬೇಕು ಅಂದುಕೊಳ್ಳಬೇಡಿ, ಚಳಿಗಾಲದಲ್ಲಿ ಗಾಡಿ ನಿರ್ವಹಣೆ ಹೀಗಿರಲಿ

ಚಳಿಗಾಲದಲ್ಲಿ ಬೆಳಗ್ಗೆ ಕಾರು, ಬೈಕ್‌, ಸ್ಕೂಟರ್‌ ಸೇರಿದಂತೆ ನಿಮ್ಮ ವಾಹನ ಬೇಗ ಸ್ಟಾರ್ಟ್‌ ಆಗೋದಿಲ್ವ? ಈ ರೀತಿ ಕೋಲ್ಡ್‌ ವೆದರ್‌ನಲ್ಲಿ ವಾಹನ ಸ್ಟಾರ್ಟ್‌ ಆಗದೆ ಇರಲು ಕಾರಣಗಳು ಸಾಕಷ್ಟು ಇವೆ. ಅದಕ್ಕೆ ಪರಿಹಾರಗಳೂ ಇಲ್ಲಿವೆ.

ಚಳಿಗಾಲದಲ್ಲಿ ಕಾರು-ಬೈಕ್‌ ಬೇಗ ಸ್ಟಾರ್ಟ್‌ ಆಗಲ್ಲ ಯಾಕೆ? ಶೀತವಾಗಿರಬೇಕು ಅಂದುಕೊಳ್ಳಬೇಡಿ
ಚಳಿಗಾಲದಲ್ಲಿ ಕಾರು-ಬೈಕ್‌ ಬೇಗ ಸ್ಟಾರ್ಟ್‌ ಆಗಲ್ಲ ಯಾಕೆ? ಶೀತವಾಗಿರಬೇಕು ಅಂದುಕೊಳ್ಳಬೇಡಿ (freepix)

ವರ್ಷದ ಕೊನೆಯ ತಿಂಗಳು ಹತ್ತಿರದಲ್ಲಿದೆ. ಬೆಂಗಳೂರು, ಮೈಸೂರು, ಮಡಿಕೇರಿ, ಶಿವಮೊಗ್ಗ, ಹಾಸನ ಸೇರಿದಂತೆ ಕರ್ನಾಟಕದ ಬಹುತೇಕ ಕಡೆಗಳಲ್ಲಿ "ಚಳಿ ಚಳಿ ತಾಳೇನು ಈ ಚಳಿಯಾ" ಎನ್ನುವ ಸ್ಥಿತಿಯಿದೆ. ರಾಜ್ಯದ ಬಹುತೇಕ ಕಡೆ ಶೀತಗಾಳಿ ಆವರಿಸಿಕೊಂಡಿದೆ. ಮುಂಜಾನೆ ಅಂತೂ ಮಂಜಿನಿಂದ ಕಣ್ಣೇ ಕಾಣಿಸದ ಸ್ಥಿತಿ ಇದೆ. ಚಳಿಯೆಂದು ಬಿಸಿಲು ಬರುವ ತನಕ ಬೆಚ್ಚಗೆ ಹೊದ್ದು ಮಲಗಿದರೆ ದಿನನಿತ್ಯದ ಬಂಡಿ ಸಾಗದು. ಹೀಗಾಗಿ, ಬೆಳಗ್ಗೆ ಬೇಗ ಎದ್ದು ಅಥವಾ ಬೆಳಗ್ಗೆ ಎಂಟು ಒಂಬತ್ತು ಗಂಟೆಯೊಳಗೆ ಕೆಲಸ ಅಥವಾ ಇತರೆ ಅವಶ್ಯಕತೆಗಾಗಿ ಹೊರಗೆ ಹೋಗುವುದು ಅನಿವಾರ್ಯ. ಇಂತಹ ಸಮಯದಲ್ಲಿ ಸಾಕಷ್ಟು ಜನರು ಕಾರು, ಬೈಕು, ರಿಕ್ಷಾ, ಲಾರಿ, ಜೀಪು ಸೇರಿದಂತೆ ತಮ್ಮ ಬದುಕಿನ ಬಂಡಿಗೆ ನೆರವಾಗುವ ವಾಹನವನ್ನು ಸ್ಟಾರ್ಟ್‌ ಮಾಡುತ್ತಾರೆ.

