ನಾರ್ಮಲ್ ಪೂರಿಯಲ್ಲ, ಇದು ಕಡಲೆಬೇಳೆ, ಆಲೂ ಪೂರಿ; ದೀಪಾವಳಿ ಹಬ್ಬಕ್ಕೆ ವಿಶೇಷ ರೆಸಿಪಿ ಮಾಡಬೇಕು ಅಂತಿದ್ರೆ ಟ್ರೈ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ನಾರ್ಮಲ್ ಪೂರಿಯಲ್ಲ, ಇದು ಕಡಲೆಬೇಳೆ, ಆಲೂ ಪೂರಿ; ದೀಪಾವಳಿ ಹಬ್ಬಕ್ಕೆ ವಿಶೇಷ ರೆಸಿಪಿ ಮಾಡಬೇಕು ಅಂತಿದ್ರೆ ಟ್ರೈ ಮಾಡಿ

ನಾರ್ಮಲ್ ಪೂರಿಯಲ್ಲ, ಇದು ಕಡಲೆಬೇಳೆ, ಆಲೂ ಪೂರಿ; ದೀಪಾವಳಿ ಹಬ್ಬಕ್ಕೆ ವಿಶೇಷ ರೆಸಿಪಿ ಮಾಡಬೇಕು ಅಂತಿದ್ರೆ ಟ್ರೈ ಮಾಡಿ

ದೀಪಾವಳಿ ಹಬ್ಬಕ್ಕೆ ಬಗೆ ಬಗೆಯ ವಿಶೇಷ ಖಾದ್ಯಗಳನ್ನು ಮಾಡುವುದು ವಾಡಿಕೆ. ಈ ವರ್ಷ ದೀಪಾವಳಿಗೆ ನೀವು ಆಲೂ ಪೂರಿ ಮಾಡಬಹುದು. ಸಾಮಾನ್ಯ ಪೂರಿಗಿಂತ ಈ ಪೂರಿ ಬಹಳ ರುಚಿಯಾಗಿರುತ್ತದೆ. ಇದನ್ನು ಮಾಡುವುದು ಸುಲಭ. ಪೂರಿ ಮಾಡಿ ದೇವರಿಗೆ ನೈವೇದ್ಯವನ್ನೂ ಮಾಡಬಹುದು. ಮಕ್ಕಳಿಂದ ಹಿಡಿದು ದೊಡ್ಡವರೆಗೆ ಎಲ್ಲರೂ ಪೂರಿಯನ್ನು ಇಷ್ಟಪಟ್ಟು ತಿನ್ನುತ್ತಾರೆ.

ಕಡಲೆಬೇಳೆ, ಆಲೂ ‍ಪೂರಿ
ಕಡಲೆಬೇಳೆ, ಆಲೂ ‍ಪೂರಿ

ಬೆಳಕಿನ ಹಬ್ಬ ದೀಪಾವಳಿಗೆ ದೀಪ ಬೆಳಗಿ, ಪಟಾಕಿ ಹೊಡೆಯುವುದು ಮಾತ್ರವಲ್ಲ ವಿಶೇಷ ಖಾದ್ಯಗಳನ್ನು ಕೂಡ ಮಾಡಿ ಸವಿಯಲಾಗುತ್ತದೆ. ದೀಪಾವಳಿಗೆ ಕಜ್ಜಾಯ, ಸಿಹಿ ತಿನಿಸುಗಳನ್ನು ಮಾಡುವುದು ಸಹಜ. ಆದರೆ ಈ ವರ್ಷದ ದೀಪಾವಳಿಗೆ ನೀವು ವಿಶೇಷವಾಗಿ ಹಸಿರು ಬಟಾಣಿ, ಆಲೂಗೆಡ್ಡೆ ಪೂರಿ ಮಾಡಿ. ಹಬ್ಬಕ್ಕೆ ಹೊಸ ರುಚಿ ಬೇಕು ಎಂದುಕೊಂಡಿದ್ದರೆ ಇದು ಬೆಸ್ಟ್ ರೆಸಿಪಿ.

