ಚಟ್ನಿಯ ಬಣ್ಣ–ರುಚಿ ಹೆಚ್ಚುವಂತೆ ಮಾಡಿ, ಬಹಳ ದಿನಗಳವರೆಗೆ ಕೆಡದಂತೆ ಸಂಗ್ರಹಿಸಿ ಇಡ್ಬೇಕಾ, ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ
ನಮ್ಮ ಮನೆಗಳಲ್ಲಿ ಪ್ರತಿನಿತ್ಯ ಬೆಳಗಿನ ಉಪಾಹಾರ ಅಥವಾ ತಿಂಡಿ ಜೊತೆ ಚಟ್ನಿ ಮಾಡುತ್ತೇವೆ. ಆದರೆ ಎಷ್ಟೋ ಮನೆಗಳಲ್ಲಿ ಚಟ್ನಿ ರುಚಿಯೂ ಇರುವುದಿಲ್ಲ, ಬಣ್ಣವೂ ಇರುವುದಿಲ್ಲ. ಇಷ್ಟಲ್ಲದೇ ಪ್ರತಿದಿನ ಚಟ್ನಿ ಮಾಡೋದು ಬೇಸರ, ಹೇಗಪ್ಪಾ ಹಾಳಾಗದಂತೆ ಇಡೋದು ಅಂತ ಮಹಿಳೆಯರು ಯೋಚನೆ ಮಾಡ್ತಾರೆ. ಚಟ್ನಿ ಬಣ್ಣ–ರುಚಿ ಹೆಚ್ಚಿ, ಬಹಳ ದಿನಗಳವರೆಗೆ ಕೆಡದಂತೆ ಇಡಲು ಇಲ್ಲಿದೆ ಟಿಪ್ಸ್.
ಬೆಳಗಿನ ಉಪಾಹಾರದ ಹೊತ್ತು ಬಹುತೇಕ ಮನೆಗಳಲ್ಲಿ ಚಟ್ನಿ ಮಾಡುತ್ತಾರೆ. ಇದು ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಹಸಿವನ್ನು ದುಪ್ಪಟ್ಟುಗೊಳಿಸುತ್ತದೆ. ಚಟ್ನಿ ಮಾಡಲು ನಿಮ್ಮ ಮನೆಯಲ್ಲಿ ಕೊತ್ತಂಬರಿ ಸೊಪ್ಪು, ಪುದಿನಾ ಸೊಪ್ಪು ಬಳಸಿರಬಹುದು. ಆದರೆ ಒಮ್ಮೆ ಮಾಡಿದ ಚಟ್ನಿಯನ್ನ ಹಲವು ದಿನಗಳವರೆಗೂ ಇಡಲು ಪ್ರಯತ್ನಿಸಿದ್ದೀರಾ, ಹಲವು ದಿನ ಇಟ್ಟ ಮೇಲೂ ರುಚಿ ಹಾಗೂ ಬಣ್ಣ ಹಾಗೇ ಉಳಿದಿದ್ಯಾ, ಇಲ್ಲ ಎಂದಾದರೆ ಇತ್ತ ಗಮನಿಸಿ. ಹೀಗೆ ಮಾಡುವುದರಿಂದ ಹಲವು ದಿನಗಳವರೆಗೆ ಚಟ್ನಿಯನ್ನು ಕೆಡದಂತೆ ಇಡಬಹುದು. ಅಲ್ಲದೇ ರುಚಿ ಹಾಗೂ ಬಣ್ಣ ಕೂಡ ಹಾಗೇ ಇರುತ್ತದೆ.
ರುಚಿ ಸಮತೋಲನಗೊಳಿಸಲು ಸಕ್ಕರೆ
ಚಟ್ನಿಯ ರುಚಿಯನ್ನು ಹೆಚ್ಚಿಸಲು ಉತ್ತಮ ವಿಧಾನವೆಂದರೆ ಅದಕ್ಕೆ ಚಿಟಿಕೆ ಸಕ್ಕರೆ ಸೇರಿಸುವುದು. ಈ ಟ್ರಿಕ್ಸ್‌ನಿಂದ ಹುಣಸೆಹಣ್ಣು ಅಥವಾ ಪುದಿನಾ ಮುಂತಾದ ಮಸಾಲೆಯುಕ್ತ ಚಟ್ನಿಯ ರುಚಿ ಬದಲಾಗುತ್ತದೆ.
ಬಣ್ಣ ಬರಲು ನಿಂಬೆ ಬಳಕೆ
ನಿಂಬೆ ರಸವು ಚಟ್ನಿಯ ಪರಿಮಳವನ್ನು ಹೆಚ್ಚಿಸುತ್ತದೆ ಮತ್ತು ಇದು ಕಟುವಾದ ಮತ್ತು ಮಸಾಲೆಯುಕ್ತ ರುಚಿಯನ್ನು ನೀಡುತ್ತದೆ. ಇದಲ್ಲದೆ, ಚಟ್ನಿಯಲ್ಲಿ ಬಳಸುವ ಪುದೀನ, ಕೊತ್ತಂಬರಿ ಅಥವಾ ಹಸಿರು ಮೆಣಸಿನಕಾಯಿಗಳು ಸಹ ಗಾಢ ಬಣ್ಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಚಟ್ನಿಯಲ್ಲಿರುವ ನಿಂಬೆ ರಸವು ಸಂರಕ್ಷಕವಾಗಿ ಕಾರ್ಯನಿರ್ವಹಿಸುವ ಮೂಲಕ ಚಟ್ನಿ ಬಹಳ ದಿನಗಳವರೆಗೆ ಕೆಡದಂತೆ ನೋಡಿಕೊಳ್ಳುತ್ತದೆ.