ಆದರೆ, ಚಳಿಗಾಲದಲ್ಲಿ ನಿಮ್ಮ ವಾಹನಗಳು ಬೇಗ ಸ್ಟಾರ್ಟ್‌ ಆಗದ ತೊಂದರೆ ಅನುಭವಿಸಬಹುದು. ಸ್ಟ್ರಾರ್ಟರ್‌ ಎಷ್ಟು ಸಾರಿ ಹೊತ್ತಿದರೂ "ನನ್ನಿಂದ ಸ್ಟಾರ್ಟ್‌ ಆಗಲು ಸಾಧ್ಯವಿಲ್ಲ" ಎಂದು ವಿಚಿತ್ರ ಸದ್ದು ಮಾಡುತ್ತ, ಕೇವಲ ಸ್ಪಾರ್ಕ್‌ ಆದ ಟಕ್‌ ಟಕ್‌ ಸದ್ದು ಮಾತ್ರ ಕೇಳುತ್ತಾ ಇರಬಹುದು. ಮೊದಲೆಲ್ಲ ಒಂದೇ ಕಿಕ್‌ಗೆ, ಒಂದೆ ಬಟನ್‌ ಪ್ರೆಸ್‌ಗೆ ಸ್ಟಾರ್ಟ್‌ ಆಗುತ್ತಿದ್ದ ಕಾರು, ಬೈಕ್‌ ಅಥವಾ ಸ್ಕೂಟರ್‌ ಸಾಕಷ್ಟು ಹೊತ್ತಿನ ಬಳಿಕ ಸ್ಟಾರ್ಟ್‌ ಆಗುತ್ತಿರಬಹುದು. ಚಳಿಗಾಲದಲ್ಲಿ ನಿಮ್ಮ ಬಂಡಿ ಈ ರೀತಿಯಾಗುತ್ತಿದ್ದರೆ ಅದಕ್ಕೆ ಹಲವು ಕಾರಣಗಳು ಇರಬಹುದು.

ಚಳಿಗಾಲದಲ್ಲಿ ಮನುಷ್ಯರಿಗೆ ಚಳಿ, ಜ್ವರ, ಶೀತ, ನೆಗಡಿ ಎಂದೆಲ್ಲ ಹತ್ತು ಹಲವು ಕಾಯಿಲೆಗಳು ಬರುತ್ತವೆ. ಕಬ್ಬಿಣ, ಪ್ಲಾಸ್ಟಿಕ್‌ ಹೊಂದಿರುವ ವಾಹನಗಳಿಗೂ ಶೀತವಾಗುವುದು ಸಹಜ. ಚಳಿಗಾಲದಲ್ಲಿ ನಿಮ್ಮ ವಾಹನದ ಬ್ಯಾಟರಿ ವೀಕ್‌ ಆಗಿರಬಹುದು. ತಂಪಾದ ವಾತಾವರಣ ವಾಹನದ ಪವರ್‌ ತಗ್ಗಿಸಿರಬಹುದು. ಎಂಜಿನ್‌ ಆಯಿಲ್‌ ಚಳಿಗೆ ಗಟ್ಟಿಯಾಗಿರಬಹುದು. ಸ್ಟಾರ್ಟರ್‌ ಮೋಟಾರ್‌ನಲ್ಲಿ ತೊಂದರೆ ಇರಬಹುದು.

ಚಳಿಗಾಲದಲ್ಲಿ ಕಾರು-ಬೈಕ್‌ ಬೇಗ ಸ್ಟಾರ್ಟ್‌ ಆಗಲ್ಲ ಯಾಕೆ?

  1. ಬ್ಯಾಟರಿ ತೊಂದರೆಗಳು: ತಣ್ಣಗಿನ ವಾತಾವಣ ಬ್ಯಾಟರಿ ಪವರ್‌ ಅನ್ನು ಬೇಗ ಡ್ರೈನ್‌ ಮಾಡುತ್ತದೆ. ಕೊಂಚ ಚಾರ್ಜ್‌ ಇರುವ ಬ್ಯಾಟರಿಗಳು, ಅರ್ಧ ಚಾರ್ಜ್‌ ಆಗಿರುವ ಬ್ಯಾಟರಿಗಳು ಇಂತಹ ಸಂದರ್ಭದಲ್ಲಿ ಬೇಗ ಡ್ರೈನ್‌ ಆಗುತ್ತದೆ.
  2. ಎಂಜಿನ್‌ ಆಯಿಲ್‌ ಗಡುಸಾಗುವುದು: ಚಳಿಗಾಲದಲ್ಲಿ ತೆಂಗಿನ ಎಣ್ಣೆ ಬಿಳಿ ಐಸ್‌ನಂತೆ ಆಗಿರುವುದನ್ನು ನೀವು ಗಮನಿಸಿರಬಹುದು. ಚಳಿಗೆ ನಿಮ್ಮ ವಾಹನದ ಎಂಜಿನ್‌ ಒಳಗಿನ ಆಯಿಲ್‌ ಅನ್ನು ದಪ್ಪಗಾಗಿಸುವ, ಒರಟಾಗಿಸುವ ಶಕ್ತಿ ಇದೆ. ಇದೇ ಕಾರಣಕ್ಕೆ ಕಾರು ಅಥವಾ ಬೈಕ್‌ ಚಳಿಗಾಲದಲ್ಲಿ ಬೇಗ ಸ್ಟಾರ್ಟ್‌ ಆಗದೆ ಇರಬಹುದು.
  3. ಸ್ಟಾರ್ಟರ್‌ ಸಮಸ್ಯೆ ಇರಬಹುದು: ಈಗ ಎಲ್ಲಾ ಒಂದು ಕ್ಲಿಕ್‌ನಲ್ಲಿ ಬೈಕ್‌ ಅಥವಾ ಸ್ಕೂಟರ್‌ ಸ್ಟಾರ್ಟ್‌ ಆಗುತ್ತವೆ. ಚಳಿಗಾಲದಲ್ಲಿ ಈ ರೀತಿಯ ಬಟನ್‌ಗಳು ಸರಿಯಾಗಿ ವರ್ಕ್‌ ಆಗದೆ ಇರಬಹುದು. ಇಂತಹ ಸಂದರ್ಭದಲ್ಲಿ ಕಾಲು ಸೋಲುವ ತನಕ ಬೈಕ್‌ಗೆ ಕಿಕ್‌ ಹೊಡೆಯುವುದೇ ಉಳಿದಿರುವ ದಾರಿ.
  4. ಇಷ್ಟು ಮಾತ್ರವಲ್ಲದೆ ನಿಮ್ಮ ವಾಹನದ ಬ್ಯಾಟರಿ ಸರಿಯಾಗಿ ರಿಚಾರ್ಜ್‌ ಆಗದೆ ಇರಬಹುದು. ಇದು ಕೋಲ್ಡ್‌ ಸ್ಟಾರ್ಟ್‌ಗೆ ಕಾರಣವಾಗಿರಬಹುದು.
  5. ಹಳೆಯ ವಾಹನಗಳಾಗಿದ್ದರೆ ಕಾರ್ಬೊರೇಟರ್‌ ತೊಂದರೆ ಇರಬಹುದು. ಇದು ಕೂಡ ಸ್ಟಾರ್ಟಿಂಗ್‌ ಪ್ರಾಬ್ಲಂ ತರಬಹುದು.

