Chettinad Fish Fry: ಚೆಟ್ಟಿನಾಡ್‌ ಶೈಲಿಯ ಫಿಶ್‌ ಫ್ರೈ ರೆಸಿಪಿ, ಕಾಯಿಸಿದ ಮೀನು ಇಷ್ಟಪಡುವವರು ಈ ರುಚಿಕರ ಗರಿಗರಿ ಫ್ರೈ ಮಾಡಿನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Chettinad Fish Fry: ಚೆಟ್ಟಿನಾಡ್‌ ಶೈಲಿಯ ಫಿಶ್‌ ಫ್ರೈ ರೆಸಿಪಿ, ಕಾಯಿಸಿದ ಮೀನು ಇಷ್ಟಪಡುವವರು ಈ ರುಚಿಕರ ಗರಿಗರಿ ಫ್ರೈ ಮಾಡಿನೋಡಿ

Chettinad Fish Fry: ಚೆಟ್ಟಿನಾಡ್‌ ಶೈಲಿಯ ಫಿಶ್‌ ಫ್ರೈ ರೆಸಿಪಿ, ಕಾಯಿಸಿದ ಮೀನು ಇಷ್ಟಪಡುವವರು ಈ ರುಚಿಕರ ಗರಿಗರಿ ಫ್ರೈ ಮಾಡಿನೋಡಿ

Chettinad Fish Fry: ಕಾಯಿಸಿದ ಮೀನು ತಿನ್ನಲು ಬಯಸುವವರು ಮಂಗಳೂರು, ಬೆಂಗಳೂರು, ಕೇರಳ ಶೈಲಿಯಲ್ಲಿ ಮಾಡಿ ನೋಡಿರಬಹುದು. ಇಂದು ನಿಮಗೆ ತಮಿಳುನಾಡಿನ ಚೆಟ್ಟಿನಾಡಿನ ಶೈಲಿಯಲ್ಲಿ ಫಿಶ್‌ ಫ್ರೈ ರೆಸಿಪಿ ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ.

ಚೆಟ್ಟಿನಾಡ್‌ ಶೈಲಿಯ ಫಿಶ್‌ ಫ್ರೈ ರೆಸಿಪಿ
ಚೆಟ್ಟಿನಾಡ್‌ ಶೈಲಿಯ ಫಿಶ್‌ ಫ್ರೈ ರೆಸಿಪಿ

Chettinad Fish Fry: ಕರ್ನಾಟಕದಲ್ಲಿ ಮೀನಿನ ಫ್ರೈ ಮಾಡುವವರು ಸಾಮಾನ್ಯವಾಗಿ ಮಂಗಳೂರು ಶೈಲಿಯ ಫಿಶ್‌ ಫ್ರೈ ಮಾಡಲು ಬಯಸುತ್ತಾರೆ. ಇದೇ ರೀತಿ ಪಕ್ಕದ ಕೇರಳ ರಾಜ್ಯದ ಫಿಶ್‌ ಫ್ರೈ ರೆಸಿಪಿಯೂ ಅತ್ಯುತ್ತಮವಾಗಿರುತ್ತದೆ. ಕರ್ನಾಟಕ ಕೇರಳ ಮಾತ್ರವಲ್ಲದೆ ತಮಿಳುನಾಡು ಕೂಡ ಮೀನುಗಳಿಗೆ ಹೆಸರುವಾಸಿ. ಅಲ್ಲೂ ಅದ್ಭುತವಾಗಿ ರುಚಿಕರವಾಗಿ ಮೀನಿನ ಫ್ರೈ ಮಾಡುತ್ತಾರೆ. ವಿಶೇಷವಾಗಿ ಚೆಟ್ಟಿನಾಡು ಕೂಡ ಮೀನು ಫ್ರೈಗೆ ಫೇಮಸ್‌. ಚೆಟ್ಟಿನಾಡು ಚಿಕನ್‌, ಚೆಟ್ಟಿನಾಡು ಸೀರೆಯಂತೆ ಚೆಟ್ಟಿನಾಡು ಫಿಶ್‌ ಫ್ರೈ ಕೂಡ ಹೆಸರುವಾಸಿಯಾಗಿದೆ. ಚೆಟ್ಟಿನಾಡು ಶೈಲಿಯಲ್ಲಿ ಫಿಶ್‌ ಫ್ರೈ ಮಾಡಿದರೆ ರುಚಿ ಹೆಚ್ಚಿರುತ್ತದೆ. ಇದು ತಮಿಳುನಾಡಿನ ಚೆಟ್ಟಿನಾಡಿನಲ್ಲಿ ಹುಟ್ಟಿದ ರೆಸಿಪಿ. ಈಗ ವಿದೇಶಗಳಲ್ಲೂ ಈ ಶೈಲಿಯ ಫಿಶ್‌ ಫ್ರೈಗೆ ಬೇಡಿಕೆ ಇದೆ. ಈ ಫಿಶ್‌ ಫ್ರೈ ಮಾಡುವುದು ತುಂಬಾ ಸುಲಭ.

