ನೀವು ತುಂಬಾ ಜಂಕ್‌ ಫುಡ್‌ ತಿನ್ನುತ್ತೀರಾ? ಹಾಗಾದ್ರೆ ಈಗಲೇ ನೀವು ಮುಂದೆ ಬರಬಹುದಾದ ಗಂಭೀರ ಕಾಯಿಲೆಗಳ ಬಗ್ಗೆ ತಿಳಿದುಕೊಳ್ಳಿ-do you eat a lot of junk food so now know about the serious diseases that you may face health tips smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ತುಂಬಾ ಜಂಕ್‌ ಫುಡ್‌ ತಿನ್ನುತ್ತೀರಾ? ಹಾಗಾದ್ರೆ ಈಗಲೇ ನೀವು ಮುಂದೆ ಬರಬಹುದಾದ ಗಂಭೀರ ಕಾಯಿಲೆಗಳ ಬಗ್ಗೆ ತಿಳಿದುಕೊಳ್ಳಿ

ನೀವು ತುಂಬಾ ಜಂಕ್‌ ಫುಡ್‌ ತಿನ್ನುತ್ತೀರಾ? ಹಾಗಾದ್ರೆ ಈಗಲೇ ನೀವು ಮುಂದೆ ಬರಬಹುದಾದ ಗಂಭೀರ ಕಾಯಿಲೆಗಳ ಬಗ್ಗೆ ತಿಳಿದುಕೊಳ್ಳಿ

Junk Food: ಸಾಮಾನ್ಯವಾಗಿ ಹೆಚ್ಚಿನ ಜನರು ಜಂಕ್ ಫುಡ್ ಇಷ್ಟ ಪಡುತ್ತಾರೆ. ಅದರಲ್ಲೂ ಮಕ್ಕಳು ಈಗ ಅತಿಯಾಗಿ ಅದೇ ಬೇಕು ಎಂದು ಹಠ ಮಾಡುತ್ತಾರೆ. ಅದನ್ನು ತಪ್ಪಿಸಲು ಪೋಷಕರು ಪ್ರಯತ್ನ ಮಾಡುತ್ತಾರೆ. ಜಂಕ್‌ ಫುಡ್ ಎನ್ನುವುದು ನಮ್ಮ ಮೂಲ ಆಹಾರವಲ್ಲ. ಇದನ್ನು ತಿನ್ನದಿರುವುದೇ ಬೆಸ್ಟ್‌.

ಜಂಕ್‌ ಫುಡ್‌
ಜಂಕ್‌ ಫುಡ್‌

ತೂಕ ಹೆಚ್ಚಾಗುವುದು: ತೂಕ ಹೆಚ್ಚಾಗುವುದು ಜಂಕ್‌ ಫುಡ್‌ ತಿಂದರೆ ಮೊದಲನೇಯದಾಗಿ ಕಾಣಿಸಿಕೊಳ್ಳುವ ಒಂದು ಬದಲಾವಣೆ. ಇದೇ ಬದಲಾವಣೆ ಮುಂದೆ ನಿಮ್ಮ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಹೆಚ್ಚಿನ ಕ್ಯಾಲೋರಿ ಮತ್ತು ಸಕ್ಕರೆ ಅಂಶವು ತೂಕ ಹೆಚ್ಚಾಗಲು ಮತ್ತು ಸ್ಥೂಲಕಾಯತೆಗೆ ಕಾರಣವಾಗಬಹುದು. ಇದು ಪೇಸ್ಟ್ರೀ, ಬರ್ಗರ್, ಫಿಜ್ಜಾ ಹಾಗೂ ಆಲೂಗಡ್ಡೆಯ ಫ್ರೈಗಳಿಂದ ಬರುತ್ತದೆ. ಇದೇ ರೀತಿ ಇನ್ನೂ ಹಲವು ಜಂಕ್‌ ಫುಡ್‌ಗಳಿದೆ. ಅದೆಲ್ಲದರಿಂದ ನೀವು ಕಷ್ಟ ಅನುಭವಿಸುತ್ತಲೇ ಇರುತ್ತೀರ.