ಇದನ್ನೂ ಓದಿ: Rat Car Protection Tips: ಗಣಪತಿಯ ವಾಹನ ಕಾರಿಗೆ ಹಾನಿ ಮಾಡುವುದೇ? ಕಾರಿನ ವೈರ್‌ ಕಟ್‌ ಮಾಡುವ ಇಲಿಗಳಿಂದ ರಕ್ಷಿಸಿಕೊಳ್ಳಲು ಇಲ್ಲಿದೆ ಸಲಹೆ

ಏನು ಮಾಡಬಹುದು?

ಚಳಿಗಾಲದಲ್ಲಿ ಗಾಡಿ ಸ್ಟಾರ್ಟ್‌ ಆಗದ ತೊಂದರೆ ಇರುವವರು ಈ ಮುಂದಿನ ಕ್ರಮಗಳತ್ತ ಗಮನಹರಿಸುವುದು ಒಳ್ಳೆಯದು.

  1. ಬ್ಯಾಟರಿ ಪರಿಶೀಲಿಸಿ: ಬ್ಯಾಟರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್‌ ಆಗಿರುವುದೇ? ಬ್ಯಾಟರಿ ತೊಂದರೆ ಇರುವುದೇ ಎಂದು ಪರಿಶೀಲಿಸಿ ಸರಿಪಡಿಸಿ.
  2. ಚಳಿಗಾಲಕ್ಕೆ ಸೂಕ್ತವಾದ ಎಂಜಿನ್‌ ಆಯಿಲ್‌ಗಳನ್ನು ಬಳಸಲು ಆದ್ಯತೆ ನೀಡಿ. ಕಡಿಮೆ ಸ್ನಿಗ್ಧತೆ (lower viscosity) ಎಂಜಿನ್‌ ಆಯಿಲ್‌ ಹಾಕಿ.
  3. ಜಂಪ್‌ ಸ್ಟಾರ್ಟರ್‌: ನಿಮ್ಮ ಕಾರು ಎಷ್ಟು ಕಷ್ಟಪಟ್ಟರೂ ಸ್ಟಾರ್ಟ್‌ ಆಗದೆ ಇದ್ದರೆ ಬೇರೆ ವಾಹನದ ಬ್ಯಾಟರಿ ಬಳಸಿ ಜಂಪ್‌ ಸ್ಟಾರ್ಟ್‌ ಮಾಡಬೇಕು.
  4. ಕಾರಿಗೆ ಒಂದಿಷ್ಟು ಹೊಸ ಬಿಸಿಲು ತಾಗಲಿ. ಇದಾದ ಬಳಿಕ ಸ್ಟಾರ್ಟ್‌ ಮಾಡಲು ಯತ್ನಿಸಿ.
  5. ಕಾರು ರಿಪೇರಿಯಾಗದೆ ಸಾಕಷ್ಟು ಸಮಯವಾಗಿದ್ದರೆ ಒಮ್ಮೆ ಗ್ಯಾರೇಜ್‌ನತ್ತ ಹೋಗಿ ಬನ್ನಿ.

ಇದನ್ನೂ ಓದಿ: Car Care Tips: ಕಾರು ಎಂಜಿನ್‌ ಅತಿಯಾಗಿ ಬಿಸಿಯಾಗುವುದೇ? ತಲೆಬಿಸಿ ಮಾಡಿಕೊಳ್ಳಬೇಡಿ, ಈ ಸಲಹೆ ಅನುಸರಿಸಿ

Whats_app_banner