ಮಕ್ಕಳ ದಿನಾಚರಣೆಯಂದು ಮಗುವಿಗೆ ಶುಭಾಶಯ ಕೋರಲು ಇಲ್ಲಿದೆ ಐಡಿಯಾಗಳು; ಮುದ್ದು ಕಂದಮ್ಮಗಳಿಗೆ ಈ ರೀತಿ ವಿಶ್ ಮಾಡಿ
ಭಾರತದಲ್ಲಿ ನವೆಂಬರ್ 14 ಅನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಈ ದಿನವು ಭಾರತದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಅವರ ಜನ್ಮದಿನ. ಮಕ್ಕಳ ದಿನಾಚರಣೆಯಂದು ಮುದ್ದು ಕಂದಮ್ಮಗಳಿಗೆ ವಿಶೇಷವಾಗಿ ಶುಭಾಶಯ ಕೋರಬೇಕು ಅಂತಿದ್ದರೆ ಇಲ್ಲಿದೆ ನಿಮಗಾಗಿ ಒಂದಿಷ್ಟು ಐಡಿಯಾಗಳು.
ಮಕ್ಕಳ ದಿನ ಎಂದರೆ ಮಕ್ಕಳ ಇರುವಿಕೆಯನ್ನು ಸಂಭ್ರಮಿಸುವುದು ಮಾತ್ರವಲ್ಲ ಮಕ್ಕಳ ಶಿಕ್ಷಣ ಹಾಗೂ ಹಕ್ಕಿನ ಬಗ್ಗೆ ಅರಿವು ಮೂಡಿಸುವ ದಿನವೂ ಹೌದು. ಈ ದಿನ ಮಕ್ಕಳ ಮಗ್ಧತೆ, ಅವರ ಪರಿಶುದ್ಧ ಮನೋಭಾವದ ಬಗ್ಗೆ ಸುಂದರ ಸಂದೇಶಗಳನ್ನು ಕಳುಹಿಸಿ, ವಿಶೇಷವಾಗಿ ಅವರಿಗೆ ಶುಭಾಶಯ ಕೋರುವ ಮೂಲಕವೂ ಸಂಭ್ರಮಿಸಬಹುದು.
ಮಕ್ಕಳೆಂದರೆ ಬಹಳ ಇಷ್ಟಪಡುತ್ತಿದ್ದ ನೆಹರೂ ಅವರು ತಮ್ಮ ಜನ್ಮಾದಿನಾಚರಣೆಯನ್ನು ಮಕ್ಕಳ ದಿನವನ್ನಾಗಿ ಆಚರಿಸಬೇಕು ಎಂದು ಕರೆಕೊಟ್ಟಿದ್ದರು. ಮಕ್ಕಳು ನೆಹರೂ ಅವರನ್ನು ಪ್ರೀತಿಯಿಂದ ಚಾಚಾ ಎಂದು ಕರೆಯುತ್ತಿದ್ದರು. ನೆಹರೂ ಅವರು ಮಕ್ಕಳ ಶಿಕ್ಷಣ ಹಾಗೂ ಹಕ್ಕಿನ ಬಗ್ಗೆ ಪ್ರತಿಪಾದಿಸಿದವರು.
ಈ ದಿನ ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ, ಸಿಹಿ ತಿಂಡಿಗಳನ್ನು ವಿತರಿಸುವ ಮೂಲಕ, ಮಕ್ಕಳಿಗೆ ವಿಶೇಷ ಉಡುಗೊರೆಗಳನ್ನು ನೀಡುವ ಮೂಲಕ ಆಚರಿಸಲಾಗುತ್ತದೆ. ಈ ವರ್ಷ ಮಕ್ಕಳ ದಿನಾಚರಣೆಗೆ ನಿಮ್ಮ ಮನೆಯ ಮಕ್ಕಳು ಅಥವಾ ನೀವು ಶಿಕ್ಷಕರಾಗಿದ್ದರೆ ನಿಮ್ಮ ಶಾಲೆಯ ಮಕ್ಕಳಿಗೆ ವಿಶೇಷವಾಗಿ ವಿಶ್ ಮಾಡಬೇಕು ಅಂತಿದ್ದರೆ ಈ ಐಡಿಯಾಗಳು ನಿಮಗೆ ಇಷ್ಟವಾಗಬಹುದು ನೋಡಿ.