ಚೆಟ್ಟಿನಾಡ್ ಫಿಶ್ ಫ್ರೈ ರೆಸಿಪಿಗೆ ಬೇಕಾಗುವ ಪದಾರ್ಥಗಳು

  • ಮೀನಿನ ತುಂಡುಗಳು - ಆರು
  • ಎಣ್ಣೆ - ನಾಲ್ಕು ಚಮಚ
  • ಉಪ್ಪು - ರುಚಿಗೆ ತಕ್ಕಷ್ಟು
  • ಶುಂಠಿ ಪುಡಿ - ಒಂದು ಚಮಚ
  • ಕರಿಮೆಣಸು - ನಾಲ್ಕು
  • ಕೊತ್ತಂಬರಿ ಪುಡಿ - ಒಂದೂವರೆ ಚಮಚ
  • ಬೆಳ್ಳುಳ್ಳಿ ಪೇಸ್ಟ್ - ಒಂದು ಚಮಚ
  • ಕಡಲೆ ಹಿಟ್ಟು - ಎರಡು ಚಮಚ
  • ಅಕ್ಕಿ ಹಿಟ್ಟು - ಒಂದೂವರೆ ಚಮಚ
  • ಮೆಂತ್ಯ - ಕಾಲು ಚಮಚ

ಇದನ್ನೂ ಓದಿ: Mackerel Fish Recipe: ಬಂಗುಡೆ ಮೀನು ಸಾರು, ಬಂಗುಡೆ ಪುಳಿ ಪುಂಚಿ ಮಾಡುವ ವಿಧಾನ, ಮೀನು ಪ್ರಿಯರಿಗೆ ಬಾಯಲ್ಲಿ ನೀರು ಬರಿಸೋ ರೆಸಿಪಿ

