Bread Manchurian Recipe: ಮನೆಗೆ ತಂದ ಬ್ರೆಡ್ ಹೆಚ್ಚಿಗೆ ಉಳಿದಿದ್ಯಾ...ಸಂಜೆ ಸ್ನಾಕ್ಸ್‌ಗೆ ಅದರಿಂದ್ಲೇ ರುಚಿಯಾದ ಸ್ನಾಕ್ಸ್ ತಯಾರಿಸಿ
ಮನೆಗೆ ತಂದಿಟ್ಟಿ ಬ್ರೆಡ್ ಹೆಚ್ಚಿಗೆ ಉಳಿದಿದ್ದರೆ ಅದನ್ನು ಬಳಸಿ ಬ್ರೆಡ್ ಮಂಚೂರಿಯನ್ ಮಾಡಬಹುದು. ಇದು ತಿನ್ನಲು ಬಹಳ ರುಚಿಯಾಗಿರುತ್ತದೆ. ಸಂಜೆಯ ಸ್ನಾನ್ಸ್‌ಗೆ ಬ್ರೆಡ್ ಮಂಚೂರಿಯನ್ ಹೇಳಿ ಮಾಡಿಸಿದ ಸ್ನಾಕ್ಸ್.
ಕೆಲವೊಮ್ಮೆ ನಾವು ಮನೆಗೆ ತರುವ ಎಷ್ಟೋ ಸಾಮಗ್ರಿಗಳನ್ನು ರೆಫ್ರಿಜರೇಟರ್‌ನಲ್ಲಿಟ್ಟು ಮರೆತುಬಿಡುತ್ತೇವೆ. ಏನೋ ಹುಡುಕುವಾಗ ಅದನ್ನು ತಂದಿರುವುದು ನೆನಪಿಗೆ ಬರುತ್ತದೆ. ಅಷ್ಟರಲ್ಲಿ ಆ ವಸ್ತುವಿನ ಅವಧಿ ಮುಗಿಯುತ್ತಾ ಬರುತ್ತದೆ. ಒಂದೇ ದಿನದಲ್ಲಿ ಅದೆಲ್ಲವನ್ನು ತಿಂದು ಮುಗಿಸಲು ಸಾಧ್ಯವಿಲ್ಲ. ಆ ಸಮಯದಲ್ಲಿ ಅದನ್ನು ಬಳಸಿ ರುಚಿಯಾದ ಸ್ನಾಕ್ಸ್ ಮಾಡಿದರೆ ನಿಮಷಕ್ಕೆ ಖಾಲಿಯಾಗುತ್ತದೆ.
ಬ್ರೆಡ್ ಕೂಡಾ ಹಾಗೇ. ಕೆಲವೊಮ್ಮೆ ಅದನ್ನು ತಂದು ಮರೆಯುತ್ತೇವೆ. ಎಸೆಯಲೂ ಮನಸ್ಸಾಗುವುದಿಲ್ಲ. ಹಾಗಂತ ಒಂದೇ ಬಾರಿಗೆ ಎಲ್ಲವನ್ನೂ ತಿನ್ನಲು ಸಾಧ್ಯವಿಲ್ಲ. ಆಗ ಅದನ್ನು ಬಳಸಿ ಬ್ರೆಡ್ ಮಂಚೂರಿಯನ್ ಮಾಡಬಹುದು. ಇದು ತಿನ್ನಲು ಬಹಳ ರುಚಿಯಾಗಿರುತ್ತದೆ. ಸಂಜೆಯ ಸ್ನಾನ್ಸ್‌ಗೆ ಬ್ರೆಡ್ ಮಂಚೂರಿಯನ್ ಹೇಳಿ ಮಾಡಿಸಿದ ಸ್ನಾಕ್ಸ್. ಒಮ್ಮೆ ಟ್ರೈ ಮಾಡಿ.
