Tips for housewives: ಗೃಹಿಣಿಯರು ಬಿಡುವಿನ ವೇಳೆಯಲ್ಲಿ ಹಣ ಸಂಪಾದನೆ ಮಾಡಲು 10 ಐಡಿಯಾಗಳು
Tips to earn money: ನಮ್ಮ ಸಣ್ಣ-ಪುಟ್ಟ ಖರ್ಚನ್ನು ನಾವೆ ನೋಡಿಕೊಂಡು ಸ್ವಾಭಿಮಾನದ ಜೀವನ ನಡೆಸಲು ಒಂದಿಷ್ಟು ಟಿಪ್ಸ್ ಇಲ್ಲಿವೆ. ಗೃಹಿಣಿಯರು ಬಿಡುವಿನ ವೇಳೆಯಲ್ಲಿ ಹಣ ಸಂಪಾದಿಸಲು ಏನು ಮಾಡಬಹುದು? ಇಲ್ಲಿವೆ 10 ಐಡಿಯಾಗಳು. ಆದರೆ ಇದಕ್ಕೆ ಸಮಯ ಬೇಕಾಗುತ್ತದೆ, ಹಾಗಾಗಿ ಸ್ವಲ್ಪ ತಾಳ್ಮೆ ಇರಬೇಕು.
ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲಿಯೂ ಪುರುಷರಿಗೆ ಸರಿಸಮಾನರಾಗಿ ಮುನ್ನುಗ್ಗುತ್ತಿದ್ದಾರೆ, ಸಾಧನೆ ಮಾಡುತ್ತಿದ್ದಾರೆ. ಆದರೆ ಅನೇಕ ಮಹಿಳೆಯರು ಮದುವೆ-ಮಕ್ಕಳು-ಸಂಸಾರ-ಅನಾರೋಗ್ಯ ಹೀಗೆ ನಾನಾ ಕಾರಣಗಳಿಗೆ ಉದ್ಯೋಗ ಮಾಡಲಾಗದೆ, ಉದ್ಯೋಗ ಮುಂದುವರಿಸಲಾಗದೆ ಹೌಸ್ ವೈಫ್/ಹೋಂ ಮೇಕರ್ ಆಗಿದ್ದಾರೆ. ಹಾಗಂತ ಅವರೇನು ಆರಾಮಾಗಿ ಕುಳಿತುಕೊಳ್ಳುವುದಿಲ್ಲ. ಮನೆಕೆಲಸ ಎನ್ನುವುದು ಹೊರಗಡೆ ಮಾಡುವ ಕೆಲಸಕ್ಕಿಂತ ಹೆಚ್ಚಿರುತ್ತದೆ. ಆದರೂ ಪ್ರತಿಯೊಂದಕ್ಕೂ ಗಂಡನ ಬಳಿ ಖರ್ಚಿನ ಹಣಕ್ಕಾಗಿ ಕೈಚಾಚಬೇಕಾಗುತ್ತದೆ.
ನಮ್ಮ ಸಣ್ಣ-ಪುಟ್ಟ ಖರ್ಚನ್ನು ನಾವೆ ನೋಡಿಕೊಂಡು ಸ್ವಾಭಿಮಾನದ ಜೀವನ ನಡೆಸಲು ಒಂದಿಷ್ಟು ಟಿಪ್ಸ್ ಇಲ್ಲಿವೆ. ಗೃಹಿಣಿಯರು ಬಿಡುವಿನ ವೇಳೆಯಲ್ಲಿ ಹಣ ಸಂಪಾದಿಸಲು ಏನು ಮಾಡಬಹುದು? ಇಲ್ಲಿವೆ 10 ಐಡಿಯಾಗಳು. ಆದರೆ ಇದಕ್ಕೆ ಸಮಯ ಬೇಕಾಗುತ್ತದೆ, ಹಾಗಾಗಿ ಸ್ವಲ್ಪ ತಾಳ್ಮೆ ಇರಬೇಕು.
