Bitter Truths: ಹಾಗಲಕಾಯಿಯೊಂದಿಗೆ ಈ ಆಹಾರಗಳನ್ನು ಸೇವಿಸಲೇಬೇಡಿ...ಎಚ್ಚರಿಕೆ ತಪ್ಪಿದರೆ ಆರೋಗ್ಯ ಸಮಸ್ಯೆ ಖಂಡಿತ
ಕನ್ನಡ ಸುದ್ದಿ  /  ಜೀವನಶೈಲಿ  /  Bitter Truths: ಹಾಗಲಕಾಯಿಯೊಂದಿಗೆ ಈ ಆಹಾರಗಳನ್ನು ಸೇವಿಸಲೇಬೇಡಿ...ಎಚ್ಚರಿಕೆ ತಪ್ಪಿದರೆ ಆರೋಗ್ಯ ಸಮಸ್ಯೆ ಖಂಡಿತ

Bitter Truths: ಹಾಗಲಕಾಯಿಯೊಂದಿಗೆ ಈ ಆಹಾರಗಳನ್ನು ಸೇವಿಸಲೇಬೇಡಿ...ಎಚ್ಚರಿಕೆ ತಪ್ಪಿದರೆ ಆರೋಗ್ಯ ಸಮಸ್ಯೆ ಖಂಡಿತ

ಹಾಗಲಕಾಯಿ ಕಹಿಯು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಮತ್ತು ದೇಹದಲ್ಲಿರುವ ಹಾನಿಕಾರಕ ಸೂಕ್ಷ್ಮಾಣುಜೀವಿಗಳನ್ನು ಕೊಲ್ಲುತ್ತದೆ. ಆದರೆ ಅದನ್ನು ತಿಂದ ನಂತರ ಇತರ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳಬಾರದು.

ಹಾಗಲಕಾಯಿಯೊಂದಿಗೆ ಕೆಲವು ಆಹಾರಗಳನ್ನು ಸಂಯೋಜಿಸಿ ತಿನ್ನಬಾರದು
ಹಾಗಲಕಾಯಿಯೊಂದಿಗೆ ಕೆಲವು ಆಹಾರಗಳನ್ನು ಸಂಯೋಜಿಸಿ ತಿನ್ನಬಾರದು (PC: Freepik)

ಕೆಲವು ಆಹಾರಗಳು ಉತ್ತಮ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದ್ದರೂ, ಅವುಗಳನ್ನು ಇತರ ಪದಾರ್ಥಗಳೊಂದಿಗೆ ಸಂಯೋಜಿಸಿ ತಿನ್ನುವುದರಿಂದ ಯಾವುದೇ ಪ್ರಯೋಜನವಿಲ್ಲ. ಹಾಗೇನಾದರೂ ತಿಂದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುವ ಅಪಾಯವಿದೆ. ಅದಕ್ಕಾಗಿಯೇ ಅವುಗಳನ್ನು ವಿರೋಧಿ ಆಹಾರ ಎಂದು ಕರೆಯಲಾಗುತ್ತದೆ, ಅಂತಹ ಆಹಾರವನ್ನು ಪ್ರತ್ಯೇಕವಾಗಿ ತಿನ್ನಬೇಕು. ಹಾಗೇ ಹಾಗಲಕಾಯಿಯೊಂದಿಗೆ ಕೆಲವು ಆಹಾರಗಳನ್ನು ತಿನ್ನಬಾರದು.

ಹಾಗಲಕಾಯಿ ಕಹಿಯು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಮತ್ತು ದೇಹದಲ್ಲಿರುವ ಹಾನಿಕಾರಕ ಸೂಕ್ಷ್ಮಾಣುಜೀವಿಗಳನ್ನು ಕೊಲ್ಲುತ್ತದೆ. ಆದರೆ ಅದನ್ನು ತಿಂದ ನಂತರ ಇತರ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳಬಾರದು.

