Sukanya Samriddhi; ತಿಂಗಳ 10000 ರೂ ಸುಕನ್ಯಾ ಸಮೃದ್ಧಿಗೆ ಜಮೆ ಮಾಡಿದರೆ ಶೇ 8.2 ಬಡ್ಡಿದರದ ಲೆಕ್ಕದಲ್ಲಿ ಎಷ್ಟು ದುಡ್ಡು ವಾಪಸ್ ಬರುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  Sukanya Samriddhi; ತಿಂಗಳ 10000 ರೂ ಸುಕನ್ಯಾ ಸಮೃದ್ಧಿಗೆ ಜಮೆ ಮಾಡಿದರೆ ಶೇ 8.2 ಬಡ್ಡಿದರದ ಲೆಕ್ಕದಲ್ಲಿ ಎಷ್ಟು ದುಡ್ಡು ವಾಪಸ್ ಬರುತ್ತೆ

Sukanya Samriddhi; ತಿಂಗಳ 10000 ರೂ ಸುಕನ್ಯಾ ಸಮೃದ್ಧಿಗೆ ಜಮೆ ಮಾಡಿದರೆ ಶೇ 8.2 ಬಡ್ಡಿದರದ ಲೆಕ್ಕದಲ್ಲಿ ಎಷ್ಟು ದುಡ್ಡು ವಾಪಸ್ ಬರುತ್ತೆ

Sukanya Samriddhi Yojana; ಸುಕನ್ಯಾ ಸಮೃದ್ಧಿ ಯೋಜನೆ ಹೆಚ್ಚು ಚರ್ಚೆಯಲ್ಲಿರುವ ಸಣ್ಣ ಉಳಿತಾಯ ಯೋಜನೆ. ಇದಲ್ಲಿ ತಿಂಗಳ 10000 ರೂ ಸುಕನ್ಯಾ ಸಮೃದ್ಧಿಗೆ ಜಮೆ ಮಾಡಿದರೆ ಶೇ 8.2 ಬಡ್ಡಿದರದ ಲೆಕ್ಕದಲ್ಲಿ ಎಷ್ಟು ದುಡ್ಡು ವಾಪಸ್ ಬರುತ್ತೆ ಎಂಬ ವಿವರ ಈ ವರದಿಯಲ್ಲಿದೆ.

ಸುಕನ್ಯಾ ಸಮೃದ್ಧಿಗೆ ತಿಂಗಳ 10000 ರೂ ಜಮೆ ಮಾಡಿದರೆ ಶೇ 8.2 ಬಡ್ಡಿದರದ ಲೆಕ್ಕದಲ್ಲಿ ಎಷ್ಟು ದುಡ್ಡು ವಾಪಸ್ ಬರುತ್ತೆ ಎಂಬುದರ ಲೆಕ್ಕ (ಸಾಂಕೇತಿಕ ಚಿತ್ರ)
ಸುಕನ್ಯಾ ಸಮೃದ್ಧಿಗೆ ತಿಂಗಳ 10000 ರೂ ಜಮೆ ಮಾಡಿದರೆ ಶೇ 8.2 ಬಡ್ಡಿದರದ ಲೆಕ್ಕದಲ್ಲಿ ಎಷ್ಟು ದುಡ್ಡು ವಾಪಸ್ ಬರುತ್ತೆ ಎಂಬುದರ ಲೆಕ್ಕ (ಸಾಂಕೇತಿಕ ಚಿತ್ರ) (India Post/ Canva)

Sukanya Samriddhi Yojana Returns; ಬೇಟಿ ಬಚಾವೋ ಬೇಟಿ ಪಢಾವೋ ಅಭಿಯಾನದ ಭಾಗವಾಗಿ, ಭಾರತ ಸರ್ಕಾರ ಪರಿಚಯಿಸಿರುವ ಸಣ್ಣ ಉಳಿತಾಯ ಠೇವಣಿ ಯೋಜನೆ ಸುಕನ್ಯಾ ಸಮೃದ್ಧಿ ಯೋಜನೆ ಹೆಚ್ಚು ಚರ್ಚೆಯಲ್ಲಿದೆ. ಬಾಲಕಿಯರ ಆರ್ಥಿಕ ಭವಿಷ್ಯ ಬಲಗೊಳಿಸುವುದಕ್ಕಾಗಿ ಇದನ್ನು ಸರ್ಕಾರ 2015ರಲ್ಲಿ ಜಾರಿಗೊಳಿಸಿದೆ. ಇದು ದೇಶದ ಹೆಣ್ಣು ಮಕ್ಕಳ ಶೈಕ್ಷಣಿಕ ಮತ್ತು ಆರ್ಥಿಕ ಅಗತ್ಯಗಳನ್ನು ಬೆಂಬಲಿಸುವ ಉದ್ದೇಶ ಹೊಂದಿದೆ.