ಪರಿಮಳ ಹೆಚ್ಚಲು ಹುರಿದ ಜೀರಿಗೆ
ಚಟ್ನಿಯ ರುಚಿಯನ್ನು ಹೆಚ್ಚಿಸಲು ಹುರಿದ ಜೀರಿಗೆಯನ್ನು ಕೂಡ ಸೇರಿಸಬಹುದು. ಚಟ್ನಿಯಲ್ಲಿ ಇದರ ಬಳಕೆ ಅದ್ಭುತ ಪರಿಮಳವನ್ನು ನೀಡುತ್ತದೆ.
ಚಟ್ನಿ ಬಹಳ ದಿನಗಳವರೆಗೆ ಸಂಗ್ರಹಿಸಿ ಇಡಲು ಟಿಪ್ಸ್
ಎಣ್ಣೆ ಬಳಕೆ
ಪ್ರತಿದಿನ ಚಟ್ನಿ ಮಾಡುವುದು ಕಷ್ಟವಾಗುತ್ತದೆ, ಆದರೆ ಇದನ್ನು ಸಂಗ್ರಹಿಸಿ ಇಟ್ಟರೆ ಬೇಗ ಕೆಡುತ್ತದೆ ಅಥವಾ ಇದರಿಂದ ಕೆಟ್ಟ ವಾಸನೆ ಬರುತ್ತದೆ ಎಂದಾದರೆ ಚಟ್ನಿಗೆ ಸ್ವಲ್ಪ ಅಡುಗೆ ಎಣ್ಣೆ ಹಾಕಿ. ಇದಕ್ಕೆ ಸಾಸಿವೆ ಎಣ್ಣೆ, ಆಲಿವ್ ಎಣ್ಣೆ ಅಥವಾ ರಿಫೈನಡ್ ಎಣ್ಣೆಯನ್ನು ಬಳಸಬಹುದು. ಈ ಕ್ರಮವನ್ನು ಅನುಸರಿಸುವುದರಿಂದ, ಚಟ್ನಿಯ ಮೇಲಿನ ಭಾಗವು ಆಮ್ಲಜನಕದ ಸಂಪರ್ಕಕ್ಕೆ ಬರುವುದಿಲ್ಲ ಮತ್ತು ಚಟ್ನಿ ಬೇಗನೆ ಕೆಡುವುದಿಲ್ಲ.
ಉಪ್ಪು
ಉಪ್ಪು ಉತ್ತಮ ಸಂರಕ್ಷಕವಾಗಿದ್ದು, ಚಟ್ನಿಯನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಸಹಾಯ ಮಾಡುತ್ತದೆ. ಚಟ್ನಿ ಮಾಡುವಾಗ ಸ್ವಲ್ಪ ಉಪ್ಪು ಸೇರಿಸಿ. ಇದು ಬ್ಯಾಕ್ಟೀರಿಯಾವನ್ನು ತಡೆಯುತ್ತದೆ ಮತ್ತು ಚಟ್ನಿಯು ಬಹಳ ಕಾಲ ಕಡೆದಂತಿರಲು ಸಹಾಯ ಮಾಡುತ್ತದೆ.
ಗಾಜಿನ ಡಬ್ಬಿಯಲ್ಲಿ ಸಂಗ್ರಹಿಸುವುದು
ಚಟ್ನಿ ತಯಾರಿಸಿ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಸಂಗ್ರಹಿಸುವ ಬದಲು ಗಾಜಿನ ಜಾರ್ ಅಥವಾ ಯಾವುದಾದರೂ ಪಾತ್ರೆಯಲ್ಲಿ ಸಂಗ್ರಹಿಸಿ. ಗಾಜಿನ ಜಾರ್ ಬ್ಯಾಕ್ಟೀರಿಯಾವನ್ನು ತಡೆಯಲು ಸಹಾಯ ಮಾಡುತ್ತದೆ. ಆದರೆ ಅದರಲ್ಲಿ ಚಟ್ನಿ ಇಡುವ ಮೊದಲು ಜಾರ್ ಅನ್ನು ಚೆನ್ನಾಗಿ ತೊಳೆದು ಒಣಗಿಸಿ. ಇದರಿಂದ ಕೂಡ ಬಹಳ ದಿನಗಳವರೆಗೆ ಚಟ್ನಿಯನ್ನು ಕೆಡದಂತೆ ಇರಿಸಬಹುದು.
ವಿಭಾಗ