ರಕ್ತದಲ್ಲಿನ ಸಕ್ಕರೆ ಮಟ್ಟ ಕುಸಿತ: ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿನ ಕುಸಿತಗಳು ಶಕ್ತಿ ಇಲ್ಲದಂತೆ ಮಾಡುತ್ತದೆ. ಮೂಡ್ ಸ್ವಿಂಗ್‌ಗಳಿಗೆ ಕಾರಣವಾಗಬಹುದು. ಅಷ್ಟೇ ಅಲ್ಲದೆ ಮುಟ್ಟಿನ ಸಮಯದಲ್ಲಿ ಏರು ಪೇರಾಗಬಹುದು. ಪಿಸಿಓಡಿ ಹಾಗೂ ಪಿಸಿಓಎಸ್‌ನಂತಹ ಸಮಸ್ಯೆಗಳಿಗೆ ನೀವು ತುತ್ತಾಗುವ ಸಂಭವ ಹೆಚ್ಚಾಗುತ್ತದೆ. ಈ ರೀತಿ ಆದರೆ ಹೆಣ್ಣು ಮಕ್ಕಳಿಗೆ ತುಂಬಾ ತೊಂದರೆ ಆಗುತ್ತದೆ. ಇನ್ನು ತೂಕ ಹೆಚ್ಚಾಗುವಲ್ಲಿ ಸಹ ಹೆಣ್ಣು ಮಕ್ಕಳೇ ಹೆಚ್ಚು ಸಮಸ್ಯೆ ಅನುಭವಿಸುತ್ತಾರೆ.

ಅಜೀರ್ಣ ಸಮಸ್ಯೆ

ಸಂಸ್ಕರಿಸಿದ ಆಹಾರಗಳು ಕರುಳಿನ ಬ್ಯಾಕ್ಟೀರಿಗಳಿಗೆ ತಮ್ಮ ಕೆಲಸವನ್ನು ಮಾಡಲು ಬಿಡದೇ ತಮ್ಮ ಪ್ರಾಭಲ್ಯ ಹೆಚ್ಚಿಸಿಕೊಳ್ಳಲು ಈ ಜಂಕ್‌ ಫುಡ್‌ಗಳು ಸತಾಯಿಸುತ್ತವೆ. ಹೀಗಾದಾಗ ಜೀರ್ಣಕಾರಿ ಸಮಸ್ಯೆಗಳು ಮಾನವನ ದೇಹದಲ್ಲಿ ಉಂಟಾಗುತ್ತದೆ. ಸಂಸ್ಕರಿಸಿದ ಬಹುತೇಕ ಎಲ್ಲ ಆಹಾರಗಳು ಇದೇ ಸಮಸ್ಯೆಯನ್ನು ಉಂಟು ಮಾಡುತ್ತದೆ. ಒಂದು ಹೊತ್ತು ಈ ಜಂಕ್ ಫುಡ್‌ಗಳನ್ನು ತಿಂದರೆ ಇನ್ನು ಉಳಿದ ಎರಡು ಹೊತ್ತು ನಿಮಗೆ ಊಟ ಮಾಡಬೇಕು ಎಂದೇ ಅನಿಸುವುದಿಲ್ಲ. ಮಲಬದ್ಧತೆ ಅಥವಾ ಅತಿಸಾರಕ್ಕೆ ಕಾರಣವಾಗುತ್ತದೆ.

ಕ್ರಮ ಇರಲಿ

ನಿಯಮಿತ ಜಂಕ್ ಫುಡ್ ಸೇವನೆಯು ಹೆಚ್ಚಿನ ಅಪಾಯ ಉಂಟುಮಾಡುತ್ತದೆ. ಇನ್ನು ನಿಮಗೆ ಜಂಕ್ ಫುಡ್‌ ತಿನ್ನುವ ಅನಿವಾರ್ಯತೆ ಇದೆ. ಅಥವಾ ಅದನ್ನು ತಿನ್ನದೇ ಇದ್ದರೆ ಏನೋ ಕಳೆದುಕೊಂಡಂತೆ ಆಗುತ್ತದೆ ಎಂದಾದರೆ ನೀವು ಕ್ರಮೇಣವಾಗಿ ಅದನ್ನು ತಿನ್ನುವುದನ್ನು ನಿಲ್ಲಿಸುತ್ತಾ ಬನ್ನಿ. ಇದು ಕೂಡ ಒಂದು ಚಟ ಇದ್ದ ಹಾಗೆ. ನೀವು ತಿನ್ನುವುದನ್ನು ರೂಢಿ ಮಾಡಿಕೊಂಡಿದ್ದರೆ ಆ ರೂಢಿಯನ್ನು ತಪ್ಪಿಸಿಕೊಳ್ಳಲು ಪ್ರಯತ್ನ ಪಡಿ.

