Beauty Tips: ಮೇಕಪ್ ಬಳಸದೆಯೇ ನೈಸರ್ಗಿಕವಾಗಿ ಹೊಳೆಯುವ ತ್ವಚೆ ನಿಮ್ಮದಾಗಬೇಕೇ: ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Beauty Tips: ಮೇಕಪ್ ಬಳಸದೆಯೇ ನೈಸರ್ಗಿಕವಾಗಿ ಹೊಳೆಯುವ ತ್ವಚೆ ನಿಮ್ಮದಾಗಬೇಕೇ: ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ

Beauty Tips: ಮೇಕಪ್ ಬಳಸದೆಯೇ ನೈಸರ್ಗಿಕವಾಗಿ ಹೊಳೆಯುವ ತ್ವಚೆ ನಿಮ್ಮದಾಗಬೇಕೇ: ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ

ಸುಂದರವಾಗಿ ಕಾಣಲು ಬಹುತೇಕರು ಮೇಕ್ಅಪ್ ಅನ್ವಯಿಸುತ್ತಾರೆ. ಆದರೆ, ಕಾಸ್ಮೆಟಿಕ್ಸ್ ಅನ್ನು ಬಳಸದೆಯೇ ನೈಸರ್ಗಿಕವಾಗಿ ನಿಮ್ಮ ತ್ವಚೆಯನ್ನು ಕಾಂತಿಯುತವಾಗಿ ಹೊಳೆಯುವಂತೆ ಮಾಡಬಹುದು. ತ್ವಚೆಯಸ್ವ-ಆರೈಕೆ ಹಾಗೂ ಆರೋಗ್ಯಕರ ಅಭ್ಯಾಸಗಳತ್ತ ಗಮನ ಕೇಂದ್ರೀಕರಿಸುವುದು ಬಹಳ ಮುಖ್ಯ. ಅದು ಹೇಗೆ ಅನ್ನೋ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಮೇಕಪ್ ಇಲ್ಲದೆ ಸುಂದರವಾಗಿ ಕಾಣಲು ಇಲ್ಲಿದೆ ಸಲಹೆ.
ಮೇಕಪ್ ಇಲ್ಲದೆ ಸುಂದರವಾಗಿ ಕಾಣಲು ಇಲ್ಲಿದೆ ಸಲಹೆ. (freepik)

ಹೆಣ್ಮಕ್ಕಳಿಗೆ ಸೌಂದರ್ಯದ ಕಾಳಜಿ ತುಸು ಹೆಚ್ಚೇ ಇರುತ್ತದೆ. ತಾವು ಸುಂದರವಾಗಿ ಕಾಣಲು ಬಹುತೇಕರು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಬ್ಯೂಟಿ ಪಾರ್ಲರ್ ಗೆ ಭೇಟಿ ನೀಡಿ ಫೇಶಿಯಲ್ ಮಾಡಿಸುವುದು, ಅಥವಾ ಮನೆಯಲ್ಲೇ ಅಡುಗೆ ಪದಾರ್ಥಗಳನ್ನು ಬಳಸಿ ಮುಖಕ್ಕೆ ಹಚ್ಚುವುದು. ಹೀಗೆ ಹೆಂಗಳೆಯರಂತೂ ತಾವು ಸುಂದರವಾಗಿ ಕಾಣಲು ನಾನಾ ಸರ್ಕಸ್‍ಗಳನ್ನು ಮಾಡುತ್ತಲೇ ಇರುತ್ತಾರೆ. ಇನ್ನೂ ಕೆಲವರಂತೂ ಮುಖಕ್ಕೆ ಮೇಕಪ್ ಹಚ್ಚದೆ ಹೊರಗೆ ಕಾಲಿಡೋದೇ ಇಲ್ಲ. ಮೇಕಪ್ ಅಂದ್ರೆ ಸಾಕು ಪಂಚಪ್ರಾಣ ಎನ್ನುತ್ತಿರುತ್ತಾರೆ. ಆದರೆ, ಈ ಕಾಸ್ಮೆಟಿಕ್ಸ್ ಗಳ ಅತಿಯಾದ ಬಳಕೆಯಿಂದ ತ್ವಚೆ ಕಳೆಗುಂದಬಹುದು. ಮೇಕಪ್ ಬಳಸದೆಯೇ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಬಹುದು. ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಹಾಗೂ ಪ್ರತಿದಿನ ಸುಂದರವಾಗಿ ಕಾಣಲು ಇಲ್ಲಿ ನೀಡಲಾಗಿರುವ ಸರಳ ಸಲಹೆಗಳನ್ನು ಪಾಲಿಸಬಹುದು. ಇದರಿಂದ ಕಾಂತಿಯುತವಾಗಿ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.