1) ಫ್ರೀಲ್ಯಾನ್ಸಿಂಗ್: ಮನೆಯಲ್ಲೇ ಕುಳಿತು ಹಣ ಸಂಪಾದನೆ ಮಾಡುವುದಕ್ಕೆ ಉತ್ತಮ ಮಾರ್ಗ ಫ್ರೀಲ್ಯಾಂನ್ಸಿಗ್. ಭಾಷಾನುವಾದ, ತರ್ಜುಮೆ, ಉತ್ತಮ ಬರವಣಿಗೆ, ಕಂಟೆಂಟ್ ಕ್ರಿಯೇಷನ್, ವೆಬ್ ಡೆವಲಪ್‌ಮೆಂಟ್, ಗ್ರಾಫಿಕ್ ಡಿಸೈನ್, ವಿಡಿಯೋ ಎಡಿಟಿಂಗ್ ಹೀಗೆ ಮೊದಲಾದವುಗಳಲ್ಲಿ ನಿಮಗೆ ಹಿಡಿತವಿದ್ದರೆ ಫ್ರೀಲ್ಯಾನ್ಸಿಂಗ್ ಮಾಡಬಹುದು.
2) ಯೂಟ್ಯೂಬ್ ಚಾನಲ್: ಇಂದು ಅನೇಕ ಗೃಹಿಣಿಯರು ತಮ್ಮ ಸ್ವಂತ ಯೂಟ್ಯೂಬ್ ಚಾನಲ್ ಓಪನ್ ಮಾಡಿ ಲಕ್ಷ ಲಕ್ಷ ಹಣ ಸಂಪಾದನೆ ಮಾಡುತ್ತಿದ್ದಾರೆ. ಅಡುಗೆ, ಫ್ಯಾಷನ್, ಆರೋಗ್ಯ, ಫಿಟ್ನೆಸ್ ಬಗ್ಗೆ ಸಲಹೆ ನೀಡುವಂತಹ ವಿಡಿಯೋ ಅಥವಾ ರೀಲ್ಸ್ ಮಾಡಿ ನೀವು ಹಣ ಸಂಪಾದಿಸಬಹುದು.
3) ಆನ್‌ಲೈನ್ ಟೀಚಿಂಗ್: ಕೋವಿಡ್ ನಂತರ ಆನ್‌ಲೈನ್ ಟೀಚಿಂಗ್ಗೆ ಬೇಡಿಕೆ ಹೆಚ್ಚಾಗಿದೆ. ನೀವು ಈ ಹಿಂದೆ ಟೀಚಿಂಗ್ ಮಾಡಿ ಅನುಭವವಿದ್ದರೆ, ಟ್ಯೂಷನ್ ಮಾಡುತ್ತಿದ್ದರೆ, ಅಥವಾ ಯಾವುದಾದರೂ ಶೈಕ್ಷಣಿಕ ವಿಷಯದಲ್ಲಿ ಪರಿಣತಿ-ಜ್ಞಾನ ಹೊಂದಿದ್ದರೆ ಮನೆಯಲ್ಲಿಯೇ ಕುಳಿತು ಆನ್‌ಲೈನ್ ಟೀಚಿಂಗ್ ಮಾಡಿ.
4) ಇನ್ಶೂರೆನ್ಸ್ ಏಜೆಂಟ್: ನೀವು ಯಾವುದಾದರೂ ಇನ್ಶೂರೆನ್ಸ್ ಕಂಪನಿಯ ಏಜೆಂಟ್ ಆಗಿ ಕೆಲಸ ಮಾಡಿ. ಇದರಿಂದ ಕಮಿಷನ್ ಪಡೆಯಬಹುದು.
5) ಆನ್‌ಲೈನ್ ತರಬೇತಿ: ಆನ್‌ಲೈನ್ ಟೀಚಿಂಗ್ನಂತೆ ಆನ್‌ಲೈನ್ ತರಬೇತಿ ಕೂಡ ನೀಡಬಹುದು. ನೃತ್ಯ, ಸಂಗೀತ, ಕೋಡಿಂಗ್ ಅಥವಾ ಯಾವುದೇ ಕ್ಷೇತ್ರದಲ್ಲಿ ನೀವು ಪರಿಣತಿ ಹೊಂದಿದ್ದರೆ ಆನ್‌ಲೈನ್ ಮೂಲಕವೇ ತರಬೇತಿ ನೀಡಬಹುದು.
