ನಿಮ್ಮ ಮಗುವಿನ ಸ್ಕೂಲ್‌ ಬದಲಾಯಿಸುತ್ತಿದ್ದೀರಾ? ಹಾಗಾದ್ರೆ ನಿಮ್ಮ ಮಕ್ಕಳಿಗೆ ಆ ಬಗ್ಗೆ ಇರುವ ಭಯ ನಿವಾರಣೆ ಮಾಡಲು ಈ ರೀತಿ ಮಾತಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ನಿಮ್ಮ ಮಗುವಿನ ಸ್ಕೂಲ್‌ ಬದಲಾಯಿಸುತ್ತಿದ್ದೀರಾ? ಹಾಗಾದ್ರೆ ನಿಮ್ಮ ಮಕ್ಕಳಿಗೆ ಆ ಬಗ್ಗೆ ಇರುವ ಭಯ ನಿವಾರಣೆ ಮಾಡಲು ಈ ರೀತಿ ಮಾತಾಡಿ

ನಿಮ್ಮ ಮಗುವಿನ ಸ್ಕೂಲ್‌ ಬದಲಾಯಿಸುತ್ತಿದ್ದೀರಾ? ಹಾಗಾದ್ರೆ ನಿಮ್ಮ ಮಕ್ಕಳಿಗೆ ಆ ಬಗ್ಗೆ ಇರುವ ಭಯ ನಿವಾರಣೆ ಮಾಡಲು ಈ ರೀತಿ ಮಾತಾಡಿ

ನಿಮ್ಮ ಮಕ್ಕಳ ಸ್ಕೂಲ್ ಬದಲಾಯಿಸುತ್ತಿದ್ದೀರಾ? ಹಾಗಾದ್ರೆ ನೀವೇ ಅವರಿಗೆ ಧೈರ್ಯ ತುಂಬಬೇಕು. ಅವರಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಮಯಾವಕಾಶ ನೀಡಬೇಕು. ಅವರ ಮನಸ್ಥಿತಿಯನ್ನು ನೀವೇ ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದರೆ ನಿಮ್ಮ ಮಕ್ಕಳು ನೋವು ಅನುಭವಿಸುತ್ತಾರೆ.

ಮಕ್ಕಳಿಗೆ ನೀವೇ ಧೈರ್ಯ ತುಂಬಿ
ಮಕ್ಕಳಿಗೆ ನೀವೇ ಧೈರ್ಯ ತುಂಬಿ

ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದಾಗಿ ಶಾಲೆ ಬದಲಿಸಬೇಕಾಗಿ ಬರುತ್ತದೆ. ಆಗ ಮಕ್ಕಳು ತಮ್ಮ ಸ್ನೇಹಿತರಿಂದ ದೂರವಾಗುತ್ತೇವೆ ಎಂದು ಬೇಸರ ಮಾಡಿಕೊಳ್ಳುತ್ತಾರೆ. ಹಾಗೆ ಹೊಸ ಶಾಲೆಯಲ್ಲಿ ಅವರು ಹೇಗೆ ಹೊಂದಿಕೊಳ್ಳುತ್ತಾರೆ ಎನ್ನುವ ಭಯ ಪಾಲಕರಲ್ಲೂ ಇರುತ್ತದೆ. ಇಂತಹ ಸಂದರ್ಭದಲ್ಲಿ ಪಾಲಕರು ಮಕ್ಕಳಿಗೆ ಧೈರ್ಯ ತುಂಬಬೇಕು. ನಿಮ್ಮ ಮಾತುಗಳಿಂದ ಅವರು ಪರಿಣಾಮ ಹೊಂದುತ್ತಾರೆ. ಮಕ್ಕಳಲ್ಲಿ ಮಾನಸಿಕವಾಗಿ ಒಂದು ಹೆದರಿಕೆ ಇರುತ್ತದೆ. ಅದನ್ನು ನಿವಾರಿಸಲು ನೀವು ಯಾವ ರೀತಿ ಮಾತನಾಡಬೇಕು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ. ಮಕ್ಕಳಿಗೆ ತಮ್ಮ ಸುತ್ತಮುತ್ತಲಿನ ವಾತಾವರಣವು ಸಕಾರಾತ್ಮಕವಾಗಿದ್ದರೆ ಮಾತ್ರ ಅಧ್ಯಯನದ ಮೇಲೆ ಕೇಂದ್ರಿಸಲು ಸಾಧ್ಯ. ಇಲ್ಲದಿದ್ದರೆ ಅವರು ಕಲಿಕೆಯಲ್ಲಿ ಹಿಂದೆ ಉಳಿಯುತ್ತಾರೆ.