ಹೈಡ್ರೇಟೆಡ್ ಆಗಿರಿ: ಸಾಕಷ್ಟು ನೀರು ಕುಡಿಯುವುದರಿಂದ ನಿಮ್ಮ ತ್ವಚೆಯ ಕಾಂತಿ ಹೆಚ್ಚಿಸಲು ಸಹಕಾರಿಯಾಗಿದೆ. ನೈಸರ್ಗಿಕವಾಗಿ ಸುಂದರವಾಗಿ ಕಾಣಬೇಕೆಂದರೆ ದೇಹವನ್ನು ಹೈಡ್ರೀಕರಿಸಿಕೊಳ್ಳುವುದು ಬಹಳ ಮುಖ್ಯ. ಸಾಕಷ್ಟು ನೀರು ಕುಡಿದರೆ, ನಿಮ್ಮ ತ್ವಚೆಯ ತೇವಾಂಶವನ್ನು ಸಮತೋಲನದಲ್ಲಿಡಬಹುದು. ಇದು ಟಾಕ್ಸಿನ್‌ಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ದೇಹವು ಹೈಡ್ರೇಟೆಡ್ ಆಗಿದ್ದರೆ ತ್ವಚೆಯು ಆರೋಗ್ಯಕರವಾಗಿ, ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ.

ತ್ವಚೆಯ ಆರೈಕೆಯ ದಿನಚರಿಯನ್ನು ಅನುಸರಿಸಿ: ನೈಸರ್ಗಿಕವಾಗಿ ಸುಂದರವಾದ ತ್ವಚೆ ಪಡೆಯಲು ಸ್ಥಿರವಾದ ತ್ವಚೆಯ ದಿನಚರಿಯನ್ನು ಅನುಸರಿಸುವುದು ಅತ್ಯಗತ್ಯ. ಆರೋಗ್ಯಕರ, ಹೊಳೆಯುವ ಚರ್ಮವನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ಮುಖವನ್ನು ಶುಚಿಗೊಳಿಸುತ್ತಿರಿ. ನಿಯಮಿತವಾದ ಶುಚಿಗೊಳಿಸುವಿಕೆಯು ಕಲ್ಮಶಗಳನ್ನು ಮತ್ತು ಹೆಚ್ಚುವರಿ ತೈಲಗಳನ್ನು ತೆಗೆದುಹಾಕುತ್ತದೆ. ಚರ್ಮದ ಪ್ರಕಾರಕ್ಕೆ ಸೂಕ್ತವಾದ ಉತ್ಪನ್ನಗಳನ್ನು ಬಳಸುವುದು ನೈಸರ್ಗಿಕ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಸಾಕಷ್ಟು ನಿದ್ದೆ ಅತ್ಯಗತ್ಯ: ತ್ವಚೆಯ ಆರೋಗ್ಯ ಮತ್ತು ಯೌವನದಂತೆ ಕಾಣಲು ಸಾಕಷ್ಟು ನಿದ್ದೆ ಮಾಡುವುದು ಅತ್ಯಗತ್ಯವಾಗಿದೆ. ಪ್ರತಿ ರಾತ್ರಿ 7 ರಿಂದ 9 ಗಂಟೆಗಳ ಗುಣಮಟ್ಟದ ನಿದ್ದೆಯನ್ನು ಪಡೆಯಬೇಕು. ಇದರಿಂದ ಡಾರ್ಕ್ ಸರ್ಕಲ್, ಪಫಿನೆಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿ ರಾತ್ರಿ ಮಲಗುವ ಸಮಯವನ್ನು ನಿಗದಿಗೊಳಿಸಿ, ಅದೇ ಸಮಯಕ್ಕೆ ಸರಿಯಾಗಿ ಮಲಗಿ. ಮಲಗುವ ಮುನ್ನ ಫೋನ್, ಲ್ಯಾಪ್‍ಟಾಪ್‍ಗಳಿಂದ ದೂರವಿದ್ದರೆ ಗುಣಮಟ್ಟದ ನಿದ್ದೆ ಪಡೆಯಬಹುದು. ಚೆನ್ನಾಗಿ ನಿದ್ದೆ ಮಾಡಿದ್ರೆ ನಿಮ್ಮ ತ್ವಚೆಯ ಕಾಂತಿಗೂ ಸಹಕಾರಿಯಾಗಲಿದೆ.