ಪ್ರಸ್ತುತ ತ್ರೈಮಾಸಿಕದಲ್ಲಿ, ಜುಲೈ 1 ರಿಂದ ಸೆಪ್ಟೆಂಬರ್ 30, 2024 ರವರೆಗೆ, ಸುಕನ್ಯಾ ಸಮೃದ್ಧಿ ಖಾತೆಗಳು ವಾರ್ಷಿಕವಾಗಿ 8.2 ಪ್ರತಿಶತ ಬಡ್ಡಿ ದರವನ್ನು ನೀಡುತ್ತವೆ. ಈ ದರವನ್ನು ತ್ರೈಮಾಸಿಕವಾಗಿ ಪರಿಶೀಲಿಸಿ ಜಾರಿಗೊಳಿಸಲಾಗುತ್ತದೆ. ಇದು ದೇಶದ ಸಣ್ಣ ಉಳಿತಾಯ ಯೋಜನೆಗಳ ಪೈಕಿ ಹೆಚ್ಚು ಬಡ್ಡಿದರ ಹೊಂದಿರುವ ಯೋಜನೆಯಾಗಿದೆ.

ತಿಂಗಳ 10000 ರೂ ಸುಕನ್ಯಾ ಸಮೃದ್ಧಿಗೆ ಜಮೆ ಮಾಡಿದರೆ ಎಷ್ಟು ದುಡ್ಡು ವಾಪಸ್ ಬರುತ್ತೆ

ಸುಕನ್ಯಾ ಸಮೃದ್ಧಿ ಯೋಜನೆಯ ಮುಕ್ತಾಯದ ಅವಧಿಯು ಖಾತೆ ಪ್ರಾರಂಭವಾದ ದಿನದಿಂದ 21 ವರ್ಷಗಳು ಅಥವಾ ಹೆಣ್ಣು ಮಗುವಿಗೆ 18 ವರ್ಷ ಪೂರ್ಣಗೊಂಡ ನಂತರ ಹಿಂಪಡೆಯಬಹುದು. ಆದಾಗ್ಯೂ ಈ ಯೋಜನೆಗೆ 15 ವರ್ಷ ಮಾತ್ರವೇ ಹೂಡಿಕೆ ಮಾಡಲು ಅವಕಾಶ. ನಂತರ ಅದನ್ನು ಅಲ್ಲೇ ಉಳಿಸಿದರೆ ಬಡ್ಡಿ ಗಳಿಕೆ ಮುಂದುವರಿಯುತ್ತದೆ.

ಉದಾಹರಣೆಗೆ ಹೇಳುವುದಾದರೆ, 5 ವರ್ಷದ ಬಾಲಕಿಯ ಪೋಷಕರು ಪ್ರಸ್ತುತ ಇರುವ ಶೇಕಡ 8.2 ಬಡ್ಡಿದರದಲ್ಲಿ 15 ವರ್ಷ ವಾರ್ಷಿಕವಾಗಿ 1.2 ಲಕ್ಷ ರೂಪಾಯಿ (ತಿಂಗಳಿಗೆ 10,000 ರೂಪಾಯಿ) ಹೂಡಿಕೆ ಮಾಡಿದರೆ, ಅವರು ಖಾತೆ ತೆರೆದ 21 ವರ್ಷಗಳ ನಂತರ ಹಿಂಪಡೆಯುವಾಗ ಅದು 55.61 ಲಕ್ಷ ರೂಪಾಯಿ ಆಗಿರಲಿದೆ. ಅವರ ಒಟ್ಟು ಹೂಡಿಕೆ 17.93 ಲಕ್ಷ ರೂಪಾಯಿ ಮತ್ತು ಗಳಿಸಿದ ಬಡ್ಡಿ ಅಂದಾಜು 37.68 ಲಕ್ಷ ರೂಪಾಯಿ.