ಹಾಲು ಕುಡಿಯಬೇಡಿ

ಹಾಗಲಕಾಯಿ ತಿಂದ ನಂತರ ಹಾಲು ಕುಡಿಯಬೇಡಿ. ಇದು ಉದರಸಂಬಂಧಿ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಲಕಾಯಿ ತಿಂದ ನಂತರ ಹಾಲು ಕುಡಿಯುವುದರಿಂದ ಮಲಬದ್ಧತೆ, ನೋವು ಮತ್ತು ಹೊಟ್ಟೆ ಉರಿ ಉಂಟಾಗುತ್ತದೆ. ಹೊಟ್ಟೆನೋವು ಮತ್ತು ವಾಕರಿಕೆ ಮುಂತಾದ ಸಮಸ್ಯೆಗಳೂ ಕಾಡಬಹುದು.

ಬೆಂಡೆಕಾಯಿ ತಿನ್ನಬೇಡಿ

ಹಾಗಲಕಾಯಿ ತಿಂದ ನಂತರ ಬೆಂಡೆಕಾಯಿಯಂತಹ ತರಕಾರಿಗಳನ್ನು ಸೇವಿಸಬಾರದು. ಹಾಗಲಕಾಯಿ ಕಹಿ ಮತ್ತು ಬೆಂಡೆಕಾಯಿಯ ಲೋಳೆ ಅಂಶ ಸೇರಿದಾಗ ಜೀರ್ಣವಾಗಲು ಕಷ್ಟವಾಗುತ್ತದೆ. ಹಾಗಾಗಿ ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಮಾವಿನೊಂದಿಗೆ ಅನಾರೋಗ್ಯ

ಹಾಗಲಕಾಯಿಯೊಂದಿಗೆ ಮಾವಿನಕಾಯಿ ತಿಂದರೆ ಆರೋಗ್ಯ ಕೆಡುತ್ತದೆ. ಇದರಿಂದ ನಿಮಗೆ ವಾಂತಿ, ಎದೆ ಉರಿ, ವಾಕರಿಕೆ, ಅಸಿಡಿಟಿ ಮುಂತಾದ ಸಮಸ್ಯೆಗಳು ಎದುರಾಗಬಹುದು. ಮತ್ತು ಇವೆರಡೂ ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳಬಹುದು.

ಮೂಲಂಗಿ ತಿನ್ನಬೇಡಿ

ಕಹಿ ತರಕಾರಿ ತಿಂದ ನಂತರ ಮೂಲಂಗಿ ಅಥವಾ ಮೂಲಂಗಿಯಿಂದ ಮಾಡಿದ ಆಹಾರವನ್ನು ಸೇವಿಸಬೇಡಿ. ಮೂಲಂಗಿಯ ಕಟುತೆ ಮತ್ತು ಹಾಗಲಕಾಯಿಯ ಕಹಿ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಇದು ನಿಮ್ಮ ಗಂಟಲಿನಲ್ಲಿ ಆಮ್ಲೀಯತೆ ಮತ್ತು ಕಫವನ್ನು ಉಂಟುಮಾಡುತ್ತದೆ.

ಮೊಸರು ತಿನ್ನಬೇಡಿ

ಮೊಸರನ್ನು ಹಾಗಲಕಾಯಿ ಗೊಜ್ಜು ಅಥವಾ ಸಾಂಬಾರ್‌ ಜೊತೆ ತಿನ್ನಬಾರದು. ಅಥವಾ ಹಾಗಲಕಾಯಿ ತಿಂದ ನಂತರ ನೀವು ಮೊಸರು ಸೇವಿಸಿದರೆ, ನಿಮಗೆ ಚರ್ಮದ ದದ್ದು ಸಮಸ್ಯೆ ಎದುರಾಗಬಹುದು.

ಇತರ ಲೈಫ್‌ ಸ್ಟೈಲ್‌ ಸುದ್ದಿಗಳು

ಬಿರುಕು ಇಲ್ಲದ, ಕರಕಲಾಗದ ಜಾಮೂನು ತಯಾರಿಸಿ ನಿಮ್ಮವರನ್ನು ಇಂಪ್ರೆಸ್‌ ಮಾಡೋದು ಹೇಗೆ..?

