Female Condom Guide: ಸ್ತ್ರೀಯರು ಕಾಂಡೋಮ್ ಹೇಗೆ ಬಳಸಬೇಕು, ಅನುಕೂಲ-ಅನಾನುಕೂಲಗಳೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  Female Condom Guide: ಸ್ತ್ರೀಯರು ಕಾಂಡೋಮ್ ಹೇಗೆ ಬಳಸಬೇಕು, ಅನುಕೂಲ-ಅನಾನುಕೂಲಗಳೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

Female Condom Guide: ಸ್ತ್ರೀಯರು ಕಾಂಡೋಮ್ ಹೇಗೆ ಬಳಸಬೇಕು, ಅನುಕೂಲ-ಅನಾನುಕೂಲಗಳೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

Female Condom Guide: ಸ್ತ್ರೀ ಕಾಂಡೋಮ್ ಧರಿಸುವುದು ಏಕೆ ಮುಖ್ಯ. ಅದರ ಅನುಕೂಲ-ಅನಾನುಕೂಲಗಳೇನು? ಸಾಧಕ-ಬಾಧಕಗಳನ್ನು ಈ ಮುಂದೆ ತಿಳಿಯೋಣ.

ಸ್ತ್ರೀಯರು ಕಾಂಡೋಮ್ ಹೇಗೆ ಬಳಸಬೇಕು, ಅನುಕೂಲ-ಅನಾನುಕೂಲಗಳೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಸ್ತ್ರೀಯರು ಕಾಂಡೋಮ್ ಹೇಗೆ ಬಳಸಬೇಕು, ಅನುಕೂಲ-ಅನಾನುಕೂಲಗಳೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

Female Condom Guide: ಕಾಂಡೋಮ್.. ಗಂಡುಮಕ್ಕಳಿಗೆ ಎಂಬ ಕಲ್ಪನೆ ಎಲ್ಲರಲ್ಲೂ ಬೇರೂರಿ ಬಿಟ್ಟಿದೆ. ಆದರೆ ಮಹಿಳೆಯರಿಗೂ ವಿಶೇಷ ಸ್ತ್ರೀ ಕಾಂಡೋಮ್‌ಗಳಿವೆ ಎಂಬುದು ಕೆಲವೇ ಕೆಲವು ಮಂದಿಗಷ್ಟೇ ತಿಳಿದಿದೆ. ಆದರೆ ಇವುಗಳ ಉಪಯೋಗ ಹೇಗೆ ಎಂಬುದು ಪ್ರತಿ ಹೆಣ್ಣುಮಕ್ಕಳಿಗೂ ತಿಳಿದಿಲ್ಲ ಎಂಬುದೇ ಬೇಸರದ ಸಂಗತಿ. ಇದೇ ಕಾರಣಕ್ಕೆ ಮದುವೆಗೂ ಮುನ್ನ ಗರ್ಭಿಣಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆಲ್ಲಾ ನಿಯಂತ್ರಣ ಹೇರಬೇಕೆಂದರೆ ಈ ಲೇಖನ ಸಂಪೂರ್ಣ ಓದಿ.

ಪ್ರಣಯದ ಪ್ರಸಂಗದ ವೇಳೆ ನಿಮ್ಮ ಸಂಗಾತಿ ಧರಿಸಿದ ಕಾಂಡೋಮ್ ಹರಿಯುವ ಸಾಧ್ಯತೆ ಇದೆ. ಇದು ಗರ್ಭ ಧರಿಸಲು ಅವಕಾಶ ಮಾಡಿ ಕೊಡುತ್ತದೆ. ಆದರೆ ಹೀಗಾಗದಂತೆ ತಡೆಯಲು ನೀವೂ ಕಾಂಡೋಮ್​ ಧರಿಸಬಹುದು. ನಿಮ್ಮ ಸಂಗಾತಿಯನ್ನು ನಂಬದಿದ್ದರೂ ನಿಮ್ಮ ಸೇಫ್ಟಿಗಾಗಿ ಸ್ತ್ರೀ ಕಾಂಡೋಮ್ ಧರಿಸುವುದು ಮುಖ್ಯ. ಹಾಗಾಗಿ, ಈ ಬಗ್ಗೆ ತಿಳಿಯುವುದು ಅತಿ ಮುಖ್ಯ. ಈ ಬಗ್ಗೆ ಸಂಪೂರ್ಣ ಸಂಗತಿಗಳು, ಪುರಾಣಗಳು, ಸತ್ಯಗಳು, ಸಾಧಕ-ಬಾಧಕಗಳನ್ನು ತಿಳಿಯೋಣ.