* ಮಕ್ಕಳ ದಿನಾಚರಣೆಯ ಶುಭಾಶಯಗಳು ಮಗು, ನೀ ಕಂಡ ಎಲ್ಲಾ ಕನಸುಗಳು ನನಸಾಗಿ ನಿನ್ನ ಬದುಕಿನ ಹಾದಿಯಲ್ಲಿ ಸಿಹಿಯೇ ತುಂಬಿರಲಿ, ನಿನ್ನ ಭವಿಷ್ಯ ಉಜ್ವಲವಾಗಿರಲಿ.
* ನಿಮಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು. ಏಕೆಂದರೆ ನೀವು ಸಹ ಒಮ್ಮೆ ಮಗುವಾಗಿದ್ದವರು. ಈ ದಿನವನ್ನು ಅತ್ಯಂತ ಸಂತೋಷದಿಂದ ಆಚರಿಸಲು ನಿಮ್ಮೊಳಗಿನ ಆ ಮಗುವನ್ನು ನೋಡಿ.
* ಮಕ್ಕಳು ಸ್ವರ್ಗದಿಂದ ಬಂದ ಹೂವುಗಳು. ಈ ಜಗತ್ತನ್ನು ನಮ್ಮ ಮಕ್ಕಳಿಗೆ ಸುರಕ್ಷಿತ ಮತ್ತು ಆನಂದದಿಂದ ಕೂಡಿದ ಸ್ವರ್ಗವನ್ನಾಗಿ ಮಾಡೋಣ. ಮುದ್ದು ಕಂದಮ್ಮಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು.
* ಪ್ರತಿ ಮಗುವಿಗೂ ಶುಭ ಹಾರೈಸುತ್ತಾ ನಿಮ್ಮ ಕನಸುಗಳು ನಿಮ್ಮ ಕಲ್ಪನೆಯಂತೆ ದೊಡ್ಡದಾಗಿರಲಿ. ಅವುಗಳನ್ನು ಬೆನ್ನಟ್ಟುವ ಧೈರ್ಯ ನಿಮ್ಮಲ್ಲಿರಲಿ. ಈ ನಗು ನಿಮ್ಮ ಮೊಗದಲ್ಲಿ ಎಂದೆಂದಿಗೂ ಹೀಗೆ ಇರಲಿ. ಮಕ್ಕಳ ದಿನಾಚರಣೆಯ ಶುಭಾಶಯಗಳು
* ಎಲ್ಲಾ ಮಕ್ಕಳಿಗೂ ಅವರ ನಗುವಿನಂತೆ ವರ್ಣರಂಜಿತ ಮತ್ತು ಸಂತೋಷದ ದಿನವನ್ನು ಹಾರೈಸುತ್ತೇನೆ. ಮಕ್ಕಳ ದಿನಾಚರಣೆಯ ಶುಭಾಶಯಗಳು ಪುಟಾಣಿಗಳೇ
* ಮಕ್ಕಳ ದಿನಾಚರಣೆಯ ಶುಭಾಶಯಗಳು. ಪ್ರತಿ ಮಗುವೂ ಒಂದು ಪವಾಡ. ಪ್ರತಿ ಮಕ್ಕಳು ಮನೆ, ಶಾಲೆ ಹಾಗೂ ತಾವಿರುವ ಪರಿಸರವನ್ನು ಅದ್ಭುತವಾಗಿಸುವ ಮಾರ್ಗವನ್ನು ತಿಳಿದಿರುವ ದೇವದೂತರಂತೆ.