ಚೆಟ್ಟಿನಾಡ್ ಫಿಶ್ ಫ್ರೈ ರೆಸಿಪಿ

  1. ಮೀನಿನ ತುಂಡುಗಳನ್ನು ಸ್ವಚ್ಛವಾಗಿ ತೊಳೆಯಿರಿ.
  2. ಈಗ ಈರುಳ್ಳಿ, ಶುಂಠಿ ತುಂಡುಗಳು, ಬೆಳ್ಳುಳ್ಳಿ, ಮೆಂತ್ಯ, ಜೀರಿಗೆ, ಕರಿಮೆಣಸು ಮತ್ತು ಕೊತ್ತಂಬರಿ ಪುಡಿಯನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
  3. ಈ ಸಂಪೂರ್ಣ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ.
  4. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
  5. ನಂತರ ಅಕ್ಕಿ ಹಿಟ್ಟು ಮತ್ತು ಬೇಳೆ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  6. ಈಗ ಈ ಮಿಶ್ರಣವನ್ನು ಮೀನಿನ ತುಂಡುಗಳಿಗೆ ಹಚ್ಚಿ. ಅರ್ಧ ಗಂಟೆಯವರೆಗೆ ಫ್ರಿಡ್ಜ್‌ನಲ್ಲಿಡಿ.
  7. ಈಗ ಒಲೆಯ ಮೇಲೆ ಸ್ವಲ್ಪ ಆಳವಾದ ಪ್ಯಾನ್ ಇಡಿ.
  8. ಸ್ವಲ್ಪ ಎಣ್ಣೆ ಹಾಕಿ. ಈ ಮೀನಿನ ತುಂಡುಗಳನ್ನು ಎರಡೂ ಬದಿಗಳು ಬಣ್ಣ ಬದಲಾಗುವವರೆಗೆ ಫ್ರೈ ಮಾಡಿ.
  9. ಮೀನಿನ ತುಂಡುಗಳು ಸರಿಯಾಗಿ ಫ್ರೈ ಆಗಿರುವುದೇ ನೋಡಿ. ಸ್ಟವ್‌ ಆಫ್‌ ಮಾಡಿ.
  10. ಇವುಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ ಮತ್ತು ಅದರ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಮತ್ತು ಹಸಿರು ಈರುಳ್ಳಿ ಚೂರುಗಳನ್ನು ಹಾಕಿ ಮತ್ತು ಚೆಟ್ಟನಾಡು ಶೈಲಿಯ ಫಿಶ್ ಫ್ರೈ ಡಿಶ್ ತಿನ್ನಲು ಸಿದ್ಧವಾಗಿದೆ.

ಇದನ್ನೂ ಓದಿ: Egg Curry Recipe: ಎಗ್‌ ಗ್ರೇವಿ ಮಾಡುವುದು ಹೇಗೆ, 30 ನಿಮಿಷದಲ್ಲಿ ಮಾಡಿ ರುಚಿಕರ ಮೊಟ್ಟೆ ಮಸಾಲ, ಬ್ಯಾಚುಲರ್ಸ್‌ ತಪ್ಪದೇ ಟ್ರೈ ಮಾಡಿ

ಚೆಟ್ಟನಾಡು ಫಿಶ್ ಫ್ರೈ ತಮಿಳುನಾಡಿನ ಟೇಸ್ಟಿ ಖಾದ್ಯಗಳಲ್ಲಿ ಒಂದಾಗಿದೆ. ಇದು ತುಂಬಾ ರುಚಿಕರವಾಗಿದೆ. ಮಾಂಸ ಪ್ರಿಯರು ಈ ಚೆಟ್ಟನಾಡು ಶೈಲಿಯ ಫಿಶ್ ಫ್ರೈ ಅನ್ನು ಪ್ರಯತ್ನಿಸಲೇಬೇಕು. ನಿಮಗೆ ಖಂಡಿತ ಇಷ್ಟವಾಗುತ್ತದೆ. ಮೀನಿನ ಖಾದ್ಯಗಳು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಸ್ನಾಯುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಮೀನಿನಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ಅತ್ಯಗತ್ಯ. ಮೀನಿನಲ್ಲಿ ಒಮೆಗಾ ಮೂರು ಕೊಬ್ಬಿನಾಮ್ಲಗಳಿವೆ. ಇವು ನಮ್ಮ ಆರೋಗ್ಯಕ್ಕೆ ಅತ್ಯಗತ್ಯ. ಮೀನಿನಲ್ಲಿ ವಿಟಮಿನ್ ಡಿ ಕೂಡ ಇದೆ. ಇದು ನಮ್ಮ ದೇಹವನ್ನು ಒತ್ತಡ ಮತ್ತು ಮಾನಸಿಕ ಆತಂಕದಿಂದ ದೂರವಿಡುತ್ತದೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಮೀನು ತಿನ್ನುವುದು ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ಆಹಾರದಲ್ಲಿ ಹೆಚ್ಚು ಮೀನನ್ನು ಸೇವಿಸುವವರು ರುಮಟಾಯ್ಡ್ ಸಂಧಿವಾತ ಮತ್ತು ಮಧುಮೇಹದಂತಹ ಕಾಯಿಲೆಗಳಿಂದ ದೂರವಿಡಬಹುದು.

Whats_app_banner