ಸ್ತ್ರೀ ಕಾಂಡೋಮ್‌ಗಳು

ಸ್ತ್ರೀ ಕಾಂಡೋಮ್​​​ಗಳನ್ನು ನೈಟ್ರೈಲ್ ಎಂಬ ಮೃದುವಾದ ಪ್ಲಾಸ್ಟಿಕ್ ವಸ್ತುವಿನಿಂದ ತಯಾರಿಸಲಾಗುತ್ತದೆ. ಇದು ಲ್ಯಾಟೆಕ್ಸ್ (ರಬ್ಬರ್ ಇರುವ​) ಅಲ್ಲದ ವಿಧವಾಗಿದೆ. ಪುರುಷರು ಮತ್ತು ಮಹಿಳೆಯರ ಕಾಂಡೋಮ್ಸ್​​ನಲ್ಲಿ ಇರುವ ಲ್ಯಾಟೆಕ್ಸ್​ ಬಳಕೆ ವೇಳೆ ಯೋನಿಯಲ್ಲಿ ಉರಿ, ಅಸ್ವಸ್ಥತೆ ಮತ್ತು ದದ್ದು ಉಂಟು ಮಾಡಬಹುದು. ಆದರೆ, ಯಾವುದೇ ತೊಂದರೆ ಇರುವುದಿಲ್ಲ.

ಸ್ತ್ರೀ ಕಾಂಡೋಮ್ ಬಳಸುವುದೇಗೆ?

  1. ಟ್ಯಾಂಪನ್​ಗಳನ್ನು ಬಳಸುವವರಿಗೆ ಇದು ಬಳಸಲು ಬಹಳ ಸುಲಭ. ಎರಡು ಅಥವಾ ಮೂರು ಬಾರಿ ನಂತರ ಯಾರಾದರೂ ಸುಲಭವಾಗಿ ಬಳಸಬಹುದು.
  2. ಪುರುಷ ಕಾಂಡೋಮ್‌ಗಿಂತ ಭಿನ್ನವಾಗಿ, ಇದನ್ನು ಸಂಭೋಗದ ಸಮಯದಲ್ಲೇ ಧರಿಸಬಾರದು. ಅದನ್ನು ಮೊದಲೇ ಯೋನಿಯೊಳಗೆ ಹಾಕಿಕೊಳ್ಳಬಹುದು. ಇದನ್ನು ಕನಿಷ್ಠ 8 ಗಂಟೆಗಳ ಕಾಲ ಧರಿಸಬಹುದು. ಲೈಂಗಿಕ ಸಂಭೋಗಕ್ಕೆ ಯಾವುದೇ ಅಡ್ಡಿಯಿಲ್ಲ. ಅಲ್ಲದೆ ಮಿಲನದ ತಕ್ಷಣವೇ ಅದನ್ನು ತೆಗೆದುಹಾಕುವ ಅಗತ್ಯವೂ ಇಲ್ಲ.
  3. ಹೆಣ್ಣು ಕಾಂಡೋಮ್ ಎರಡು ರಿಂಗ್​​​ಗಳನ್ನು ಹೊಂದಿರುತ್ತದೆ. ಒಂದು ರಿಂಗ್​ ಯೋನಿಯ ಒಳಗಿದ್ದರೆ, ಇನ್ನೊಂದು ಯೋನಿ ಹೊರಗಿರಲಿದೆ.
  4. ಕಾಂಡೋಮ್‌ನ ಮುಚ್ಚಿದ ಬದಿಯ ತುದಿಯನ್ನು ನಯಗೊಳಿಸಿ ಮತ್ತು ಮತ್ತೊಂದು ಬದಿಯಲ್ಲಿರುವ ರಿಂಗ್​ ಅನ್ನು ಹಿಡಿದುಕೊಳ್ಳಿ. ಅದನ್ನು ಸ್ವಲ್ಪ ಒತ್ತಿ ಮತ್ತು ಯೋನಿಯೊಳಗೆ ಸೇರಿಸಿ. ಅದನ್ನು ಒಳಗೆ ತಳ್ಳಬೇಕು ಮತ್ತು ಬಿಡಬೇಕು. ಮತ್ತೊಂದು ಉಂಗುರವು ಯೋನಿಯ ಹೊರಗಿರಲಿದೆ.
  5. ಅದಕ್ಕಾಗಿ ನೀವು ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಬೇಕು. ಸ್ಕ್ವಾಟ್ ಮಾಡುವಾಗ ಅಥವಾ ಮಲಗಿರುವಾಗ ಮತ್ತು ನಿಂತಿರುವಾಗ ನೀವು ಇದನ್ನು ಮಾಡಬಹುದು.

ಪುರುಷ ಕಾಂಡೋಮ್‌ಗಳಂತೆಯೇ ಪ್ರಯೋಜನ ಇದೆಯೇ?