ಸಮತೋಲಿತ ಆಹಾರ ಸೇವಿಸಿ: ನಿಮ್ಮ ಚರ್ಮವನ್ನು ಒಳಗಿನಿಂದ ಪೋಷಿಸಲು ಹಣ್ಣು-ತರಕಾರಿಗಳು, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಸಮತೋಲಿತ ಆಹಾರವನ್ನು ಸೇವಿಸುವುದರಿಂದ ನೈಸರ್ಗಿಕವಾಗಿ ತ್ವಚೆ ಹೊಳೆಯುವಂತೆ ಮಾಡುತ್ತದೆ. ಮಾತ್ರವಲ್ಲ ಒಟ್ಟಾರೆ ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗಿದೆ. ಹೀಗಾಗಿ ಹಣ್ಣುಗಳು, ತರಕಾರಿಗಳು ಮತ್ತು ಪೋಷಕಾಂಶಭರಿತ ಆಹಾರ ಸೇವಿಸುವ ಮೂಲಕ ಆಕ್ಸಿಡೇಟಿವ್ ಒತ್ತಡವನ್ನು ಸುಧಾರಿಸಲು ಇದು ಸಹಾಯಕವಾಗಿದೆ. ಜೊತೆಗೆ ಒಮೆಗಾ-3 ಕೊಬ್ಬಿನಾಮ್ಲಗಳೊಂದಿಗೆ ವಿಟಮಿನ್ ಎ, ಸಿ ಮತ್ತು ಇ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವುದರಿಂದ ಮುಖದ ಕಾಂತಿ ಹೆಚ್ಚಿಸಲು, ತಾರುಣ್ಯದಂತೆ ಕಾಣಲು ಸಹಕಾರಿಯಾಗಿದೆ.

ನಿಯಮಿತವಾಗಿ ವ್ಯಾಯಾಮ ಮಾಡಿ: ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ಚರ್ಮದ ಕೋಶಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ತಲುಪಿಸಲು ಸಹಾಯ ಮಾಡುತ್ತದೆ. ಒಟ್ಟಾರೆ ತ್ವಚೆಗೆ ಆರೋಗ್ಯಕರ, ನೈಸರ್ಗಿಕ ಹೊಳಪನ್ನು ನೀಡುತ್ತದೆ.

ನೈಸರ್ಗಿಕ ಹೈಲೈಟರ್‌ಗಳ ಬಳಕೆಗೆ ಒತ್ತು ನೀಡಿ: ಮೇಕಪ್ ಉತ್ಪನ್ನಗಳನ್ನು ಅವಲಂಬಿಸದೆ ನೈಸರ್ಗಿಕ ಹೈಲೈಟರ್‌ಗಳನ್ನು ಬಳಸುವುದು ತ್ವಚೆಯ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ತೆಂಗಿನೆಣ್ಣೆ, ಬಾದಾಮಿ ಎಣ್ಣೆ ಅಥವಾ ಅಲೋವೆರಾ ಜೆಲ್‌ನಂತಹ ನೈಸರ್ಗಿಕ ಪದಾರ್ಥಗಳನ್ನು ತ್ವಚೆಗೆ ಅನ್ವಯಿಸಬಹುದು. ಇವು ಕಾಂತಿಯುತ ಹೊಳಪನ್ನು ನೀಡುವುದು, ಚರ್ಮವನ್ನು ತೇವಗೊಳಿಸುವುದು ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸುತ್ತದೆ. ಈ ನೈಸರ್ಗಿಕ ಹೈಲೈಟರ್‌ಗಳನ್ನು ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ತ್ವಚೆಯು ಕಾಂತಿಯುತವಾಗಿ ಹೊಳೆಯುವಂತೆ ಮಾಡಲು ಸಹಕಾರಿಯಾಗಿದೆ.

ಉತ್ತಮ ನೈರ್ಮಲ್ಯ ಕಾಪಾಡಿ: ನಿಯಮಿತವಾಗಿ ಮುಖವನ್ನು ತೊಳೆಯುವುದು, ಕೂದಲನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದರಿಂದ ನಿಮ್ಮ ಮುಖ ತಾಜಾ ಮತ್ತು ಪ್ರಕಾಶಮಾನವಾಗಿ ಹೊಳೆಯಲು ಕಾರಣವಾಗುತ್ತದೆ. ನಿಯಮಿತವಾಗಿ ಮುಖವನ್ನು ತೊಳೆಯುವುದರಿಂದ ಕೊಳಕು, ಎಣ್ಣೆಯುಕ್ತ ಅಂಶ ಮತ್ತು ಕಲ್ಮಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಯಮಿತ ಸ್ನಾನ, ಶುಚಿಗೊಳಿಸಿದ ಉಡುಪು ಸೇರಿದಂತೆ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಮುಖ್ಯ

ಒಟ್ಟಿನಲ್ಲಿ ದೈನಂದಿನ ದಿನಚರಿಯಲ್ಲಿ ಈ ಸಲಹೆಗಳನ್ನು ಪಾಲಿಸುವ ಮೂಲಕ ಮೇಕ್ಅಪ್ ಬಳಸದೆಯೇ ನೈಸರ್ಗಿಕವಾಗಿ ಸುಂದರ ಹಾಗೂ ಕಾಂತಿಯುತವಾಗಿ ಹೊಳೆಯುವ ತ್ವಚೆ ನಿಮ್ಮದಾಗಬಹುದು.

Whats_app_banner