ಬಾಯಲ್ಲಿ ನೀರೂರುವ ಮಂಗಳೂರು ಶೈಲಿಯ ಫಿಶ್ ಫ್ರೈ ಮಸಾಲೆ ಮಾಡುವುದು ತುಂಬಾನೇ ಸಿಂಪಲ್: ಈ ರೆಸಿಪಿ ಟ್ರೈ ಮಾಡಿ ನೋಡಿ-food mangalore style fish fry masala bangda masala fry mangalore style fish fry masala recipe prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬಾಯಲ್ಲಿ ನೀರೂರುವ ಮಂಗಳೂರು ಶೈಲಿಯ ಫಿಶ್ ಫ್ರೈ ಮಸಾಲೆ ಮಾಡುವುದು ತುಂಬಾನೇ ಸಿಂಪಲ್: ಈ ರೆಸಿಪಿ ಟ್ರೈ ಮಾಡಿ ನೋಡಿ

ಬಾಯಲ್ಲಿ ನೀರೂರುವ ಮಂಗಳೂರು ಶೈಲಿಯ ಫಿಶ್ ಫ್ರೈ ಮಸಾಲೆ ಮಾಡುವುದು ತುಂಬಾನೇ ಸಿಂಪಲ್: ಈ ರೆಸಿಪಿ ಟ್ರೈ ಮಾಡಿ ನೋಡಿ

ಭಾನುವಾರ ಬಂತೆಂದ್ರೆ ಬಾಡೂಟ ಮಾಡುವುದು ಸಾಮಾನ್ಯ. ಆದರೆ, ಮೀನೂಟವನ್ನು ಬಾಡೂಟದ ಜತೆ ಸವಿದರೆ ಮೀನಿನ ರುಚಿ ಸಿಗಲಿಕ್ಕಿಲ್ಲ. ಅದರಲ್ಲೂ ಮೀನು ಫ್ರೈ ಅಂದ್ರೆ ಬಾಯಲ್ಲಿ ನೀರೂರುತ್ತೆ. ಮಂಗಳೂರು ಶೈಲಿಯ ಫಿಶ್ ಫ್ರೈ ಅಂತೂ ಇನ್ನೂ ಸೂಪರ್. ಇದರ ಮಸಾಲೆ ಮಾಡುವುದು ತುಂಬಾನೇ ಸಿಂಪಲ್. ಹೇಗೆ ತಯಾರಿಸುವುದು ಇಲ್ಲಿದೆ ಮಾಹಿತಿ.

ಫಿಶ್ ಫ್ರೈ ಮಸಾಲೆ ಮಾಡುವುದು ತುಂಬಾನೇ ಸಿಂಪಲ್. ಹೇಗೆ ತಯಾರಿಸುವುದು ಇಲ್ಲಿದೆ ಮಾಹಿತಿ.
ಫಿಶ್ ಫ್ರೈ ಮಸಾಲೆ ಮಾಡುವುದು ತುಂಬಾನೇ ಸಿಂಪಲ್. ಹೇಗೆ ತಯಾರಿಸುವುದು ಇಲ್ಲಿದೆ ಮಾಹಿತಿ.