6) ಆನ್ಲೈನ್ನಲ್ಲಿ ಉತ್ಪನ್ನ ಮಾರಾಟ: ನೀವೇ ತಯಾರಿಸಿದ ಕರಕುಶಲ ವಸ್ತುಗಳು ಅಥವಾ ಹೋಲ್ ಸೇಲ್ನಲ್ಲಿ ಖರೀದಿಸಿದ ಉತ್ಪನ್ನಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡಬಹುದು. ಸೋಷಿಯಲ್ ಮೀಡಿಯಾಗಳಲ್ಲಿ ನಿಮ್ಮ ಉತ್ಪನ್ನಗಳ ಫೋಟೋ ಶೇರ್ ಮಾಡಿ, ಅದನ್ನು ಕೊಳ್ಳುವಂತೆ ಜನರಿಗೆ ಪ್ರಚಾರ ಮಾಡಬಹುದು.
7)ಬೇಬಿ ಸಿಟ್ಟಿಂಗ್: ಪತಿ-ಪತ್ನಿ ಇಬ್ಬರೂ ಉದ್ಯೋಗಕ್ಕೆಂದು ಮನೆಯಿಂದ ಹೊರಗಡೆ ಹೋಗುವರಿರುತ್ತಾರೆ. ಅಂತವರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಬೇಬಿ ಸಿಟ್ಟಿಂಗ್ಗೆ ಬಿಡುತ್ತಾರೆ. ನೀವೇ ನಿಮ್ಮ ಮನೆಯಲ್ಲಿ ಬೇಬಿ ಸಿಟ್ಟಿಂಗ್ ಆರಂಭ ಮಾಡಿದರೆ ಇದರಿಂದ ಕೂಡ ಕಾಸು ಗಳಿಸುಬಹುದು.
8) ಬ್ಯೂಟಿ ಪಾರ್ಲರ್: ನೀವು ಬ್ಯುಟಿಷಿಯನ್ ತರಬೇತಿ ಪಡೆದು ಮಾಡಿ, ಕೆಲ ವಸ್ತುಗಳನ್ನು ಖರೀದಿಸಲು ಸ್ವಲ್ಪ ಇನ್ವೆಸ್ಟ್ ಮಾಡಿ ಮನೆಯಲ್ಲಿಯೇ ಬ್ಯೂಟಿ ಪಾರ್ಲರ್ ತೆರೆಯಬಹುದು. ನಿಮ್ಮ ಬಿಡುವಿನ ನಿರ್ದಿಷ್ಟ ಸಮಯದಲ್ಲಿ ಪಾರ್ಲರ್ ಕೆಲಸ ಮಾಡಬಹುದು.
9) ಬ್ಲಾಗಿಂಗ್: ಇದರಲ್ಲಿ ಹಣ ಗಳಿಸಲಲು ಸ್ವಲ್ಪ ಜಾಸ್ತಿ ಸಮಯ ಬೇಕಾಗುತ್ತದೆ. ಅಡುಗೆ, ಫ್ಯಾಷನ್, ಆರೋಗ್ಯ, ಫಿಟ್ನೆಸ್ ಹೀಗೆ ಯಾವುದಾದರೂ ವಿಷಯದಲ್ಲಿ ನೀವು ಬ್ಲಾಗಿಂಗ್ ಮಾಡಬಹುದು. ನಿಮಗೆ ಹೆಚ್ಚು ವೀವ್ಸ್, ಲೈಕ್ಸ್ ಬಂದರೆ ಜಾಹೀರಾತು ಲಭ್ಯವಾಗುತ್ತದೆ. ಇದರಿಂದ ಹಣ ಸಿಗುತ್ತದೆ.
10) ಆನ್‌ಲೈನ್ ಸರ್ವೆ: ಅನೇಕ ಸಂಸ್ಥೆಗಳು/ಕಂಪನಿಗಳು ಆನ್‌ಲೈನ್ ಸರ್ವೆ ಮಾಡಲು ಸಹ ಹಣ ನೀಡುತ್ತಿವೆ. ಹೀಗೆ ಆನ್‌ಲೈನ್ ಸರ್ವೆ ಮಾಡುವ ಕಂಪನಿಗಳ ವೆಬ್ಸೈಟ್ನಲ್ಲಿ ಲಾಗಿನ್ ಆಗಿ ಅವರು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಗೃಹಿಣಿಯರು ಅಲ್ಪ ಪ್ರಮಾಣವಾದರೂ ಹಣ ಸಂಪಾದಿಸಬಹುದು.
ವಿಭಾಗ