ದೀಪಾವಳಿಯಲ್ಲಿ ಪಟಾಕಿ ಹಚ್ಚುತ್ತೀರಾ: ಮಕ್ಕಳನ್ನು ಸುರಕ್ಷಿತವಾಗಿರಿಸಲು 5 ಅಗತ್ಯ ಸುರಕ್ಷತಾ ಸಲಹೆಗಳು ಇಲ್ಲಿವೆ
ಕನ್ನಡ ಸುದ್ದಿ  /  ಜೀವನಶೈಲಿ  /  ದೀಪಾವಳಿಯಲ್ಲಿ ಪಟಾಕಿ ಹಚ್ಚುತ್ತೀರಾ: ಮಕ್ಕಳನ್ನು ಸುರಕ್ಷಿತವಾಗಿರಿಸಲು 5 ಅಗತ್ಯ ಸುರಕ್ಷತಾ ಸಲಹೆಗಳು ಇಲ್ಲಿವೆ

ದೀಪಾವಳಿಯಲ್ಲಿ ಪಟಾಕಿ ಹಚ್ಚುತ್ತೀರಾ: ಮಕ್ಕಳನ್ನು ಸುರಕ್ಷಿತವಾಗಿರಿಸಲು 5 ಅಗತ್ಯ ಸುರಕ್ಷತಾ ಸಲಹೆಗಳು ಇಲ್ಲಿವೆ

ದೀಪಾವಳಿಯು ಸಮೃದ್ಧಿ ಮತ್ತು ಸಂತೋಷದ ಹಬ್ಬ. ದೀಪಗಳ ಹಬ್ಬದಲ್ಲಿ ಪಟಾಕಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಿಡಿಸಲಾಗುತ್ತದೆ. ದೊಡ್ಡವರಿಂದ ಚಿಕ್ಕ ಮಕ್ಕಳು ಕೂಡ ಪಟಾಕಿ ಸಿಡಿಸಲು ಉತ್ಸುಕರಾಗಿರುತ್ತಾರೆ. ಆದರೆ, ಮಕ್ಕಳನ್ನು ಪಟಾಕಿ,ದೀಪಗಳಿಂದ ಸುರಕ್ಷಿತವಾಗಿಡುವುದು ಬಹಳ ಮುಖ್ಯ.

ದೀಪಾವಳಿಯಲ್ಲಿ ಪಟಾಕಿ ಹಚ್ಚುತ್ತೀರಾ: ಮಕ್ಕಳನ್ನು ಸುರಕ್ಷಿತವಾಗಿರಿಸಲು 5 ಅಗತ್ಯ ಸುರಕ್ಷತಾ ಸಲಹೆಗಳು ಇಲ್ಲಿವೆ
ದೀಪಾವಳಿಯಲ್ಲಿ ಪಟಾಕಿ ಹಚ್ಚುತ್ತೀರಾ: ಮಕ್ಕಳನ್ನು ಸುರಕ್ಷಿತವಾಗಿರಿಸಲು 5 ಅಗತ್ಯ ಸುರಕ್ಷತಾ ಸಲಹೆಗಳು ಇಲ್ಲಿವೆ (PC: Canva)

ದೀಪಾವಳಿಯು ಸಮೃದ್ಧಿ ಮತ್ತು ಸಂತೋಷದ ಹಬ್ಬ. ದೀಪಾವಳಿ ಅಂದರೆ ನೆನಪಾಗುವುದು ಪಟಾಕಿಗಳು, ದೀಪಗಳು ಮತ್ತು ಸುಂದರವಾದ ರಂಗೋಲಿಗಳ ಅಲಂಕಾರ. ದೀಪಾವಳಿ ಹಬ್ಬ ಅಂದರೆ ಹಿರಿಯರಿಗಿಂತ ಮಕ್ಕಳಲ್ಲಿ ಹೆಚ್ಚು ಸಂಭ್ರವಿರುತ್ತದೆ. ದೀಪಾವಳಿಯ ದಿನದಂದು ಮಕ್ಕಳು ಹೊಸ ಬಟ್ಟೆಗಳನ್ನು ಧರಿಸಲು, ವಿವಿಧ ರೀತಿಯ ಸಿಹಿತಿಂಡಿಗಳನ್ನು ತಿನ್ನಲು, ಪಟಾಕಿಗಳನ್ನು ಸುಡಲು ಮತ್ತು ಹೊಳೆಯುವ ದೀಪಗಳನ್ನು ನೋಡಲು ಉತ್ಸುಕರಾಗಿರುತ್ತಾರೆ. ದೀಪಾವಳಿಯ ಸಂಭ್ರಮಕ್ಕಿಂತ ಬಹಳ ಜಾಗರೂಕರಾಗಿರಬೇಕಾಗಿರುವುದು ಕೂಡ ಅಗತ್ಯ. ಅದರಲ್ಲೂ ಮಕ್ಕಳನ್ನು ಪಟಾಕಿ, ದೀಪಗಳು ಮತ್ತು ಪ್ರತಿಧ್ವನಿಸುವ ಶಬ್ಧಗಳಿಂದ ಸುರಕ್ಷಿತವಾಗಿಡುವುದು ಮುಖ್ಯ. ಈ ಹಬ್ಬದಲ್ಲಿ ಸಣ್ಣದೊಂದು ನಿರ್ಲಕ್ಷ್ಯ ಕೂಡ ಮಕ್ಕಳ ಆರೋಗ್ಯ ಮತ್ತು ದೇಹ ಎರಡಕ್ಕೂ ಹಾನಿ ಮಾಡುತ್ತದೆ.