ಸುಕನ್ಯಾ ಸಮೃದ್ಧಿ ಯೋಜನೆಗೆ ತೆರಿಗೆ ವಿನಾಯಿತಿ ಪ್ರಯೋಜನ

ಸುಕನ್ಯಾ ಸಮೃದ್ಧಿ ಯೋಜನೆಗೆ ತೆರಿಗೆ ವಿನಾಯಿತಿ ಪರಯೋಜನ ಕೂಡ ಇದ್ದು, ಹಣಕಾಸು ಸಚಿವಾಲಯ ಇದನ್ನು ದೃಢೀಕರಿಸಿದೆ.

“ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಾಡಿದ ಹೂಡಿಕೆಗಳ ಮೇಲೆ ಲಭ್ಯವಿರುವ 'ಟ್ರಿಪಲ್ ಇ' (Exempt-Exempt-Exempt) ತೆರಿಗೆ ಪ್ರಯೋಜನವನ್ನು ಪಡೆಯುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಾಡಿದ ಹೂಡಿಕೆಗಳು ಸೆಕ್ಷನ್ 80C ಪ್ರಕಾರ ಕಡಿತಗಳಿಗೆ ಅರ್ಹವಾಗಿರುತ್ತವೆ. ಇದು ವಾರ್ಷಿಕ ಗರಿಷ್ಠ 1.5 ಲಕ್ಷ ರೂಪಾಯಿ ಮಿತಿಯಲ್ಲಿದೆ. ಇದಲ್ಲದೆ, ಈ ಖಾತೆಗೆ ಜಮೆಯಾಗುವ ಬಡ್ಡಿ ಆದಾಯಕ್ಕೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10 ರ ಪ್ರಕಾರ ವಿನಾಯಿತಿ ಇದೆ. ಇದೇ ರೀತಿ, ಮೆಚ್ಯೂರಿಟಿ/ಹಿಂತೆಗೆತದ ನಂತರ ಪಡೆದ ಆದಾಯಕ್ಕೂ ವಿನಾಯಿತಿ ಇದೆ" ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಧಿಸೂಚನೆ ವಿವರಿಸಿದೆ.

ಸುಕನ್ಯಾ ಸಮೃದ್ಧಿ ಯೋಜನೆಯು ದೀರ್ಘಾವಧಿ ಹೂಡಿಕೆಯದ್ದಾಗಿದ್ದು, ಹೆಚ್ಚಿನ ಉಳಿತಾಯವನ್ನು ಹೂಡಿಕೆದಾರರಿಗೆ ಒದಗಿಸಿಕೊಡುತ್ತದೆ. ಬಾಲಕಿಯ ಭವಿಷ್ಯಕ್ಕೆ ಅಗತ್ಯವಾದ ದೊಡ್ಡ ಮೊತ್ತದ ನಿಧಿಯನ್ನು ಒಟ್ಟುಗೂಡಿಸಿಕೊಡುತ್ತದೆ. ಈ ಯೋಜನೆಯು ಭದ್ರತೆ ಮತ್ತು ಹೆಚ್ಚಿನ ಆದಾಯವನ್ನು ನೀಡುವುದಾದರೂ ಕೆಲವು ನಿರ್ಬಂಧಗಳಿವೆ. ಅದನ್ನು ಗಮನಿಸುವುದು ಮುಖ್ಯ. ನಿರ್ದಿಷ್ಟ ಸಂದರ್ಭಗಳಲ್ಲಿ ಭಾಗಶಃ ಹಿಂಪಡೆಯುವಿಕೆಗೆ ಇದರಲ್ಲಿ ಅವಕಾಶವಿದೆ. ಆದರೆ, ಠೇವಣಿದಾರರು ಸುಕನ್ಯಾ ಸಮೃದ್ದಿ ಠೇವಣಿ ಮೇಲೆ ಸಾಲ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದಾಗ್ಯೂ, ಯೋಜನೆಗೆ ಭಾರತ ಸರ್ಕಾರದ ಬೆಂಬಲ ಇರುವ ಕಾರಣ ಹೂಡಿಕೆ ಮಾಡಿದ ಹಣದ ಬಗ್ಗೆ ಸುರಕ್ಷೆ ಮತ್ತು ಭದ್ರತೆಯ ಭರವಸೆಯನ್ನು ಹೂಡಿಕೆದಾರರಿಗೆ ಅದು ನೀಡುತ್ತದೆ.

Whats_app_banner