ಮಂಗಳೂರು ಶೈಲಿಯ ಫಿಶ್ ಫ್ರೈ ಅದರ ರೋಮಾಂಚಕ ಸುವಾಸನೆ ಮತ್ತು ಮಸಾಲೆಯುಕ್ತ ರುಚಿಗೆ ಹೆಸರುವಾಸಿಯಾಗಿದೆ. ಮಂಗಳೂರಿಗೆ ಬಂದವರು ಮೀನು ಸವಿಯದೆ ಹೋಗದೆ ಇರುವವರು ಬಹಳ ಕಡಿಮೆ ಎನ್ನಬಹುದು. ತಾಜಾ ಮೀನಿನ ಜೊತೆಗೆ ಮನೆಯಲ್ಲೇ ಮಾಡಿದ ಮಸಾಲೆ ಬೆರೆಸಿ ಫ್ರೈ ಮಾಡಿ ಸವಿದರೆ, ಆಹಾ.. ಏನು ರುಚಿ! ಸ್ವರ್ಗಕ್ಕೆ ಮೂರೇ ಗೇಣು. ಮಂಗಳೂರು ಶೈಲಿಯ ಫಿಶ್ ಫ್ರೈ ಮಸಾಲೆಯಲ್ಲಿರುವ ಕೆಂಪು ಮೆಣಸಿನಕಾಯಿ ಹಾಗೂ ಹುಳಿಯ ರುಚಿ ನಾಲಿಗೆಗೆ ಬಡಿಯುತ್ತದೆ. ಮಧ್ಯಾಹ್ನ ಅಥವಾ ರಾತ್ರಿಯ ಊಟಕ್ಕೆ ಅನ್ನದ ಜತೆ ರಸಂ ಅಥವಾ ಬೇಳೆ ಸಾರು ಇದ್ದರೆ ಜೊತೆಗೆ ಮೀನು ಫ್ರೈ ಮಾಡಿ ಸವಿಯಬಹುದು. ತಟ್ಟೆಯಲ್ಲಿ ಎಷ್ಟು ಬೇಗ ಊಟ ಖಾಲಿಯಾಗುತ್ತದೆ ಅನ್ನೋದೇ ತಿಳಿಯುವುದಿಲ್ಲ. ಹಾಗಂತ ಈ ರೆಸಿಪಿಯನ್ನು ಮಾಡುವುದು ಅಂತಹ ಕಷ್ಟವೇನಲ್ಲ. ತುಂಬಾನೇ ಸಿಂಪಲ್. ಇದನ್ನು ಮಾಡುವ ವಿಧಾನ ಹೇಗೆ ಎಂಬ ಬಗ್ಗೆ ಇಲ್ಲಿ ತಿಳಿದುಕೊಳ್ಳಿ:

ಮಂಗಳೂರು ಶೈಲಿಯ ಫಿಶ್ ಫ್ರೈ ಮಾಡುವುದು ಹೀಗೆ

ಬೇಕಾಗುವ ಸಾಮಗ್ರಿ: ಮೀನು (ಬಾಂಗಡೆ, ಮತ್ತಿ ಅಥವಾ ಬೇರೆ ಯಾವುದೇ ಸಮುದ್ರ ಮೀನು) – 1 ಕೆ.ಜಿ, ಬ್ಯಾಡಗಿ ಮೆಣಸಿನಕಾಯಿ- 15, ಕೊತ್ತಂಬರಿ ಬೀಜ- 1 ಚಮಚ, ಶುಂಠಿ- ಅರ್ಧ ಇಂಚು, ಬೆಳ್ಳುಳ್ಳಿ- 4 ಎಸಳು, ಜೀರಿಗೆ- ¼ ಚಮಚ, ಹುಣಸೆಹಣ್ಣು- 1 ನಿಂಬೆ ಗಾತ್ರದಷ್ಟು, ಉಪ್ಪು ರುಚಿಗೆ ತಕ್ಕಷ್ಟು, ಅರಶಿನ- 1 ಚಮಚ, ಕರಿಮೆಣಸು- 1 ಚಮಚ.

ಮಾಡುವ ವಿಧಾನ: ಮೊದಲಿಗೆ ಮೀನನ್ನು ಶುಚಿಗೊಳಿಸಿ ಚೆನ್ನಾಗಿ ನೀರಿನಲ್ಲಿ ತೊಳೆಯಿರಿ. ನೀವು ಬಾಂಗಡೆ ಮೀನನ್ನು ತೆಗೆದುಕೊಂಡಿದ್ದರೆ, ಅದು ಸ್ವಲ್ಪ ದೊಡ್ಡ ಮೀನಾಗಿದ್ದರೆ ಅರ್ಧ ಕತ್ತರಿಸಬಹುದು. ಇಡಿಯಾದ ಮೀನೇ ಬೇಕೆಂದರೆ ಕತ್ತರಿಸಬೇಕೆಂದಿಲ್ಲ. ಅದನ್ನು ಶುಚಿಗೊಳಿಸಿ, ಎರಡೂ ಬದಿಗೆ ಕತ್ತರಿಸುವ ಮೂರು ತರಹ ಮಾರ್ಕ್ ಮಾಡಿ.