ಬ್ರೆಡ್ ಮಂಚೂರಿಯನ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಬ್ರೆಡ್ - 10 ಸ್ಪೈಸ್
ಕಾರ್ನ್‌ಫ್ಲೋರ್ - 2 ಟೇಬಲ್ ಸ್ಪೂನ್
ಮೈದಾ ಹಿಟ್ಟು - 2 ಟೀ ಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ - ರುಚಿಗೆ ತಕ್ಕಷ್ಟು
ಈರುಳ್ಳಿ - 1
ಕ್ಯಾಪ್ಸಿಕಂ - 1
ಸೋಯಾ ಸಾಸ್ - 1 ಸ್ಪೂನ್
ಕರಿಮೆಣಸಿನ ಪುಡಿ - 1/4 ಟೀ ಸ್ಪೂನ್
ರೆಡ್ ಚಿಲ್ಲಿ ಸಾಸ್ - 1 ಸ್ಪೂನ್
ಟೊಮ್ಯಾಟೋ ಕೆಚಪ್ - 1 ಸ್ಪೂನ್
ವಿನೆಗರ್ - 1/2 ಸ್ಪೂನ್
ಸ್ಪ್ರಿಂಗ್ ಆನಿಯನ್ - 2 ಸ್ಪೂನ್ (ಕತ್ತರಿಸಿದ್ದು)
ಎಣ್ಣೆ - ಕರಿಯಲು
ಉಪ್ಪು - ರುಚಿಗೆ ತಕ್ಕಷ್ಟು
ಬ್ರೆಡ್ ಮಂಚೂರಿಯನ್ ತಯಾರಿಸುವ ವಿಧಾನ
ಬ್ರೆಡ್ ಅಂಚುಗಳನ್ನು ಕತ್ತರಿಸಿ ಬ್ರೆಡ್‌ಗಳನ್ನು ಕ್ಯೂಬ್‌ಗಳನ್ನಾಗಿ ಕತ್ತರಿಸಿಕೊಳ್ಳಿ (ದೊಡ್ಡ ತುಂಡುಗಳು)
ಒಂದು ಬೌಲ್‌ನಲ್ಲಿ ಕಾರ್ನ್ ಫ್ಲೋರ್, ಮೈದಾ, ಉಪ್ಪು, ಕರಿಮೆಣಸಿನ ಪುಡಿ, ಸ್ವಲ್ಪ ನೀರು ಸೇರಿಸಿ ಇಡ್ಲಿ ಹಿಟ್ಟಿನಂತೆ ಮಿಕ್ಸ್ ಮಾಡಿ
ಬ್ರೆಡ್ ತುಂಡುಗಳನ್ನು ಕಾರ್ನ್‌ಫ್ಲೋರ್ ಮಿಶ್ರಣಕ್ಕೆ ಅದ್ದಿ ಎಣ್ಣೆಯಲ್ಲಿ ಕಂದು ಬಣ್ಣ ಬರುವರೆಗೂ ಕರಿಯಿರಿ
ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವರೆಗೂ ಹುರಿಯಿರಿ.
ನಂತರ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ, ಉಪ್ಪು ಸೇರಿಸಿ ಫ್ರೈ ಮಾಡಿ
ನಂತರ ಸೋಯಾ ಸಾಸ್, ರೆಡ್ ಚಿಲ್ಲಿ ಸಾಸ್, ಟೊಮ್ಯಾಟೋ ಸಾಸ್ ಸೇರಿಸಿ
ಒಂದು ಸ್ಪೂನ್ ಕಾರ್ನ್‌ಫ್ಲೋರ್‌ಗೆ ಸ್ವಲ್ಪ ನೀರು ಸೇರಿಸಿ ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿ ಅದಕ್ಕೆ ವಿನೆಗರ್ ಸೇರಿಸಿ ಈ ಮಿಶ್ರಣವನ್ನು ಬಾಣಲೆಗೆ ಸೇರಿಸಿ
ಈ ಮಿಶ್ರಣ ಗಟ್ಟಿಯಾಗುತ್ತಿದ್ದಂತೆ ಕರಿದ ಬ್ರೆಡ್ ತುಂಡುಗಳನ್ನು ಸೇರಿಸಿ ಒಂದೆರಡು ನಿಮಿಷ ಮಿಕ್ಸ್ ಮಾಡಿ ಸ್ಟೋವ್ ಆಫ್ ಮಾಡಿ
ಸರ್ವಿಂಗ್ ಪ್ಲೇಟ್‌ಗೆ ವರ್ಗಾಯಿಸಿ ಸ್ಪ್ರಿಂಗ್ ಆನಿಯನ್‌ನಿಂದ ಗಾರ್ನಿಶ್ ಮಾಡಿ
ಗಮನಿಸಿ: ಮನೆಯಲ್ಲಿ ಸೋಯಾಸಾಸ್, ರೆಡ್ ಚಿಲ್ಲಿ ಸಾಸ್, ಟೊಮ್ಯಾಟೋ ಸಾಸ್ ಇರದಿದ್ದರೆ ಡ್ರೈ ಆಗಿ ಕೂಡಾ ಮಂಚೂರಿಯನ್ ತಯಾರಿಸಬಹುದು.
ವಿಭಾಗ