ಸರಿಯಾಗಿ ಬಳಸಿದ್ದೇ ನೀವಿದರ ಸಂಪೂರ್ಣ ಪ್ರಯೋಜನ ಪಡೆಯಲಿದ್ದೀರಿ. ಇವುಗಳು ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ಸೋಂಕನ್ನು ಶೇಕಡಾ 95 ರಷ್ಟು ತಡೆಗಟ್ಟಬಹುದು ಎಂದು ಸಂಶೋಧನೆಗಳು ಹೇಳಿವೆ. ಪುರುಷ ಸಂಗಾತಿ ಕಾಂಡೋಮ್ ಬಳಸಲು ಇಚ್ಚಿಸಿದಿದ್ದರೆ ನೀವಿದನ್ನು ಆಯ್ಕೆ ಮಾಡಬಹುದು. ಆ ಮೂಲಕ ಗರ್ಭಾವಸ್ಥೆ ತಡೆಗೆ ಪ್ರಮುಖ ಪಾತ್ರವಹಿಸಬಹುದು.

ಕೆಲವು ಅನಾನುಕೂಲಗಳೂ ಇವೆ

  • ಇವು ಪುರುಷ ಕಾಂಡೋಮ್‌ಗಳಿಗಿಂತ ಸ್ವಲ್ಪ ಹೆಚ್ಚು ದುಬಾರಿ
  • ಇವು ನಮ್ಮ ದೇಶದಲ್ಲಿ ಎಲ್ಲಾ ಗಾತ್ರಗಳಲ್ಲಿ ಲಭ್ಯವಿಲ್ಲ.
  • ಇವುಗಳನ್ನು ಬಳಸಲು ಸ್ವಲ್ಪ ಹೆಚ್ಚು ಲೂಬ್ರಿಕೇಶನ್ ಅಗತ್ಯವಿದೆ.
  • ಇದು ಕೆಲವು ಮಹಿಳೆಯರಲ್ಲಿ ಅಸ್ವಸ್ಥತೆ ಉಂಟುಮಾಡಬಹುದು.
  • ಪುರುಷ ಕಾಂಡೋಮ್‌ಗಳಂತೆ, ಎಲ್ಲಾ ಕಡೆ ದೊರಕುವುದು ಕಷ್ಟ.
  • ಇದರಿಂದ ಕೆಲವರಿಗೆ ಕಡಿಮೆ ಲೈಂಗಿಕ ಭಾವನೆ ಅನುಭವ ನೀಡುತ್ತದೆ.

ಇದನ್ನೂ ಓದಿ: Grain ATM: ದುಡ್ಡಲ್ಲ, ಬಂತು ನೋಡಿ ಧಾನ್ಯಗಳನ್ನು ವಿತ್​ಡ್ರಾ ಮಾಡೋ ಎಟಿಎಂ; ಇದು ಕೆಲಸ ಮಾಡೋದಾದರೂ ಹೇಗೆ?

ಈ ವಿಷಯಗಳನ್ನು ನೆನಪಿಡಿ

  1. ಪುರುಷ ಕಾಂಡೋಮ್ ಮತ್ತು ಹೆಣ್ಣು ಕಾಂಡೋಮ್ ಎರಡನ್ನೂ ಒಂದೇ ಸಮಯದಲ್ಲಿ ಬಳಸಬಾರದು. ಆಗ ಅನಾನುಕೂಲತೆ ಸೃಷ್ಟಿಯಾಗುತ್ತದೆ. ಅಲ್ಲದೆ, ನೋವು ಕಾಣಿಸಿಕೊಳ್ಳಬಹುದು.
  2. ಮಹಿಳೆಯರ ಕಾಂಡೋಮ್ ಹರಿದುಹೋಗಿದೆ ಅಂದರೆ ತಕ್ಷಣವೇ ತೆಗೆಯುವುದನ್ನು ಮರೆಯಬೇಡಿ.
  3. ಟ್ಯಾಂಪೂನ್​​​ಗಳು ಮತ್ತು ಮುಟ್ಟಿನ ಕಪ್​ಗಳನ್ನು ಸೇರಿಸುವ ಮೊದಲು ತೆಗೆದುಹಾಕಬೇಕು.
  4. ಲೈಂಗಿಕ ಸಂಭೋಗದ ತಕ್ಷಣ ಅವುಗಳನ್ನು ತೆಗೆದುಹಾಕುವ ಅಗತ್ಯ ಇಲ್ಲ. ಆದರೆ ಪೂರ್ಣ ಫಲಿತಾಂಶಕ್ಕಾಗಿ ತೆಗೆದುಹಾಕುವುದು ಉತ್ತಮ

ಇದನ್ನೂ ಓದಿ: Beetroot: ತರಕಾರಿಗಳ ವಯಾಗ್ರಾ ಎನ್ನುವ ಬೀಟ್​ರೂಟ್​ನ ಈ 5 ಆಹಾರ ಸೇವಿಸಿ, ಲೈಂಗಿಕ ಜೀವನ ಆನಂದಮಯವಾಗಿಸಿ!

Whats_app_banner