ಕೆಲವರು ಜಾಮೂನ್‌ ಮಾಡಿದರೆ ಕೆಲವೊಮ್ಮೆ ಕಪ್ಪಾಗುತ್ತದೆ, ಕೆಲವೊಮ್ಮೆ ಬಿರುಕುಗಳು ಕಾಣುತ್ತವೆ, ಇನ್ನೂ ಕೆಲವೊಮ್ಮೆ ಸರಿಯಾಗಿ ಕುಕ್‌ ಆಗಿರೊಲ್ಲ. ಆದರೆ ಜಾಮೂನ್‌ ಪ್ಯಾಕೆಟ್‌ ಮೇಲೆ ತೋರಿಸಿರುವಂತೆ ನಮಗೆ ಏಕೆ ತಯಾರಿಸೋಕೆ ಆಗೊಲ್ಲ ಅನ್ನೋದೆ ಎಲ್ಲರ ಕಂಪ್ಲೇಂಟ್‌. ನೀವು ಕೆಲವೊಂದು ಟಿಪ್ಸ್‌ ಫಾಲೋ ಮಾಡಿದರೆ ಖಂಡಿತ ರುಚಿಯಾದ, ಮೃದುವಾದ ಜಾಮೂನ್‌ಗಳನ್ನು ತಯಾರಿಸಿ ನೀವು ಮನೆಗೆ ಬಂದವರನ್ನು ಇಂಪ್ರೆಸ್‌ ಮಾಡಬಹುದು. ಹಾಗೇ ಈ ಜಾಮೂನ್‌ ತಯಾರಿಸಲು ಜಾಮೂನ್‌ ಪೌಡರ್‌ ಬೇಕು ಎಂದೇನಿಲ್ಲ. ಪೂರ್ತಿ ರೆಸಿಪಿಗೆ ಇಲ್ಲಿ ಕ್ಲಿಕ್‌ ಮಾಡಿ.

ನೀವು ನೆಟ್ಟ ಗುಲಾಬಿ ಗಿಡ ಸರಿಯಾಗಿ ಬೆಳೆಯುತ್ತಿಲ್ಲವೇ, ಈ ಟಿಪ್ಸ್‌ನಿಂದ ಮನೆಯಲ್ಲಿ ಗುಲಾಬಿ ಕಂಗೊಳಿಸೋದು ಗ್ಯಾರಂಟಿ

ಸಸ್ಯಗಳಿರುವ ಮನೆ ಯಾವಾಗಲೂ ಧನಾತ್ಮಕ ಶಕ್ತಿಯನ್ನು ಹೊಂದಿರುತ್ತದೆ. ಹೂವುಗಳ ಗಿಡಗಳ ವಿಚಾರಕ್ಕೆ ಬರುವುದಾದರೆ ಅನೇಕ ಜನರು ಗುಲಾಬಿ ಗಿಡಗಳನ್ನು ನೆಡಲು ಬಯಸುತ್ತಾರೆ. ವಿವಿಧ ಬಣ್ಣಗಳ ಗುಲಾಬಿ ಸಸ್ಯಗಳು ಕಣ್ಣಿಗೆ ಆಕರ್ಷಕವಾಗಿ ಕಾಣುತ್ತದೆ ಮತ್ತು ಆಹ್ಲಾದಕರ ಸುಗಂಧವನ್ನು ಹೊರ ಸೂಸುತ್ತವೆ. ಆದರೆ ನೀವು ಬಹಳ ಇಷ್ಟ ಪಟ್ಟು ನರ್ಸರಿಯಿಂದ ತರುವ ಗುಲಾಬಿ ಗಿಡಗಳು ಮನೆಗೆ ತಂದು ನೆಟ್ಟಾಗ ಹಾಳಾಗುವ ಸಾಧ್ಯತೆ ಹೆಚ್ಚು. ಪೂರ್ತಿ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ.

Whats_app_banner