ಕನ್ನಡ ಸುದ್ದಿ  /  Lifestyle  /  Can We Drink Milk After Eating Apple

Apple and Milk for Health: ಸೇಬು ತಿಂದ ನಂತರ ಹಾಲು ಕುಡಿಯಬಹುದಾ..ಹಲವರ ಗೊಂದಲಕ್ಕೆ ಇಲ್ಲಿದೆ ಉತ್ತರ

ನೀವು ಸೇಬು ತಿಂದ ನಂತರ ಹಾಲು ಸೇವಿಸಿದರೆ ಮೂಳೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ಸಂಧಿವಾತ, ಮೂಳೆ ದೌರ್ಬಲ್ಯ, ನೋವು ಇತ್ಯಾದಿಗಳನ್ನು ಪರಿಹಾರ ಮಾಡುವಲ್ಲಿ ಸೇಬು ಮತ್ತು ಹಾಲು ನಿಮಗೆ ತುಂಬಾ ಉಪಯುಕ್ತವಾಗಿದೆ.

ಆರೋಗ್ಯಕ್ಕೆ ಸೇಬು ಹಾಗೂ ಹಾಲು
ಆರೋಗ್ಯಕ್ಕೆ ಸೇಬು ಹಾಗೂ ಹಾಲು (PC: Freepik.com)

ಹಾಲು ಹಾಗೂ ಸೇಬು ಎರಡೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಸೇಬು ತಿಂದ ನಂತರ ಹಾಲು ಕುಡಿಯಬಹುದೇ ಅಥವಾ ಬೇಡವೇ ಎಂಬ ಬಗ್ಗೆ ಹಲವರಿಗೆ ಹಲವು ಗೊಂದಲಗಳಿವೆ. ಸೇಬು ತಿಂದ ನಂತರ ಕೆಲವು ಇನ್ನಿತರ ಆಹಾರಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹಲವರು ಭಾವಿಸುತ್ತಾರೆ.

ಸೇಬು ತಿಂದ ನಂತರ ಹಾಲು ಕುಡಿಯಬಹುದೇ?

ಹೌದು, ಸೇಬು ತಿಂದ ನಂತರ ಹಾಲು ಕುಡಿಯಬಹುದು. ಈ ಎರಡರಲ್ಲಿರುವ ಪೋಷಕಾಂಶಗಳು ಆರೋಗ್ಯವನ್ನು ಅನೇಕ ಸಮಸ್ಯೆಗಳಿಂದ ದೂರವಿಡುತ್ತವೆ. ಹಾಲು ಹಾಗೂ ಸೇಬುಗಳಲ್ಲಿ ಕ್ಯಾಲ್ಸಿಯಂ ಹೊರತಾಗಿ ಸತು, ವಿಟಮಿನ್ ಕೆ, ಮೆಗ್ನೀಸಿಯಮ್, ವಿಟಮಿನ್ ಡಿ ಇತ್ಯಾದಿ ಪೋಷಕಾಂಶಗಳಿವೆ. ಅಷ್ಟೇ ಅಲ್ಲ, ಇದರಲ್ಲಿ ಉತ್ಕರ್ಷಣ ನಿರೋಧಕ ಸಮೃದ್ಧವಾಗಿದೆ

ಸೇಬು ಮತ್ತು ಹಾಲಿನ ಪ್ರಯೋಜನಗಳು

ನೀವು ಸೇಬು ತಿಂದ ನಂತರ ಹಾಲು ಸೇವಿಸಿದರೆ ಮೂಳೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ಸಂಧಿವಾತ, ಮೂಳೆ ದೌರ್ಬಲ್ಯ, ನೋವು ಇತ್ಯಾದಿಗಳನ್ನು ಪರಿಹಾರ ಮಾಡುವಲ್ಲಿ ಸೇಬು ಮತ್ತು ಹಾಲು ನಿಮಗೆ ತುಂಬಾ ಉಪಯುಕ್ತವಾಗಿದೆ.

ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಸೇಬಿನ ನಂತರ ಹಾಲು ಕುಡಿಯುವುದರಿಂದ ಹಸಿವಿನ ಕಡು ಬಯಕೆಗಳನ್ನು ಹೋಗಲಾಡಿಸಬಹುದು. ಹಾಲು ಮತ್ತು ಸೇಬು ಎರಡರಲ್ಲೂ ಸ್ಥೂಲಕಾಯ ನಿವಾರಕ ಗುಣಗಳಿವೆ. ಕೊಬ್ಬನ್ನು ಕಡಿಮೆ ಮಾಡಲು ಮತ್ತು ಬೊಜ್ಜು ಹೋಗಲಾಡಿಸಲು ಇವು ಉಪಯುಕ್ತವಾಗಿವೆ. ಸೇಬು ತಿಂದ ನಂತರ ಹಾಲು ಸೇವಿಸುವುದರಿಂದ ಹಲ್ಲಿನ ಸಮಸ್ಯೆಗಳನ್ನು ತಡೆಯಬಹುದು. ಇವೆರಡೂ ಕೆಟ್ಟ ಬ್ಯಾಕ್ಟೀರಿಯಾವನ್ನು ತೆಗೆದುಹಾಕುವ ಮೂಲಕ ಹಲ್ಲುಗಳನ್ನು ಬಲಪಡಿಸುತ್ತದೆ.

ಸೇಬು ತಿಂದ ನಂತರ ಏನು ಸೇವಿಸಬಾರ?

ಆದರೆ ಸೇಬು ತಿಂದ ನಂತರ ಮೂಲಂಗಿ, ನೀರು, ಮೊಸರು, ಸಿಟ್ರಸ್ ಹಣ್ಣುಗಳನ್ನು ತಿನ್ನುವುದ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೇಬು ತಿಂದ ಅರ್ಧ ಗಂಟೆ ನಂತರ ನೀರು ಕುಡಿಯಬಹುದು.