* ಮಕ್ಕಳ ನಗುವಿನ ಮೂಲಕ ಭೂಮಿ ತನ್ನ ಮುಗ್ಧತೆಯನ್ನು ಬಹಿರಂಗಪಡಿಸುತ್ತದೆ. ಈ ವಿಶೇಷ ದಿನದಂದು ಎಲ್ಲಾ ಮಕ್ಕಳಿಗೆ ಒಲವಿನ ಹಾರೈಕೆಗಳು. ಮಕ್ಕಳ ದಿನಾಚರಣೆಯ ಶುಭಾಶಯಗಳು
* ಪ್ರತಿಯೊಬ್ಬರ ಜೀವನದ ಮಧುರವಾದ ಸಮಯ ಎಂದರೆ ಅದು ಅವರ ಬಾಲ್ಯ. ಜಗತ್ತಿನ ಎಲ್ಲಾ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು. ಈ ದಿನಗಳನ್ನು ಅನಿಯಮಿತ ಮೋಜಿನೊಂದಿಗೆ ಕಳೆಯಿರಿ.
* ಈ ಜಗತ್ತಿನಲ್ಲಿ ಅತ್ಯಂತ ಅಮೂಲ್ಯವಾದದ್ದು ಮಗುವಿನ ಮುಖದಲ್ಲಿನ ನಗು. ಪ್ರಪಂಚದ ಪ್ರತಿ ಮಗುವಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು. ನೀವು ನಮಗೆ ತುಂಬಾ ವಿಶೇಷ.
* ಜಗತ್ತಿನಲ್ಲಿ ಎಲ್ಲಾ ನೋವನ್ನು ಮರೆಸುವ ಮ್ಯಾಜಿಕ್ ಪವರ್ ಇರುವುದು ಮಗುವಿನ ನಗುವಿಗೆ ಮಾತ್ರ. ಇಂತಹ ಅದ್ಭುತ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು
* ಈ ವಿಶೇಷ ದಿನದಂದು, ನಾವೆಲ್ಲರೂ ನಮ್ಮ ಮಕ್ಕಳ ಮುಗ್ಧತೆ ಮತ್ತು ಪರಿಶುದ್ಧತೆಯನ್ನು ಆಚರಿಸೋಣ. ಮಕ್ಕಳ ದಿನಾಚರಣೆಯ ಶುಭಾಶಯಗಳು!
* ಮಗುವಿನೊಂದಿಗೆ ಕಳೆವ ಕೇವಲ ಒಂದು ಗಂಟೆ ನಿಮಗೆ ಜೀವಮಾನದ ಸಂತೋಷ ಮತ್ತು ಮುಗ್ಧತೆಯನ್ನು ಕಲಿಸುತ್ತದೆ. ಮಕ್ಕಳ ದಿನಾಚರಣೆಯ ಶುಭಾಶಯಗಳು!
* ಚಿಕ್ಕ ಮಕ್ಕಳಿಗಾಗಿ ಈ ಜಗತ್ತನ್ನು ಸುರಕ್ಷಿತ ಸ್ಥಳವನ್ನಾಗಿ ಮಾಡಲು ಈ ಮಕ್ಕಳ ದಿನದಂದು ಕೈಜೋಡಿಸೋಣ. ಮಕ್ಕಳ ದಿನಾಚರಣೆಯ ಶುಭಾಶಯಗಳು!
* ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಾದರೆ, ಪ್ರತಿಯೊಬ್ಬರೂ ತಮ್ಮಲ್ಲಿರುವ ಎಲ್ಲಾ ಹಣದಿಂದ ತಮ್ಮ ಬಾಲ್ಯಕ್ಕೆ ಹಿಂತಿರುಗುತ್ತಾರೆ. ಪ್ರತಿ ಮಗುವಿನಂತೆ ಬಾಲ್ಯವು ಅದ್ಭುತವಾಗಿದೆ. ಮಕ್ಕಳ ದಿನಾಚರಣೆಯ ಶುಭಾಶಯಗಳು!
ವಿಭಾಗ