ಸಂಶೋಧನೆಯೊಂದರ ಪ್ರಕಾರ, ಮಗು ಜನಿಸಿದ ನಂತರ 1,000 ದಿನಗಳವರೆಗೆ ವಾಯುಮಾಲಿನ್ಯದಿಂದ ಮಕ್ಕಳನ್ನು ದೂರವಿಡಬೇಕಾದುದು ಬಹಳ ಮುಖ್ಯ. ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಮಗುವಿನ ದೈಹಿಕ ಮತ್ತು ಅರಿವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ದೀಪಾವಳಿಯ ಸಮಯದಲ್ಲಿ ನಿಮ್ಮ ಮಕ್ಕಳನ್ನು ಸುರಕ್ಷಿತವಾಗಿರಿಸಲು 5 ಅಗತ್ಯ ಸುರಕ್ಷತಾ ಸಲಹೆಗಳು ಮತ್ತು ಮಾರ್ಗಸೂಚಿಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಬಹುದು.

ಮಕ್ಕಳನ್ನು ಸುರಕ್ಷಿತವಾಗಿರಿಸಲು 5 ಅಗತ್ಯ ಸುರಕ್ಷತಾ ಸಲಹೆಗಳು ಇಲ್ಲಿವೆ

ಮಕ್ಕಳನ್ನು ಪಟಾಕಿಗಳಿಂದ ದೂರವಿಡಿ: ಮಗುವಿನ ಮೊದಲ ದೀಪಾವಳಿಯ ಸಮಯದಲ್ಲಿ, ಜನರು ಪಟಾಕಿಗಳನ್ನು ಸಿಡಿಸಿದಾಗ ಮತ್ತು ಬೆಳಕು ಮೂಡಿದಾಗ ಸಾಮಾನ್ಯವಾಗಿ ಮಗು ಹೆದರುತ್ತದೆ ಮತ್ತು ಭಯಭೀತಗೊಳ್ಳುತ್ತದೆ. ಬೆಳಕು ಮತ್ತು ಪಟಾಕಿ ಧ್ವನಿಗೆ ಸಂವೇದನಾಶೀಲವಾಗಿರುವುದರಿಂದ, ಮಗು ದೀರ್ಘಕಾಲ ಅಳಬಹುದು. ಇವುಗಳಿಂದ ಹೊರಸೂಸುವ ಹೊಗೆ ಮಗುವಿನ ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ. ಅಲ್ಲದೆ, ಜೋರಾಗಿ ಧ್ವನಿ ಕೇಳುವುದರಿಂದ ಇದು ಕಿವಿಯ ಕೇಳುವಿಕೆ ಮೇಲೆ ಪರಿಣಾಮ ಬೀರುತ್ತದೆ.