ಹಬ್ಬಕ್ಕೆಂದು ಮನೆಗೆ ನೆಂಟರು ಕೂಡ ಬಂದಿರುತ್ತಾರೆ. ಅಂತಹ ಸಂದರ್ಭದಲ್ಲಿ ಈ ಹೊಸ ರುಚಿಯ ಪೂರಿ ಮಾಡುವ ಮೂಲಕ ಮನೆಯವರೆನ್ನೆಲ್ಲಾ ಖುಷಿ ಪಡಿಸಬಹುದು. ಆಲೂ, ಹಸಿರು ಬಟಾಣಿ ಮಾಡುವುದು ಸುಲಭ. ಕಡಿಮೆ ಸಮಯದಲ್ಲಿ ಮಾಡಬಹುದಾದ ರುಚಿಯಾದ ತಿಂಡಿ ಇದು.

ಆಲೂ ಪೂರಿ ಮಾಡುವ ವಿಧಾನ

ಕಡಲೆಬೇಳೆ – ಅರ್ಧ ಕಪ್‌, ಆಲೂಗೆಡ್ಡೆ – 1 ದೊಡ್ಡ ಗಾತ್ರದ್ದು, ತುಪ್ಪ – ಎರಡು ಚಮಚ, ಉಪ್ಪು – ರುಚಿಗೆ, ಕೊತ್ತಂಬರಿ ಸೊಪ್ಪು – ಚಿಕ್ಕದಾಗಿ ಹೆಚ್ಚಿದ್ದು, ಕಸೂರಿ ಮೇತಿ – 1 ಚಮಚ, ಅರಿಸಿನ – ಚಿಟಿಕೆ, ಖಾರದ ಪುಡಿ – ಅರ್ಧ ಚಮಚ, ಬಿಳಿ ಎಳ್ಳು ಅರ್ಧ ಚಮಚ

ಆಲೂ ಪೂರಿ ಮಾಡುವ ವಿಧಾನ

ಕಡಲೆಬೇಳೆಯನ್ನು ನೀರಿನಲ್ಲಿ ಹಾಕಿ ಎರಡು ಗಂಟೆ ನೆನೆಸಿಡಿ. ಇದನ್ನು ಮಿಕ್ಸಿ ಜಾರಿಗೆ ಹಾಕಿಕೊಂಡು ರುಬ್ಬಿಕೊಳ್ಳಿ. ನಂತರ ಹಸಿ ಆಲೂಗೆಡ್ಡೆಯನ್ನು ಸಿಪ್ಪೆ ತೆಗೆದುಕೊಂಡು ಹೆಚ್ಚಿಕೊಂಡು ಮಿಕ್ಸಿ ಜಾರಿಗೆ ಹಾಕಿ. ಇದನ್ನು ಬೇಳೆ ಜೊತೆ ಸೇರಿಸಿ ರುಬ್ಬಿಕೊಳ್ಳಿ. ಈ ಪೇಸ್ಟ್ ಅನ್ನು ಒಂದು ಬಟ್ಟಲಿಗೆ ಹಾಕಿ. ಇದಕ್ಕೆ ಸ್ವಲ್ಪ ಸಣ್ಣ ರವೆ ಸೇರಿಸಿ. ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು, ಕಸೂರಿ ಮೇಥಿ ಹಾಕಿ. ಅದಕ್ಕೆ ಖಾರದಪುಡಿ, ಉಪ್ಪು ಹಾಗೂ ಹಿಟ್ಟು ಸೇರಿಸಿ ಚೆನ್ನಾಗಿ ನಾದಿಕೊಳ್ಳಿ. ಪೂರಿ ಹಿಟ್ಟಿನ ಹದಕ್ಕೆ ನಾದಿಕೊಂಡು ನಂತರ ಇದನ್ನು ಪೂರಿ ಅಗಲಕ್ಕೆ ಲಟ್ಟಿಸಿ, ಎಣ್ಣೆಯಲ್ಲಿ ಕರಿಯಿರಿ. ಕಡಲೆಬೇಳೆ, ಆಲೂಗೆಡ್ಡೆ ಮಿಶ್ರಣದ ಈ ಪೂರಿಯ ರುಚಿ ಸಖತ್ ಡಿಫ್ರೆಂಟ್ ಆಗಿರುತ್ತೆ. ಇದನ್ನ ಆಲೂಗೆಡ್ಡೆ ಬಾಜಿ ಅಥವಾ ಚಟ್ನಿ ಜೊತೆ ತಿನ್ನಲು ಚೆನ್ನಾಗಿರುತ್ತೆ.

 

Whats_app_banner