ಗೆಳೆಯರ ಗುಂಪಿನಲ್ಲಿ ತಿನ್ನಬೇಡಿ

ಒಂದೇ ತಟ್ಟೆಯಲ್ಲಿ ಎರಡು ಜನ ಊಟ ಮಾಡುವುದು ಒಂದು ಪ್ರೀತಿಯ ಸಂಕೇತ ಎಂದು ಗಂಡ, ಹೆಂಡತಿ ಭಾವಿಸುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು. ಒಬ್ಬರಿಗೆ ಏನಾದರೂ ಒಂದು ಅನಾರೋಗ್ಯವಿದ್ದರೆ ಅದು ಇನ್ನೊಬ್ಬರಿಗೆ ಹರಡುವ ಸಂಭವ ಹೆಚ್ಚಾಗಿ ಇರುತ್ತದೆ. ಪರಸ್ಪರರ ಆಹಾರವನ್ನು ಒಂದೇ ತಟ್ಟೆಯಲ್ಲಿ ತಿನ್ನುವುದರಿಂದ ಪ್ರೀತಿ ಹೆಚ್ಚಾಗುತ್ತದೆಯೋ? ಇಲ್ಲವೋ ಗೊತ್ತಿಲ್ಲ ಆದರೆ ರೋಗಗಳು ಹೆಚ್ಚಾಗುತ್ತದೆ ಎನ್ನುತ್ತಾರೆ ಡಾಕ್ಟರ್ಸ್‌. ಹೌದು, ಧರ್ಮಗ್ರಂಥಗಳ ಪ್ರಕಾರವೂ, ಒಬ್ಬ ವ್ಯಕ್ತಿಯ ಜೊತೆ ಇನ್ನೊಬ್ಬ ಆಹಾರವನ್ನು ಸೇವಿಸುವುದರಿಂದ ಇನ್ನೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಬರಬಹುದು. ವಿಜ್ಞಾನ ಮತ್ತು ಆಯುರ್ವೇದವು ಇದನ್ನೇ ಹೇಳುತ್ತದೆ.

ಒಂದೇ ಪ್ಲೇಟ್ ಶೇರ್ ಮಾಡಬೇಡಿ

ಆಯುರ್ವೇದದ ಪ್ರಕಾರ, ಒಂದೇ ತಟ್ಟೆಯಲ್ಲಿ ಪರಸ್ಪರರ ಆಹಾರವನ್ನು ತಿನ್ನುವುದು ಇನ್ನೊಬ್ಬ ವ್ಯಕ್ತಿಗೆ ಸೋಂಕಿನ ಅಪಾಯವನ್ನುಂಟು ಮಾಡುತ್ತದೆ. ನೀವು ಈಗಾಗಲೇ ಕೆಲವು ರೀತಿಯ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕಿನಿಂದ ಬಳಲುತ್ತಿರುವವರ ಆಹಾರವನ್ನು ಸೇವಿಸುತ್ತಿದ್ದರೆ, ಆಹಾರದ ಜೊತೆಗೆ, ಆ ಬ್ಯಾಕ್ಟೀರಿಯಾ ಅಥವಾ ವೈರಸ್ಗಳು ಸಹ ನಿಮ್ಮ ದೇಹದೊಳಗೆ ಹೋಗಿ ಸೋಂಕಿಗೆ ಕಾರಣವಾಗಬಹುದು. ಜನರು ಒಂದೇ ತಟ್ಟೆಯಿಂದ ಆಹಾರವನ್ನು ತಿನ್ನಲು ಸಲಹೆ ನೀಡದಿರಲು ಇದು ಕಾರಣವಾಗಿದೆ.