ಭಯ ಹಾಗೂ ಒತ್ತಡ ನಿವಾರಣೆ

ಭಯ ಹಾಗೂ ಒತ್ತಡಕ್ಕೆ ಒಳಗಾಗುತ್ತಾರೆ. ಇದು ಕ್ರಮೇಣ ಅವರ ಪಾಠದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಶಾಲೆಗಳಲ್ಲಿ ಇರುತ್ತದೆ ತಮ್ಮ ಸ್ಕೂಲ್ ಗೆ ಹೊಸದಾಗಿ ಬಂದ ಮಕ್ಕಳನ್ನು ಬೇರೆ ರೀತಿ ನೋಡುವುದು ಕೆಲ ಮಕ್ಕಳ ಗುಣವಾಗಿರುತ್ತದೆ. ಯಾರು ಅವರನ್ನು ಮೊದಲನೆಯದಾಗಿ ಸ್ನೇಹಿತರನ್ನಾಗಿಸಿ ಕೊಕೊಳ್ಳುವುದಿಲ್ಲ. ಆಗ ನಿಮ್ಮ ಮಕ್ಕಳಿಗೆ ಏಕತಾನತೆ ಕಾಡುತ್ತದೆ. ಅಂತ ಸಂದರ್ಭದಲ್ಲಿ ನೀವೇ ಅವರ ಸ್ನೇಹಿತರಾಗಿ ವರ್ತಿಸಬೇಕು. ಶಾಲೆಯಲ್ಲಿ ಏನಾಯಿತು ಎಂಬುದನ್ನ ನೀವೇ ಕೇಳಿ ತಿಳಿದುಕೊಳ್ಳಬೇಕು.

ಈ ರೀತಿ ಧೈರ್ಯ ತುಂಬಿ

ದಿನ ಕಳೆದಂತೆ ನಿನಗೂ ಅಲ್ಲಿ ಸ್ನೇಹಿತರಾಗುತ್ತಾರೆ. ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಬಾಲ್ಯದಿಂದಲೇ ಮಕ್ಕಳಲ್ಲಿ ಸ್ವಾಭಿಮಾನ ಹೆಚ್ಚಿಗೆ ಕಲಿಸಬೇಕು. ವಿಶೇಷ ಗುಣಗಳನ್ನು ಪ್ರೋತ್ಸಾಹಿಸಿ ಗುರುತಿಸಿ ಅಧ್ಯಯನದ ಜೊತೆಗೆ ಚಿತ್ರಕಲೆ, ಪುಸ್ತಕಗಳನ್ನು ಓದುವ ಹವ್ಯಾಸ ಬೇರೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ಪ್ರತಿಭೆಯನ್ನು ಅವರಿಗೆ ಕೊಡಿಸಬೇಕು. ಹೀಗಿದ್ದಾಗ ಶಾಲೆಯಲ್ಲಿ ಸ್ನೇಹಿತರು ಸಿಗದೇ ಇದ್ದರೂ ಸಹ ಡ್ಯಾನ್ಸಿಂಗ್ ಕ್ಲಾಸ್ ಅಥವಾ ಸ್ಪೋರ್ಟ್ಸ್ ಕ್ಲಾಸ್ ನಲ್ಲಿ ಅವರಿಗೆ ಸ್ನೇಹಿತರು ಸಿಗುತ್ತಾರೆ.

ನಿಮ್ಮ ಮಕ್ಕಳನ್ನು ಯಾವಾಗಲೂ ಟೀಕೆ ಮಾಡಬೇಡಿ

ಅವರು ಈಗಷ್ಟೇ ಹೊಂದಿಕೊಳ್ಳುತ್ತಾ ಇರುತ್ತಾರೆ ಯಾಕೆ ನೀನು ಇಷ್ಟು ಸ್ಲೋ ಲರ್ನಿಂಗ್ ಮಾಡ್ತಾ ಇದ್ದೀಯ? ಎಂಬ ಪ್ರಶ್ನೆಯನ್ನು ಕೇಳಬೇಡಿ. ನೀನು ಏನನ್ನು ಹೇಳದೆ ಇತರರು ನಿನ್ನನ್ನು ಚುಡಾಯಿಸುತ್ತಿದ್ದರೆ ಸುಮ್ಮನೆ ಇರಬೇಡ ಎನ್ನಿ. ನಿಮ್ಮ ಮಕ್ಕಳ ಸಮಸ್ಯೆಯನ್ನ ಮನೆಯಲ್ಲಿ ಪರಿಹರಿಸಿ ಚರ್ಚಿಸಿ ಶಿಕ್ಷಕರೊಂದಿಗೆ ಮಾತನಾಡಿ ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನೀವೇ ಸಹಾಯ ಮಾಡಿ.

Whats_app_banner