ದೀಪಗಳು ಮತ್ತು ಮೇಣದಬತ್ತಿಗಳಿಂದ ದೂರವಿರಿಸಿ: ಮನೆಯ ಸುತ್ತಲೂ ವಿಶೇಷವಾಗಿ ಮಕ್ಕಳು ತಲುಪಬಹುದಾದ ಸ್ಥಳಗಳಲ್ಲಿ ದೀಪಗಳು ಮತ್ತು ಮೇಣದಬತ್ತಿಗಳನ್ನು ಎಚ್ಚರಿಕೆಯಿಂದ ಇರಿಸಿ. ದೀಪಗಳು ಮತ್ತು ಮೇಣದಬತ್ತಿಗಳು ಬೆಂಕಿ ಮತ್ತು ಸುಡುವಿಕೆಗೆ ಕಾರಣವಾಗಬಹುದು. ಇದನ್ನು ಮಕ್ಕಳಿಗೆ ಪೋಷಕರು ತಿಳಿಸಿ ಹೇಳಬೇಕು. ಬೆಂಕಿಯಿಂದ ದೂರವಿರಿ, ಅದು ಸುಡಬಹುದು ಎಂದು ಎಚ್ಚರವಹಿಸಿ ಅವರಿಗೆ ತಿಳಿ ಹೇಳುವುದು ಅಗತ್ಯ.

ಮಕ್ಕಳ ಬಟ್ಟೆಗಳ ಬಗ್ಗೆ ಜಾಗೃತೆ ವಹಿಸಿ: ದೀಪಾವಳಿಯ ದಿನದಂದು ಮಕ್ಕಳಿಗೆ ಹತ್ತಿ ಬಟ್ಟೆಯನ್ನು ಮಾತ್ರ ತೊಡುವಂತೆ ಮಾಡಿ. ಆರೋಗ್ಯ ತಜ್ಞರ ಪ್ರಕಾರ, ಸಿಂಥೆಟಿಕ್ ಬಟ್ಟೆಗಳು ಹತ್ತಿ ಬಟ್ಟೆಗಿಂತ ವೇಗವಾಗಿ ಬೆಂಕಿ ಹೊತ್ತಿಕೊಳ್ಳುತ್ತವೆ. ಪಟಾಕಿ ಮತ್ತು ದೀಪಗಳನ್ನು ಹಚ್ಚುವಾಗ ಮಕ್ಕಳಿಗೆ ಸಡಿಲವಾದ ಬಟ್ಟೆ, ಉದ್ದನೆಯ ದುಪಟ್ಟಾ ಮತ್ತು ಸ್ಕಾರ್ಫ್‌ಗಳನ್ನು ತೊಡಿಸದಿರಿ. ಇದರಿಂದ ಬೆಂಕಿ ಕಿಡಿ ತಾಗುವ ಅಪಾಯ ಕಡಿಮೆ.

ಒಂದು ಬಕೆಟ್ ನೀರನ್ನು ಸಿದ್ಧವಾಗಿಡಿ: ದೀಪಾವಳಿಯಂದು ದೀಪ ಮತ್ತು ಪಟಾಕಿಗಳಿಂದ ಯಾವುದೇ ಬೆಂಕಿ ಉಂಟಾದರೆ ಮುಂಚಿತವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ. ಇದಕ್ಕಾಗಿ, ಮನೆಯಲ್ಲಿ ಒಂದು ಬಕೆಟ್ ನೀರು ಅಥವಾ ಮರಳನ್ನು ಸಿದ್ಧವಾಗಿರಿಸಿ. ಸಾಧ್ಯವಾದರೆ, ನೀರು ಮತ್ತು ಮರಳು ತುಂಬಿದ ಬಕೆಟ್ ಅನ್ನು ಮನೆಯ ಹೊರಗೆ ಮತ್ತು ಮನೆಯ ಸುತ್ತಲೂ ಇರಿಸಿ.

ವೈದ್ಯಕೀಯ ಕಿಟ್ ತಯಾರಿಸಿ: ದೀಪಾವಳಿಯಲ್ಲಿ ಯಾವುದೇ ಅಪಘಾತ ಮತ್ತು ತುರ್ತು ಪರಿಸ್ಥಿತಿಯನ್ನು ತಪ್ಪಿಸಲು ವೈದ್ಯಕೀಯ ಕಿಟ್ ಅನ್ನು ಮುಂಚಿತವಾಗಿ ತಯಾರಿಸಿ. ಸುಟ್ಟ ಮುಲಾಮು, ಬ್ಯಾಂಡೇಜ್ ಮತ್ತು ಆಂಟಿಸೆಪ್ಟಿಕ್ ಕ್ರೀಮ್ ಅನ್ನು ವೈದ್ಯಕೀಯ ಕಿಟ್‌ನಲ್ಲಿ ಇರಿಸಿ. ಅಗತ್ಯವಿದ್ದಾಗ ಅದನ್ನು ಬಳಸಬಹುದು.

Whats_app_banner