ಇನ್ನೊಂದೆಡೆ ಮಸಾಲೆ ಸಿದ್ಧತೆ ಮಾಡಿಕೊಳ್ಳೋಣ. ಮೊದಲಿಗೆ ಬ್ಯಾಡಗಿ ಮೆಣಸನ್ನು ಅರ್ಧ ಗಂಟೆ ಬಿಸಿ ನೀರಿನಲ್ಲಿ ನೆನೆಸಿಡಿ. ಆ ನಂತರ ಕೊತ್ತಂಬರಿ ಬೀಜ, ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಹುಣಸೆಹಣ್ಣು, ಅರಶಿನ, ಕರಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ನೀರಿನಲ್ಲಿ ನೆನೆಸಿಟ್ಟ ಬ್ಯಾಡಗಿ ಮೆಣಸನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಈ ಪೇಸ್ಟ್ ಅನ್ನು ಮೀನಿಗೆ ಅದ್ದಿ, 10 ನಿಮಿಷ ಕಾಲ ಹಾಗೆಯೇ ಬಿಡಿ (ಹೆಚ್ಚು ಹೊತ್ತು ಬಿಟ್ಟರೂ ತೊಂದರೆಯಿಲ್ಲ).

ತವಾಗೆ ಸ್ವಲ್ಪ ಕೊಬ್ಬರಿ ಎಣ್ಣೆ ಹಾಕಿ ಕಾದ ನಂತರ ಮಸಾಲೆ ತುಂಬಿಟ್ಟ ಮೀನುಗಳನ್ನು ಫ್ರೈ ಮಾಡಿ. ಎಲ್ಲಾ ಮೀನುಗಳು ಫ್ರೈ ಆದ ನಂತರ, ಉಳಿದಿರುವ ಮಸಾಲೆಯನ್ನು ತವಾಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಿದ್ದರೆ ಸ್ವಲ್ಪ ಕೊಬ್ಬರಿ ಎಣ್ಣೆ ಸೇರಿಸಬಹುದು. 10 ರಿಂದ 15 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಮಸಾಲೆಯನ್ನು ಚೆನ್ನಾಗಿ ಬಾಡಿಸಿ. ಎಣ್ಣೆ ಅಂಶ, ಮಸಾಲೆ ಬೇರೆ-ಬೇರೆಯಾಗುತ್ತದೆ. ಮಸಾಲೆ ಬಣ್ಣವೂ ಕೆಂಪಾಗಿ ಬದಲಾಗುತ್ತದೆ. ಈ ವೇಳೆ ಫ್ರೈ ಮಾಡಿಟ್ಟ ಮೀನುಗಳನ್ನು ಒಂದೊಂದಾಗಿ ಮಸಾಲೆಗೆ ಅದ್ದಿ ಮತ್ತೆ 1-2 ನಿಮಿಷಗಳ ಕಾಲ ಫ್ರೈ ಮಾಡಬೇಕು. ಒಂದು ಸಲ ಈ ರೀತಿ ಮಾಡಿ ಸವಿದರೆ, ಖಂಡಿತಾ ನಿಮಗೆ ಮತ್ತೆ ಮತ್ತೆ ಈ ಫಿಶ್ ಫ್ರೈ ಮಾಡಿ ತಿನ್ನಬೇಕು ಅನಿಸಬಹುದು. ಇನ್ಯಾಕೆ ತಡ ಮನೆಯಲ್ಲೇ ಟ್ರೈ ಮಾಡಿ, ಸವಿಯಿರಿ ಟೇಸ್ಟಿ ಫಿಶ್ ಫ್ರೈ.

mysore-dasara_Entry_Point